ಕನ್ನಡ ಸುದ್ದಿ  /  Karnataka  /  Aadhar Sim Card Link: Aadhaar Sim Linking Needed To Prevent Cyber Crime Home Minister Gyanendra Said That He Would Draw The Attention Of The Union Govt

Aadhaar SIM card link: ಸೈಬರ್‌ ಅಪರಾಧ ತಡೆಗೆ ಆಧಾರ್‌-ಸಿಮ್‌ ಜೋಡಣೆ ಅಗತ್ಯ; ಕೇಂದ್ರದ ಗಮನಸೆಳೆಯುವುದಾಗಿ ಹೇಳಿದ ಗೃಹ ಸಚಿವ ಜ್ಞಾನೇಂದ್ರ

Aadhaar SIM card link: ಇತ್ತೀಚಿನ ದಿನಗಳಲ್ಲಿ ಬುದ್ಧಿವಂತರು, ಶಿಕ್ಷಣ ಪಡೆದವರೇ ಬಹಳ ಬುದ್ಧಿವಂತಿಕೆಯಿಂದ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸಿಮ್ ಕಾರ್ಡುಗಳಿಗೆ ಆಧಾರ್ ಲಿಂಕ್ ಜೋಡಣೆಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತಿಳಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಸೈಬರ್‌ ಅಪರಾಧ ತಡೆಗಟ್ಟುವ ಸಲುವಾಗಿ ಸಿಮ್‌ ಕಾರ್ಡ್‌ಗಳಿಗೆ ಆಧಾರ್‌ ಲಿಂಕ್‌ ಮಾಡುವುದು ಪರಿಹಾರವಾದೀತು. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಸೆಳೆದು ಕ್ರಮ ತೆಗೆದುಕೊಳ್ಳಲು ಸೂಚಿಸಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

ಅವರು ಸೋಮವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಸದಸ್ಯೆ ಭಾರತಿ ಶೆಟ್ಟಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.

ಇತ್ತೀಚಿನ ದಿನಗಳಲ್ಲಿ ವಿಚಿತ್ರ ರೀತಿಯ ಸೈಬರ್‌ ಅಪರಾಧಗಳು ನಡೆಯುತ್ತಿವೆ. ಬುದ್ಧಿವಂತರು, ಶಿಕ್ಷಣ ಪಡೆದವರೇ ಬಹಳ ಬುದ್ಧಿವಂತಿಕೆಯಿಂದ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸಿಮ್ ಕಾರ್ಡುಗಳಿಗೆ ಆಧಾರ್ ಲಿಂಕ್ ಜೋಡಣೆಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತಿಳಿಸಿದರು.

ಸಿಮ್‍ಕಾರ್ಡುಗಳ ಮಾರಾಟಕ್ಕೆ ಅನೇಕ ವಿಧಿ ವಿಧಾನಗಳನ್ನು ಜಾರಿಗೆ ತರಲಾಗಿದೆ. ಸಿಮ್ ಕಾರ್ಡುಗಳಿಗೆ ಆಧಾರ್ ಲಿಂಕ್ ಕಲ್ಪಿಸುವ ವ್ಯವಸ್ಥೆಯು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಇದು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದ್ದು, ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ ಅಗತ್ಯ ಕ್ರಮ ವಹಿಸಲಾಗುವುದು.

ಸೈಬರ್ ಅಪರಾಧಗಳ ಬಗ್ಗೆ ಪೊಲೀಸ್ ಇಲಾಖೆಯ ಮುಖಾಂತರ ಸಾರ್ವಜನಿಕರಿಗೆ ಬಹಳಷ್ಟು ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿರುವುದಲ್ಲದೆ, ಅನೇಕ ಜಾಹೀರಾತುಗಳನ್ನು ಸಹ ನೀಡಲಾಗುತ್ತಿದೆ. ಸೈಬರ್ ಅಪರಾಧಗಳನ್ನು ಪತ್ತೆ ಹಚ್ಚಲು ಸಿಬ್ಬಂದಿಗೆ ತರಬೇತಿ ಸಹ ನೀಡಲಾಗಿದೆ.

ಆರ್‌ಬಿಐ, ಪೊಲೀಸ್ ಮತ್ತು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಇಂತಹ ಅಪರಾಧಗಳನ್ನು ತಡೆದು ಸಾರ್ವಜನಿಕರ ಹಿತ ಕಾಪಾಡಲು ಸರ್ಕಾರವು ಕ್ರಮ ವಹಿಸುತ್ತದೆ. ಸಾರ್ವಜನಿಕರೂ ವಿಶೇಷ ಎಚ್ಚರಿಕೆ ವಹಿಸಬೇಕಾಗುತ್ತದೆ. ಇಂತಹ ಪ್ರಕರಣ ನಡೆದಂತಹ ಸಂದರ್ಭದಲ್ಲಿ ಕೂಡಲೇ ಪೊಲೀಸ್ ಇಲಾಖೆಯ ಸಹಾಯವಾಣಿ 112ಗೆ ಕರೆ ಮಾಡಿ ತಿಳಿಸಿದಲ್ಲಿ ಪತ್ತೆ ಹಚ್ಚಲು ಅನುಕೂಲವಾಗುವುದು. ಸೈಬರ್ ಅಪರಾಧಗಳ ಪತ್ತಗಾಗಿ ಪ್ರತ್ಯೇಕ ವಿಭಾಗವಿದ್ದು, ಅದನ್ನು ಬಹಳಷ್ಟು ಬಲ ಪಡಿಸಿದ್ದೇವೆ ಎಂದು ಸಚಿವರು ಪರಿಷತ್ತಿಗೆ ವಿವರಿಸಿದರು.

ಸಿಮ್‌-ಆಧಾರ್‌ ನಂಬರ್‌ ಜೋಡಣೆ ಮಾಡುವ ವಿಚಾರ 2019ರಲ್ಲಿ ರಾಜ್ಯಸಭೆಯಲ್ಲೂ ಪ್ರಸ್ತಾಪವಾಗಿತ್ತು. ಅಂದು ಸದಸ್ಯರಾದ ಎಂ.ಸೆಲ್ವರಾಜು ಮತ್ತು ತಿರುನಾವುಕ್ಕರಸರ್‌ ಈ ಪ್ರಶ್ನೆಗಳನ್ನು ಕೇಳಿದ್ದರು. ಇದಕ್ಕೆ ಸರ್ಕಾರವು ಅಂದು ಸಿಮ್‌ ಮತ್ತು ಆಧಾರ್‌ ನಂಬರ್‌ ಜೋಡಿಸುವುದನ್ನು ಕಡ್ಡಾಯಗೊಳಿಸಲಾಗಿಲ್ಲ ಎಂಬ ಉತ್ತರವನ್ನು ನೀಡಿತ್ತು.

ಗಮನಿಸಬಹುದಾದ ಸುದ್ದಿ

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಿದ ರಾಜ್ಯ ಸರಕಾರ

ಪ್ರವರ್ಗ 2ಎಯ ಕ್ರಮಸಂಖ್ಯೆ 4(a)ಯಿಂದ z ವರೆಗೆ ಈಡಿಗ ಬಿಲ್ಲವ ಸೇರಿದಂತೆ ನಮೂದಾಗಿರುವ ಒಟ್ಟು 26 ಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಷಾಹೀನ್‌ ಪರ್ವೀನ್‌ ಕೆ. ತಿಳಿಸಿದ್ದಾರೆ. ಅವರು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಅವರು ಕರ್ನಾಟಕ ಸರಕಾರದ ನಡಾವಳಿಗಳಲ್ಲಿ ಆದೇಶ ಪ್ರಕಟಿಸಿದ್ದಾರೆ. ವಿವರ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

ಕೇದಾರನಾಥ- ಬದರಿನಾಥಕ್ಕೆ ಹೋಗುವ ಪ್ಲಾನ್‌ ಏನಾದರೂ ಇದೆಯಾ? ನೋಂದಣಿ ಮಾಡಿಸ್ಕೊಂಡೇ ಹೋಗಿ, ಇಲ್ಲಿದೆ ಆ ವಿವರ

Devotee registration: ಕೇದಾರನಾಥ- ಬದರಿನಾಥಕ್ಕೆ ಹೋಗುವ ಪ್ಲಾನ್‌ ಏನಾದರೂ ಇದೆಯಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ.. ಕೇದಾರನಾಥ- ಬದರಿನಾಥ ದರ್ಶಕರ ನೋಂದಣಿ ಇಂದಿನಿಂದ ಶುರುವಾಗುತ್ತಿದೆ. ನೋಂದಣಿ ಮಾಡಿಸಿಕೊಳ್ಳದೆ ಇದ್ದರೆ ಅಲ್ಲಿಗೆ ಹೋಗುವುದಕ್ಕೆ ಅವಕಾಶ ಸಿಗಲ್ಲ. ನೋಂದಣಿ ಮಾಡಿಸುವುದು ಹೇಗೆ? ಯಾರನ್ನು ಸಂಪರ್ಕಿಸಬೇಕು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ಕ್ಲಿಕ್‌ ಮಾಡಿ

IPL_Entry_Point