ಕನ್ನಡ ಸುದ್ದಿ  /  ಕ್ರಿಕೆಟ್  /  ವಾರ್ನರ್, ಇಶಾಂತ್ ಔಟ್; ಮುಂಬೈ ಇಂಡಿಯನ್ಸ್ ವಿರುದ್ಧದ ಸೇಡಿನ ಸಮರಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗಾಯಾಳುಗಳ ಚಿಂತೆ

ವಾರ್ನರ್, ಇಶಾಂತ್ ಔಟ್; ಮುಂಬೈ ಇಂಡಿಯನ್ಸ್ ವಿರುದ್ಧದ ಸೇಡಿನ ಸಮರಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗಾಯಾಳುಗಳ ಚಿಂತೆ

DC vs MI: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಗಾಯದ ಸಮಸ್ಯೆ ಕಾಡುತ್ತಿದೆ. ಸ್ಫೋಟಕ ಬ್ಯಾಟರ್‌ ಹಾಗೂ ವೇಗದ ಬೌಲರ್‌ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ.‌ ಉಭಯ ತಂಡಗಳ ಸಂಭಾವ್ಯ ತಂಡದ ವಿವರ ಇಲ್ಲಿದೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಸೇಡಿನ ಸಮರಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗಾಯಾಳುಗಳ ಚಿಂತೆ
ಮುಂಬೈ ಇಂಡಿಯನ್ಸ್ ವಿರುದ್ಧದ ಸೇಡಿನ ಸಮರಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗಾಯಾಳುಗಳ ಚಿಂತೆ (Mumbai Indians Twiiter)

ಭರ್ಜರಿ ಫಾರ್ಮ್‌ನಲ್ಲಿರುವ ರಿಷಭ್ ಪಂತ್ ಅವರ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮುಂದಿನ ಎದುರಾಳಿ ಮುಂಬೈ ಇಂಡಿಯನ್ಸ್ (DC vs MI). ಐಪಿಎಲ್ 2024ರ 43ನೇ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಮುಂಬೈ ಇಂಡಿಯನ್ಸ್‌ ಸವಾಲೆಸೆಯುತ್ತಿದೆ. ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿದೆ. ಉಭಯ ತಂಡಗಳ ನಡುವೆ ಟೂರ್ನಿಯ ಎರಡನೇ ಮುಖಾಮುಖಿ ಇದಾಗಿದ್ದು, ಮುಂಬೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಆತಿಥೇಯ ಮುಂಬೈ ಜಯ ಸಾಧಿಸಿತ್ತು. ಇದೀಗ ಸೇಡಿನ ಸಮರದಲ್ಲಿ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿರುವ ಪಂತ್‌ ಬಳಗಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಪ್ರಮುಖ ಬ್ಯಾಟರ್‌ ಹಾಗೂ ಬೌಲರ್‌ ತಂಡದಿಂದ ಹೊರಗುಳಿದಿದ್ದಾರೆ.‌ ಬೆರಳಿನ ಗಾಯದಿಂದಾಗಿ ಆಸೀಸ್‌ ದೈತ್ಯ ಡೇವಿಡ್ ವಾರ್ನರ್ ಮುಂಬೈ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅತ್ತ ವೇಗಿ ಆದರೆ ಇಶಾಂತ್ ಶರ್ಮಾ ಕೂಡ ಆಡುವ ಬಳಗ ಸೇರುವ ಸಾಧ್ಯತೆ ಇಲ್ಲ. ಮಿಚೆಲ್ ಮಾರ್ಷ್ ಟೂರ್ನಿಯ ಉಳಿದ ಪಂದ್ಯಗಳಿಗೆ ತಂಡ ಸೇರುವ ಸುಳಿವಿಲ್ಲ. ಹೀಗಾಗಿ ಅಫ್ಘಾನಿಸ್ತಾನ ಆಲ್‌ರೌಂಡರ್ ಗುಲ್ಬಾದಿನ್ ನೈಬ್ ತಂಡದ ಆಡುವ ಬಳಗದಲ್ಲಿ ಉಳಿಯುವ ಸಾಧ್ಯತೆ ಹೆಚ್ಚಿದೆ.

ಡೆಲ್ಲಿ ಪರ ಪೃಥ್ವಿ ಶಾ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಮುಂದುವರೆಯುವ ಲೆಕ್ಕಾಚಾರವಿದೆ. ಕೊನೆಯ ಪಂದ್ಯದಲ್ಲಿ ರಸಿಖ್ ಸಲಾಮ್ ಅವರು ಶಾಗೆ ಇಂಪ್ಯಾಕ್ಟ್‌ ಆಟಗಾರನಾಗಿ ಮರಳಿದ್ದರು. ಒಂದು ವೇಳೆ ಇವರ ಬದಲಿಗೆ ಬೇರೆ ಆಯ್ಕೆ ನೋಡುವುದಿದ್ದರೆ, ಲಲಿತ್ ಯಾದವ್ ಅವರನ್ನು ತಂಡಕ್ಕೆ ಕರೆಸಿಕೊಳ್ಳುವ ಸಾಧ್ಯತೆಯೂ ಇದೆ. ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವೇಗಿ ನಾರ್ಟ್ಜೆ ಕಳಪೆ ಫಾರ್ಮ್‌ನಲ್ಲಿದ್ದಾರೆ. ದುಬಾರಿ 13.36ರ ಎಕಾನಮಿಯಲ್ಲಿ ಬೌಲಿಂಗ್‌ ಮಾಡುವ ಮೂಲಕ ಎದುರಾಳಿ ತಂಡದ ಫೇವರೆಟ್‌ ಬೌಲರ್‌ ಆಗಿದ್ದಾರೆ. ಹೀಗಾಗಿ ತಂಡವು ಬದಲಿ ವೇಗಿಗಾಗಿ ನೋಡಿದರೆ ಅಚ್ಚರಿಯಿಲ್ಲ. ಇಂಥಾ ಸಂಭವ ಎದುರಾದರೆ ಜೇ ರಿಚರ್ಡ್‌ಸನ್ ಆಡುವ ಬಳಗ ಸೇರಬಹುದು.

ಇದನ್ನೂ ಓದಿ | ಸಿಕ್ಸರ್‌ಗಳ ಶತಕ ಸಿಡಿಸಿದ ಸನ್‌ರೈಸರ್ಸ್ ಹೈದರಾಬಾದ್; ಐಪಿಎಲ್ ಆವೃತ್ತಿಯಲ್ಲಿ ವಿಶೇಷ ದಾಖಲೆ ಬರೆದ ಎಸ್‌ಆರ್‌ಎಚ್

ಮುಂಬೈಗೆ ರೊಮಾರಿಯೋ ಶೆಫರ್ಡ್‌ ಮರಳುವ ಸಾಧ್ಯತೆ

ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿರುವ ಮುಂಬೈ ತಂಡದಲ್ಲಿ ಹೆಚ್ಚಿನ ಬದಲಾವಣೆಯ ಸಾಧ್ಯತೆ ಇಲ್ಲ. ತಂಡದಲ್ಲಿ ಈವರೆಗೆ ಸೂರ್ಯಕುಮಾರ್ ಯಾದವ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ್ದು, ಇದು ಮುಂದಿನ ಪಂದ್ಯಗಳಿಗೂ ಮುಂದುವರೆಯುವ ಸಾಧ್ಯತೆ ಇದೆ. ಕೊನೆಯ ಪಂದ್ಯದಲ್ಲಿ ಮೂವರು ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿದ ತಂಡಕ್ಕೆ, ಆ ನಂತರ ನುವಾನ್ ತುಷಾರ ಸೇರಿಕೊಂಡರು. ಡೆಲ್ಲಿ ವಿರುದ್ಧ ಬಹುತೇಕ ಇದೇ ಆಟಗಾರರು ಕಣಕ್ಕಿಳಿಯಬಬಹುದು. ಅತ್ತ ಕಳೆದ ಬಾರಿ ಇದೇ ಡೆಲ್ಲಿ ವಿರುದ್ಧ ಸಿಡಿದಿದ್ದ ರೊಮಾರಿಯೋ ಶೆಫರ್ಡ್‌ಗೆ ಮತ್ತೊಂದು ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್‌ ಸಂಭಾವ್ಯ ಆಡುವ ಬಳಗ

ಪೃಥ್ವಿ ಶಾ, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಶಾಯ್ ಹೋಪ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್‌ ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಆನ್ರಿಚ್ ನಾರ್ಟ್ಜೆ / ಜೇ ರಿಚರ್ಡ್‌ಸನ್, ಮುಖೇಶ್ ಕುಮಾರ್, ಖಲೀಲ್ ಅಹ್ಮದ್, ರಸಿಖ್ ಸಲಾಂ (ಇಂಪ್ಯಾಕ್ಟ್‌ ಆಟಗಾರ).

ಮುಂಬೈ ಇಂಡಿಯನ್ಸ್‌ ಸಂಭಾವ್ಯ ತಂಡ

ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್‌ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ನೆಹಾಲ್ ವಧೇರಾ, ಮೊಹಮ್ಮದ್ ನಬಿ, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ / ರೊಮಾರಿಯೋ ಶೆಫರ್ಡ್ (ಇಂಪ್ಯಾಕ್ಟ್‌ ಆಟಗಾರ).

IPL_Entry_Point