PM Modi: ಕಾಂಗ್ರೆಸ್ ಹೇಗೆ ರೈತರನ್ನ ವಂಚಿಸುತ್ತಿದೆ ಎಂಬುದಕ್ಕೆ ಕರ್ನಾಟಕವೇ ಸಾಕ್ಷಿ; ಚಿಕ್ಕಬಳ್ಳಾಪುರದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ
ಕನ್ನಡ ಸುದ್ದಿ  /  ಕರ್ನಾಟಕ  /  Pm Modi: ಕಾಂಗ್ರೆಸ್ ಹೇಗೆ ರೈತರನ್ನ ವಂಚಿಸುತ್ತಿದೆ ಎಂಬುದಕ್ಕೆ ಕರ್ನಾಟಕವೇ ಸಾಕ್ಷಿ; ಚಿಕ್ಕಬಳ್ಳಾಪುರದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

PM Modi: ಕಾಂಗ್ರೆಸ್ ಹೇಗೆ ರೈತರನ್ನ ವಂಚಿಸುತ್ತಿದೆ ಎಂಬುದಕ್ಕೆ ಕರ್ನಾಟಕವೇ ಸಾಕ್ಷಿ; ಚಿಕ್ಕಬಳ್ಳಾಪುರದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಚಿಕ್ಕಬಳ್ಳಾಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿ ಮಾತನಾಡಿರುವ ಪ್ರಧಾನಿ ಮೋದಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಹೇಗೆ ರೈತರನ್ನ ವಂಚಿಸುತ್ತಿದೆ ಎಂಬುದಕ್ಕೆ ಕರ್ನಾಟಕವೇ ಸಾಕ್ಷಿ ಎಂದಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿ ಮಾತನಾಡಿದ  ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ (Karnataka Lok Sabha Election 2024) ಪ್ರಚಾರ ಭರ್ಜರಿ ರಂಗು ಪಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಚಿಕ್ಕಬಳ್ಳಾಪುರದಲ್ಲಿಂದು (Chikkaballapur) (ಏಪ್ರಿಲ್ 20, ಶನಿವಾರ) ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರ ಪ್ರಚಾರ ಮಾಡಿದ್ದಾರೆ. ಸಾರ್ವಜನಿಕ ಸಭೆಯನ್ನು ಉದ್ದೇಶಿ ಮಾತನಾಡಿರುವ ಪ್ರಧಾನಿ ಮೋದಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

ಕಾಂಗ್ರೆಸ್ ರೈತರನ್ನು ಹೇಗೆ ವಂಚಿಸುತ್ತಿದೆ ಎಂಬುದಕ್ಕೆ ಕರ್ನಾಟಕವೇ ಬಹುದೊಡ್ಡ ಸಾಕ್ಷಿಯಾಗಿದೆ. ಸಣ್ಣ ಮತ್ತು ಅತಿಸಣ್ಣ ರೈತರಿಗೆ ನಾವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ರೈತರಿಗೆ ಕೇಂದ್ರ ಸರ್ಕಾರದಿಂದ 6,000 ರೂಪಾಯಿ ಹಾಗೂ ಕರ್ನಾಟಕ ಬಿಜೆಪಿ ಸರ್ಕಾರದಿಂದ 4000 ರೂಪಾಯಿ ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ರೈತರಿಗೆ ತನ್ನ ಪಾಲಿನ ಮೊತ್ತ 4 ಸಾವಿರ ರೂಪಾಯಿ ಕೊಡುವುದನ್ನು ನಿಲ್ಲಿಸಿದೆ ಎಂದು ಆರೋಪಿಸಿದ್ದಾರೆ.

ಮನೆಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಎಲ್ಲಾ ಸವಾಲುಗಳನ್ನು ನಾನು ನೋಡಿದ್ದೇನೆ. ಭಾರತ ಮತ್ತು ವಿಶ್ವದ ಎಲ್ಲಾ ಪ್ರಮುಖ ನಾಯಕರು ನನ್ನ ವಿರುದ್ಧ ಒಗ್ಗೂಡಿದ್ದರು. ಆದರೆ ಇಂದು ನಿಮ್ಮ ಆಶೀರ್ವಾದ ಮತ್ತು 10 ವರ್ಷಗಳಲ್ಲಿ ನೀವು ನನಗೆ ನೀಡಿದ ಸುರಕ್ಷಾ ಕಚವದಿಂದ ಎಲ್ಲಾ ಸವಾಲುಗಳನ್ನು ಎದುರಿಸಲು ಸಾಧ್ಯವಾಯಿತು. 10 ಕೋಟಿ ಮಹಿಳೆಯರನ್ನು ಸ್ವಸಹಾಯ ಸಂಘಗಳೊಂದಿಗೆ ಸಂಯೋಜಿಸಿದ್ದೇವೆ. ಈಗ ನನ್ನ ಮುಂದಿನ ಗುರಿ 3 ಕೋಟಿ ಮಹಿಳೆಯರನ್ನು ಲಖಪತಿ ದೀದಿ ಯನ್ನಾಗಿ ಮಾಡುವುದಾಗಿದೆ. ಇವರು ವಾರ್ಷಿಕ ಆದಾಯ 1 ಲಕ್ಷಕ್ಕಿಂತ ಹೆಚ್ಚು ಹಣವನ್ನು ಪಡೆಯಲಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಹಿಂದಿನ ಸರ್ಕಾರ ಕೊನೆಯ ಸಾಲಿನಲ್ಲಿ ನಿಲ್ಲಿಸಿದ್ದವರನ್ನು ಎನ್‌ಡಿಸಿ ಸರ್ಕಾರ ಮೊದಲ ಸ್ಥಾನಕ್ಕೆ ತಂದಿದೆ. 2019 ರಲ್ಲಿ ದೇಶದ ಪ್ರಥಮ ಪ್ರಜೆಯಾದ ಎಸ್‌ಸಿ ವ್ಯಕ್ತಿಯೊಬ್ಬರು, ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ 'ಪಂಚತೀರ್ಥ' ಐದು ಸ್ಥಳಗಳನ್ನು ಅಭಿವೃದ್ಧಿಪಡಿಸಿರುವ ಸರ್ಕಾರ ನಮ್ಮದು ಎಂದಿದ್ದಾರೆ.

ಚಿಕ್ಕಬಳ್ಳಾಪುರದ ಚೊಕ್ಕಹಳ್ಳಿ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆ ಬಳಿಕ ಪ್ರಧಾನಿ ಮೋದಿ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿಯ ಲೋಕಸಕ್ಷಾ ಚುನಾವಣಾ ಸಭೆಯಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕದಲ್ಲಿ ಏಪ್ರಿಲ್ 26ರ ಶುಕ್ರವಾರ ಮತ್ತು ಮೇ 7ರ ಮಂಗಳವಾರ ಎರಡು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

Whats_app_banner