ಕನ್ನಡ ಸುದ್ದಿ  /  Entertainment  /  Sandalwood News Sathish Ninasam Starrer Matinee Trailer Release Event Dasa Darshan About Rachita Ram Mnk

Darshan: ‘ಒಬ್ಬ ನಟಿ 10 ವರ್ಷ ಇಂಡಸ್ಟ್ರಿಯಲ್ಲಿ ಇರೋದು ಅಷ್ಟು ಸುಲಭ ಅಲ್ಲ’; ಬುಲ್‌ ಬುಲ್‌ ರಚಿತಾ ರಾಮ್‌ ಬಗ್ಗೆ ದರ್ಶನ್‌ ಹೀಗಂದ್ರು

ಸತೀಶ್‌ ನೀನಾಸಂ, ರಚಿತಾ ರಾಮ್‌ ಮುಖ್ಯ ಭೂಮಿಕೆಯಲ್ಲಿರುವ ಮ್ಯಾಟ್ನಿ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಈ ಚಿತ್ರದ ಟ್ರೇಲರ್‌ಅನ್ನು ನಟ ದರ್ಶನ್‌ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ ರಚಿತಾ ಬಗ್ಗೆಯೂ ದರ್ಶನ್‌ ಮಾತನಾಡಿದ್ದಾರೆ.

Darshan: ಒಬ್ಬ ನಟಿ 10 ವರ್ಷ ಇಂಡಸ್ಟ್ರಿಯಲ್ಲಿ ಇರೋದು ಅಷ್ಟು ಸುಲಭ ಅಲ್ಲ; ಬುಲ್‌ ಬುಲ್‌ ರಚಿತಾ ರಾಮ್‌ ಬಗ್ಗೆ ದರ್ಶನ್‌ ಹೀಗಂದ್ರು
Darshan: ಒಬ್ಬ ನಟಿ 10 ವರ್ಷ ಇಂಡಸ್ಟ್ರಿಯಲ್ಲಿ ಇರೋದು ಅಷ್ಟು ಸುಲಭ ಅಲ್ಲ; ಬುಲ್‌ ಬುಲ್‌ ರಚಿತಾ ರಾಮ್‌ ಬಗ್ಗೆ ದರ್ಶನ್‌ ಹೀಗಂದ್ರು

Darshan: ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಕನ್ನಡ ಚಿತ್ರರಂಗಕ್ಕೆ ಆಗಮಿಸಿ ದಶಕದ ಮೇಲಾಯ್ತು. ಇಂದಿಗೂ ಸಾಲು ಸಾಲು ಸಿನಿಮಾಗಳಲ್ಲಿ ರಚಿತಾ ನಟಿಸುತ್ತಿದ್ದಾರೆ. ಮೊದಲಿದ್ದ ಸ್ಟಾರ್‌ಡಮ್‌ ಅನ್ನೇ ಇನ್ನೂ ಉಳಿಸಿಕೊಂಡು, ಕನ್ನಡದಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. 2013ರಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಬುಲ್‌ ಬುಲ್‌ ಸಿನಿಮಾ ಮೂಲಕ ಬಂದ ಚಂದನವನಕ್ಕೆ ಬಂದ ರಚಿತಾ, ಸ್ಟಾರ್‌ ಹೀರೋಗಳಷ್ಟೇ ಅಲ್ಲದೆ, ಹೊಸಬರಿಗೂ ಸಾಥ್‌ ನೀಡುತ್ತಿದ್ದಾರೆ. ಈಗ ಇದೇ ಬುಲ್‌ ಬುಲ್‌ ಬಗ್ಗೆ ಮ್ಯಾಟ್ನಿ ಸಿನಿಮಾ ಟ್ರೇಲರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ದರ್ಶನ್‌ ಮಾತನಾಡಿದ್ದಾರೆ.

ರಚಿತಾ ಬಗ್ಗೆ ದರ್ಶನ್‌ ಏನಂದ್ರು?

"10 ವರ್ಷ ಒಬ್ಬ ನಾಯಕ ನಟಿ, ಸಿನಿಮಾರಂಗದಲ್ಲಿಈಜುವುದಾಗಲಿ, ಜಯಿಸುವುದಾಗಲಿ ತುಂಬ ಕಷ್ಟ. ಕಷ್ಟ ಅಂದ್ರೆ ಮೆಂಟೇನ್‌ ಮಾಡಿಕೊಂಡು ಹೋಗಬೇಕಲ್ಲ ಅಂತ. ಬುಲ್‌ ಬುಲ್‌ ಸಿನಿಮಾದಲ್ಲಿ ಏನ್‌ ನೋಡಿದ್ವೋ, ಮ್ಯಾಟ್ನಿ ಸಿನಿಮಾದಲ್ಲೂ ಅದೇ ರೀತಿ ಕಾಣಿಸ್ತಿದ್ದಾರೆ. ಅದರಲ್ಲಿಯೇ ಅವರ ಜರ್ನಿ ಗೊತ್ತಾಗ್ತಿದೆ. ಅದರಲ್ಲೊಂದು ಶ್ರಮ ಇದ್ದೇ ಇದೆ. ಹತ್ತು ವರ್ಷ ಅಂದ್ರೆ ಸಣ್ಣದಲ್ಲ. ನಮ್ಮ ಇಂಡಸ್ಟ್ರಿನೇ ತಿರುಗಿ ನೋಡಿ, ಹಳೇ ತಲೆಮಾರಲ್ಲ. ಈಗಿನವರು ಯಾರಿದ್ದಾರೆ? ತುಂಬ ಕಮ್ಮಿ. ಅದರಲ್ಲಿ ಮೊದಲನೇ ಸ್ಥಾನದಲ್ಲಿ ನಿಂತಿದ್ದಾರೆ. ಅವರಿಗೆ ಆಲ್‌ ದಿ ಬೆಸ್ಟ್‌" ಎಂದರು ದರ್ಶನ್.‌

ನೀನಾಸಂ ಸತೀಶ್‌ ಬಗ್ಗೆ ದರ್ಶನ್‌ ಮಾತು

"ನೀಲಕಂಠೇಶ್ವರ ನಾಟ್ಯ ಸಂಘ, ನಾವೂ ಅಲ್ಲಿಯೇ ಕಲಿತಿದ್ದು, ಅಲ್ಲಿಂದ ಬಂದವರು. ಈಗ ಹೀರೋ ಆಗಿದ್ದಾರೆ ಎಂದರೆ, ಆ ಜರ್ನಿ ತುಂಬ ದೊಡ್ಡದು. ಯಾವುದೋ ವ್ಯಕ್ತಿ ಬೆಳೆದಿದ್ದಾನೆ ಎಂದರೆ, ಅದರ ಹಿಂದೆ ಶ್ರಮ ಇದ್ದೇ ಇರುತ್ತೆ. ಸುಮ್ನೆ ಯಾರೂ ಮೇಲೆ ಬಂದಿರಲ್ಲ. ಸೋಲು ಗೆಲುವು, ಅಪಮಾನ, ಅವಮಾನ ಎಲ್ಲ ಪಡೆದುಕೊಂಡು ಒಬ್ಬ ನಾಯಕ ನಟ ಆಗಿದ್ದಾರೆ ಎಂದು ನಟ ಸತೀಶ್ ಬಗ್ಗೆ‌ ದರ್ಶನ್‌ ಮಾತನಾಡಿದರು.

ಇದು ಮ್ಯಾಟ್ನಿ ಪ್ರೋಗ್ರಾಂ ಅಲ್ಲ, ಡಿಬಾಸ್‌ ಪ್ರೋಗ್ರಾಂ

"ಪ್ರೀತಿಸುವವರ ಜತೆಗೆ ದರ್ಶನ್‌ ಸದಾ ಇರ್ತಾರೆ. ಇಲ್ಲಿವರ್ಗು ಇದು ಮ್ಯಾಟ್ನಿ ಪ್ರೋಗ್ರಾಂ ಆಗಿತ್ತು.. ಈಗ ಡಿ ಬಾಸ್‌ ಬಂದ್ಮೇಲೆ ಅದು ಡಿ ಬಾಸ್‌ ಪ್ರೋಗ್ರಾಂ ಆಗಿದೆ. ಅವರಿದ್ದ ಕಡೆಯಲ್ಲಿ ಸೆಲೆಬ್ರೇಷನ್‌ ಇರುತ್ತೆ. ಆ ಸೆಲೆಬ್ರೇಷನ್‌ ಸಿಕ್ಕಿದೆ. ಮ್ಯಾಟ್ನಿ ಸಿನಿಮಾ ಸಹ ದೊಡ್ಡ ಮಟ್ಟಕ್ಕೆ ರೀಚ್‌ ಆಗಿದೆ. ಥ್ಯಾಂಕ್ಯು ಸರ್‌" ಎಂದಿದ್ದಾರೆ ನೀನಾಸಂ ಸತೀಶ್.‌

ಅಯೋಗ್ಯ ಬಳಿಕ ಒಂದಾದ ಜೋಡಿ

ಅಯೋಗ್ಯ ಸಿನಿಮಾದಲ್ಲಿ ನೀನಾಸಂ ಸತೀಶ್‌ ಮತ್ತು ರಚಿತಾ ರಾಮ್‌ ಮ್ಯಾಟ್ನಿ ಸಿನಿಮಾ ಮೂಲಕ ಮತ್ತೊಮ್ಮೆ ಒಂದಾಗಿದ್ದಾರೆ. ಈ ಸಲ ಹಾರರ್‌ ಕಥೆಯ ಮೂಲಕ ಈ ಜೋಡಿ ಆಗಮಿಸಿದೆ. ಬಿಡುಗಡೆಯಾದ ಟ್ರೇಲರ್‌ನಲ್ಲೂ ಚಿತ್ರದಲ್ಲೇನಿರಲಿದೆ ಎಂಬ ಸುಳಿವು ನೀಡಿದೆ. ಮನೋಹರ್ ಕಾಂಪಲ್ಲಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾವನ್ನು ಎಫ್‌3 ಪ್ರೊಡಕ್ಷನ್ಸ್ ಬ್ಯಾನರಿನಡಿ ಪಾರ್ವತಿ ಎಸ್ ಗೌಡ ನಿರ್ಮಾಣ ಮಾಡಿದ್ದಾರೆ.

ಸತೀಶ್ ನೀನಾಸಂ, ರಚಿತಾ ರಾಮ್, ಅದಿತಿ ಪ್ರಭುದೇವ ಸೇರಿ ದೊಡ್ಡ ಬಳಗವೇ ಮ್ಯಾಟ್ನಿ ಸಿನಿಮಾದಲ್ಲಿದೆ. ಹಾಸ್ಯ ನಟ ಶಿವರಾಜ್ ಕೆ ಆರ್ ಪೇಟೆ, ನಾಗಭೂಷಣ್‌, ಪೂರ್ಣ ಮೈಸೂರು ಸೇರಿದಂತೆ ತಬಲ ನಾಣಿ, ಪ್ರಕಾಶ್ ತುಮ್ಮಿನಾಡು, ಗೋಪಿ ಮಿಮಿಕ್ರಿ, ತುಳಸಿ ಶಿವಮಣಿ ಅಭಿನಯಿಸಿದ್ದಾರೆ. ಕೀರ್ತನ್ ಪೂಜಾರಿ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಈ ಸಿನಿಮಾಕ್ಕಿದೆ. ಬಹುತೇಕ ಕೆಲಸಗಳನ್ನು ಮುಗಿಸಿಕೊಂಡಿರುವ ಮ್ಯಾಟ್ನಿ ಸಿನಿಮಾ ಇದೀಗ ಪ್ರಚಾರ ಕೆಲಸಕ್ಕೆ ಚಾಲನೆ ನೀಡಿದೆ. ಏಪ್ರಿಲ್‌ 5ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

IPL_Entry_Point