PAN - Aadhaar Link: ಪ್ಯಾನ್ ಮತ್ತು ಆಧಾರ್‌ ಲಿಂಕ್‌ ಆಗಿದೆಯಾ - ಇಲ್ವಾ ಎಂಬ ಡೌಟ್‌ ಕಾಡ್ತಾ ಇದೆಯಾ? ಹಾಗಾದ್ರೆ ಈ ಸ್ಟೆಪ್ಸ್‌ ಫಾಲೋ ಮಾಡಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pan - Aadhaar Link: ಪ್ಯಾನ್ ಮತ್ತು ಆಧಾರ್‌ ಲಿಂಕ್‌ ಆಗಿದೆಯಾ - ಇಲ್ವಾ ಎಂಬ ಡೌಟ್‌ ಕಾಡ್ತಾ ಇದೆಯಾ? ಹಾಗಾದ್ರೆ ಈ ಸ್ಟೆಪ್ಸ್‌ ಫಾಲೋ ಮಾಡಿ

PAN - Aadhaar Link: ಪ್ಯಾನ್ ಮತ್ತು ಆಧಾರ್‌ ಲಿಂಕ್‌ ಆಗಿದೆಯಾ - ಇಲ್ವಾ ಎಂಬ ಡೌಟ್‌ ಕಾಡ್ತಾ ಇದೆಯಾ? ಹಾಗಾದ್ರೆ ಈ ಸ್ಟೆಪ್ಸ್‌ ಫಾಲೋ ಮಾಡಿ

PAN - Aadhaar Link: ನೀವು ಈಗಾಗಲೇ ಪ್ಯಾನ್‌ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಿದ್ದರೆ, ಅದು ಪೂರ್ಣಗೊಂಡಿದೆಯೇ ಅಥವಾ ಇಲ್ಲವೇ ಎನ್ನುವ ಸಂದೇಹ ಕಾಡ್ತಾ ಇದೆಯೇ? ಹಾಗಿದ್ದರೆ ಅದರ ಸ್ಟೇಟಸ್‌ ತಿಳಿಯಲು ಇಲ್ಲಿದೆ ಪರಿಹಾರೋಪಾಯ.

ಪ್ಯಾನ್‌ - ಆಧಾರ್‌ ಲಿಂಕಿಂಗ್‌ (ಸಾಂಕೇತಿಕ ಚಿತ್ರ)
ಪ್ಯಾನ್‌ - ಆಧಾರ್‌ ಲಿಂಕಿಂಗ್‌ (ಸಾಂಕೇತಿಕ ಚಿತ್ರ) (MINT_PRINT)

ಪ್ಯಾನ್‌ ಅನ್ನು ಆಧಾರ್‌ ಜತೆಗೆ ಜೋಡಿಸುವುದನ್ನು ಕಡ್ಡಾಯ ಮಾಡಿದ್ದು, ಈ ವರ್ಷ ಮಾರ್ಚ್‌ 31ರ ಒಳಗೆ ಈ ಕೆಲಸ ಮುಗಿಸಬೇಕು ಎಂದು ಕೇಂದ್ರ ಸರ್ಕಾರ ಮತ್ತೊಮ್ಮೆ ಎಚ್ಚರಿಸಿದೆ. ಒಂದೊಮ್ಮೆ ಪ್ಯಾನ್‌ ಮತ್ತು ಆಧಾರ್‌ ಜೋಡಿಸದೇ ಇದ್ದರೆ ಏಪ್ರಿಲ್‌ 1ರಿಂದ ಪ್ಯಾನ್‌ ನಿಷ್ಕ್ರಿಯವಾಗಲಿದೆ ಎಂದೂ ಅದು ನೆನಪಿಸಿದೆ.

ಆದಾಯ ತೆರಿಗೆ ಇಲಾಖೆಯ ಸೂಚನೆ ಪ್ರಕಾರ, 2022ರ ಮಾರ್ಚ್‌ 31 ಪ್ಯಾನ್‌ ಮತ್ತು ಆಧಾರ್‌ ಜೋಡಣೆಗೆ ಕೊನೇ ದಿನವಾಗಿತ್ತು. ಆನಂತರ 1,000 ರೂಪಾಯಿ ದಂಡ ಶುಲ್ಕ ಪಾವತಿಸಿ ಜೋಡಣೆಗೆ ಅವಕಾಶ ನೀಡಿತ್ತು. ಅದು ಕೂಡ ಈ ಮಾರ್ಚ್‌ 31ಕ್ಕೆ ಕೊನೆಗೊಳ್ಳುತ್ತಿದೆ.

ಎಕ್ಸೆಮ್ಟ್‌ ಕೆಟಗರಿಯಲ್ಲಿ ಬಾರದವರು ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಬೇಕಾದರೆ ಪ್ಯಾನ್‌ ಅನ್ನು ಆಧಾರ್‌ ಜತೆಗೆ ಜೋಡಿಸಬೇಕು. ತಪ್ಪಿದರೆ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸುವುದು ಕಷ್ಟವಾಗಲಿದೆ. ಇನ್ನೂ ಕೆಲವು ತೆರಿಗೆ ಸಂಬಂಧಿ ತೊಂದರೆಗಳನ್ನು ಎದುರಿಸಬೇಕಾದೀತು.

ನೀವು ಈಗಾಗಲೇ ಪ್ಯಾನ್‌ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಿದ್ದರೆ ಆದರೆ ಅದು ಪೂರ್ಣಗೊಂಡಿದೆಯೇ ಎಂದು ಖಚಿತವಾಗಿರದಿದ್ದರೆ, ಲಿಂಕ್ ಮಾಡುವ 'ಸ್ಟೇಟಸ್‌'ಅನ್ನು ಪರಿಶೀಲಿಸಲು ಒಂದು ಮಾರ್ಗವಿದೆ. ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡುವ ಸ್ಟೇಟಸ್‌ ಅನ್ನು ಪರಿಶೀಲಿಸಲು ಈ ಹಂತ-ಹಂತದ ಪ್ರಕ್ರಿಯೆಯನ್ನು ಅನುಸರಿಸಿ.

ಎಸ್‌ಎಂಎಸ್‌ ಮೂಲಕ ಪ್ಯಾನ್‌ - ಆಧಾರ್‌ ಲಿಂಕ್‌ ಸ್ಟೇಟಸ್‌ ತಿಳಿಯವುದು ಹೇಗೆ?

ಸ್ಟೆಪ್‌ 1 - ಹೊಸ ಎಸ್‌ಎಂಎಸ್‌ ರಚಿಸಿ ಅದರಲ್ಲಿ UIDPAN ಎಂದು ನಮೂದಿಸಿ ಸ್ಪೇಸ್‌ ಕೊಡಿ

ಸ್ಟೆಪ್‌ 2 - ಸ್ಪೇಸ್‌ ಕೊಟ್ಟ ನಂತರ ನಿಮ್ಮ 12 ಅಂಕಿಯ ಆಧಾರ್‌ ಸಂಖ್ಯೆ ನಮೂದಿಸಿ

ಸ್ಟೆಪ್‌ 3 - ಮತ್ತೆ ಸ್ಪೇಸ್‌ ಕೊಟ್ಟು, ನಿಮ್ಮ 10 ಅಂಕಿಯ ಪ್ಯಾನ್‌ ನಮೂದಿಸಿ

ನಿಮ್ಮ ಎಸ್‌ಎಂಎಸ್‌ ಹೀಗಿರಲಿದೆ -

UIDPAN < 12 digit Aadhaar number> < 10 digit Permanent Account Number>

ಸ್ಟೆಪ್‌ 4 - ಈ ಎಸ್‌ಎಂಎಸ್‌ ಅನ್ನು 567678 ಅಥವಾ 56161ಕ್ಕೆ ರವಾನಿಸಿ

ಸ್ಟೆಪ್‌ 5 - ಈಗ ಪ್ರತಿಕ್ರಿಯೆಗಾಗಿ ಕಾಯಿರಿ.

ಸ್ಟೆಪ್‌ 6 - ನಿಮ್ಮ ಪ್ಯಾನ್‌ - ಆಧಾರ್‌ ಲಿಂಕ್‌ ಆಗಿದ್ದರೆ ನಿಮಗೆ ಬರುವ ಎಸ್‌ಎಂಎಸ್‌ ಹೀಗಿರಲಿದೆ - "Aadhaar...is already linked to a PAN (number) in the ITD database. Thank you for using our services."

ಸ್ಟೆಪ್‌ 7 - ಒಂದೊಮ್ಮೆ ನಿಮ್ಮ ಪ್ಯಾನ್‌ - ಆಧಾರ್‌ ಲಿಂಕ್‌ ಆಗಿಲ್ಲವಾದರೆ ಆಗ ನಿಮಗೆ ಬರುವ ಎಸ್‌ಎಂಎಸ್‌ ಹೀಗಿರಲಿದೆ - "Aadhaar...is not associated with PAN (number) in ITD database."

ವೆಬ್‌ಪೋರ್ಟಲ್‌ನಲ್ಲಿ ಪ್ಯಾನ್‌- ಆಧಾರ್‌ ಲಿಂಕಿಂಗ್‌ ಸ್ಟೇಟಸ್‌ ಚೆಕ್‌ ಮಾಡುವುದು ಹೇಗೆ?

ಸ್ಟೆಪ್‌ 1 - ಯುಐಡಿಎಐ ವೆಬ್‌ಸೈಟ್‌ (https://uidai.gov.in/)ಗೆ ಹೋಗಿ.

ಸ್ಟೆಪ್‌ 2 - ಅಲ್ಲಿ ಮೆನುವಿನಿಂದ "Aadhaar Services" ಎಂಬಲ್ಲಿ "Aadhaar Linking Status" ಸೆಲೆಕ್ಟ್‌ ಮಾಡಿ

ಸ್ಟೆಪ್‌ 3 - ಈಗ ನಿಮ್ಮ 12 ಅಂಕಿಯ ಆಧಾರ್‌ ಸಂಖ್ಯೆ ನಮೂದಿಸಿ ಬಳಿಕ, "Get Status" ಎಂಬ ಬಟನ್‌ ಅನ್ನು ಕ್ಲಿಕ್‌ ಮಾಡಿ

ಸ್ಟೆಪ್‌ 4 - ಸೆಕ್ಯುರಿಟಿ ಉದ್ದೇಶಕ್ಕಾಗಿ ನೀವು ನಿಮ್ಮ ಪ್ಯಾನ್‌ ಸಂಖ್ಯೆ ನಮೂದಿಸಿದ ಬಳಿಕ ಕ್ಯಾಪ್ಚಾ ಕೋಡ್‌ ಅನ್ನೂ ನಮೂದಿಸಬೇಕು.

ಸ್ಟೆಪ್‌ 5 - ಇದಾದ ನಂತರ "Get Linking Status" ಅನ್ನು ಕ್ಲಿಕ್‌ ಮಾಡಬೇಕು. ಆಗ ನಿಮ್ಮ ಪ್ಯಾನ್‌ - ಆಧಾರ್‌ ಲಿಂಕಿಂಗ್‌ನ ಪ್ರಸ್ತುತ ಸ್ಟೇಟಸ್‌ ವಿವರ ಸ್ಕ್ರೀನ್‌ ಮೇಲೆ ಕಾಣಿಸಲಿದೆ.

ಸ್ಟೆಪ್‌ 6 - ನಿಮ್ಮ ಪ್ಯಾನ್‌ ಮತ್ತು ಆಧಾರ್‌ ಲಿಂಕ್‌ ಆಗಿದೆಯೋ ಇಲ್ಲವೋ ಎಂಬುದು ಅಲ್ಲಿ ದೃಢವಾಗುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.