ಕನ್ನಡ ಸುದ್ದಿ  /  Entertainment  /  Sandalwood News Kannada Ak 47 Actor Ashish Vidyarthi Vented His Frustration Over Not Getting Movie Offers Mnk

‘ಯಾಕ್ರಪ್ಪ ನನ್ನನ್ನು ಇಷ್ಟೊಂದು ಕಡೆಗಣಿಸ್ತಿದ್ದೀರಿ, ನಾನಿನ್ನೂ ಬದುಕಿದ್ದೇನೆ ಸತ್ತಿಲ್ಲ!’ ವಿಲನ್ ಆಶಿಷ್‌ ವಿದ್ಯಾರ್ಥಿ ಬೇಸರ

ಒಂದು ಕಾಲದಲ್ಲಿ ವಿಲನ್‌ ಆಗಿ ಖದರ್‌ ತೋರಿಸಿದ್ದ ನಟ ಆಶಿಷ್‌ ವಿದ್ಯಾರ್ಥಿ, ಈಗ ಅಂದಿನಷ್ಟು ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿಲ್ಲ. ಆ ಕಾರಣಕ್ಕಾಗಿಯೇ ಕೊಂಚ ಬೇಸರದಲ್ಲಿಯೇ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ನಾನೂ ಬದುಕಿದ್ದೇನೆ, ಸಿನಿಮಾ ಅವಕಾಶಗಳನ್ನು ನನಗೂ ಕೊಡಿ ಎಂದಿದ್ದಾರೆ.

‘ಯಾಕ್ರಪ್ಪ ನನ್ನನ್ನು ಇಷ್ಟೊಂದು ಕಡೆಗಣಿಸ್ತಿದ್ದೀರಿ, ನಾನಿನ್ನೂ ಬದುಕಿದ್ದೇನೆ ಸತ್ತಿಲ್ಲ!’ ವಿಲನ್ ಆಶಿಷ್‌ ವಿದ್ಯಾರ್ಥಿ ಬೇಸರ
‘ಯಾಕ್ರಪ್ಪ ನನ್ನನ್ನು ಇಷ್ಟೊಂದು ಕಡೆಗಣಿಸ್ತಿದ್ದೀರಿ, ನಾನಿನ್ನೂ ಬದುಕಿದ್ದೇನೆ ಸತ್ತಿಲ್ಲ!’ ವಿಲನ್ ಆಶಿಷ್‌ ವಿದ್ಯಾರ್ಥಿ ಬೇಸರ

Ashish Vidyarthi: ಬಹುಭಾಷಾ ನಟ ಆಶಿಷ್‌ ವಿದ್ಯಾರ್ಥಿ ತೆರೆಮೇಲೆ ಕಂಡರೆ, ಕಡು ಕೋಪದಿಂದ ಹಲ್ಲು ಮಸಿದವರಿದ್ದಾರೆ. ಏಕೆಂದರೆ, ಅವರ ಆ ವಿಲನ್‌ ಖದರ್‌ ಆ ಮಟ್ಟಿಗೆ ಇರುತ್ತಿತ್ತು. ಬರೀ ಒಂದೇ ಭಾಷೆಗೆ ಸೀಮಿತವಾಗದ ಈ ನಟ, ದಕ್ಷಿಣದ ಎಲ್ಲ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ನೂರಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾತ್ರ ಯಾವುದೇ ಸಿನಿಮಾಗಳಲ್ಲಿ ಆಶಿಷ್‌ ಕಾಣಿಸಿಕೊಳ್ಳುತ್ತಿಲ್ಲ. ಹಾಗಾದರೆ ಸಿನಿಮಾಗಳಿಂದಲೇ ದೂರವಾದ್ರಾ? ಇಲ್ಲ, ಬದಲಿಗೆ ಅವರಿಗೆ ಸಿನಿಮಾ ಅವಕಾಶಗಳೇ ಬರುತ್ತಿಲ್ಲ!

ಚಿತ್ರೋದ್ಯಮದಲ್ಲಿ ಬರೋಬ್ಬರಿ 3 ದಶಕಗಳನ್ನು ಪೂರೈಸಿರುವ ಆಶಿಷ್‌, ಖಳನಾಗಿಯೇ ಬಹುತೇಕ ಎಲ್ಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ರಾಷ್ಟ್ರ ಪ್ರಶಸ್ತಿಯೂ ಅವರನ್ನು ಅರಸಿ ಬಂದಿದೆ. ಅದರಲ್ಲೂ 1999ರಲ್ಲಿ ಶಿವರಾಜ್‌ಕುಮಾರ್‌ ಅಭಿನಯದ ಎಕೆ47 ಸಿನಿಮಾ ಮೂಲಕ ಚಂದನವನಕ್ಕೂ ಆಗಮಿಸಿ, ಖಳನಾಗಿ ಪರಿಚಿತಗೊಂಡಿದ್ದರು. ಅದಾದ ಮೇಲೆ ವಂದೇ ಮಾತರಂ, ಕೋಟಿಗೊಬ್ಬ, ಸೈನಿಕ, ನಂದಿ, ದುರ್ಗಿ ಸೇರಿ ಸಾಕಷ್ಟು ಕನ್ನಡ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. 2017ರಲ್ಲಿ ಬಂದ ಸರ್ಕಾರಿ ಕೆಲಸ ದೇವರ ಕೆಲಸ ಚಿತ್ರವೇ ಕನ್ನಡದಲ್ಲಿ ಅವರ ಕೊನೇ ಸಿನಿಮಾ.

ಆ ಸಿನಿಮಾ ಬಳಿಕ ಕನ್ನಡಕ್ಕೆ ಬಾರದೇ ಏಳು ವರ್ಷಗಳು ಕಳೆದಿವೆ. ಈ ನಡುವೆ ಮದುವೆ ವಿಚಾರವಾಗಿಯೂ ಸುದ್ದಿಯಾಗಿದ್ದರು ಆಶಿಷ್.‌ ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಸಿನಿಮಾ ಕೆರಿಯರ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿಯಲ್ಲಿ ವಿಲನ್‌ ಆಗಿ ಮಿಂಚಿದ್ದ ಇದೇ ನಟನಿಗೆ ಈಗ ಯಾವುದೇ ಸಿನಿಮಾ ಅವಕಾಶಗಳಿಲ್ಲ. ಆ ವಿಚಾರವಾಗಿಯೇ ತಮ್ಮ ಮನಸ್ಸಿನ ಮಾತುಗಳನ್ನು ಎಲ್ಲರಮುಂದೆ ಬಿಚ್ಚಿಟ್ಟಿದ್ದಾರೆ. ನಾನಿನ್ನೂ ಸತ್ತಿಲ್ಲ, ಬದುಕಿದ್ದೇನೆ,, ನನಗೂ ಸಿನಿಮಾ ಅವಕಾಶಗಳನ್ನು ಕೊಡಿ ಎಂದಿದ್ದಾರೆ ಆಶಿಷ್‌.

ಎಲ್ಲ ರೀತಿಯ ಪಾತ್ರಗಳನ್ನೂ ನಾನು ಮಾಡ್ತಿನಿ..

ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಬೇಸರ ಹೊರಹಾಕಿರುವ ಆಶಿಷ್‌, ಹಲವು ಭಾಷೆಗಳಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದೇನೆ. ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಿದ್ದೇನೆ. ಆರಂಭದಿಂದ ನನಗೆ ವಿಲನ್ ಪಾತ್ರಗಳು ಇಷ್ಟವಾದವು. ಈಗಲೂ ಅಂತಹ ಪಾತ್ರಗಳತ್ತ ಆಕರ್ಷಿತನಾಗಿದ್ದೇನೆ. ಆದರೆ, ಬಹುತೇಕರು ನನ್ನನ್ನು ಆ ಪಾತ್ರಗಳಿಗೇ ಸೀಮಿತ ಮಾಡಿದ್ದಾರೆ. ನಾನು ಬೇರೆ ಪಾತ್ರಗಳನ್ನೂ ಮಾಡಬಲ್ಲೆ. ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಹೊಸ ಪಾತ್ರಗಳನ್ನು ಮಾಡಬಲ್ಲೆ. ನನ್ನನ್ನು ಕೋನದಿಂದಲೂ ನೋಡಿ. ಸಿನಿಮಾ ಅವಕಾಶಗಳನ್ನು ನೀಡಿ" ಎಂದು ಬೇಡಿಕೊಂಡಿದ್ದಾರೆ.

ನೆಟ್ಟಿಗರ ಬೆಂಬಲ

ನಟ ಆಶಿಷ್‌ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ, ಸಾಕಷ್ಟು ಮಂದಿ ನಟನ ಬೆನ್ನಿಗೆ ನಿಂತಿದ್ದಾರೆ. ನಿಮ್ಮ ಬಹುತೇಕ ಸಿನಿಮಾಗಳನ್ನು ನೋಡಿದ್ದೇನೆ. ಒಳ್ಳೆಯ ನಟ, ನಿಮಗೆ ಸಿನಿಮಾ ಅವಕಾಶ ಸಿಗದಿರುವುದು ಬೇಸರದ ಸಂಗತಿ. ಆದಷ್ಟು ಬೇಗ ಒಳ್ಳೊಳ್ಳೆಯ ಸಿನಿಮಾಗಳ ಅವಕಾಶ ನಿಮಗೆ ಸಿಗಲಿ ಎಂದು ನೆಟ್ಟಿಗರು ಅವರಿಗೆ ಹರಸುತ್ತಿದ್ದಾರೆ.

ಫುಡ್‌ವ್ಲಾಗ್‌, ಯೂಟ್ಯೂಬ್‌ನಲ್ಲಿ ಸಕ್ರಿಯರು..

ಸದ್ಯ ಮಲಯಾಳಂನಲ್ಲಿ ನಿರ್ಮಾಣವಾಗುತ್ತಿರುವ ಆವೇಶಂ ಸಿನಿಮಾದಲ್ಲಿ ಆಶಿಷ್‌ ನಟಿಸುತ್ತಿದ್ದಾರೆ. ಆ ಸಿನಿಮಾ ಹೊರತುಪಡಿಸಿ, ಬೇರಾವ ಸಿನಿಮಾ ಅವಕಾಶಗಳೂ ಅವರಿಗಿಲ್ಲ. ಇದರ ಜತೆಗೆ ಫುಡ್‌ ವ್ಲಾಗ್‌ ಮತ್ತು ಯೂಟ್ಯೂಬ್‌ನಲ್ಲಿ ಬಗೆಬಗೆ ಟೂರ್ಸ್‌ ವ್ಲಾಗ್‌ ವಿಡಿಯೋ ಹಾಕಿ ಜನರ ಜತೆ ಟಚ್‌ನಲ್ಲಿದ್ದಾರೆ. ಬೇರೆ ಬೇರೆ ಸ್ಥಳಗಳಿಗೆ ಹೋಗಿ, ಅಲ್ಲಿನ ಖಾದ್ಯಗಳನ್ನು ಸವಿದು ಅದರ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ ಆಶಿಷ್.‌ 

IPL_Entry_Point