ಕನ್ನಡ ಸುದ್ದಿ  /  ಕರ್ನಾಟಕ  /  Kasapa Datti Awards 2021: ‌ಕನ್ನಡ ಸಾಹಿತ್ಯ ಪರಿಷತ್‌ನ 2021ನೇ ಸಾಲಿನ ದತ್ತಿ ಪುರಸ್ಕಾರ ಪ್ರಕಟ; ಯಾವ ಕೃತಿಗೆ ಯಾವ ಪುರಸ್ಕಾರ - ವಿವರ

KaSaPa datti awards 2021: ‌ಕನ್ನಡ ಸಾಹಿತ್ಯ ಪರಿಷತ್‌ನ 2021ನೇ ಸಾಲಿನ ದತ್ತಿ ಪುರಸ್ಕಾರ ಪ್ರಕಟ; ಯಾವ ಕೃತಿಗೆ ಯಾವ ಪುರಸ್ಕಾರ - ವಿವರ

KaSaPa datti awards 2021: ‌ಕನ್ನಡ ಸಾಹಿತ್ಯ ಪರಿಷತ್‌ನ 2021ನೇ ಸಾಲಿನ ದತ್ತಿ ಪುರಸ್ಕಾರ ಪ್ರಕಟವಾಗಿದೆ. ಯಾವ ಪುರಸ್ಕಾರಕ್ಕೆ ಯಾವ ಕೃತಿ ಎಂಬಿತ್ಯಾದಿ ವಿವರ ಇಲ್ಲಿದೆ.

ಕನ್ನಡ ಸಾಹಿತ್ಯ ಪರಿಷತ್ತು 2021ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಾಗಿ 49 ವಿಭಾಗಕ್ಕೆ 53 ಕೃತಿಗಳನ್ನು ಆಯ್ಕೆ ಮಾಡಿದೆ.
ಕನ್ನಡ ಸಾಹಿತ್ಯ ಪರಿಷತ್ತು 2021ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಾಗಿ 49 ವಿಭಾಗಕ್ಕೆ 53 ಕೃತಿಗಳನ್ನು ಆಯ್ಕೆ ಮಾಡಿದೆ.

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2021ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಾಗಿ 49 ವಿಭಾಗಕ್ಕೆ 53 ಕೃತಿಗಳನ್ನು ಆಯ್ಕೆ ಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಮಾರ್ಚ್‌ 12ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.

ಪರಿಷತ್ತಿನ 2021ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗೆ 2021ರ ಜನವರಿಯಿಂದ ಡಿಸೆಂಬರ್ ಅಂತ್ಯದೊಳಗೆ ಪ್ರಕಟಗೊಂಡ ಕೃತಿಗಳನ್ನು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ, ಅಂತರರಾಜ್ಯ ಹಾಗೂ ಅಂತರರಾಷ್ಟ್ರಗಳಿಂದ ಸುಮಾರು 2000ಕ್ಕೂ ಹೆಚ್ಚು ಕೃತಿಗಳನ್ನು ಲೇಖಕರು ಹಾಗೂ ಪ್ರಕಾಶಕರು ಸಾಹಿತ್ಯ ಪರಿಷತ್ತಿಗೆ ಕಳುಹಿಸಿಕೊಟ್ಟಿದ್ದರು.

ಪ್ರಸ್ತುತ 2021ನೆಯ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳ ಆಯ್ಕೆಗಾಗಿ ಕಳಿಸಿರುವ ಕೃತಿಗಳನ್ನು ನೋಡಿದಾಗ ಸಾಹಿತ್ಯ ಕ್ಷೇತ್ರದಲ್ಲಿ ಇದೊಂದು ಉತ್ತಮ ಬೆಳವಣಿಗೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವ ಲೇಖಕರಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸಿ ಅವರ ಸಾಹಿತ್ಯ ಸೇವೆ ನಿರಂತರವಾಗಿರಲಿ ಎಂದು ಡಾ.ಮಹೇಶ ಜೋಶಿ ಹೇಳಿದ್ದಾರೆ.

ಪರಿಷತ್ತಿನ 49 ವಿವಿಧ ಸಾಹಿತ್ಯಿಕ ವಿಭಾಗಗಳ ಕೃತಿಗಳಿಗಾಗಿ ನೀಡಲಾಗುವ 2021ನೆಯ ದತ್ತಿ ಪ್ರಶಸ್ತಿಗಳ ಆಯ್ಕೆ ಸಮಿತಿಯು 2000 ಕೃತಿಗಳನ್ನು ಪರಿಶೀಲಿಸಿ ಅಂತಿಮಗೊಳಿಸಿತ್ತು. ಆ ಪಟ್ಟಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಅಧ್ಯಕ್ಷತೆಯ ಪ್ರಧಾನ ಸಮಿತಿ ಕೂಲಂಕಷವಾಗಿ ಪರಿಶೀಲಿಸಿ, ಹಲವು ಸುತ್ತಿನ ಚರ್ಚೆಗಳ ಬಳಿಕ 49 ಸೂಕ್ತ ಕೃತಿಗಳನ್ನು ಆಯಾ ವಿಭಾಗದ ದತ್ತಿಗಾಗಿ ಆಯ್ಕೆ ಮಾಡಿದೆ.

ಕನ್ನಡ ಸಾರಸ್ವತ ಲೋಕಕ್ಕೆ ಲೇಖಕರರು ನೀಡುತ್ತಿರುವ ಕೊಡುಗೆ ಅಪಾರವಾಗಿದೆ. 2021ನೇ ಸಾಲಿನ ದತ್ತಿ ಪ್ರಶಸ್ತಿಗಾಗಿ ಬಂದಿರುವ ಎಲ್ಲಾ ಕೃತಿಗಳು ತಮ್ಮದೇ ಆದ ರೀತಿಯ ಗುಣಮಟ್ಟವನ್ನು ಹೊಂದಿದ್ದು. ದತ್ತಿ ಪ್ರಶಸ್ತಿಯ ಆಶಯವನ್ನು ಗಮನದಲ್ಲಿ ಇಟ್ಟುಕೊಂಡು ಕೂಲಂಕುಷ ಪರಿಶೀಲನೆಯ ನಂತರವೇ ಕೃತಿಗಳ ಆಯ್ಕೆಯನ್ನು ಮಾಡಲಾಗಿದೆ. ದತ್ತಿ ಪ್ರಶಸ್ತಿಗಳ ನಗದು ಗರಿಷ್ಠ 10,000 ರೂ. ಗಳಿಂದ ಕನಿಷ್ಠ 250 ರೂ. ತನಕ ಇದೆ.

ಪ್ರಶಸ್ತಿಗಳಿಗೆ ಆಯ್ಕೆಯಾದ ಕೃತಿಗಳ ವಿವರಕ್ಕೆ ಈ ಕೆಳಗಿನ ಪ್ರಕಟಣೆ ಗಮನಿಸಬಹುದು.

ಪ್ರಶಸ್ತಿ ವಿಜೇತರ ಪಟ್ಟಿ 1
ಪ್ರಶಸ್ತಿ ವಿಜೇತರ ಪಟ್ಟಿ 1
ಪ್ರಶಸ್ತಿ ವಿಜೇತರ ಪಟ್ಟಿ  2
ಪ್ರಶಸ್ತಿ ವಿಜೇತರ ಪಟ್ಟಿ 2

ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಲೇಖಕರುಗಳನ್ನು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಹಣವನ್ನು ಇಡುವ ಮೂಲಕ ಸಾಹಿತ್ಯ ಸೇವೆ ಮಾಡುವ ದತ್ತಿ ದಾನಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಗೌರವದಿಂದ ಸ್ಮರಿಸುತ್ತದೆ ಎಂದು ಜೋಶಿ ತಿಳಿಸಿದ್ದಾರೆ.

IPL_Entry_Point