Ediga-Billava Yatra: ಸಮುದಾಯದ ಹಿತಕ್ಕಾಗಿ ಈ ಪಾದಯಾತ್ರೆ; ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದ ಡಾ. ಪ್ರಣವಾನಂದ ಸ್ವಾಮೀಜಿ
Ediga-Billava Yatra: ಕಲಬುರ್ಗಿ ಕರದಾಳು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ. ಪ್ರಣವಾನಂದ ಸ್ವಾಮೀಜಿ ನೇತೃತ್ವದ ಮಂಗಳೂರಿನಿಂದ ಬೆಂಗಳೂರಿಗೆ ಈಡಿಗ - ಬಿಲ್ಲವ ಮಹಾಪಾದಯಾತ್ರೆ (Ediga-Billava Yatra) ಶುರುವಾಗಿದೆ. ಇದಕ್ಕೆ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಶುಕ್ರವಾರ ಚಾಲನೆ ಸಿಕ್ಕಿದೆ.
ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತವರು ಜಿಲ್ಲೆಯ ಕೇಂದ್ರ ಸ್ಥಾನ ಮಂಗಳೂರಿನಿಂದ ಬೆಂಗಳೂರಿಗೆ ಈಡಿಗ - ಬಿಲ್ಲವ ಮಹಾಪಾದಯಾತ್ರೆ (Ediga-Billava Yatra) ಶುರುವಾಗಿದೆ. ಇದಕ್ಕೆ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಶುಕ್ರವಾರ ಚಾಲನೆ ಸಿಕ್ಕಿದೆ.
ಕಲಬುರ್ಗಿ ಕರದಾಳು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ. ಪ್ರಣವಾನಂದ ಸ್ವಾಮೀಜಿ ನೇತೃತ್ವದ ಈ ಪಾದಯಾತ್ರೆಗೆ ರಥಕ್ಕೆ ಬಾವುಟ ನೀಡುವ ಮೂಲಕ ಸಮುದಾಯದ ಹಿರಿಯ ನಾಯಕ ಬಿ.ಜನಾರ್ಧನ ಪೂಜಾರಿ ಚಾಲನೆ ನೀಡಿದರು. ಚಿತ್ರನಟರಾದ ಸುಮನ್ ತಲ್ವಾರ್, ರಾಜಶೇಖರ ಕೋಟ್ಯಾನ್, ತೆಲಂಗಾಣ ಸರ್ಕಾರದ ಸಚಿವ ಶ್ರೀನಿವಾಸ್, ಎಂಎಲ್ಸಿ ಹರೀಶ್ ಕುಮಾರ್ ಸೇರಿ ಕರ್ನಾಟಕದ ಈಡಿಗ, ಬಿಲ್ಲವ, ನಾಮಧಾರಿ, ಜೀವರ, ನಾಯಕ, ಕಲಾಲ್ ಮುಂತಾದ 26 ಪಂಗಡಗಳ ನಾಯಕರು ಭಾಗವಹಿಸಲಿದ್ದಾರೆ.
ಮಂಗಳೂರಿನಿಂದ ಹೊರಟ ಈ ಐತಿಹಾಸಿಕ ಪಾದಯಾತ್ರೆ 41 ದಿನ 658 ಕಿ.ಮೀ ಸಾಗಿ ಬೆಂಗಳೂರು ತಲುಪಲಿದೆ. ಮಂಗಳೂರಿನಿಂದ ಹೊರಟು, ಉಡುಪಿ, ತೀರ್ಥಹಳ್ಳಿ, ಸಿದ್ಧಾಪುರ, ಶಿವಮೊಗ್ಗ, ದಾವಣಗೆರೆ ದಾರಿಯಾಗಿ ಸಂಚರಿಸಲಿದೆ. ರಾಜ್ಯದ ಎಲ್ಲ ಈಡಿಗ- ಬಿಲ್ಲವ ಸಮುದಾಯದವರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಸಮುದಾಯದ ಹಿತ ಕಾಪಾಡುವುದಕ್ಕಾಗಿಯೆ ಈ ಐತಿಹಾಸಿ ಪಾದಯಾತ್ರೆ
ಈ ಪಾದಯಾತ್ರೆ ನಮ್ಮ ಸಮುದಾಯದ ಹಿತಕ್ಕಾಗಿ. ನಮ್ಮ ಬೇಡಿಕೆಗಳಲ್ಲಿ ಯಾವುದೇ ಒಂದನ್ನ ಸರ್ಕಾರ ಪರಿಗಣಿಸದೆ ಹೋದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಈ ಹಿಂದೆ ಇದೇ ಸರ್ಕಾರ ನಮ್ಮ ಸಮುದಾಯಕ್ಕೆ ಮೋಸ ಮಾಡಿದೆ. ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ ಸಮಸ್ತ ಸಮುದಾಯದ ಹಿತಾಸಕ್ತಿಯ ವಿರುದ್ಧವಾಗಿ ಸರ್ಕಾರದ ನಿಗಮ ಕಾರ್ಯ ನಿರ್ವಹಿಸಿದರೆ ಆ ನಿಗಮವನ್ನು ಬಂದ್ ಮಾಡಿಸಲು ಹೋರಾಟ ಮಾಡಲಾಗುವುದು ಎಂದು ಡಾ. ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಬ್ರಹ್ಮ ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಮಾಡಿ 500 ಕೋಟಿ ರೂಪಾಯಿ ಅನುದಾನ ನೀಡಬೇಕು.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮಹಾನ್ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣಗುರುಗಳ ಮೂರ್ತಿ ಸ್ಥಾಪನೆ.
ಮಂಗಳೂರು, ಉಡುಪಿ, ಶಿವಮೊಗ ಮತ್ತು ಇತರೆ ಜಿಲ್ಲೆಗಳಲ್ಲಿ ಸಮಾಜಕ್ಕೆ ಹಚ್ಚಿನ ರಾಜಕೀಯ ಪ್ರಾತಿನಿಧ್ಯ ನೀಡಬೇಕು.
2ಎ ವರ್ಗದಲ್ಲಿರುವ ಸಮುದಾಯಕ್ಕೆ ಯಾವುದೇ ಅನ್ಯಾಯವಾಗದಂತೆ ಮೀಸಲಾತಿ ಹೆಚ್ಚಿಸಬೇಕು.
ಈಡಿಗ ಸಮುದಾಯದ ನೇತೃತ್ವದಲ್ಲಿ ನಡೆಯುವ ಶ್ರೀ ಸಿಗಂಧೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸರ್ಕಾರದ ಹಸ್ತಕ್ಷೇಪ ನಿಲ್ಲಿಸಬೇಕು.
ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ನಾರಾಯಣ ಗುರುಗಳ ಅಧ್ಯಯನ ಪೀಠ ರಚಿಸಬೇಕು.
ಅನುಭವ ಮಂಟಪದಲ್ಲಿ ಈಡಿಗ ಸಮುದಾಯ ಶರಣ ಧುರಣ ಹೆಂಡದ ಮಾರಯ್ಯನ ಜಯಂತಿಯನ್ನು ಸರಕಾರ ಆಚರಿಸಬೇಕು.
ಸರಕಾರಿ ಗೋಮಾಳ ಹುಲ್ಲುಗಾವಲು ಜಮೀನಿನಲ್ಲಿ ಸರ್ಕಾರಿ ವಚ್ಚದಲ್ಲಿ ಈಚಲು ಮರ, ತೆಂಗಿನ ಮರ, ತಾಳೆ ಮರಗಳನ್ನು ನಡಬೇಕು.
ಕುಲಕಸುಬು ಶೇಂದಿ ಇಳಿಸಿ ಮಾರಾಟ ಮಾಡುವುದಕ್ಕೆ ಅನುಮತಿ ನೀಡಬೇಕು. ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಘೋಷಿಸಬೇಕು. ಮೂರ್ತೆದಾರರಿಗೆ (ಶೇಂದಿ ಇಳಿಸುವರಿಗೆ) ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕು.
ಸರ್ವಪಕ್ಷದ ಬೆಂಬಲ ಇರುವ ಮಹಾಪಾದಯಾತ್ರೆ
ಯಾವುದೇ ಸ್ವಾರ್ಥ ಇಲ್ಲದೆ ಸಮಾಜದ ಜನರ ಅಭ್ಯುದಯಕ್ಕಾಗಿ ಹೋರಾಟ ಮಾರ್ಗವನ್ನು ಅನುಸರಿಸಿದ್ದು, ಇದಕ್ಕೆ ರಾಜ್ಯ ಸರ್ಕಾರವು ಕೂಡಲೇ ಸ್ಪಂದಿಸಬೇಕು. ಸಮಸ್ಯೆ ಇತ್ಯರ್ಥಪಡಿಸಲು ಪ್ರಯತ್ನಿಸಬೇಕು. ಮಂಗಳೂರಿನಿಂದ 658 ಕಿಲೋಮೀಟರ್ ಪಾದಯಾತ್ರೆ ಕೇವಲ ಸಮುದಾಯದ ಜನರ ಅಹವಾಲಷ್ಟೇ ಅಲ್ಲ. ಇದಕ್ಕೆ ಸರ್ವ ಪಕ್ಷದ ಬೆಂಬಲವಿದೆ. ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದರೆ ಭವಿಷ್ಯದಲ್ಲಿ ಉತ್ತಮವಾಗಲಿದೆ ಎಂದು ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದರು.