ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಕನ್ನಡ: ಕಾಯುವಿಕೆ ಪಟ್ಟಿಯಲ್ಲಿ ಚಾರ್ಲಿ ಸುಂದರಿ ಸಂಗೀತ ಶೃಂಗೇರಿ, ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌

ಬಿಗ್‌ಬಾಸ್‌ ಕನ್ನಡ: ಕಾಯುವಿಕೆ ಪಟ್ಟಿಯಲ್ಲಿ ಚಾರ್ಲಿ ಸುಂದರಿ ಸಂಗೀತ ಶೃಂಗೇರಿ, ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌

Bigg Boss Kannada season 10 Contestant list: ಚಾರ್ಲಿ ಸಿನಿಮಾದಲ್ಲಿ ಡಾಕ್ಟರ್‌ ಪಾತ್ರದಲ್ಲಿ ನಟಿಸಿದ್ದ ಸಂಗೀತ ಶೃಂಗೇರಿ ಅವರು ಈ ಬಾರಿಯ ಬಿಗ್‌ಬಾಸ್‌ ಕನ್ನಡಕ್ಕೆ ಎಂಟ್ರಿ ನೀಡಲು ನಾಲ್ಕು ಅಂಕಗಳು ಕಡಿಮೆಯಾಗಿವೆ. ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಕೂಡ ಹೋಲ್ಡ್‌ ಪಟ್ಟಿಗೆ ಸೇರಿದ್ದಾರೆ.

ಬಿಗ್‌ಬಾಸ್‌ ಕನ್ನಡ: ಕಾಯುವಿಕೆ ಪಟ್ಟಿಯಲ್ಲಿ ಚಾರ್ಲಿ ಸುಂದರಿ ಸಂಗೀತ ಶೃಂಗೇರಿ
ಬಿಗ್‌ಬಾಸ್‌ ಕನ್ನಡ: ಕಾಯುವಿಕೆ ಪಟ್ಟಿಯಲ್ಲಿ ಚಾರ್ಲಿ ಸುಂದರಿ ಸಂಗೀತ ಶೃಂಗೇರಿ

ಬೆಂಗಳೂರು: ಚಾರ್ಲಿ ಸಿನಿಮಾದಲ್ಲಿ ಡಾಕ್ಟರ್‌ ಪಾತ್ರದಲ್ಲಿ ನಟಿಸಿದ್ದ ಸಂಗೀತ ಶೃಂಗೇರಿ ಅವರು ಈ ಬಾರಿಯ ಬಿಗ್‌ಬಾಸ್‌ ಕನ್ನಡಕ್ಕೆ ಎಂಟ್ರಿ ನೀಡಲು ನಾಲ್ಕು ಅಂಕಗಳು ಕಡಿಮೆಯಾಗಿವೆ. ಪ್ರೇಕ್ಷಕರು ನೀಡಿದ ಮತದಾನದಲ್ಲಿ ಇವರಿಗೆ ಶೇಕಡ 76 ಅಂಕ ಬಂದಿದ್ದು, ಕಾಯುವಿಕೆ ಪಟ್ಟಿಯಲ್ಲಿರುವವರ ಕೊಠಡಿಗೆ ತೆರಳಿದ್ದಾರೆ. ಕೇವಲ ಶೇಕಡ 4 ಅಂಕಡ ಕಡಿಮೆ ಇರುವುದರಿಂದ ಹೋಲ್ಡ್‌ನಲ್ಲಿದ್ದರೂ ಇವರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶಿಸುವ ಸಾಧ್ಯತೆ ಸಾಕಷ್ಟಿದೆ. ಇವರೊಂದಿಗೆ ಬಿಗ್‌ ಬಾಸ್‌ ಮನೆಗೆ ಚಾರ್ಲಿ 777 ಸಿನಿಮಾದ ಶ್ವಾನ ಚಾರ್ಲಿಯೂ ಪ್ರವೇಶಿಸುವ ಸೂಚನೆಯಿದೆ. ಇದೇ ಸಮಯದಲ್ಲಿ ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಕೂಡ ಹೋಲ್ಡ್‌ ಪಟ್ಟಿಗೆ ಸೇರಿದ್ದಾರೆ.

ಚಾರ್ಲಿ ಸುಂದರಿ ಸಂಗೀತ ಶೃಂಗೇರಿ ಪರಿಚಯ

ಬಿಗ್‌ಬಾಸ್‌ ವೇದಿಕೆಯಲ್ಲಿ ನಗುನಗುತ್ತ ಉತ್ಸಾಹದಿಂದ ಇದ್ದ ಸಂಗೀತ ಶೃಂಗೇರಿ ಅವರು ಪ್ರೇಕ್ಷಕರಿಂದ ಪಾಸ್‌ ಅಂಕ ಪಡೆಯುವ ನಿರೀಕ್ಷೆಯಲ್ಲಿದ್ದರು. ಇವರಿಗೆ 4 ಅಂಕ ಕಡಿಮೆ ಬಂದು ಕಾಯುವಿಕೆ ಪಟ್ಟಿಯಲ್ಲಿದ್ದಾರೆ.

"ತೆಳ್ಳಗೆ ಬೆಳ್ಳಗೆ ಇದ್ದಾನೆ… ಎನ್ನುತ್ತ ವೇದಿಕೆಯ ಮೇಲೆ ಕ್ಯೂಟ್ ಆಗಿ ಫರ್ಪಾರ್ಮ್‌ ಮಾಡಿದ ಸುಂದರಿ ಸಂಗೀತಾ ಶೃಂಗೇರಿ ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟಿ. ಹಿಂದೊಮ್ಮೆ ‘ಕೋಟಿ ಕೊಟ್ರೂ ಬಿಗ್‌ಬಾಸ್‌ಗೆ ಹೋಗಲ್ಲ’ ಎಂದಿದ್ದ ಸಂಗೀತಾ, ಕೋಟಿಗೂ ಮೀರಿದ ಸವಾಲುಗಳನ್ನು ಎದುರಿಸುವ ಉದ್ದೇಶದಿಂದ ಹ್ಯಾಪಿ ಬಿಗ್‌ಬಾಸ್‌ ವೇದಿಕೆಗೆ ಬಂದಿದ್ದಾರೆ. ತಮ್ಮ ಲಕ್ಕಿ ನಂಬರ್ ಆದ ‘10’ ಬಿಗ್‌ಬಾಸ್‌ ಸೀಸನ್‌ ನಂಬರ್ ಕೂಡ ಆಗಿರುವುದು ಅವರು ಬಿಗ್‌ಬಾಸ್‌ಗೆ ಬರಲು ಒಂದು ಕಾರಣ" ಎಂದು ಅವರು ಹೇಳಿದ್ದಾರೆ.

‘ಹುಡುಗಿಯರು ನನ್ನ ಸ್ಪರ್ಧಿಗಳಲ್ಲ; ಹುಡುಗರು ನನ್ನ ಸ್ಪರ್ಧಿಗಳು’ ಎನ್ನುವ ಸಂಗೀತ ಸಿನಿಮಾ ಕ್ಷೇತ್ರಕ್ಕೆ ಬರದಿದ್ದರೆ ಹಾರುಹಕ್ಕಿಯಾಗಿ ಏರ್‌ಫೋರ್ಸ್‌ನಲ್ಲಿರುತ್ತಿದ್ದರು. ಅದು ಅವರ ಕನಸಾಗಿತ್ತು. ‘ಸಿಂಬಾ’ ಅವರ ನೆಚ್ಚಿನ ಸ್ನೇಹಿತ. ಚಿಕ್ಕುವನ್ನು ಮಿಸ್‌ ಮಾಡುಕೊಳ್ಳುವ ಬೇಸರವನ್ನು ‘ಚಾರ್ಲಿ’ ಮರೆಸುತ್ತದೆ ಎಂಬ ಸಮಾಧಾನವೂ ಅವರಿಗಿತ್ತು. ಚಾರ್ಲಿ 777 ಮೂಲಕ ನಟನಾಪಯಣ ಆರಂಭಿಸಿದ ಸಂಗೀತಾ, ಹೊಸ ಚಾಲೆಂಜ್‌ ಅನ್ನು ಫೇಸ್‌ ಮಾಡುವುದಕ್ಕಾಗಿ ಬಿಗ್‌ಬಾಸ್‌ ಮನೆಗೆ ಬರುತ್ತಿದ್ದಾರೆ. ‘ಫ್ಯಾಮಿಲಿ ನನಗೆ ಎಲ್ಲವೂ ಹೌದು’ ಎನ್ನುವ ಸಂಗೀತಾ ಅವರನ್ನು ಮನಸಲ್ಲಿ ಇಟ್ಟುಕೊಂಡೇ ಮನೆಯೊಳಗೆ ಹೋಗಲು ಬಂದಿದ್ದರು. ಇದುವರೆಗೆ ಜನರು ನನ್ನ ಕ್ಯೂಟ್‌ ಆದ ಪಾತ್ರಗಳ ಮೂಲಕವೇ ಗುರ್ತಿಸಿದ್ದಾರೆ. ಆದರೆ ನಾನು ನಿಜವಾಗಿ ಎಷ್ಟು ಬೋಲ್ಡ್‌ ಆಗಿದ್ದೀನಿ ಎಂಬುದನ್ನು ಜನರಿಗೆ ತೋರಿಸಬೇಕು ಎಂದುಕೊಂಡಿರುವ ಸಂಗೀತಾ ಅವರಿಗೆ ಶೇಕಡ 76 ಅಂಕ ನೀಡಿ ಹೋಲ್ಡ್‌ನಲ್ಲಿ ಇಟ್ಟಿದ್ದಾರೆ" ಎಂದು ಕಲರ್ಸ್‌ ಕನ್ನಡ ಅಪ್‌ಡೇಟ್‌ ನೀಡಿದೆ.

ಹರ ಹರ ಮಹಾದೇವ ಸೀರಿಯಲ್‌ನಲ್ಲಿ ಇವರು ಸತಿ ಪಾರ್ವತಿ ನಟನೆಯಿಂದ ಜನಪ್ರಿಯತೆ ಪಡೆದಿದ್ದಾರೆ. ಇವರು 2014ರಲ್ಲಿ ಫೆಮಿನಾ ಮಿಸ್‌ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಟಾಪ್‌ 10ರೊಳಗೆ ಸ್ಥಾನ ಪಡೆದಿದ್ದರು. ವಲ್ಡ್‌ ಸೂಪರ್‌ಮಾಡೆಲ್‌ ಸ್ಪರ್ಧೆಯಲ್ಲಿ ರನ್ನರ್‌ ಅಪ್‌ ಆಗಿದ್ದರು. ಶೃಂಗೇರಿ ಮೂಲದ ಇವರು ಆರ್ಮಿ ಕುಟುಂಬದವರು. ಇವರ ತಂದೆ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಸಂಗೀತ ಶೃಂಗೇರಿ ಅವರು ಎನ್‌ಸಿಸಿ ಕೆಡೆಟ್‌ ಆಗಿದ್ದರು,. ಖೋಖೋ ಆಟದಲ್ಲಿ 2012 ಚಿನ್ನದ ಪದಕ ಪಡೆದಿದ್ದರು. ಇತ್ತೀಚೆಗೆ ಇವರ ಚಾರ್ಲಿ 777 ಸಿನಿಮಾದಲ್ಲಿ ನಟಿಸಿದ್ದರು. ಎಪ್ಲಸ್‌ ಸಿನಿಮಾದಲ್ಲಿ ನಟಸಿದ್ದರು. ಇವರು ಲಕ್ಕಿ ಮ್ಯಾನ್‌ ಮುಂತಾದ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್‌

ಬಿಗ್‌ಬಾಸ್‌ ಕನ್ನಡ ಮನೆಯೊಳಗೆ ಪ್ರವೇಶಿಸಲು ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ಗೂ ಆರಂಭಿಕ ತಡೆ ಎದುರಾಗಿದೆ. ಇವರಿಗೆ ಶೇಕಡ 53 ಅಂಕ ದೊರಕಿದೆ.

‘ನನ್ನ ಮೇಲೆ ನೆಗೆಟೀವ್ ಇಮೇಜ್ ಕಟ್ಟಿದರು ಕೆಲವರು. ನನ್ನ ನಿಜವಾದ ಫೇಸ್ ತೋರಿಸಬೇಕು. ಅದನ್ನು ಮನೆಯೊಳಗೆ ಖಂಡಿತ ತೋರಿಸ್ತೀನಿ. ಬದುಕಿನಲ್ಲಿ ಪಾಸಿಟೀವ್ ನೆಗೆಟೀವ್ ಎರಡೂ ಇರಬೇಕು’ ಎಂದು ವಯಸ್ಸಿಗೂ ಮೀರಿ ಪ್ರಬುದ್ಧವಾಗಿ ಮಾತಾಡುವ ಹುಡುಗ ರಕ್ಷಕ್‌, ಹಿರಿಯ ಹಾಸ್ಯನಟ ಬುಲೆಟ್ ಪ್ರಕಾಶ್‌ ಅವರ ಪುತ್ರ.

‘ಜನರ ಬಾಯಿ ಮುಚ್ಚಿಸಲಾಗದು. ಟ್ರೋಲ್, ರೋಸ್ಟ್‌ ಮಾಡಿದರು ಜನರು… ಅದಕ್ಕೆಲ್ಲ ಕೇರ್ ಮಾಡಲ್ಲ. ನನ್ನ ಸ್ವಂತ ಐಡೆಂಟಿಟಿಯೊಂದಿಗೆ ಬಿಗ್‌ಬಾಸ್ ಮನೆಯೊಳಗೆ ಹೋಗ್ತೀನಿ’ ಎಂದು ನೇರವಾಗಿ ಮಾತಾಡುವ ರಕ್ಷಕ್‌, ಕೌಟುಂಬಿಕ ಪ್ರೇಕ್ಷಕರ ಮನಸಲ್ಲಿ ಜಾಗ ಕಂಡುಕೊಳ್ಳುವ ಉದ್ದೇಶವನ್ನು ಇಟ್ಟುಕೊಂಡು ಬಿಗ್‌ಬಾಸ್ ವೇದಿಕೆಗೆ ಬಂದಿದ್ದರು.

‘ರಾಜಕೀಯ ಸಿನಿಮಾ ಎರಡರಲ್ಲಿಯೂ ನೆಗೆಟಿವ್ ಪಾಸಿಟಿವ್ ಎರಡೂ ಇರತ್ತೆ. ಹೋಗುತ್ತಾ ಹೋಗುತ್ತಾ ಈ ನೆಗೆಟೀವೇ ಪಾಸಿಟೀವ್ ಆಗುತ್ತದೆ’ ಎನ್ನುವ ನಂಬಿಕೆಯಲ್ಲಿರುವ ರಕ್ಷಕ್‌ ಅವರು ಮನೆಯೊಳಗೆ ಮಾತುಗಳಿಗೆ ಸೆನ್ಸಾರ್ ಅಳವಡಿಸಿಕೊಂಡೇ ಮನೆಯೊಳಗೆ ಹೋಗಲು ನಿರ್ಧರಿಸಿದ್ದರು. ‘ನನ್ನ ರಿಯಲ್ ಫೇಸ್‌ ನೋಡಲಿಕ್ಕಾಗಿ ನನಗೆ ವೋಟ್ ಮಾಡಿ’ ಎಂಬ ರಕ್ಷಕ್ ಮನವಿಗೆ ಜನರು ಶೇಕಡ 53 ವೋಟ್ ಮಾಡಿ ಹೋಲ್ಡ್‌ನಲ್ಲಿ ಇಟ್ಟಿದ್ದಾರೆ.

IPL_Entry_Point