ಕನ್ನಡ ಸುದ್ದಿ  /  ಮನರಂಜನೆ  /  Veteran Actor Lohithaswa: ಹೃದಯಾಘಾತದಿಂದ ಹಿರಿಯ ನಟ ಲೋಹಿತಾಶ್ವ ಆಸ್ಪತ್ರೆಗೆ ದಾಖಲು; ಸ್ಥಿತಿ ಗಂಭೀರ

Veteran actor Lohithaswa: ಹೃದಯಾಘಾತದಿಂದ ಹಿರಿಯ ನಟ ಲೋಹಿತಾಶ್ವ ಆಸ್ಪತ್ರೆಗೆ ದಾಖಲು; ಸ್ಥಿತಿ ಗಂಭೀರ

ಚಂದನವನದ ಹಿರಿಯ ನಟ, ನಿವೃತ್ತ ಇಂಗ್ಲಿಷ್‌ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ ಲೋಹಿತಾಶ್ವ ಟಿ.ಎಸ್‌ (Lohithaswa T. S.) ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೃದಯಾಘಾತದಿಂದ ಹಿರಿಯ ನಟ ಲೋಹಿತಾಶ್ವ ಆಸ್ಪತ್ರೆಗೆ ದಾಖಲು; ಸ್ಥಿತಿ ಗಂಭೀರ
ಹೃದಯಾಘಾತದಿಂದ ಹಿರಿಯ ನಟ ಲೋಹಿತಾಶ್ವ ಆಸ್ಪತ್ರೆಗೆ ದಾಖಲು; ಸ್ಥಿತಿ ಗಂಭೀರ

ಬೆಂಗಳೂರು: ಚಂದನವನದ ಹಿರಿಯ ನಟ, ನಿವೃತ್ತ ಇಂಗ್ಲಿಷ್‌ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ ಲೋಹಿತಾಶ್ವ ಟಿ.ಎಸ್‌ (Lohithaswa T. S.) ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

80 ವರ್ಷದ ಲೋಹಿತಾಶ್ವ ಅವರಿಗೆ ಭಾನುವಾರ ತಡರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಸಾಗರ್‌ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವಯಸ್ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆರೋಗ್ಯ ಸ್ಥಿತಿಯೂ ಗಂಭೀರವಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದು, ಚಿಕಿತ್ಸೆ ಮುಂದುವರಿಸಿದ್ದಾರೆ.

ತುಮಕೂರು ಜಿಲ್ಲೆ ತೊಂಡಗೆರೆಯವರಾದ ಲೋಹಿತಾಶ್ವ ಕನ್ನಡದಲ್ಲಿ ಸರಿಸುಮಾರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆಗೂ ಮೊದಲು ಇಂಗ್ಲಿಷ್‌ ಭಾಷೆಯಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತ್ತಕೋತ್ತರ ಪದವಿ ಪಡೆದು, ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು.

1971ರಲ್ಲಿ ಮದುವೆಯಾದ ಇವರಿಗೆ ಮೂವರು ಮಕ್ಕಳಿದ್ದಾರೆ. ಆ ಪೈಕಿ ಈಗಾಗಲೇ ಸಿನಿಮಾದಲ್ಲಿ ಗುರುತಿಸಿಕೊಂಡಿರುವ ಶರತ್‌ ಲೋಹಿತಾಶ್ವ ಸಹ ಇವರ ಪುತ್ರ.

IPL_Entry_Point