ಕನ್ನಡ ಸುದ್ದಿ  /  ಮನರಂಜನೆ  /  Lohithaswa Health Condition: ಹಿರಿಯ ನಟ ಲೋಹಿತಾಶ್ವ ಅವರ ಮೆದುಳು ಶೇ. 95ರಷ್ಟು ನಿಷ್ಕ್ರೀಯ!; ಸ್ಥಿತಿ ಗಂಭೀರ, ಮುಂದುವರಿದ ಚಿಕಿತ್ಸೆ

Lohithaswa health Condition: ಹಿರಿಯ ನಟ ಲೋಹಿತಾಶ್ವ ಅವರ ಮೆದುಳು ಶೇ. 95ರಷ್ಟು ನಿಷ್ಕ್ರೀಯ!; ಸ್ಥಿತಿ ಗಂಭೀರ, ಮುಂದುವರಿದ ಚಿಕಿತ್ಸೆ

ಚಂದನವನದ ಹಿರಿಯ ನಟ, ನಿವೃತ್ತ ಇಂಗ್ಲಿಷ್‌ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ ಲೋಹಿತಾಶ್ವ ಟಿ.ಎಸ್‌ (Lohithaswa T. S.) ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಿರಿಯ ನಟ ಲೋಹಿತಾಶ್ವ ಅವರ ಮೆದುಳು ಶೇ. 95ರಷ್ಟು ನಿಷ್ಕ್ರೀಯ!; ಸ್ಥಿತಿ ಗಂಭೀರ, ಮುಂದುವರಿದ ಚಿಕಿತ್ಸೆ
ಹಿರಿಯ ನಟ ಲೋಹಿತಾಶ್ವ ಅವರ ಮೆದುಳು ಶೇ. 95ರಷ್ಟು ನಿಷ್ಕ್ರೀಯ!; ಸ್ಥಿತಿ ಗಂಭೀರ, ಮುಂದುವರಿದ ಚಿಕಿತ್ಸೆ

ಬೆಂಗಳೂರು: ಚಂದನವನದ ಹಿರಿಯ ನಟ, ನಿವೃತ್ತ ಇಂಗ್ಲಿಷ್‌ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ ಲೋಹಿತಾಶ್ವ ಟಿ.ಎಸ್‌ (Lohithaswa T. S.) ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

80 ವರ್ಷದ ಲೋಹಿತಾಶ್ವ ಅವರಿಗೆ ಭಾನುವಾರ ರಾತ್ರಿ ಹೃದಯಾಘಾತವಾದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಲೇಔಟ್‌ನಲ್ಲಿನ ಸಾಗರ್‌ ಅಪೋಲೋ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು.

ಹಲವು ಬಗೆಯ ಪರೀಕ್ಷೆ ನಡೆಸಿದರೂ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಅವರ ಮೆದುಳು ಶೇ. 95ರಷ್ಟು ನಿಷ್ಕ್ರೀಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಆಸ್ಪತ್ರೆ ಬಳಿ ಅವರ ಪುತ್ರ ಶರತ್‌ ಲೋಹಿತಾಶ್ವ ಮತ್ತ ಕುಟುಂಬದವರಿದ್ದಾರೆ.

ತುಮಕೂರು ಜಿಲ್ಲೆ ತೊಂಡಗೆರೆಯವರಾದ ಲೋಹಿತಾಶ್ವ ಕನ್ನಡದಲ್ಲಿ ಸರಿಸುಮಾರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆಗೂ ಮೊದಲು ಇಂಗ್ಲಿಷ್‌ ಭಾಷೆಯಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತ್ತಕೋತ್ತರ ಪದವಿ ಪಡೆದು, ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು.

1971ರಲ್ಲಿ ಮದುವೆಯಾದ ಇವರಿಗೆ ಮೂವರು ಮಕ್ಕಳಿದ್ದಾರೆ. ಆ ಪೈಕಿ ಈಗಾಗಲೇ ಸಿನಿಮಾದಲ್ಲಿ ಗುರುತಿಸಿಕೊಂಡಿರುವ ಶರತ್‌ ಲೋಹಿತಾಶ್ವ ಸಹ ಇವರ ಪುತ್ರ.

IPL_Entry_Point