ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Fedex Aircraft Bird-hit: ವಿಮಾನಕ್ಕೆ ಹಕ್ಕಿಗಳ ಡಿಕ್ಕಿ, ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತುಪರಿಸ್ಥಿತಿ ಘೋಷಣೆ, ಹಕ್ಕಿಗಳಿಂದ ಆತಂಕ

FedEx aircraft bird-hit: ವಿಮಾನಕ್ಕೆ ಹಕ್ಕಿಗಳ ಡಿಕ್ಕಿ, ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತುಪರಿಸ್ಥಿತಿ ಘೋಷಣೆ, ಹಕ್ಕಿಗಳಿಂದ ಆತಂಕ

ಫೆಡ್‌ಎಕ್ಸ್ ವಿಮಾನವು ಟೇಕ್ ಆಫ್ ಆದ ಕೆಲವೇ ದಿನಗಳಲ್ಲಿ ಪಕ್ಷಿಗಳ ಹೊಡೆತಕ್ಕೆ ಸಿಲುಕಿದ್ದು, ಬಳಿಕ ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಇಂದು ಮಧ್ಯಾಹ್ನ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.

ವಿಮಾನಕ್ಕೆ ಹಕ್ಕಿಗಳ ಡಿಕ್ಕಿ, ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತುಪರಿಸ್ಥಿತಿ ಘೋಷಣೆ  (PTI Photo/Atul Yadav)(PTI01_09_2023_000075A)
ವಿಮಾನಕ್ಕೆ ಹಕ್ಕಿಗಳ ಡಿಕ್ಕಿ, ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತುಪರಿಸ್ಥಿತಿ ಘೋಷಣೆ (PTI Photo/Atul Yadav)(PTI01_09_2023_000075A) (PTI)

ನವದೆಹಲಿ: ದುಬೈಗೆ ಹೊರಟಿದ್ದ ಫೆಡ್‌ಎಕ್ಸ್ ವಿಮಾನವು ಟೇಕ್ ಆಫ್ ಆದ ಕೆಲವೇ ದಿನಗಳಲ್ಲಿ ಪಕ್ಷಿಗಳ ಹೊಡೆತಕ್ಕೆ ಸಿಲುಕಿದ್ದು, ಬಳಿಕ ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಇಂದು ಮಧ್ಯಾಹ್ನ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹಕ್ಕಿಗಳು ಡಿಕ್ಕಿ ಹೊಡೆದಿರುವ ಫೆಡ್‌ಎಕ್ಸ್‌ ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿದೆಯೇ? ಎಂದು ಪರಿಶೀಲಿಸುವ ಸಲುವಾಗಿ ಮತ್ತು ಇತರೆ ವಿಮಾನಗಳ ಹಾರಾಟಕ್ಕೆ ಹಕ್ಕಿಗಳು ಅಡ್ಡಿಯಾಗಬಹುದೇ ಎನ್ನುವುದನ್ನು ಪರಿಶೀಲಿಸುವ ಸಲುವಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಘೋಷಿಸಲಾಗಿದೆ.

-

ಅಪ್‌ಡೇಟ್‌: ಫೆಡ್‌ಎಕ್ಸ್‌ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಬಳಿಕ ಆ ವಿಮಾನವನ್ನು ಪರಿಶೀಲಿಸಿ ಮತ್ತೆ ಹಾರಾಟಕ್ಕೆ ಅನುಮತಿಸಲಾಗಿದೆ. ತಪಾಸಣೆ ಬಳಿಕ ಮತ್ತೆ ಈ ವಿಮಾನ ಟೇಕಾಫ್‌ ಆಗಿದೆ. ವಿಮಾನ ನಿಲ್ದಾಣವು ತುರ್ತು ಪರಿಸ್ಥಿತಿ ಘೋಷಿಸಿ ಈ ವಿಮಾನವನ್ನು ಲ್ಯಾಂಡ್ ಮಾಡಿಸಿತ್ತು.

-

ಇದರಿಂದಾಗಿ ಉಳಿದ ವಿಮಾನಗಳ ಹಾರಾಟವೂ ಸ್ಥಗಿತಗೊಂಡಿದ್ದು, ಸಾಕಷ್ಟು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಉಳಿದಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಹಕ್ಕಿಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಲೋಹದ ಹಕ್ಕಿಗಳಿಗೆ ಹಕ್ಕಿಗಳೆಂದರೆ ಭಯ. ಈ ಪುಟ್ಟ ಹಕ್ಕಿಗಳ ಡಿಕ್ಕಿಯಿಂದ ದೊಡ್ಡ ವಿಮಾನವೇ ಆಕಾಶದಿಂದ ಉರುಳಿಬೀಳಬಹುದು. ಆಗಾಗ ವಿಮಾನಗಳಿಗೆ ಡಿಕ್ಕಿಯಂತಹ ಘಟನೆಗಳು ವರದಿಯಾಗುತ್ತಿವೆ.

ಕಳೆದ ವರ್ಷ ಮಾರ್ಚ್‌ ತಿಂಗಳಿನಲ್ಲಿ ಕರ್ನಾಟಕದಿಂದ ಹೊರಟ ವಿಮಾನಕ್ಕೂ ಹಕ್ಕಿ ಡಿಕ್ಕಿ ಹೊಡೆದಿತ್ತು. ಸ್ಪೈಸ್‌ಜೆಟ್‌ ವಿಮಾನವು ಬೆಳಗಾವಿಯಿಂದ ದಿಲ್ಲಿಗೆ ಹೋಗುತ್ತಿತ್ತು. ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಕ್ಕಿ ಡಿಕ್ಕಿ ಹೊಡೆದು ತುರ್ತು ಲ್ಯಾಂಡ್‌ ಆಗಿತ್ತು.

ಕಳೆದ ವರ್ಷ ಆಗಸ್ಟ್‌ನಲ್ಲಿ ವಾರಣಾಸಿಯಿಂದ ಮುಂಬೈಗೆ ಹೊರಟ್ಟಿದ್ದ ವಿಸ್ತಾರ ಏರ್‌ಲೈನ್ಸ್‌ನ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ವಿಮಾನವು ಮತ್ತೆ ಟೇಕಾಫ್‌ ಆಗಿರುವ ಸ್ಥಳವಾದ ವಾರಣಾಸಿಗೆ ಹಿಂತುರುಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಮಾಹಿತಿ ನೀಡಿತ್ತು.

ಹಕ್ಕಿ ಡಿಕ್ಕಿ ಹೊಡೆದಿರುವುದರಿಂದ ವಿಮಾನದ ರೇಡೋಮ್‌ಗೆ (ಮೂತಿ) ಹಾನಿಯಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯವು ಮಾಹಿತಿ ನೀಡಿತ್ತು. ಬಳಿಕ ಈ ವಿಮಾನವನ್ನು ನೆಲದ ಮೇಲಿನ ವಿಮಾನ(ಎಒಜಿ) ವರ್ಗಕ್ಕೆ ಸೇರಿಸಲಾಗಿತ್ತು. ಅಂದರೆ, ಈ ವಿಮಾನವು ಸದ್ಯಕ್ಕೆ ಹಾರಾಟ ನಡೆಸಲು ಅವಕಾಶವಿರುವುದಿಲ್ಲ. ಸಂಪೂರ್ಣವಾಗಿ ರಿಪೇರಿಗೊಂಡು ಇದರ ಕಾರ್ಯಾಚರಣೆ ಆರಂಭವಾಗಲು ಸಾಕಷ್ಟು ಸಮಯ ಬೇಕಿರುತ್ತದೆ.

ಹಕ್ಕಿಗಳೆಂದರೆ ವಿಮಾನಗಳಿಗೆ ಭಯ ಏಕೆ?

  1. ಒಂದು ಹಕ್ಕಿಯು ವಿಮಾನದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡುವ ಸಾಮರ್ಥ್ಯ ಹೊಂದಿದೆ. ವಿಮಾನಗಳ ಬಹುತೇಕ ಅಪಘಾತಗಳಿಗೆ ಹಕ್ಕಿ ಡಿಕ್ಕಿಯೇ ಪ್ರಮುಖ ಕಾರಣವಾಗಿದೆ.
  2. ಪಕ್ಷಿಗಳು ವಿಮಾನಕ್ಕೆ ಡಿಕ್ಕಿ ಹೊಡೆಯುವ ಸಂದರ್ಭದಲ್ಲಿ ಅವು ಎಂಜಿನ್‌ ಒಳಗೆ ಸೇರಿಬಿಟ್ಟರೆ ಹೆಚ್ಚು ಅಪಾಯ. ಆಕಾಶದಲ್ಲಿ ಹಕ್ಕಿಗಳ ಹಿಂಡು ವಿಮಾನಗಳಿಗೆ ಮತ್ತು ಪೈಲಟ್‌ಗಳಿಗೆ ದುಸ್ವಪ್ನವೆನ್ನಬಹುದು.
  3. ಹಕ್ಕಿ ಮಾತ್ರವಲ್ಲ ಯಾವುದೇ ಹಾರುವ ಪ್ರಾಣಿ (ಬಾವಲಿ), ಪಕ್ಷಿಗಳು ವಿಮಾನಕ್ಕೆ ಅಪಾಯಕಾರಿ. ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದರೆ ಅದು ವಿಮಾನದ ಟರ್ಬೈನ್‌ ಅನ್ನೇ ಹಾನಿಗೊಳಿಸಬಲ್ಲದು.
  4. ಎಲ್ಲಾದರೂ ಡಿಕ್ಕಿ ಹೊಡೆದ ಹಕ್ಕಿ ಎಂಜಿನ್‌ನೊಳಗೆ ಸಿಲುಕಿಕೊಂಡರೆ ಅದರಿಂದ ಬೆಂಕಿ ಉಂಟಾಗಿ ಆಕಾಶದಲ್ಲಿಯೇ ವಿಮಾನ ಹೊತ್ತಿ ಉರಿಯಬಹುದು.
  5. ಇಂಟರ್‌ನ್ಯಾಷನಲ್‌ ಸಿವಿಲ್‌ ಏವಿಯೇಷನ್‌ ಆರ್ಗನೈಜೇಷನ್‌ (ಐಸಿಎಒ) ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಜಾಗತಿಕವಾಗಿ ಪ್ರತಿದಿನ ವಿಮಾನಕ್ಕೆ ಹಕ್ಕಿಗಳು ಡಿಕ್ಕಿ ಹೊಡೆಯುವ ಸರಾಸರಿ 34 ಪ್ರಕರಣಗಳು ನಡೆಯುತ್ತಿವೆ.
  6. ಹಕ್ಕಿ ಡಿಕ್ಕಿ ಹೊಡೆಯುವುದರಿಂದ ವಾರ್ಷಿಕವಾಗಿ ಒಂದು ಬಿಲಿಯನ್‌ ಡಾಲರ್‌ ನಷ್ಟವಾಗುತ್ತದೆ. ಶೇಕಡ 92ರಷ್ಟು ಹಕ್ಕಿ ಡಿಕ್ಕಿ ಹೊಡೆಯುವ ಘಟನೆಗಳಿಂದ ಏನೂ ಅಪಾಯವಾಗುವುದಿಲ್ಲ.
  7. ವಿಮಾನದ ಬಣ್ಣ ಹೆಚ್ಚಾಗಿ ಬಿಳಿಬಣ್ಣದ್ದಾಗಿರುತ್ತದೆ. ಹಕ್ಕಿಗಳು ಬಿಳಿ ವಿಮಾನಗಳು ದೂರದಿಂದಲೇ ಗುರುತಿಸಿ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿಕೊಳ್ಳುತ್ತವೆ. ಬಣ್ಣದ ವಿಮಾನಗಳಿಗೆ ಹಕ್ಕಿಯ ಡಿಕ್ಕಿಯ ಅಪಾಯ ಹೆಚ್ಚು.

IPL_Entry_Point

ವಿಭಾಗ