PayCM Campaign: ಬೆಂಗಳೂರು ತುಂಬ ಪೇಸಿಎಂ ಅಭಿಯಾನ!; ಸಾಮಾಜಿಕ ತಾಣದಲ್ಲಿ ಪ್ರೊಮೋಟ್‌ ಮಾಡ್ತಿದೆ ಕಾಂಗ್ರೆಸ್‌; ಇಲ್ಲಿವೆ ಫೋಟೋ, ವಿಡಿಯೋ ಲಿಂಕ್
ಕನ್ನಡ ಸುದ್ದಿ  /  ಕರ್ನಾಟಕ  /  Paycm Campaign: ಬೆಂಗಳೂರು ತುಂಬ ಪೇಸಿಎಂ ಅಭಿಯಾನ!; ಸಾಮಾಜಿಕ ತಾಣದಲ್ಲಿ ಪ್ರೊಮೋಟ್‌ ಮಾಡ್ತಿದೆ ಕಾಂಗ್ರೆಸ್‌; ಇಲ್ಲಿವೆ ಫೋಟೋ, ವಿಡಿಯೋ ಲಿಂಕ್

PayCM Campaign: ಬೆಂಗಳೂರು ತುಂಬ ಪೇಸಿಎಂ ಅಭಿಯಾನ!; ಸಾಮಾಜಿಕ ತಾಣದಲ್ಲಿ ಪ್ರೊಮೋಟ್‌ ಮಾಡ್ತಿದೆ ಕಾಂಗ್ರೆಸ್‌; ಇಲ್ಲಿವೆ ಫೋಟೋ, ವಿಡಿಯೋ ಲಿಂಕ್

PAYCM Campaign: ರಾಜ್ಯ ರಾಜಧಾನಿ ಬೆಂಗಳೂರಿನ ತುಂಬ ಪೇಸಿಎಂ ಪೋಸ್ಟರ್‌ ಅಭಿಯಾನ (PAYCM Campaign) ಶುರುವಾಗಿದೆ. ಇದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖವನ್ನು ಹೋಲುವ ಮುಖವೂ ಇದೆ. ಇದೇ ರೀತಿಯ ಪೋಸ್ಟರ್‌ - '40% ಸಿಎಂಗೆ ಸ್ವಾಗತ' - ಕಳೆದ ವಾರ ಹೈದರಾಬಾದ್‌ನಲ್ಲಿ ಬಿಜೆಪಿ ಆಯೋಜಿಸಿದ್ದ ಹೈದರಾಬಾದ್ 'ವಿಮೋಚನಾ ದಿನ' ಕಾರ್ಯಕ್ರಮದ ವೇಳೆ ಕಾಣಿಸಿದ್ದವು.

<p>ಬೆಂಗಳೂರಿನ ತುಂಬ ಪೇಸಿಎಂ ಪೋಸ್ಟರ್‌ ಅಭಿಯಾನ (PAYCM Campaign) ಶುರುವಾಗಿದೆ. ರಸ್ತೆ ಬದಿ ಗೋಡೆ ಮತ್ತು ಡಸ್ಟ್‌ ಬಿನ್‌ ಸೇರಿ ಎಲ್ಲೆಡೆ ಈ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಬಿಬಿಎಂಪಿ ಸಿಬ್ಬಂದಿ ಮತ್ತು ಸರ್ಕಾರದ ಪ್ರತಿನಿಧಿಗಳು ಈ ಪೋಸ್ಟರ್‌ ತೆರವು ಕಾರ್ಯಾಚರಣೆ ನಡೆಸಿದ ವಿಡಿಯೋ ಕೂಡ ಟ್ವಿಟರ್‌ನಲ್ಲಿ ವೈರಲ್‌ ಆಗಿವೆ.&nbsp;</p>
ಬೆಂಗಳೂರಿನ ತುಂಬ ಪೇಸಿಎಂ ಪೋಸ್ಟರ್‌ ಅಭಿಯಾನ (PAYCM Campaign) ಶುರುವಾಗಿದೆ. ರಸ್ತೆ ಬದಿ ಗೋಡೆ ಮತ್ತು ಡಸ್ಟ್‌ ಬಿನ್‌ ಸೇರಿ ಎಲ್ಲೆಡೆ ಈ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಬಿಬಿಎಂಪಿ ಸಿಬ್ಬಂದಿ ಮತ್ತು ಸರ್ಕಾರದ ಪ್ರತಿನಿಧಿಗಳು ಈ ಪೋಸ್ಟರ್‌ ತೆರವು ಕಾರ್ಯಾಚರಣೆ ನಡೆಸಿದ ವಿಡಿಯೋ ಕೂಡ ಟ್ವಿಟರ್‌ನಲ್ಲಿ ವೈರಲ್‌ ಆಗಿವೆ.&nbsp; (Twitter)

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ಟಾರ್ಗೆಟ್‌ ಮಾಡಿದ ʻPAYCM Campaignʼ ಬುಧವಾರ ದೇಶದ ಗಮನಸೆಳೆದಿದೆ. ಕಾಂಗ್ರೆಸ್‌ ಪಕ್ಷ ಈ ಅಭಿಯಾನವನ್ನು ಪ್ರೊಮೋಟ್‌ ಮಾಡುತ್ತಿದ್ದು, ಸಾಮಾಜಿಕ ತಾಣಗಳಲ್ಲೂ ಇದು ಸದ್ದು ಮಾಡಿದೆ.

ಪೇಸಿಎಂ ಶೀರ್ಷಿಕೆಯ ಪೋಸ್ಟರ್‌ಗಳು ಯುಪಿಐ ಪಾವತಿ ಆಪ್‌ ಪೇಟಿಎಂನ ಬಣ್ಣ ಮತ್ತು ಅದರ ಲೋಗೋವನ್ನು ಹೋಲುತ್ತಿವೆ. ಈ ಪೋಸ್ಟರ್‌ ಮೇಲೆ ಪೇಸಿಎಂ ಎಂಬ ಶೀರ್ಷಿಕೆ ಇದ್ದು, ಕ್ಯೂಆರ್‌ ಕೋಡ್‌ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖವನ್ನು ಹೋಲುವ ಚಿತ್ರವಿದೆ.

ಮಾಧ್ಯಮ ವರದಿಗಳ ಪ್ರಕಾರ, ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ಅದು ಪ್ರತಿಪಕ್ಷ ಕಾಂಗ್ರೆಸ್ ಸ್ಥಾಪಿಸಿದ '40 ಪರ್ಸೆಂಟ್‌ ಸರ್ಕಾರ' ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ.

ರಾಜ್ಯದ ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರುಗಳನ್ನು ಸ್ವೀಕರಿಸಲು ವೆಬ್‌ಸೈಟ್ ಅನ್ನು ಸ್ಥಾಪಿಸಲಾಗಿದೆ. ಪೋಸ್ಟರ್‌ಗಳಿಗೆ ಕಾಂಗ್ರೆಸ್ ಹೊಣೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಈ ಅಭಿಯಾನವನ್ನು ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಸೋಷಿಯಲ್‌ ಮೀಡಿಯಾಗಳಲ್ಲಿ ಶೇರ್‌ ಮಾಡಿಕೊಂಡು ಪ್ರೊಮೋಟ್‌ ಮಾಡುತ್ತಿರುವುದು ಕಂಡುಬಂದಿದೆ.

ಕರ್ನಾಟಕ ಕಾಂಗ್ರೆಸ್‌ ಅಧಿಕೃತ ಟ್ವಿಟರ್‌ ಖಾತೆಯಲ್ಲಿದ್ದ ಟ್ವೀಟ್‌ ಹೀಗಿದೆ ನೋಡಿ -

ಕರ್ನಾಟಕ ಕಾಂಗ್ರೆಸ್‌ ಟ್ವಿಟರ್‌ ಖಾತೆಯಲ್ಲಿ ಈ ರೀತಿ ಯುವಜನರ ವಿಡಿಯೋ ಬೈಟ್‌ಗಳ ಸರಣಿ ಗೋಚರಿಸಿದ್ದು, 40% ಸರ್ಕಾರದ ವಿರುದ್ಧ ದೂರು ಕೊಡಿ ಎಂಬ ಸಾಲುಗಳು, ಮಾತುಗಳಿವೆ.

ಸದನದಲ್ಲೂ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಪ್ರಿಯಾಂಕ್‌ ಖರ್ಗೆ, ಟ್ವಿಟರ್‌ ಖಾತೆಯಲ್ಲಿ "ಈ #PayCM ಪೋಸ್ಟರ್‌ಗಳನ್ನು ತೆಗೆದುಹಾಕಲು ಸರ್ಕಾರಕ್ಕೆ ಸಾಧ್ಯವಾಗಬಹುದು. ಆದರೆ ಅವರು ತಮ್ಮ ಭ್ರಷ್ಟಾಚಾರವನ್ನು ಕರ್ನಾಟಕದ ಜನರ ಎದುರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ?

ರಾಜ್ಯದಲ್ಲಿ ಸಿಎಂ ಕುರ್ಚಿ (2500 ಕೋಟಿ ರೂ.) ಸೇರಿ ಎಲ್ಲವೂ ಸರಿಯಾದ ಬೆಲೆಗೆ ಮಾರಾಟವಾಗಿದೆ." ಎಂದು ಟ್ವೀಟ್‌ ಮಾಡಿ, ಪೋಸ್ಟರ್‌ ತೆರವಿನ ವಿಡಿಯೋ ಶೇರ್‌ ಮಾಡಿದ್ದಾರೆ.

ವಿಧಾನ ಮಂಡಲ ಕಲಾಪದಲ್ಲೂ ಪ್ರತಿ ಪಕ್ಷ ಕಾಂಗ್ರೆಸ್‌ ಸದಸ್ಯರು ಆಡಳಿತಾರೂಢ ಬಿಜೆಪಿ ವಿರುದ್ಧ ಸಮರ ಸಾರಿದೆ. 40 ಪರ್ಸೆಂಟ್‌ ಸರ್ಕಾರ ಎಂಬ ಅಭಿಯಾನವನ್ನೇ ಶುರುಮಾಡಿದೆ.

ರಾಜ್ಯದ ಅನುದಾನಿತ ಮೂಲಸೌಕರ್ಯ ಯೋಜನೆಗಳ ಟೆಂಡರ್ ಮೊತ್ತದ ಶೇಕಡಾ 40 ರಷ್ಟು ಹಣವನ್ನು ಬಿಜೆಪಿ ನಾಯಕರು ಮತ್ತು ಅಧಿಕಾರಿಗಳು ಲಂಚವಾಗಿ ತೆಗೆದುಕೊಳ್ಳುತ್ತಾರೆ ಎಂದು ಹೇಳುವ ಕರ್ನಾಟಕದ ಗುತ್ತಿಗೆದಾರರ ಆರೋಪಗಳಿಗೆ '40 ಪರ್ಸೆಂಟ್ ಸರ್ಕಾರ' ಟೀಕೆ ಶುರುವಾಗಿದೆ.

ಇದೇ ರೀತಿಯ ಪೋಸ್ಟರ್‌ಗಳು ಅಂದರೆ '40% ಸಿಎಂಗೆ ಸ್ವಾಗತ' - ಕಳೆದ ವಾರ ಹೈದರಾಬಾದ್‌ನಲ್ಲಿ ಗೋಚರಿಸಿತ್ತು. ಅಲ್ಲಿ ಹೈದರಾಬಾದ್‌ ವಿಮೋಚನಾ ದಿನ ಕಾರ್ಯಕ್ರಮವನ್ನು ಬಿಜೆಪಿ ಏರ್ಪಡಿಸಿತ್ತು. ಅದಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೋಗಿದ್ದರು. ಆಗ ಅಲ್ಲಿ ಗೋಚರಿಸಿದ್ದ ಹೋರ್ಡಿಂಗ್‌ನಲ್ಲಿ ವೆಲ್‌ಕಮ್‌ ಟು 40% CM ಎಂಬ ದಪ್ಪ ಅಕ್ಷರಗಳ ಬರಹ ಕಾಣಿಸಿತ್ತು. ಅದರಲ್ಲಿ C ಮತ್ತು M ಅಕ್ಷರಗಳ ನಡುವೆ ಇನ್ನೂ ಕೆಲವು ಪುಟ್ಟ ಅಕ್ಷರಗಳಿದ್ದವು. ComMission ಎಂದು ಸಮೀಪ ಹೋದರೆ ಗೋಚರಿಸುತ್ತಿತ್ತು.

ಈ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಇದು ವ್ಯವಸ್ಥಿತ ಪಿತೂರಿ. ತೆಲಂಗಾಣ ಸರ್ಕಾರವು 'ಮುಖ್ಯಮಂತ್ರಿಯ ವಿರುದ್ಧ ಇಂತಹ ಆಧಾರರಹಿತ ಆರೋಪಗಳಿಗೆ' ಅವಕಾಶ ಮಾಡಿಕೊಟ್ಟಿದೆ ಎಂದು ಟೀಕಿಸಿದ್ದರು.

ಇದಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ವ್ಯಕ್ತವಾದ ಟೀಕೆ ಹೀಗಿದೆ ನೋಡಿ

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಥವಾ ಕರ್ನಾಟಕ ಸಿಎಂ ಎಂದು ನಮೂದಿಸದೇ ಇರುವ ಒಂದು ಹೋರ್ಡಿಂಗ್‌ ವಿಚಾರವಾಗಿ ಬಸವರಾಜ ಬೊಮ್ಮಾಯಿ ಅವರು ಯಾಕೆ ಅಷ್ಟೊಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು? ಅಂದರೆ ಕರ್ನಾಟಕ ಬಿಜೆಪಿ ಸರ್ಕಾರ 40% ಸರ್ಕಾರವೇ ಹಾಗಾದರೆ? ಎಂದು ಕಿಚಾಯಿಸುವ ಟ್ವೀಟ್‌ಗಳೂ ಕಂಡುಬಂದಿವೆ.

Whats_app_banner