ಕನ್ನಡ ಸುದ್ದಿ  /  ಕರ್ನಾಟಕ  /  Dk Shivakumar: ಡಿಕೆ ಶಿವಕುಮಾರ್ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ, ಕಾಪ್ಟರ್‌ ಗಾಜುಪುಡಿಪುಡಿ, ದೇವರ ದಯೆ ಎಂದ ಡಿಕೆಶಿ

DK Shivakumar: ಡಿಕೆ ಶಿವಕುಮಾರ್ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ, ಕಾಪ್ಟರ್‌ ಗಾಜುಪುಡಿಪುಡಿ, ದೇವರ ದಯೆ ಎಂದ ಡಿಕೆಶಿ

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ ಹೊಡೆದಿದ್ದು, ಸಂಭಾವ್ಯ ಅಪಾಯದಿಂದ ಸ್ವಲ್ಪದರಲೇ ಪಾರಾಗಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Election) ಪ್ರಚಾರಕ್ಕಾಗಿ ಮುಳಬಾಗಿಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ
ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ ಹೊಡೆದಿದ್ದು, ಸಂಭಾವ್ಯ ಅಪಾಯದಿಂದ ಸ್ವಲ್ಪದರಲೇ ಪಾರಾಗಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Election) ಪ್ರಚಾರಕ್ಕಾಗಿ ಮುಳಬಾಗಿಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ ಎಂದು ವರದಿಗಳು ತಿಳಿಸಿವೆ. ಘಟನೆಯಲ್ಲಿ ಡಿಕೆ ಶಿವಕುಮಾರ್‌ ಕ್ಯಾಮರಾಮೆನ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇಂದು ಮಧ್ಯಾಹ್ನ ಕೋಲಾರಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಗೆ ಹದ್ದು ಡಿಕ್ಕಿ ಹೊಡೆದ ಪರಿಣಾಮ ತುರ್ತು ಭೂ ಸ್ಪರ್ಶ ಮಾಡಲಾಗಿದೆ. ಹೆಲಿಕಾಪ್ಟರ್ ನಲ್ಲಿ ಇದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಪೈಲಟ್ ಜಾಗರೂಕತೆಯಿಂದ ಭಾರಿ ಅವಘಡ ತಪ್ಪಿದೆ.

ಶಿವಕುಮಾರ್ ಅವರು ಮುಳಬಾಗಿಲಿನಲ್ಲಿ ಚುನಾವಣೆ ಪ್ರಚಾರ ಕಾರ್ಯಕ್ರಮಕ್ಕೆ ಮಂಗಳವಾರ ಮಧ್ಯಾಹ್ನ 12.10 ಸುಮಾರಿಗೆ ಜಕ್ಕೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಮಾಡಿದ್ದು, ಹೊಸಕೋಟೆ ಸಮೀಪ ಹದ್ದು ಡಿಕ್ಕಿ ಹೊಡೆದ ಪರಿಣಾಮ ಹೆಲಿಕಾಪ್ಟರ್ ಗಾಜು ಒಡೆದಿದೆ. ಈ ಸಂದರ್ಭದಲ್ಲಿ ಪೈಲಟ್ ಸಮಯಪ್ರಜ್ಞೆ ಮೆರೆದಿದ್ದು, ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ಅನ್ನು ತುರ್ತು ಭೂ ಸ್ಪರ್ಶ ಮಾಡಿದ್ದಾರೆ.

‘ನಾನು ನಂಬಿರುವ ಶಕ್ತಿ ಹಾಗೂ ದೇವರು ನನ್ನ ಜತೆಗಿದ್ದು, ನನ್ನನ್ನು ಕಾಪಾಡಿದ್ದಾರೆ. ನಮ್ಮ ಹೆಲಿಕಾಪ್ಟರ್ ಟೇಕಾಫ್ ಆಗಿ 7-8 ನಿಮಿಷ ಕಳೆದಿತ್ತು. ನಾವು ಹೊಸಕೋಟೆ ಹತ್ತಿರ ತಲುಪಿದಾಗ ದೊಡ್ಡ ಹದ್ದು ಬಂದು ಡಿಕ್ಕಿ ಹೊಡೆಯಿತು. ಮಾಧ್ಯಮದವರು ಪಕ್ಷದ ಪ್ರಣಾಳಿಕೆ ಕುರಿತು ಸಂದರ್ಶನ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಪೈಲಟ್ ಹೆಲಿಕಾಪ್ಟರ್ ಹಾರಾಟದ ಎತ್ತರವನ್ನು ಕಡಿಮೆ ಮಾಡಿ ನಮ್ಮನ್ನು ರಕ್ಷಿಸಿದ್ದಾರೆ. ಈಗ ಬೇರೆ ಹೆಲಿಕಾಪ್ಟರ್ ಸಿಗದ ಕಾರಣ, ರಸ್ತೆ ಮಾರ್ಗವಾಗಿ ಮುಳಬಾಗಿಲಿಗೆ ತೆರಳುತ್ತಿದ್ದೇವೆ. ಇದು ಆಕಸ್ಮಿಕವಾಗಿ ಆಗಿರುವ ಘಟನೆ, ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ಭೂಸ್ಪರ್ಶವಾಗಿದೆ. ಪ್ರಯಾಣದ ವೇಳೆ ಮೂರು ಹದ್ದುಗಳು ಎದುರಾಗಿದ್ದು, ಪೈಲಟ್ ಎರಡು ಹದ್ದುಗಳನ್ನು ದಾಟಿದ್ದರು. ಮೂರನೇ ಹದ್ದು ಕೆಳಗಡೆಯಿಂದ ಮೇಲೆ ಬಂದು ಡಿಕ್ಕಿ ಹೊಡೆಯಿತು. ಯಾರೂ ಇದರಿಂದ ಗಾಬರಿಯಾಗುವುದು ಬೇಡ, ಇದೊಂದು ಆಕಸ್ಮಿಕ, ಇದನ್ನು ಇಲ್ಲಿಗೆ ಬಿಟ್ಟು ಮುಂದೆ ಸಾಗೋಣ’ ಎಂದು ಘಟನೆ ಬಳಿಕ ಡಿಕೆ ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಡಿಕೆ ಶಿವಕುಮಾರ್‌ ಅವರು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದು, ರಾಜ್ಯಾದ್ಯಾಂತ ಪ್ರಚಾರ ಕಾರ್ಯ ಕೈಗೊಳ್ಳುತ್ತಿದ್ದಾರೆ. ತುರ್ತಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣಿಸಲು ಹೆಲಿಕಾಪ್ಟರ್‌ ಬಳಸುತ್ತಿದ್ದಾರೆ. ರಾಜ್ಯದಲ್ಲಿ ಬಹುತೇಕ ಪ್ರಮುಖ ನಾಯಕರು ರಾಜ್ಯದಲ್ಲಿ ಹೆಲಿಕಾಪ್ಟರ್‌ನಲ್ಲಿಯೇ ಪ್ರಯಾಣಿಸುತ್ತಿದ್ದಾರೆ.

ಇಂದು ಡಿಕೆ ಶಿವಕುಮಾರ್‌ ಅವರು ಕೋಲಾರದತ್ತ ಪ್ರಚಾರ ಕೈಗೊಳ್ಳಲು ಪ್ರಯಣಿಸುತ್ತಿದ್ದ ಸಂದರ್ಭದಲ್ಲಿ ಆಕಾಶದಲ್ಲಿ ಹದ್ದು ಡಿಕ್ಕಿ ಹೊಡೆದಿದೆ.

ಆಕಾಶದಲ್ಲಿ ಹಕ್ಕಿಗಳು ಹಾರುವ ವಿಮಾನ, ಹೆಲಿಕಾಪ್ಟರ್‌ಗಳಿಗೆ ಅಪಾಯಕಾರಿಯಾಗಿದೆ. ಹೆಲಿಕಾಪ್ಟರ್‌ಗೆ ಹೋಲಿಸಿದರೆ ವಿಮಾನಗಳಿಗೆ ಹಾರುವ ಹಕ್ಕಿಗಳು ಡಿಕ್ಕಿ ಹೊಡೆದರೆ ಅಪಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೆಲಿಕಾಪ್ಟರ್‌ಗಳು ಹೆಚ್ಚು ಎತ್ತರದಲ್ಲಿ ಸಾಗದೆ ಇರುವುದರಿಂದ ಮತ್ತು ತುರ್ತಾಗಿ ಸಣ್ಣ ಸ್ಥಳದಲ್ಲಿಯೂ ಲ್ಯಾಂಡ್‌ ಮಾಡಲು ಸಾಧ್ಯವಿರುವುದರಿಂದ ಹಕ್ಕಿ ಡಿಕ್ಕಿ ಹೊಡೆದ ಸಂದರ್ಭದಲ್ಲಿ ತುರ್ತಾಗಿ ಕೆಳಕ್ಕೆ ಇಳಿಸಬಹುದು. ಆದರೆ, ವಿಮಾನಗಳಿಗೆ ಇಂತಹ ಅವಕಾಶ ದೊರಕುವುದು ಕಡಿಮೆ.

ಹಕ್ಕಿಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಲೋಹದ ಹಕ್ಕಿಗಳಿಗೆ ಹಕ್ಕಿಗಳೆಂದರೆ ಭಯ. ಈ ಪುಟ್ಟ ಹಕ್ಕಿಗಳ ಡಿಕ್ಕಿಯಿಂದ ದೊಡ್ಡ ವಿಮಾನವೇ ಆಕಾಶದಿಂದ ಉರುಳಿಬೀಳಬಹುದು. ಆಗಾಗ ವಿಮಾನಗಳಿಗೆ ಡಿಕ್ಕಿಯಂತಹ ಘಟನೆಗಳು ವರದಿಯಾಗುತ್ತಿವೆ.

ಕಳೆದ ವರ್ಷ ಮಾರ್ಚ್‌ ತಿಂಗಳಿನಲ್ಲಿ ಕರ್ನಾಟಕದಿಂದ ಹೊರಟ ವಿಮಾನಕ್ಕೂ ಹಕ್ಕಿ ಡಿಕ್ಕಿ ಹೊಡೆದಿತ್ತು. ಸ್ಪೈಸ್‌ಜೆಟ್‌ ವಿಮಾನವು ಬೆಳಗಾವಿಯಿಂದ ದಿಲ್ಲಿಗೆ ಹೋಗುತ್ತಿತ್ತು. ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಕ್ಕಿ ಡಿಕ್ಕಿ ಹೊಡೆದು ತುರ್ತು ಲ್ಯಾಂಡ್‌ ಆಗಿತ್ತು.

ಕಳೆದ ವರ್ಷ ಆಗಸ್ಟ್‌ನಲ್ಲಿ ವಾರಣಾಸಿಯಿಂದ ಮುಂಬೈಗೆ ಹೊರಟ್ಟಿದ್ದ ವಿಸ್ತಾರ ಏರ್‌ಲೈನ್ಸ್‌ನ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ವಿಮಾನವು ಮತ್ತೆ ಟೇಕಾಫ್‌ ಆಗಿರುವ ಸ್ಥಳವಾದ ವಾರಣಾಸಿಗೆ ಹಿಂತುರುಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಮಾಹಿತಿ ನೀಡಿತ್ತು.

ಹಕ್ಕಿಗಳೆಂದರೆ ವಿಮಾನಗಳಿಗೆ ಭಯ ಏಕೆ?

ಒಂದು ಹಕ್ಕಿಯು ವಿಮಾನದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡುವ ಸಾಮರ್ಥ್ಯ ಹೊಂದಿದೆ. ವಿಮಾನಗಳ ಬಹುತೇಕ ಅಪಘಾತಗಳಿಗೆ ಹಕ್ಕಿ ಡಿಕ್ಕಿಯೇ ಪ್ರಮುಖ ಕಾರಣವಾಗಿದೆ.

ಪಕ್ಷಿಗಳು ವಿಮಾನಕ್ಕೆ ಡಿಕ್ಕಿ ಹೊಡೆಯುವ ಸಂದರ್ಭದಲ್ಲಿ ಅವು ಎಂಜಿನ್‌ ಒಳಗೆ ಸೇರಿಬಿಟ್ಟರೆ ಹೆಚ್ಚು ಅಪಾಯ. ಆಕಾಶದಲ್ಲಿ ಹಕ್ಕಿಗಳ ಹಿಂಡು ವಿಮಾನಗಳಿಗೆ ಮತ್ತು ಪೈಲಟ್‌ಗಳಿಗೆ ದುಸ್ವಪ್ನವೆನ್ನಬಹುದು.

ಹಕ್ಕಿ ಮಾತ್ರವಲ್ಲ ಯಾವುದೇ ಹಾರುವ ಪ್ರಾಣಿ (ಬಾವಲಿ), ಪಕ್ಷಿಗಳು ವಿಮಾನಕ್ಕೆ ಅಪಾಯಕಾರಿ. ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದರೆ ಅದು ವಿಮಾನದ ಟರ್ಬೈನ್‌ ಅನ್ನೇ ಹಾನಿಗೊಳಿಸಬಲ್ಲದು.

ಎಲ್ಲಾದರೂ ಡಿಕ್ಕಿ ಹೊಡೆದ ಹಕ್ಕಿ ಎಂಜಿನ್‌ನೊಳಗೆ ಸಿಲುಕಿಕೊಂಡರೆ ಅದರಿಂದ ಬೆಂಕಿ ಉಂಟಾಗಿ ಆಕಾಶದಲ್ಲಿಯೇ ವಿಮಾನ ಹೊತ್ತಿ ಉರಿಯಬಹುದು.

ಇಂಟರ್‌ನ್ಯಾಷನಲ್‌ ಸಿವಿಲ್‌ ಏವಿಯೇಷನ್‌ ಆರ್ಗನೈಜೇಷನ್‌ (ಐಸಿಎಒ) ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಜಾಗತಿಕವಾಗಿ ಪ್ರತಿದಿನ ವಿಮಾನಕ್ಕೆ ಹಕ್ಕಿಗಳು ಡಿಕ್ಕಿ ಹೊಡೆಯುವ ಸರಾಸರಿ 34 ಪ್ರಕರಣಗಳು ನಡೆಯುತ್ತಿವೆ.

ಹಕ್ಕಿ ಡಿಕ್ಕಿ ಹೊಡೆಯುವುದರಿಂದ ವಾರ್ಷಿಕವಾಗಿ ಒಂದು ಬಿಲಿಯನ್‌ ಡಾಲರ್‌ ನಷ್ಟವಾಗುತ್ತದೆ. ಶೇಕಡ 92ರಷ್ಟು ಹಕ್ಕಿ ಡಿಕ್ಕಿ ಹೊಡೆಯುವ ಘಟನೆಗಳಿಂದ ಏನೂ ಅಪಾಯವಾಗುವುದಿಲ್ಲ.

ವಿಮಾನದ ಬಣ್ಣ ಹೆಚ್ಚಾಗಿ ಬಿಳಿಬಣ್ಣದ್ದಾಗಿರುತ್ತದೆ. ಹಕ್ಕಿಗಳು ಬಿಳಿ ವಿಮಾನಗಳು ದೂರದಿಂದಲೇ ಗುರುತಿಸಿ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿಕೊಳ್ಳುತ್ತವೆ. ಬಣ್ಣದ ವಿಮಾನಗಳಿಗೆ ಹಕ್ಕಿಯ ಡಿಕ್ಕಿಯ ಅಪಾಯ ಹೆಚ್ಚು.

IPL_Entry_Point