Mass copy in nursing exam: 10,000 ರೂ. ಕೊಡಿ- ನೋಡ್ಕೊಂಡು ಪರೀಕ್ಷೆ ಬರೀರಿ!; ದಾವಣಗೆರೆ ಕಾಲೇಜ್ ಒಂದರಲ್ಲಿ ಇದು ನರ್ಸಿಂಗ್ ಎಕ್ಸಾಂ ಕಥೆ
Mass copy in nursing exam: ದಾವಣಗೆರೆಯ ಆಂಜನೇಯ ಬಡಾವಣೆಯ ಸಂಜೀವಿನಿ ನರ್ಸಿಂಗ್ ಕಾಲೇಜಿನಲ್ಲಿ ಸೋಮವಾರ ನರ್ಸಿಂಗ್ ಪರೀಕ್ಷೆ ನಡೆದಿತ್ತು. ಆಗ ವಿದ್ಯಾರ್ಥಿಗಳು ಸಾಮೂಹಿಕ ನಕಲಿನಲ್ಲಿ ತೊಡಗಿದ್ದರು ಎನ್ನಲಾಗಿದೆ. ಈ ಪ್ರಕರಣದ ವಿವರ ವರದಿ ಇಲ್ಲಿದೆ.
ದಾವಣಗೆರೆ: ನರ್ಸಿಂಗ್ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಆರೋಪ ಇತ್ತೀಚೆಗೆ ಸರ್ವೇ ಸಾಮಾನ್ಯ ಎಂಬಂತೆ ಪದೇಪದೆ ಕೇಳಿಬರುತ್ತಿದೆ. ಇಂದು ನಡೆದ ನರ್ಸಿಂಗ್ ಪರೀಕ್ಷೆ ಸಂದರ್ಭದಲ್ಲಿ ದಾವಣಗೆರೆಯ ಕಾಲೇಜೊಂದರಲ್ಲಿ ಸಾಮೂಹಿಕ ನಕಲು ನಡೆದಿದೆ ಎಂಬ ಆರೋಪ ವ್ಯಕ್ತವಾಗಿದೆ.
10,000 ರೂಪಾಯಿ ಕೊಡಿ, ಬುಕ್ ಇಟ್ಕೊಂಡೋ, ನೋಡ್ಕೊಂಡೋ ಪರೀಕ್ಷೆ ಬರೆಯಿರಿ ಎಂಬ ಆಫರ್ ಪದೇಪದೆ ಸಂಬಂಧಿತ ಸರ್ಕಲ್‌ನಲ್ಲಿ ಓಡಾಡುತ್ತಿರುತ್ತದೆ. ದಾವಣಗೆರೆಯಲ್ಲಿ ಇಂಥದ್ದೇ ಪ್ರಕರಣ ಬೆಳಕಿಗೆ ಬಂದಿದೆ.
ದಾವಣಗೆರೆಯ ಆಂಜನೇಯ ಬಡಾವಣೆಯ ಸಂಜೀವಿನಿ ನರ್ಸಿಂಗ್ ಕಾಲೇಜಿನಲ್ಲಿ ಸೋಮವಾರ ನರ್ಸಿಂಗ್ ಪರೀಕ್ಷೆ ನಡೆದಿತ್ತು. ಆಗ ವಿದ್ಯಾರ್ಥಿಗಳು ಸಾಮೂಹಿಕ ನಕಲಿನಲ್ಲಿ ತೊಡಗಿದ್ದರು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಕೆಲ ಸಂಘಟನೆಯವರು ಕಾಲೇಜಿಗೆ ಹೋಗಿ ಪರೀಕ್ಷಾ ಕೊಠಡಿ ನೋಡಿದ್ದರು. ಮಾಧ್ಯಮದವರೂ ಜತೆಗಿದ್ದರು.
ಮಾಧ್ಯಮಗಳ ವರದಿ ಪ್ರಕಾರ, ಕಾಲೇಜಿನಲ್ಲಿ ಅನಾಟಮಿ ಪರೀಕ್ಷೆ ನಡೆಯುತ್ತಿತ್ತು. ಸಿಬ್ಬಂದಿಯೊಬ್ಬ ಮೊಬೈಲ್‌ಗೆ ಉತ್ತರ ತರಿಸಿಕೊಂಡು ಅಲ್ಲಿದ್ದ ವಿದ್ಯಾರ್ಥಿಗಳಿಗೆ ನಕಲು ಮಾಡಲು ಹೇಳಿಕೊಡುತ್ತಿದ್ದ. ಈ ಬಗ್ಗೆ ವಿಚಾರಿಸಿದಾಗ ಅಂಥದ್ಧೇನೂ ಇಲ್ಲ ಎಂದು ಕಾಲೇಜು ಸಿಬ್ಬಂದಿ ಮಾಧ್ಯಮ ಪ್ರತಿನಿಧಿಗಳಿಗೆ ಸ್ಪಷ್ಟಪಡಿಸಿದ್ದಾರೆ.
ಆದರೆ, ವಿದ್ಯಾರ್ಥಿಗಳ ಪೈಕಿ ಕೆಲವರು ನೀಡಿದ ಮಾಹಿತಿ ಪ್ರಕಾರ, ಪ್ರತಿಯೊಬ್ಬರಿಂದ ತಲಾ 10,000 ರೂಪಾಯಿ ಪಡೆದು ನಕಲು ಮಾಡಲು ಕಾಲೇಜಿನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಹಣ ನೀಡಿದ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿದ್ದಾರೆ. ಸಾಮಾನ್ಯ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಪರೀಕ್ಷೆ ಬರೆಯುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟ ಇಲಾಖೆ ತನಿಖೆ ನಡೆಸಬೇಕು ಎಂದು ಕೆಲವು ಸಂಘಟನೆಯವರು ಆಗ್ರಹಿಸಿದ್ದಾರೆ.
ಗಮನಿಸಬಹುದಾದ ಇತರೆ ವಿಚಾರಗಳು
Winter Special Tea: ಫುಲ್ ಚಳಿ ಅಲ್ವಾ? ಈ ಚಳಿಗೊಂದು ಚಹಾ ಸಿಕ್ಕರೆ!; ಈ ಚಳಿಗಾಲದಲ್ಲಿ ಈ 8 ಸ್ಪೆಷಲ್ ಟೀ ಟ್ರೈ ಮಾಡಿ!
Winter Special Tea: ಚಳಿಗಾಲ ಶುರುವಾಗಿದೆ. ಈಗ ಮುಂಜಾನೆ ಎದ್ದು ಹೊರಗೆ ಬಂದರೆ ಫುಲ್ ಚಳಿ ಅಲ್ವ? ಈ ಚಳಿಯಲ್ಲಿ ಒಂದು ಕಪ್ ಚಹಾ ಬೇಕು ಅಂತ ಅನ್ನಿಸೋದು ಸಹಜ. ಅಂದ ಹಾಗೆ ಈ ಸಲ ಚಳಿಗಾಲದಲ್ಲಿ ನೀವು ಈ 8 ಸ್ಪೆಷಲ್ ಚಹಾಗಳ ಸ್ವಾದ ಸ್ವವಿಯಲು ಪ್ರಯತ್ನಿಸಿ! ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ.
Re-KYC RBI rule and process: ಮರು ಕೆವೈಸಿ ಮಾಡಿಸಲು ಬ್ಯಾಂಕ್‌ಗೆ ಹೋಗಬೇಕಾಗಿಲ್ಲ; ಆರ್‌ಬಿಐ ನಿಯಮ ಏನು ಹೇಳುತ್ತೆ ಚೆಕ್ ಮಾಡಿ
Re-KYC RBI rule and process: ಮರು-ಕೆವೈಸಿ ಮಾಡಲು (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಮಾಡಲು ಬ್ಯಾಂಕ್‌ಗೆ ಭೇಟಿ ನೀಡುವ ಅಗತ್ಯವಿಲ್ಲ. ವಿಳಾಸ ಬದಲಾವಣೆಯ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಪ್ರಕ್ರಿಯೆಗಳನ್ನು ಆನ್‌ಲೈನ್‌ನಲ್ಲಿ ಇದನ್ನು ಮಾಡಬಹುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದರು. ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ.
Deadly Accident Near Mandya: ಸ್ವಿಫ್ಟ್ ಮೇಲೆರಗಿದ ಇನ್ನೋವಾ; ಭೀಕರ ಅಪಘಾತದಲ್ಲಿ ಐವರ ದುರ್ಮರಣ- ಅಪಘಾತ ಸ್ಥಳದ ಫೋಟೋಸ್ ಇಲ್ಲಿವೆ
Deadly Accident Near Mandya: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಎ.ನಾಗತಿಹಳ್ಳಿ ಸಮೀಪ ಇನ್ನೋವಾ ಮತ್ತು ಸ್ವಿಫ್ಟ್ ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ದುರ್ಮರಣಕ್ಕೀಡಾಗಿದ್ದಾರೆ. ಐವರು ಗಂಭೀರ ಗಾಯಗೊಂಡಿದ್ದಾರೆ. ಈ ಅಪಘಾತದ ಫೋಟೋಸ್ ಮತ್ತು ವರದಿ ಇಲ್ಲಿದೆ. ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ.