ಕನ್ನಡ ಸುದ್ದಿ  /  ಮನರಂಜನೆ  /  Koffe With Karan Show: ಕಾಫಿ ವಿತ್ ಕರಣ್‌ ಶೋದಲ್ಲಿ ಯಶ್‌, ರಿಷಬ್‌ ಶೆಟ್ಟಿ!; ಹಿಂದಿ ಶೋನಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್ಸ್‌..

Koffe with Karan Show: ಕಾಫಿ ವಿತ್ ಕರಣ್‌ ಶೋದಲ್ಲಿ ಯಶ್‌, ರಿಷಬ್‌ ಶೆಟ್ಟಿ!; ಹಿಂದಿ ಶೋನಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್ಸ್‌..

ರಿಷಬ್‌ ಶೆಟ್ಟಿ ಮತ್ತು ನಟ ಯಶ್‌ ಈ ಸಲದ ಕಾಫಿ ವಿತ್ ಕರಣ್‌ 8ನೇ ಸೀಸನ್‌ನ ಮೊದಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸದ್ಯಕ್ಕೆ ಹೀಗೊಂದು ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಸದ್ದು ಮಾಡುತ್ತಿದೆ

ಕಾಫಿ ವಿತ್ ಕರಣ್‌ ಶೋದಲ್ಲಿ ಯಶ್‌, ರಿಷಬ್‌ ಶೆಟ್ಟಿ!; ಹಿಂದಿ ಶೋನಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್ಸ್‌..
ಕಾಫಿ ವಿತ್ ಕರಣ್‌ ಶೋದಲ್ಲಿ ಯಶ್‌, ರಿಷಬ್‌ ಶೆಟ್ಟಿ!; ಹಿಂದಿ ಶೋನಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್ಸ್‌..

Koffe with Karan Show: ಬಾಲಿವುಡ್‌ ಅಂಗಳದಲ್ಲಿ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನದ ಜತೆಗೆ ತಮ್ಮ ಟಾಕ್‌ ಶೋ ಕಾಫಿ ವಿತ್‌ ಕರಣ್‌ ಮೂಲಕವೇ ಜನನಿತರಾದವರು ಕರಣ್‌ ಜೋಹಾರ್.‌ ಪ್ರತಿ ಸೀಸನ್‌ನಲ್ಲಿಯೂ ಏನಾದರೊಂದು ವಿಶೇಷತೆ ಹೊತ್ತು ಬರುವ ಇವರ ಶೋ ನೋಡುವುದಕ್ಕೂ ಅಪಾರ ಅಭಿಮಾನಿ ಬಳಗವೇ ಇದೆ. ನೇರ ಮಾತು, ವಿವಾದ, ಪ್ರೀತಿ.. ಹೀಗೆ ಎಲ್ಲ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದಕ್ಕೆಂದೇ ಈ ವೇದಿಕೆ ಹುಟ್ಟು ಹಾಕಿದ್ದಾರೆ ಕರಣ್‌.

ಹಾಗಂತ ಸಿಕ್ಕ ಸಿಕ್ಕವರಿಗೆ ಇಲ್ಲಿ ಅವಕಾಶವಿಲ್ಲ. ಎಲ್ಲರೂ ಈ ಶೋಗೆ ಬರಲು ಒಪ್ಪುವುದೂ ಇಲ್ಲ. ಆದರೆ, ಇದೀಗ ಹೊಸ ಸೀಸನ್‌ ಶುರುವಾಗುತ್ತಿದೆ. ಕನ್ನಡಿಗರು ಕರಣ್‌ ಜತೆ ಕೂತು ಕಾಫಿ ಕುಡಿಯಲಿದ್ದಾರೆ! ಒಂದಷ್ಟು ಮಾತು, ಹರಟೆ, ಮುಂದಿನ ಸಿನಿಮಾ ಅಪ್‌ಡೇಟ್‌ಗಳ ಬಗ್ಗೆಯೂ ಮಾತನಾಡಲಿದ್ದಾರೆ..

ಹೌದು, ಯಾರಿರಬಹುದು? ಈ ನಿಮ್ಮ ಪ್ರಶ್ನೆಗೆ ನೀವೇ ಊಹಿಸಿಕೊಂಡಂತೆ ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ಮತ್ತು ಕೆಜಿಎಫ್‌ ಫೇಮ್‌ನ ಯಶ್‌ ಈ ಸಲದ ಕಾಫಿ ವಿತ್ ಕರಣ್‌ 8ನೇ ಸೀಸನ್‌ನ ಮೊದಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸದ್ಯಕ್ಕೆ ಹೀಗೊಂದು ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಸದ್ದು ಮಾಡುತ್ತಿದ್ದು, ಶೀಘ್ರದಲ್ಲಿ ಅಧಿಕೃತ ಘೋಷಣೆ ಆಗಬೇಕಿದೆ.

ಯಾವಾಗ ಪ್ರಸಾರ?

ಸದ್ಯದ ಮಾಹಿತಿ ಪ್ರಕಾರ ಇದೀಗ ಸೀಸನ್‌ 8ರ ತಯಾರಿ ಕೆಲಸಗಳು ನಡೆದಿವೆ. ಹಾಗಾಗಿ ಬಹುಶಃ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಪ್ರಸಾರವಾಗಲಿದೆ. ರಿಷಬ್‌ ಮತ್ತು ಯಶ್‌ ಜತೆಗೆ ಪಠಾಣ್‌ ಮೂಲಕ ಸೋಲಿನ ಸರಪಳಿಯಿಂದ ಬಿಡಿಸಿಕೊಂಡು ಕಂಬ್ಯಾಕ್‌ ಮಾಡಿರುವ ಶಾರುಖ್‌ ಖಾನ್‌ ಸಹ ಇರಲಿದ್ದಾರಂತೆ. ಸೌತ್‌ನ ಮತ್ತೋರ್ವ ಸೂಪರ್‌ಸ್ಟಾರ್‌ ಅಲ್ಲು ಅರ್ಜುನ್‌ ಸಹ ಈ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದೇ ಹೇಳಲಾಗುತ್ತಿದೆ.

ಹೀರೋಗಳಷ್ಟೇ ಅಲ್ಲ ಪತ್ನಿಯರೂ ಇರಲಿದ್ದಾರೆ?

ಇನ್ನೊಂದು ವಿಶೇಷತೆ ಏನೆಂದರೆ ಈ ಕಾಫಿ ವಿತ್ ಕರಣ್‌ ಶೋನಲ್ಲಿ ಸೌತ್‌ನ ಈ ಸ್ಟಾರ್‌ಗಳು ಮಾತ್ರವಲ್ಲ, ಅವರೊಂದಿಗೆ ಪತ್ನಿಯರಿಗೂ ಆಹ್ವಾನ ಹೋಗಿದೆಯಂತೆ. ಅಂದರೆ ಯಶ್‌ ಜತೆಗೆ ರಾಧಿಕಾ ಪಂಡಿತ್‌, ರಿಷಬ್‌ ಶೆಟ್ಟಿ ಜತೆಗೆ ಪ್ರಗತಿ ಶೆಟ್ಟಿ ಸಹ ಭಾಗವಹಿಸಲಿದ್ದಾರೆ.

ಇನ್ನು ಸಿನಿಮಾ ಕೆಲಸದ ವಿಚಾರಕ್ಕೆ ಬಂದರೆ, ಕರಣ್ ನಿರ್ದೇಶನದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ರಣವೀರ್ ಸಿಂಗ್, ಆಲಿಯಾ ಭಟ್, ಜಯಾ ಬಚ್ಚನ್, ಶಬಾನಾ ಅಜ್ಮಿ ಮತ್ತು ಧರ್ಮೇಂದ್ರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜುಲೈ 28 ರಂದು ಈ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

IPL_Entry_Point