ಕನ್ನಡ ಸುದ್ದಿ  /  Entertainment  /  Tollywood News Telugu Actress Surekha Vani Daughter Supritha Reacts On Her Mothers Second Marriage Statement Mnk

‘ಮದುವೆಯಾಗಲು ಹುಡುಗ್ರು ಮುಂದೆ ಬರ್ತಿಲ್ಲ, ಅಂಕಲ್ಸ್‌ ಆದ್ರೂ ಪರ್ವಾಗಿಲ್ಲ’; ಅಮ್ಮನ ಮದುವೆ ಮಾಡಲು ಹೊರಟ ನಟಿ

ತೆಲುಗಿನ ಪೋಷಕ ನಟಿ ಸುರೇಖಾ ವಾಣಿ ಎರಡನೇ ಮದುವೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ, ಸುರೇಖಾ ಮದುವೆಯನ್ನು ಸ್ವತಃ ಅವರ ಮಗಳೇ ಮಾಡುತ್ತಿದ್ದಾರೆ. ಹುಡುಗರು ಸಿಗದ ಹಿನ್ನೆಲೆಯಲ್ಲಿ ಅಂಕಲ್ಸ್‌ ಸಿಕ್ಕರೂ ಪರ್ವಾಗಿಲ್ಲ ಎನ್ನುತ್ತಿದ್ದಾರೆ.

‘ಮದುವೆಯಾಗಲು ಹುಡುಗ್ರು ಮುಂದೆ ಬರ್ತಿಲ್ಲ, ಅಂಕಲ್ಸ್‌ ಆದ್ರೂ ಪರ್ವಾಗಿಲ್ಲ’; ಅಮ್ಮನ ಮದುವೆ ಮಾಡಲು ಹೊರಟ ನಟಿ
‘ಮದುವೆಯಾಗಲು ಹುಡುಗ್ರು ಮುಂದೆ ಬರ್ತಿಲ್ಲ, ಅಂಕಲ್ಸ್‌ ಆದ್ರೂ ಪರ್ವಾಗಿಲ್ಲ’; ಅಮ್ಮನ ಮದುವೆ ಮಾಡಲು ಹೊರಟ ನಟಿ

Surekha Vani Second Wedding: ಸಿನಿಮಾ ಇಂಡಸ್ಟ್ರಿಯಲ್ಲಿ ಮದುವೆ ವಿಚಾರವಾಗಿ ಸೆಲೆಬ್ರಿಟಿಗಳು ಆಗಾಗ ಸುದ್ದಿಯಲ್ಲಿರುತ್ತಾರೆ. ಕೆಲವರು ಡಿವೋರ್ಸ್‌ ವಿಚಾರವಾಗಿ ಮುನ್ನೆಲೆಗೆ ಬಂದರೆ, ಇನ್ನು ಕೆಲವರು ಪ್ರಗ್ನೆಂಟ್‌ ಆಗಿ ಮದುವೆ ಆದವರಿದ್ದಾರೆ. ಜತೆಗೆ ಕೋಟಿ ಕೋಟಿ ಹಣ ಖರ್ಚು ಮಾಡಿಕೊಂಡು ಅದ್ಧೂರಿಯಾಗಿ ವಿವಾಹವಾದ ಜೋಡಿಗಳೂ ಇಲ್ಲಿ ಸಿಗುತ್ತಾರೆ. ಎರಡನೇ ಮದುವೆ, ಮೂರನೇ ಮದುವೆ ಆದವರೂ ಸಿನಿಮಾರಂಗದಲ್ಲಿದ್ದಾರೆ. ಇದೀಗ ಇದೇ ಮದುವೆ ವಿಚಾರವಾಗಿ ಟಾಲಿವುಡ್‌ ಖ್ಯಾತ ಪೋಷಕ ನಟಿ ಸುರೇಖಾ ವಾಣಿ ಸದ್ದು ಮಾಡುತ್ತಿದ್ದಾರೆ.

ಸುರೇಖಾ ವಾಣಿ ಅವರದ್ದು ತೆಲುಗು ಸಿನಿಮಾರಂಗದಲ್ಲಿ ದೊಡ್ಡ ಹೆಸರು. ಪೋಷಕ ಪಾತ್ರಗಳ ಮೂಲಕವೇ ತೆಲುಗು ನಾಡಿನ ಜನರ ಗಮನ ಸೆಳೆದವರು. ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿರುವ ಇದೇ ಸುರೇಖಾ ವಾಣಿ, ಮಗಳ ಜತೆಗಿನ ಬಗೆಬಗೆ ಫೋಟೋ, ವಿಡಿಯೋಗಳನ್ನು ಆಗಾಗ ಶೇರ್‌ ಮಾಡುತ್ತಲೇ ಇರುತ್ತಾರೆ. ಇದಷ್ಟೇ ಅಲ್ಲ ಮಗಳು ಸುಪ್ರಿತಾ ಜತೆಗೆ ಎಲ್ಲೆಂದರಲ್ಲಿ ಪ್ರವಾಸಕ್ಕೆ ಹೋಗಿ ಅಲ್ಲಿನ ಖುಷಿಯ ಕ್ಷಣಗಳನ್ನೂ ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ನಡುವೆ ಇದೇ ಸುರೇಖಾ ಅವರ ಪುತ್ರಿ ಸುಪ್ರಿತಾ, ಅಮ್ಮನಿಗೆ ಎರಡನೇ ಮದುವೆ ಮಾಡಲು ಹೊರಟಿದ್ದಾರೆ!

ನಟಿ ಸುರೇಖಾ ಟಾಲಿವುಡ್‌ನ ನೂರಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ. ತಾಯಿಯಾಗಿ, ತಂಗಿ, ಚಿಕ್ಕಮ್ಮ, ಅತ್ತಿಗೆ, ಅಕ್ಕ ಹೀಗೆ ಸಿಕ್ಕ ಪಾತ್ರಗಳಿಗೆ ಜೀವ ತುಂಬುತ್ತಲೇ ಬಂದಿದ್ದಾರೆ. ಇಂದಿಗೂ ಹಲವು ಆಫರ್‌ಗಳು ಇವರ ಕೈಯಲ್ಲಿವೆ. ಆದರೆ, ಕಳೆದ ನಾಲ್ಕು ವರ್ಷಗಳ ಹಿಂದೆ ಅಂದರೆ, 2019ರಲ್ಲಿ ಪತಿ ಬಂದಾರು ಸುರೇಶ್‌ ತೇಜ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದರು. ಅಂದಿನಿಂದ ಅಮ್ಮ ಮತ್ತು ಮಗಳು ಇಬ್ಬರೇ ಜೀವನ ದೂಡುತ್ತಿದ್ದಾರೆ. ಹೀಗಿರುವಾಲೇ ಮಗಳು ಸುಪ್ರಿತಾ, ತನ್ನ ಮದುವೆ ಬಗ್ಗೆ ಯೋಚಿಸದೇ, ಅಮ್ಮನಿಗೆ ಗಂಡು ಹುಡುಕುತ್ತಿದ್ದಾರೆ!

ಅಮ್ಮ ಪೋಷಕ ಪಾತ್ರಗಳಲ್ಲಿ ಸಿನಿಮಾಗಳಲ್ಲಿ ಸಕ್ರಿಯರಾದರೆ, ಇತ್ತ ಸುಪ್ರಿತಾ ಸಹ ಅಮ್ಮನಗಿಂತ ಒಂದು ಹೆಜ್ಜೆ ಮುಂದೆ ಹೋಗಿ ನಾಯಕಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಅಮರದೀಪ್ ಅಭಿನಯದ ರೊಮ್ಯಾಂಟಿಕ್ ಲವ್ ಎಂಟರ್ಟೈನರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಕೆಲಸಗಳ ನಡುವೆ ಅಮ್ಮನಿಗೆ ಗಂಡು ಹುಡುಕುವ ಕೆಲಸವನ್ನೂ ಮಾಡುತ್ತಿದ್ದಾರೆ. ಈ ವಿಚಾರವನ್ನು ಟಿವಿ ಸಂದರ್ಶನಗಳಲ್ಲೂ ಹೇಳಿಕೊಂಡಿರುವ ಸುಪ್ರಿತಾ, ನನ್ನಮ್ಮನಿಗೆ ಎರಡನೇ ಮದುವೆ ಮಾಡಲು ತೀರ್ಮಾನಿಸಿದ್ದೇನೆ. ಸರಿಯಾದ ವ್ಯಕ್ತಿಯನ್ನೂ ಹುಡುಕುತ್ತಿದ್ದೇನೆ ಎಂದೂ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ನಿಮ್ಮ ತಾಯಿ ಮರುಮದುವೆಯಾಗಲು ಬಯಸುತ್ತಾರೆಯೇ? ಎಂದು ಸಂದರ್ಶನದಲ್ಲಿ ಸುಪ್ರಿತಾಗೆ ಪ್ರಶ್ನೆ ಎದುರಾಗುತ್ತಿದ್ದಂತೆ, "ಅಮ್ಮ ಸುರೇಖಾ ವಾಣಿಗೆ 46 ವರ್ಷ ವಯಸ್ಸು. ಈ ವಯಸ್ಸಿನವರನ್ನು ಮದುವೆಯಾಗಲು ಹುಡುಗ್ರು ಮುಂದೆ ಬರಲ್ಲ. ಮದುವೆಗೂ ಒಪ್ಪಲ್ಲ. ಹಾಗಾಗಿ ಹುಡುಗನ ಬದಲು ಅಂಕಲ್ಸ್‌ಗಳು ಆದ್ರೂ ನಡಿಯುತ್ತೆ. ಅವರು ನನ್ನ ಅಮ್ಮನನ್ನು ಚೆನ್ನಾಗಿ ನೋಡಿಕೊಂಡರೇ ನನಗೆ ಅಷ್ಟೇ ಸಾಕು. ಆರ್ಥಿಕವಾಗಿ ಚೆನ್ನಾಗಿರಬೇಕು, ಕಿರಿಕಿರಿ ಇರಬಾರದು, ಕೆಟ್ಟ ಆಲೋಚನೆ ಇಲ್ಲದ ಅಂಕಲ್‌ ಸಿಕ್ಕರೆ, ಮದುವೆ ಮಾಡಿಸಲು ನಾನು ರೆಡಿ. ಅಂಥವರಿಗಾಗಿ ಹುಡುಕಾಟಕ್ಕಿಳಿದಿದ್ದೇನೆ ಎಂದಿದ್ದಾರೆ ಸುಪ್ರಿತಾ.

ಈ ಹಿಂದೆ ಅಮ್ಮನ ಎರಡನೇ ಮದುವೆ ವಿಚಾರವಾಗಿ ಸುಪ್ರಿತಾ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ನಾನೇ ಅಮ್ಮನ ಮದುವೆ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇತ್ತ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿರುವ ಸುಪ್ರಿತಾ, ಗ್ಲಾಮರಸ್‌ ಫೋಟೋಗಳನ್ನು ಶೇರ್‌ ಮಾಡುತ್ತ ಸದಾ ಸುದ್ದಿಯಲ್ಲಿರುತ್ತಾರೆ. ಈ ನಡುವೆ ಮಗಳನ್ನೂ ನಟಿಯನ್ನಾಗಿಸಬೇಕು ಎಂಬುದು ಅಮ್ಮ ಸುರೇಖಾ ವಾಣಿ ಅವರ ಕನಸಾಗಿತ್ತು. ಅಮ್ಮನ ಆ ಕನಸನ್ನು ಅವರೀಗ ನನಸು ಮಾಡಿದ್ದಾರೆ.

ಮಗಳ ಜತೆಗೆ ಹೋಳಿ ಸಂಭ್ರಮದಲ್ಲಿ ಸುರೇಖಾ ವಾಣಿ

IPL_Entry_Point