ಕನ್ನಡ ಸುದ್ದಿ  /  Entertainment  /  Karnataka Election 2023 Geeta Shiva Rajkumar Joins Congress Kiccha Sudeep Reacts Sandalwood News Mnk

Karnataka Election 2023: ಗೀತಾ ಶಿವರಾಜ್‌ಕುಮಾರ್‌ ಕಾಂಗ್ರೆಸ್‌ ಸೇರ್ಪಡೆ; ಕಿಚ್ಚ ಸುದೀಪ್‌ ಕಡೆಯಿಂದ ಬಂತು ಈ ರಿಯಾಕ್ಷನ್

Karnataka Election 2023: ಗೀತಕ್ಕ ತುಂಬ ಒಳ್ಳೇ ವ್ಯಕ್ತಿ. ಅವರ ಈ ನಿರ್ಧಾರದ ಹಿಂದೆ ಒಂದೊಳ್ಳೆ ಉದ್ದೇಶವೂ ಇರುತ್ತೆ. ಹಾಗಾಗಿ ಅವರಿಗೆ ಒಳ್ಳೆಯದಾಗಬೇಕು ಎಂದಿದ್ದಾರೆ ಕಿಚ್ಚ ಸುದೀಪ್

ಗೀತಾ ಶಿವರಾಜ್‌ಕುಮಾರ್‌ ಕಾಂಗ್ರೆಸ್‌ ಸೇರ್ಪಡೆ; ಕಿಚ್ಚ ಸುದೀಪ್‌ ಕಡೆಯಿಂದ ಬಂತು ಈ ರಿಯಾಕ್ಷನ್
ಗೀತಾ ಶಿವರಾಜ್‌ಕುಮಾರ್‌ ಕಾಂಗ್ರೆಸ್‌ ಸೇರ್ಪಡೆ; ಕಿಚ್ಚ ಸುದೀಪ್‌ ಕಡೆಯಿಂದ ಬಂತು ಈ ರಿಯಾಕ್ಷನ್

ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ (DK Shivakumar) ಅವರ ಸಮ್ಮುಖದಲ್ಲಿ ಡಾ. ರಾಜ್‌ ಕುಟುಂಬದ ಹಿರಿ ಸೊಸೆ, ಶಿವರಾಜ್‌ಕುಮಾರ್‌ ಪತ್ನಿ ಗೀತಾ ಶಿವರಾಜ್‌ಕುಮಾರ್‌ (Geeta Shivarajkumar) ಶುಭ ಶುಕ್ರವಾರದಂದು ಕಾಂಗ್ರೆಸ್‌ (Congress) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷಕ್ಕೆ ಬರಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಪಕ್ಷದ ಬಾವುಟ ನೀಡಿ ಡಿಕೆ ಶಿವಕುಮಾರ್‌ ಸೇರಿ ಪಾರ್ಟಿಯ ಹಲವು ಮುಖಂಡರು ಸ್ವಾಗತಿಸಿದರು.

ಈ ಕುರಿತು ರಾಜ್ಯಾದ್ಯಂತ ಬಿಜೆಪಿ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ನಟ ಸುದೀಪ್‌ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಗೀತಕ್ಕ ಏನೇ ನಿರ್ಧಾರ ತೆಗೆದುಕೊಂಡ್ರೂ ಅಲ್ಲೊಂದು ಒಳ್ಳೆಯ ಉದ್ದೇಶ ಇದ್ದೇ ಇರುತ್ತೆ ಎನ್ನುವ ಮೂಲಕ ಗೀತಾ ಶಿವರಾಜ್‌ಕುಮಾರ್‌ ಅವರ ನಿರ್ಧಾರವನ್ನು ಸುದೀಪ್‌ ಬೆಂಬಲಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯಲ್ಲಿ ಸುದೀಪ್‌ ನೀಡಿದ ಪ್ರತಿಕ್ರಿಯೆ ಹೀಗಿದೆ.

ಅವರ ನಿರ್ಧಾರದ ಹಿಂದೆ ಒಳ್ಳೆ ಉದ್ದೇಶವಿರುತ್ತೆ..

"ಗೀತಕ್ಕ ಅವರು ನನ್ನಿಷ್ಟದ ವ್ಯಕ್ತಿ. ನನಗೆ ಅಕ್ಕ ಅವರು. ನನಗೆ ಬಹಳ ಬೇಕಾದವರು. ನನಗೆ ಪ್ರೀತಿಯ ವ್ಯಕ್ತಿ. ಅವರಿಗೆ ಒಳ್ಳೆಯದಾಗಲಿ. ಅವರಿಗೆ ಬಹಳ ಒಳ್ಳೆಯ ಮನಸ್ಸು. ಅವರು ಲೈಫ್‌ನಲ್ಲಿ ಏನೇ ಮಾಡಿದರೂ ತುಂಬ ಯೋಚನೆ ಮಾಡಿ ಮಾಡ್ತಾರೆ. ಅವರಿಗೆ ಒಳ್ಳೆಯದಾಗಬೇಕು, ಗೀತಕ್ಕನಿಗೆ ಒಳ್ಳೆಯದಾಗಬೇಕು" ಎಂದಿದ್ದಾರೆ.

"ಕಾಲಾಯ ತಸ್ಮೈ ನಮಃ; ರಾಜಕೀಯದಲ್ಲಿ ನಾನಿಲ್ಲ. ಯಾರ್ಯಾರು ಏನೇನು ಮಾಡಬೇಕಿತ್ತೋ, ಆ ಜಾಗದಲ್ಲಿದ್ದುಕೊಂಡು ಅದನ್ನು ಚೆನ್ನಾಗಿ ಮಾಡುತ್ತಿದ್ದಾರೆ. ನಾನೀಗ ಬಸವರಾಜ್‌ ಬೊಮ್ಮಾಯಿ ಪರವಾಗಿ ನಿಂತಿದ್ದೇನೆ ಎಂದರೆ ಅವರ ಪರವಾಗಿ ಅಪಾರ ಅಭಿಮಾನ ಇದೆ. ಅವರೊಬ್ಬ ಗ್ರೇಟ್‌ ಲೀಡರ್.‌ ಎಲ್ಲ ಪಕ್ಷದಲ್ಲೂ ಗ್ರೇಟ್‌ ಲೀಡರ್‌ಗಳಿದ್ದಾರೆ. ನಾನು ಇಲ್ಲ ಎಂದು ಹೇಳುತ್ತಿಲ್ಲ. ಅದೇ ರೀತಿ ಸಿನಿಮಾ ಕ್ಷೇತ್ರದಲ್ಲಿ ನಾನು ಖುಷಿಯಾಗಿದ್ದೇನೆ. ಅಲ್ಲಿ ಮಾಡಬೇಕಿರುವ ಕೆಲಸ ಇನ್ನೂ ತುಂಬ ಇದೆ" ಎಂದೂ ಟಿವಿ9 ಜತೆಗೆ ಸುದೀಪ್ ಮಾತನಾಡಿದ್ದಾರೆ.‌

ಶಿವರಾಜ್‌ಕುಮಾರ್‌ ಬೆಂಬಲ

ಪತ್ನಿ ಗೀತಾ ಶಿವರಾಜ್‌ಕುಮಾರ್‌ ಅವರ ಕಾಂಗ್ರೆಸ್‌ ಸೇರ್ಪಡೆ ನಿರ್ಧಾರಕ್ಕೆ ಶಿವರಾಜ್‌ಕುಮಾರ್‌ ಸಹ ಬೆಂಬಲ ಸೂಚಿಸಿದ್ದಾರೆ. ಈ ಸಂಬಂಧ ತಮ್ಮ ಬೆಂಗಳೂರಿನ ನಾಗವಾರದಲ್ಲಿನ ಮನೆ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, "ಗೀತಾ ಇವತ್ತು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಲಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಕ್ವೀನ್ಸ್‌ ರಸ್ತೆಯಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರಲಿದ್ದಾರೆ. ಗೀತಾ ಅವರ ನಿರ್ಧಾರಕ್ಕೆ ನನ್ನ ಸಹಮತಿಯೂ ಇದೆ" ಎಂದಿದ್ದಾರೆ ಶಿವರಾಜ್‌ಕುಮಾರ್.‌

ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದಂತೆ, ನೇರವಾಗಿ ಸೊರಬ ಕ್ಷೇತ್ರಕ್ಕೆ ತೆರಳುವುದಾಗಿಯೂ ಶಿವಣ್ಣ ಹೇಳಿದ್ದಾರೆ. "ಸೇರ್ಪಡೆ ಕೆಲಸ ಮುಗಿಯುತ್ತಿದ್ದಂತೆ, ನಾಳೆಯಿಂದಲೇ ಪ್ರಚಾರ ಕಾರ್ಯ ಶುರುವಾಗಲಿದೆ. ಸೊರಬದಲ್ಲಿ ಮಧು ಬಂಗಾರಪ್ಪ ಅವರ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಆ ಪ್ರಚಾರದಲ್ಲಿ ನಾನೂ ಸಹ ಭಾಗವಹಿಸಲಿದ್ದೇನೆ" ಎಂದಿದ್ದಾರೆ.

IPL_Entry_Point