ಕನ್ನಡ ಸುದ್ದಿ  /  ಕ್ರಿಕೆಟ್  /  ಗ್ಲೆನ್​ ಮ್ಯಾಕ್ಸ್​ವೆಲ್​ಗೆ ಮತ್ತೆ ಅವಕಾಶ; ಗುಜರಾತ್ ಟೈಟಾನ್ಸ್ ಸಮರಕ್ಕೆ ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್ 11

ಗ್ಲೆನ್​ ಮ್ಯಾಕ್ಸ್​ವೆಲ್​ಗೆ ಮತ್ತೆ ಅವಕಾಶ; ಗುಜರಾತ್ ಟೈಟಾನ್ಸ್ ಸಮರಕ್ಕೆ ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್ 11

Royal Challengers Bengaluru vs Gujarat Titans : 2024ರ ಐಪಿಎಲ್​ನ 52ನೇ ಪಂದ್ಯದಲ್ಲಿ ಆರ್​​ಸಿಬಿ ಮತ್ತು‌‌ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಎರಡೂ ತಂಡಗಳ ಪ್ಲೇಯಿಂಗ್ 11 ಹೀಗಿದೆ.

ಗ್ಲೆನ್​ ಮ್ಯಾಕ್ಸ್​ವೆಲ್​ಗೆ ಮತ್ತೆ ಅವಕಾಶ; ಗುಜರಾತ್ ಟೈಟಾನ್ಸ್ ಸಮರಕ್ಕೆ ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್ 11
ಗ್ಲೆನ್​ ಮ್ಯಾಕ್ಸ್​ವೆಲ್​ಗೆ ಮತ್ತೆ ಅವಕಾಶ; ಗುಜರಾತ್ ಟೈಟಾನ್ಸ್ ಸಮರಕ್ಕೆ ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್ 11

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು (Royal Challengers Bengaluru vs Gujarat Titans) ಮತ್ತೊಮ್ಮೆ ಸೆಣಸಾಟಕ್ಕೆ ಸಿದ್ಧವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಉಭಯ ತಂಡಗಳ ಕಾದಾಟಕ್ಕೆ ವೇದಿಕೆ ಕಲ್ಪಿಸಲಿದೆ. ಏಪ್ರಿಲ್ 28ರಂದು ಆರ್​​ಸಿಬಿ-ಜಿಟಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿತ್ತು. ಟೂರ್ನಿಯ 52ನೇ ಪಂದ್ಯದಲ್ಲಿ ಸೋಲಿನ ಸೇಡಿಗೆ ಗುಜರಾತ್ ಸಜ್ಜಾಗಿದೆ. ಪ್ಲೇಆಫ್ ದೃಷ್ಟಿಯಿಂದ ಎರಡೂ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ.

ಟ್ರೆಂಡಿಂಗ್​ ಸುದ್ದಿ

ಸತತ ಎರಡು ಗೆಲುವು ಸಾಧಿಸಿರುವ ಆರ್​​ಸಿಬಿ ತಂಡದಲ್ಲಿ ಬ್ಯಾಟರ್ಸ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಸ್ಟೈಕ್​ರೇಟ್ ಟೀಕೆ‌ ಎದುರಿಸಿದ್ದ ವಿರಾಟ್ ಕೊಹ್ಲಿ ಕಳೆದ‌ ಪಂದ್ಯದಲ್ಲಿ ಅಬ್ಬರಿಸಿ ತಿರುಗೇಟು ನೀಡಿದ್ದಾರೆ. ವಿಲ್ ಜಾಕ್ಸ್ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ರಜತ್ ಪಾಟೀದಾರ್ ಸಹ ರೆಡ್ ಹಾಟ್ ಫಾರ್ಮ್​​ನಲ್ಲಿದ್ದಾರೆ. ಹಲವು ಪಂದ್ಯಗಳಲ್ಲಿ ವಿಶ್ರಾಂತಿ ಪಡೆದ ನಂತರ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿರಲಿಲ್ಲ. ಆದರೆ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಹೀಗಾಗಿ ಅವರು ಆಡುವುದು ಖಚಿತವಾಗಿದೆ.

ಪ್ರಸ್ತುತ ಬೌಲರ್​ಗಳು ಸಹ ಲಯಕ್ಕೆ‌ ಮರಳಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಎದುರಾಳಿಗಳ ವಿರುದ್ಧ ಸವಾರಿ ನಡೆಸುತ್ತಿದ್ದಾರೆ. ಕಳೆದ ಎರಡು ಪಂದ್ಯಗಳ ಸ್ಟ್ರಾಟರ್ಜಿ ವರ್ಕೌಟ್ ಆಗಿರುವ ಕಾರಣ ಅದನ್ನೇ ಮುಂದುವರೆಸಲು ಆರ್​​ಸಿಬಿ ಮ್ಯಾನೇಜ್​ಮೆಂಟ್ ಚಿಂತಿಸಿದೆ. ವಿದೇಶಿ ಬೌಲರ್​ಗಳನ್ನು ಆಡಿಸದೆ ಸಂಪೂರ್ಣ ಭಾರತೀಯರನ್ನೇ ಕಣಕ್ಕಿಳಿಸಲು ಚಿಂತಿಸಿದೆ. ನಾಲ್ವರು ವಿದೇಶಿ ಬ್ಯಾಟರ್​ಗಳನ್ನೇ ಆಡಿಸಲಿದೆ. ಸಕ್ಸಸ್ ಕಂಡಿದ್ದ ಅಂದೇ ಸಂಯೋಜನೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಮಹಿಪಾಲ್ ಲೊಮ್ರೋರ್ ಅಥವಾ ವೈಶಾಕ್ ವಿಜಯ್‌ಕುಮಾರ್ ಅಥವಾ ಆಕಾಶ್ ದೀಪ್‌ನಲ್ಲಿ ಹೆಚ್ಚುವರಿ ಬೌಲರ್ ತರುವ ಆಯ್ಕೆ ಮಾಡಿದರೂ ಅಚ್ಚರಿ ಇಲ್ಲ.

ಗುಜರಾತ್ ತನ್ನ ತವರಿನಲ್ಲಿ ಆರ್​ಸಿಬಿ ಎದುರು ಸೋತಿತ್ತು. ಈಗ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನೂರ್ ಅಹ್ಮದ್ ಬದಲಿಗೆ ಜೋಶುವಾ ಲಿಟಲ್ ಅಥವಾ ಸ್ಪೆನ್ಸರ್ ಜಾನ್ಸನ್‌ ಅವರನ್ನು ಪ್ಲೇಯಿಂಗ್ ಇಲೆವೆನ್​​ಗೆ ಕರೆತರುವ ನಿರೀಕ್ಷೆ ಇದೆ. ತಂಡದ ಬ್ಯಾಟಿಂಗ್​ ವಿಭಾಗದಲ್ಲಿ ಸಾಯಿ ಸುದರ್ಶನ್ ಹೊರತುಪಡಿಸಿ ಉಳಿದವರಿಂದ ಪ್ರದರ್ಶನ ಹೊರಬರುತ್ತಿಲ್ಲ. ಕಳೆದ ಪಂದ್ಯದಲ್ಲಿ ಶಾರೂಖ್ ಖಾನ್ ಫಾರ್ಮ್​ಗೆ ಮರಳಿದ್ದು, ತಂಡದ ಬಲ ಹೆಚ್ಚಿಸಿದೆ. ಆದರೂ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಅನಿರೀಕ್ಷಿತವಾಗಿದೆ.

ಗುಜರಾತ್ ಟೈಟಾನ್ಸ್ ಸಂಭಾವ್ಯ ಪ್ಲೇಯಿಂಗ್ XI

ಶುಭ್ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಶಾರೂಖ್ ಖಾನ್, ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಮೋಹಿತ್ ಶರ್ಮಾ, ಜೋಶುವಾ ಲಿಟಲ್/ಸ್ಪೆನ್ಸರ್ ಜಾನ್ಸನ್‌.

ಆರ್​​ಸಿಬಿ ಸಂಭಾವ್ಯ ಪ್ಲೇಯಿಂಗ್ XI

ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್ ಜಾಕ್ಸ್, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಯಶ್ ದಯಾಳ್, ಸ್ವಪ್ನಿಲ್ ಸಿಂಗ್. (ಮಹಿಪಾಲ್ ಲೊಮ್ರೋರ್-ಇಂಪ್ಯಾಕ್ಟ್ ಪ್ಲೇಯರ್)

ಉಭಯ ತಂಡಗಳು ಮುಖಾಮುಖಿ ದಾಖಲೆ

ಒಟ್ಟು ಪಂದ್ಯಗಳು - 04

ಆರ್​​ಸಿಬಿ ಗೆಲುವು - 02

ಗುಜರಾತ್ ಗೆಲುವು - 02

ಅಂಕಿ-ಅಂಶ

  • ಗುಜರಾತ್ ಟೈಟಾನ್ಸ್ ವಿರುದ್ಧ ಆಡುವುದೆಂದರೆ ಕೊಹ್ಲಿಗೆ ತುಂಬಾ ಇಷ್ಟ. ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಜಿಟಿ ವಿರುದ್ಧ 151ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
  • ಆರ್​​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ವಿರುದ್ಧ ಜಿಟಿಯ ಅಫ್ಘಾನ್ ಸ್ಪಿನ್ನರ್‌ಗಳ ವಿರುದ್ಧ ರನ್ ಗಳಿಸಲು ಪರದಾಡುತ್ತಾರೆ. ಫಾಫ್ 13 ಇನ್ನಿಂಗ್ಸ್‌ಗಳಲ್ಲಿ 2 ಬಾರಿ ರಶೀದ್‌ಗೆ ಮತ್ತು 2 ಇನ್ನಿಂಗ್ಸ್‌ಗಳಲ್ಲಿ 2 ಬಾರಿ ನೂರ್‌ ಅಹ್ಮದ್​ಗೆ ಔಟಾಗಿದ್ದಾರೆ
  • ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಐಪಿಎಲ್ 2024ರಲ್ಲಿ ಪವರ್‌ಪ್ಲೇನಲ್ಲಿ 100 ಅಥವಾ ಅದಕ್ಕಿಂತ ಹೆಚ್ಚಿನ ಎಸೆತಗಳನ್ನು ಎದುರಿಸಿದ ಮತ್ತು 140 ಕ್ಕಿಂತ ಕಡಿಮೆ ಸ್ಟ್ರೈಕ್ ಮಾಡಿದ ಏಕೈಕ ಬ್ಯಾಟ್ಸ್‌ಮನ್‌ಗಳು. ಇದು ಈ ಋತುವಿನಲ್ಲಿ ಪವರ್‌ಪ್ಲೇನಲ್ಲಿ ಜಿಟಿ ನಿಧಾನವಾಗಿ ಸ್ಕೋರರ್ ಆಗಲು ಕಾರಣವಾಗಿದೆ.

ಇದನ್ನೂ ಓದಿ: ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

IPL_Entry_Point