IPL 2024: ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಕ್ರಿಕೆಟಿಗ ಕೊಹ್ಲಿ ಅಲ್ಲ; ವಿರಾಟ್‌ಗಿಂತ ಮುಂದಿದ್ದಾರೆ ರೋಹಿತ್, ಜಡೇಜಾ
ಇಂಡಿಯನ್ ಪ್ರೀಮಿಯರ್ ಲೀಗ್‌ನ 17ನೇ ಆವೃತ್ತಿ ಅದ್ಧೂರಿಯಾಗಿ ನಡೆಯುತ್ತಿದೆ. 2024ರಲ್ಲಿ ಬಿಸಿಸಿಐ ಮತ್ತು ಐಪಿಎಲ್ ಒಪ್ಪಂದಗಳಿಂದ ಅತಿ ಹೆಚ್ಚು ಸಂಭಾವನೆ ಪಡೆದ ಭಾರತೀಯ ಕ್ರಿಕೆಟಿಗರು ಯಾರು ಹಾಗೂ ಅವರ ವೇತನಗಳು ಎಷ್ಟು ಎಂಬ ವಿವರ ಇಲ್ಲಿದೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಎಂಬುದು ಜಗತ್ತಿಗೆ ಗೊತ್ತಿರುವ ವಿಚಾರ. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐ ನಡೆಸುವ ಈ ಟೂರ್ನಿಯಿಂದ ಮಂಡಳಿಯ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ಬರುತ್ತದೆ. ಆಟಗಾರರು ಮಾತ್ರವಲ್ಲದೆ ಫ್ರಾಂಚೈಸ್‌ಗಳು ಕೂಡಾ ಕೋಟಿ ಲೆಕ್ಕದಲ್ಲಿ ಸಂಪಾದನೆ ಮಾಡುತ್ತದೆ. ಲಾಭದಾಯಕ ಕ್ರಿಕೆಟ್ ಲೀಗ್‌ನಿಂದ ಹಲವು ಆಟಗಾರರು ಉತ್ತಮ ಸಂಭಾವನೆ ಪಡೆಯುತ್ತಿದ್ದಾರೆ. ಭಾರತದ ಹಲವು ಆಟಗಾರರು ಬಿಸಿಸಿಐ ಮತ್ತು ಐಪಿಎಲ್ ಒಪ್ಪಂದಗಳಿಂದ ಭಾರಿ ಪ್ರಮಾಣ ಸಂಬಳ ಪಡೆಯುತ್ತಾರೆ. 2024ರಲ್ಲಿ ಬಿಸಿಸಿಐ ಹಾಗೂ ಐಪಿಎಲ್ ಒಪ್ಪಂದಗಳಿಂದ ಅತಿ ಹೆಚ್ಚುಸಂಪಾದಿಸುವ ಅಗ್ರ 10 ಭಾರತೀಯ ಕ್ರಿಕೆಟಿಗರು ಯಾರ್ಯಾರು ಎಂಬುದನ್ನು ನೋಡೋಣ.
ಕೆಎಲ್ ರಾಹುಲ್ (ಲಕ್ನೋ ಸೂಪರ್ ಜೈಂಟ್ಸ್)
- ಬಿಸಿಸಿಐ ಸಂಬಳ: 5 ಕೋಟಿ ರೂ.
- ಐಪಿಎಲ್ ಸಂಭಾವನೆ: 16 ಕೋಟಿ ರೂ.
ರೋಹಿತ್ ಶರ್ಮಾ (ಮುಂಬೈ ಇಂಡಿಯನ್ಸ್)
- ಬಿಸಿಸಿಐ ಸಂಬಳ: 7 ಕೋಟಿ ರೂ.
- ಐಪಿಎಲ್ ಸಂಬಳ: 16 ಕೋಟಿ ರೂ.
ರಿಷಭ್ ಪಂತ್ (ಡೆಲ್ಲಿ ಕ್ಯಾಪಿಟಲ್ಸ್)
- ಬಿಸಿಸಿಐ ಸಂಬಳ: 3 ಕೋಟಿ ರೂ.
- ಐಪಿಎಲ್ ಸಂಬಳ: 16 ಕೋಟಿ ರೂ.
ರವೀಂದ್ರ ಜಡೇಜಾ (ಚೆನ್ನೈ ಸೂಪರ್ ಕಿಂಗ್ಸ್)
- ಬಿಸಿಸಿಐ ವೇತನ: 7 ಕೋಟಿ ರೂ.
- ಐಪಿಎಲ್ ಸಂಬಳ: 16 ಕೋಟಿ ರೂ.
ವಿರಾಟ್ ಕೊಹ್ಲಿ (ಆರ್‌ಸಿಬಿ)
- ಬಿಸಿಸಿಐ ವೇತನ: 7 ಕೋಟಿ ರೂ.
- ಐಪಿಎಲ್ ಸಂಬಳ: 15.25 ಕೋಟಿ ರೂ.
ಹಾರ್ದಿಕ್ ಪಾಂಡ್ಯ (ಮುಂಬೈ ಇಂಡಿಯನ್ಸ್)
- ಬಿಸಿಸಿಐ ವೇತನ: 5 ಕೋಟಿ ರೂ.
- ಐಪಿಎಲ್ ಸಂಬಳ: 15 ಕೋಟಿ ರೂ.
ಜಸ್ಪ್ರೀತ್ ಬುಮ್ರಾ (ಮುಂಬೈ ಇಂಡಿಯನ್ಸ್)
- ಬಿಸಿಸಿಐ ಸಂಬಳ: 7 ಕೋಟಿ ರೂ.
- ಐಪಿಎಲ್ ಸಂಬಳ: 12 ಕೋಟಿ ರೂ.
ಶ್ರೇಯಸ್ ಅಯ್ಯರ್ (ಕೋಲ್ಕತಾ ನೈಟ್ ರೈಡರ್ಸ್)
- ಬಿಸಿಸಿಐ ವೇತನ: ಈ ಹಿಂದೆ 5 ಕೋಟಿ ರೂ.
- ಐಪಿಎಲ್ ಸಂಬಳ: 12.25 ಕೋಟಿ ರೂ.
ಶುಭ್ಮನ್ ಗಿಲ್ (ಗುಜರಾತ್ ಟೈಟಾನ್ಸ್)
- ಬಿಸಿಸಿಐ ವೇತನ: 5 ಕೋಟಿ ರೂ.
- ಐಪಿಎಲ್ ಸಂಬಳ: 8 ಕೋಟಿ ರೂ.
ಸೂರ್ಯಕುಮಾರ್ ಯಾದವ್ (ಎಂಐ)
- ಬಿಸಿಸಿಐ ವೇತನ: 3 ಕೋಟಿ ರೂ.
- ಐಪಿಎಲ್ ಸಂಬಳ: 8 ಕೋಟಿ ರೂ.
ಇದನ್ನೂ ಓದಿ | ಹಾಯ್, ನಾನು ಎಂಎಸ್ ಧೋನಿ, ನನಗೆ 600 ರೂ ಫೋನ್ಪೇ ಮಾಡಿ: ಮಾಹಿ ಹೆಸರಿನ ನಕಲಿ ಖಾತೆಯಲ್ಲಿ ಅಭಿಮಾನಿಗಳಿಗೆ ವಂಚನೆ
ಭಾರತೀಯ ಕ್ರಿಕೆಟಿಗರು ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಸಾಧಾರಣ ಪ್ರದರ್ಶನಗಳ ಮೂಲಕ ತಮ್ಮ ಸಾಂಪಾದನೆ ಹೆಚ್ಚಿಸಿಕೊಂಡಿದ್ದಾರೆ. ಜೊತೆಗೆ ಮೈದಾನದ ಹೊರಗೂ ತಮ್ಮ ಬ್ರ್ಯಾಂಡ್ ಮೌಲ್ಯವನ್ನು ವೃದ್ಧಿಸಿಕೊಂಡಿದ್ದಾರೆ. ಐಪಿಎಲ್ ಭಾರತೀಯ ಕ್ರಿಕೆಟಿಗರ ವೇತನ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ತಮ್ಮ ಸಂಬಳದ ಜೊತೆಗೆ, ಹೆಚ್ಚಿನ ಆಟಗಾರರಯ ಪ್ರಮುಖ ಬ್ರಾಂಡ್‌ಗಳ ಅಂಬಾಸಿಡರ್ ಆಗಿದ್ದಾರೆ. ಪ್ರಾಯೋಜಕತ್ವಗಳ ಮೂಲಕ ಗಮನಾರ್ಹ ಸಂಪಾದನೆ ಮಾಡುತ್ತಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, 2024ರಲ್ಲಿ ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗನಾಗಿ ಸಚಿನ್ ತೆಂಡೂಲ್ಕರ್ ಮುಂದುವರೆದಿದ್ದಾರೆ. ಜಂಟಲ್‌ಮೆನ್ ಗೇಮ್‌ಗೆ ವಿದಾಯ ಹೇಳಿದರೂ, 165 ಮಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಸಚಿನ್ ಭಾರತದ ಶ್ರೀಮಂತ ಕ್ರಿಕೆಟಿಗನಾಗಿದ್ದಾರೆ. ವಿರಾಟ್ ಕೊಹ್ಲಿ 122 ಮಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಎಂಎಸ್ ಧೋನಿ 127 ಮಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.