ಕನ್ನಡ ಸುದ್ದಿ  /  Entertainment  /  Many Hugs And Love To All Puneeths Fans Go And Embrace Gandhadhagudi Says Kiccha Sudeep

Sudeep on Gandhada Gudi: ‘ಅಪ್ಪು ಫ್ಯಾನ್ಸ್‌ಗೆ ನನ್ನದೊಂದು ಅಪ್ಪುಗೆ’; ‘ಹೋಗಿ ನೀವೂ ಗಂಧದ ಗುಡಿಯನ್ನು ತಬ್ಬಿಕೊಳ್ಳಿ’ ಎಂದ ಕಿಚ್ಚ

ಈಗಾಗಲೇ ‘ಗಂಧದ ಗುಡಿ’ ನೋಡಿದ ಸಾಕಷ್ಟು ಸೆಲೆಬ್ರಿಟಿಗಳು ಪುನೀತ್‌ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಈ ಕನಸಿನ ಪ್ರಾಜೆಕ್ಟ್‌ ಹೊಗಳುತ್ತಿದ್ದಾರೆ. ಇದೀಗ ಕಿಚ್ಚ ಸುದೀಪ್‌ ಸಹ ಚಿತ್ರಕ್ಕೆ ಶುಭವಾಗಲಿ ಎಂದು ಹರಸಿದ್ದಾರೆ.

‘ಅಪ್ಪು ಫ್ಯಾನ್ಸ್‌ಗೆ ನನ್ನದೊಂದು ಅಪ್ಪುಗೆ’; ‘ಹೋಗಿ ನೀವೂ ಗಂಧದ ಗುಡಿಯನ್ನು ತಬ್ಬಿಕೊಳ್ಳಿ’ ಎಂದ ಕಿಚ್ಚ
‘ಅಪ್ಪು ಫ್ಯಾನ್ಸ್‌ಗೆ ನನ್ನದೊಂದು ಅಪ್ಪುಗೆ’; ‘ಹೋಗಿ ನೀವೂ ಗಂಧದ ಗುಡಿಯನ್ನು ತಬ್ಬಿಕೊಳ್ಳಿ’ ಎಂದ ಕಿಚ್ಚ

ಡಾ. ಪುನೀತ್‌ ರಾಜ್‌ಕುಮಾರ್‌ ಪುನೀತ್‌ ಆಗಿಯೇ ಕಾಣಿಸಿಕೊಂಡ ‘ಗಂಧದ ಗುಡಿ’ ಸಿನಿಮಾ ವಿಶ್ವದಾದ್ಯಂತ ಇಂದು (ಅ.28) ಬಿಡುಗಡೆ ಆಗಿದೆ. ಈಗಾಗಲೇ ಈ ಸಿನಿಮಾ ನೋಡಿದ ಅದೆಷ್ಟೋ ಮಂದಿ ಮತ್ತೆ ಭಾವುಕರಾಗಿದ್ದಾರೆ. ಚಿತ್ರಮಂದಿರದಿಂದ ಕಣ್ಣೀರು ಹಾಕುತ್ತಲೇ ಹೊರಬಂದಿದ್ದಾರೆ. ಇತ್ತ ಚಿತ್ರಮಂದಿರಗಳು ಮತ್ತೆ ಪುನೀತಮಯವಾಗಿವೆ. ಎಲ್ಲೆಡೆ ಕಟೌಟ್‌ಗಳು ತಲೆಎತ್ತಿ ನಿಂತಿವೆ. ದೇವಸ್ಥಾನಗಳಲ್ಲಿ ಪೂಜೆ, ಪುನಸ್ಕಾರ ನಡೆಯುತ್ತಿದ್ದರೆ, ಅಪ್ಪು ಸಮಾಧಿ ಕಂಠೀರವ ಸ್ಟುಡಿಯೋದಲ್ಲಿಯೂ ಜನ ಜಾತ್ರೆ.

ಹೀಗಿರುವಾಗಲೇ ಈಗಾಗಲೇ ಸಿನಿಮಾ ನೋಡಿದ ಸಾಕಷ್ಟು ಸೆಲೆಬ್ರಿಟಿಗಳು ಪುನೀತ್‌ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಈ ಕನಸಿನ ಪ್ರಾಜೆಕ್ಟ್‌ ಹೊಗಳುತ್ತಿದ್ದಾರೆ. ಇದೀಗ ಕಿಚ್ಚ ಸುದೀಪ್‌ ಸಹ ಚಿತ್ರಕ್ಕೆ ಶುಭವಾಗಲಿ ಎಂದು ಹರಸಿದ್ದಾರೆ. ಟ್ವಿಟರ್‌ನಲ್ಲಿ ಚಿತ್ರದ ಬಗ್ಗೆ ಕೆಲ ಸಾಲುಗಳನ್ನು ಬರೆದುಕೊಂಡು, ಹಬ್ಬದಂತೆ ಆಚರಿಸಿ ಎಂದಿದ್ದಾರೆ.

ಕಿಚ್ಚನ ಟ್ವಿಟ್‌ನಲ್ಲೇದೆ?

ಪುನೀತ್ ಅವರ ಕುಟುಂಬಕ್ಕೆ ಮತ್ತು ಗಂಧದಗುಡಿಯ ಇಡೀ ತಂಡಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಪುನೀತ್‌ ರೀತಿಯಲ್ಲಿಯೇ ಈ ಚಿತ್ರವೂ ಹೊಳೆಯಲಿ. ಶುಭಾಶಯಗಳು ಅಶ್ವಿನಿ, ನೀವು ನಿಜವಾಗಿಯೂ ಎಲ್ಲವನ್ನೂ ತಡೆದುಕೊಂಡಿದ್ದೀರಿ. ಅಪ್ಪು ಫ್ಯಾನ್ಸ್‌ಗೆ ನನ್ನೊಂದೊಂದು ದೊಡ್ಡ ಅಪ್ಪುಗೆ.. ಹೋಗಿ ನೀವೂ ಗಂಧದ ಗುಡಿಯನ್ನು ತಬ್ಬಿಕೊಳ್ಳಿ. ಇದು ಹಬ್ಬ ಆಚರಿಸುವ ಸಮಯ’ ಎಂದು ಸುದೀಪ್‌ ಟ್ವಿಟ್‌ ಮಾಡಿದ್ದಾರೆ.

ಆಸೆ ಕಡಿಮೆ ಮಾಡಿಕೊಂಡು ಪ್ರಕೃತಿ ಕಡೆ ಗಮನಕೊಡಬೇಕು ಎಂದ ರಿಷಬ್

"ಅನಿಸಿದ್ದನ್ನು ಹೇಳುವುದು ಕಷ್ಟ. ಸಿನಿಮಾದಲ್ಲಿ ಎಲ್ಲರೂ ಹೀರೋ ಆಗ್ತಾರೆ. ಆದರೆ ರಿಯಲ್ಲಾಗಿ ವಿಶ್ವಮಾನವ ಆಗುವುದಕ್ಕೆ ಸಾಧ್ಯವಿಲ್ಲ. ಅಪ್ಪು ಅವರ ಜರ್ನಿಯಲ್ಲಿ ಏನೆಲ್ಲ ಸಂದೇಶ ಕೊಡಬೇಕೆಂದು ಹೇಳಿದ್ದರೋ, ಅವರ ಜೀವನದ ಅನುಭವವನ್ನು ‘ಗಂಧದ ಗುಡಿ’ ಮೂಲಕ ಅನುಭವಿಸಿದ್ದಾರೆ. ನೋಡುಗರು ಏನೆಲ್ಲ ತಿಳಿದುಕೊಳ್ಳಬೇಕೋ ಅದೆಲ್ಲವನ್ನೂ ಕೊಟ್ಟಿದ್ದಾರೆ. ಪ್ರತಿಯೊಬ್ಬ ಕನ್ನಡಿಗನೂ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಇದನ್ನು ನೋಡಬೇಕೆಂದು ನಾನು ಹೇಳುತ್ತೇನೆ. ಮನುಷ್ಯನಿಗೆ ಆಸೆ ಜಾಸ್ತಿ, ಆಸೆ ಕಡಿಮೆ ಮಾಡ್ಕೊಂಡು ಪ್ರಕೃತಿ ಕಡೆಗೂ ಗಮನಕೊಟ್ಟರೆ ಒಳ್ಳೆಯದು" ಎಂದು ರಿಷಬ್‌ ಹೇಳಿದ್ದಾರೆ.

ಅಪ್ಪು ಅಪ್ಪು ಆಗಿಯೇ ಕಾಣ್ತಾರೆ..

"ಅಪ್ಪು ಸರ್‌ ಹೋಗುವ ಮುಂಚೆ ಕನ್ನಡಿಗರಿಗೆ ಒಳ್ಳೆಯ ಫೇರ್‌ವೆಲ್‌ ಕೊಟ್ಟಿದ್ದಾರೆ. ಅಪ್ಪು ಅವರ ಪಕ್ಕದಲ್ಲಿ ಕುಳಿತು, ಕರ್ನಾಟಕದ ವನಸಂಪತ್ತನ್ನು ಹಾಗೂ ಸಮುದ್ರದೊಳಗಿನ ಜೀವವನ್ನೂ ಕಣ್ತುಂಬಿಕೊಂಡ ಭಾವ ನಿಮ್ಮದಾಗುತ್ತದೆ. ಅದೇ ರೀತಿ ನಾಡಿನ ಎಲ್ಲವನ್ನೂ ಕವರ್‌ ಮಾಡಿದ್ದಾರೆ. ಅವರ ಜತೆಗೇ ಇದ್ದೇವೆ ಎಂಬ ಫೀಲ್‌ ಆಗುತ್ತದೆ. ಅಪ್ಪು ಅವರನ್ನು ಬೇರೆ ಬೇರೆ ಸಿನಿಮಾಗಳಲ್ಲಿ ಹೀರೋ ಆಗಿ ನೋಡಿದ್ದೇವೆ. ಅಪ್ಪು ಅವರನ್ನು ಅಪ್ಪು ಅವರಾಗಿ ನೋಡಿದ್ದು ಕಡಿಮೆ. ಅವರ ರಿಯಲ್‌ ಲೈಫ್‌ ಹೇಗೆ? ಅದನ್ನು ಇಲ್ಲಿ ನೋಡಿದ್ದೇವೆ. ಒಂದೊಳ್ಳೆ ಸಂದೇಶವನ್ನು ಬಿಟ್ಟು ಹೋಗಿದ್ದಾರೆ. ಎಲ್ಲರೂ ತಪ್ಪದೆ ಈ ಸಿನಿಮಾ ನೋಡಿ" ಎಂದು ರಕ್ಷಿತ್‌ ಕೇಳಿಕೊಂಡಿದ್ದಾರೆ.

IPL_Entry_Point