Bama Harish: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾಮಾ ಹರೀಶ್‌ಗೆ ಹೃದಯಾಘಾತ
ಕನ್ನಡ ಸುದ್ದಿ  /  ಮನರಂಜನೆ  /  Bama Harish: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾಮಾ ಹರೀಶ್‌ಗೆ ಹೃದಯಾಘಾತ

Bama Harish: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾಮಾ ಹರೀಶ್‌ಗೆ ಹೃದಯಾಘಾತ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾಮಾ ಹರೀಶ್‌ ಆರೋಗ್ಯದಲ್ಲಿ ಏರುಪೇರಾಗಿದೆ. ಹೈ ಬಿಪಿ ಮತ್ತು ಹೃದಯ ಬಡಿತದಲ್ಲಿ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

Bama Harish: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾಮಾ ಹರೀಶ್‌ಗೆ ಹೃದಯಾಘಾತ
Bama Harish: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾಮಾ ಹರೀಶ್‌ಗೆ ಹೃದಯಾಘಾತ

Bama Harish Hospitalized: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಕ್ಷೇತ್ರದ ಬಹುತೇಕ ಎಲ್ಲ ವಲಯಗಳಲ್ಲೂ ತೊಡಗಿಸಿಕೊಂಡಿರುವ ನಿರ್ಮಾಪಕ ಭಾಮಾ ಹರೀಶ್‌ ಅವರಿಗೆ ಹೃದಯಾಘಾತವಾಗಿದೆ. ಬುಧವಾರವೇ ಹೃದಯ ಸಂಬಂಧಿ ಸಮಸ್ಯೆ ಎದುರಾಗಿದೆ. ಉಸಿರಾಟದ ಸಮಸ್ಯೆ ಜತೆಗೆ ಹೃದಯ ಬಡಿತದಲ್ಲೂ ಏರಿಳಿತ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ ಅವರನ್ನು ದಾಖಲಾಗಿದೆ.

ಹೈ ಬಿಪಿ ಹೆಚ್ಚಾದ ಕಾರಣ ಮತ್ತು ಹೃದಯದ ಬಡಿತ ಏಕಾಏಕಿ ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಇಂದು ಆಸ್ಪತ್ರೆ ವೈದ್ಯರು ಅಂಜಿಯೋಗ್ರಾಮ್ ಟ್ರೀಟ್‌ಮೆಂಟ್‌ ನೀಡಲಿದ್ದಾರೆ. ಸದ್ಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದಾದ ಬಳಿಕವೇ ಅವರ ಹೆಲ್ತ್‌ ಬುಲಿಟಿನ್‌ ರಿಲೀಸ್‌ ಆಗಲಿದೆ.

ಇತ್ತೀಚೆಗಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ ಕೆಳಗಿಳಿದಿದ್ದ ಭಾಮಾ ಹರೀಶ್‌, ಚಂದನವನದಲ್ಲಿ ಹಲವು ಸಿನಿಮಾಗಳ ನಿರ್ಮಾಣಕ್ಕೂ ಸಾಥ್‌ ನೀಡಿದ್ದರು. ದರ್ಶನ್‌ ನಟನೆಯ ಮೆಜೆಸ್ಟಿಕ್‌ ಚಿತ್ರಕ್ಕೆ ಸಹ ನಿರ್ಮಾಪಕರಾಗಿಯೂ ಹಣ ಹೂಡಿದ್ದರು. ಸದ್ಯ ಎನ್‌.ಎಂ ಸುರೇಶ್‌ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದಾರೆ. 

Whats_app_banner