ಕನ್ನಡ ಸುದ್ದಿ  /  ಕರ್ನಾಟಕ  /  Modi Road Show: ಹುಬ್ಬಳ್ಳಿಯಲ್ಲಿ ಮೋದಿ ರೋಡ್‌ ಶೋ ವೇಳೆ ಭದ್ರತಾ ಲೋಪ: ಪ್ರಧಾನಿಗೆ ಹೂಮಾಲೆ ಹಾಕಲು ಬಂದ ಯುವಕ!

Modi Road Show: ಹುಬ್ಬಳ್ಳಿಯಲ್ಲಿ ಮೋದಿ ರೋಡ್‌ ಶೋ ವೇಳೆ ಭದ್ರತಾ ಲೋಪ: ಪ್ರಧಾನಿಗೆ ಹೂಮಾಲೆ ಹಾಕಲು ಬಂದ ಯುವಕ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಬ್ಬಳ್ಳಿಯ ರೋಡ್‌ ಶೋ ವೇಳೆ ಭದ್ರತಾ ಲೋಪ ಕಂಡುಬಂದಿದ್ದು, ಯುವಕನೋರ್ವ ಪ್ರಧಾನಿ ಮೋದಿ ಅವರಿಗೆ ಹೂಮಾಲೆ ಹಾಕಲು ಭದ್ರತಾ ನಿಯಮಗಳನ್ನು ಗಾಳಿಗೆ ತೂರಿದ ಘಟನೆ ನಡೆದಿದೆ.

ಮೋದಿಗೆ ಹೂಮಾಲೆ ಹಾಕಲು ಬಂದ ಯುವಕ
ಮೋದಿಗೆ ಹೂಮಾಲೆ ಹಾಕಲು ಬಂದ ಯುವಕ (ANI)

ಹುಬ್ಬಳ್ಳಿ: ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆಗೆ ಹುಬ್ಬಳ್ಳಿಗೆ ಆಗಮಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಹುಬ್ಬಳ್ಳಿಯಲ್ಲಿ ಭರ್ಜರಿ ರೋಡ್‌ ಶೋ ನಡೆಸಿದ್ದಾರೆ.

ಆದರೆ ಪ್ರಧಾನಿ ಮೋದಿ ಅವರ ರೋಡ್‌ ಶೋ ವೇಳೆ ಭದ್ರತಾ ಲೋಪ ಕಂಡುಬಂದಿದ್ದು, ಯುವಕನೋರ್ವ ಪ್ರಧಾನಿ ಮೋದಿ ಅವರಿಗೆ ಹೂಮಾಲೆ ಹಾಕಲು ಭದ್ರತಾ ನಿಯಮಗಳನ್ನು ಗಾಳಿಗೆ ತೂರಿದ ಘಟನೆ ನಡೆದಿದೆ.

ಮೋದಿ ಅವರ ರೋಡ್‌ ಶೋ ವೇಳೆ, ಭದ್ರತೆಯನ್ನು ಉಲ್ಲಂಘಿಸಿ ಪ್ರಧಾನಿ ಕಾರಿನತ್ತ ಓಡಿಬಂದ ಯುವಕ, ಮೋದಿ ಅವರಿಗೆ ಹೂಮಾಲೆ ಹಾಕಲು ಯತ್ನಿಸಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಯುವಕನನ್ನ ತಡೆದು, ಹೂಮಾಲೆಯನ್ನು ಕಸಿದುಕೊಂಡಿದ್ದಾರೆ.

ಈ ಯುವಕ ಬಿಗಿ ಭದ್ರತೆಯ ಸರಪಳಿಯನ್ನು ಮುರಿದು ಒಳಗೆ ನುಗ್ಗಿದ್ದು ಹೇಗೆ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಪ್ರಧಾನಿ ಮೋದಿ ರೋಡ್‌ ಶೋಗಾಗಿ ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಆದರೂ ಭದ್ರತಾ ಸರಪಳಿಯನ್ನು ಮುರಿದು ಒಳನುಗ್ಗಿದ ಈ ಯುವಕ, ಹೂಮಾಲೆ ಹಾಕಲು ಪ್ರಧಾನಿ ಮೋದಿ ಅವರ ಅತ್ಯಂತ ಸಮೀಪಕ್ಕೆ ಹೋಗಿದ್ದಾನೆ.

ಕೂಡಲೇ ಕಾರ್ಯಪ್ರವೃತ್ತರಾದ ಪ್ರಧಾನಿ ಮೋದಿ ಅವರ ಭದ್ರತಾ ಸಿಬ್ಬಂದಿ, ಯುವಕನನ್ನು ತಡೆದಿದ್ದಾರೆ. ಅಲ್ಲದೇ ಅವನಿಂದ ಹೂಮಾಲೆಯನ್ನು ಕಸಿದುಕೊಂಡಿದ್ದಾರೆ.

ಆದರೆ ಹೂಮಾಲೆಯನ್ನು ಬಿಸಾಡದಂತೆ ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಿದ ಪ್ರಧಾನಿ ಮೋದಿ, ಯುವಕ ನೀಡಿದ ಹೂಮಾಲೆಯನ್ನು ತಮ್ಮ ಕಾರಿನ ಬಾನೆಟ್‌ ಮೇಲೆ ಇಟ್ಟಿರುವ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿದೆ.

ಪೊಲೀಸರ ಭದ್ರಕೋಟೆಯನ್ನು ಬೇಧಿಸಿ ಈ ಯುವಕ ಒಳಗೆ ನುಗ್ಗಿದ್ದು ಹೇಗೆ ಎಂಬ ಚರ್ಚೆ ಇದೀಗ ಆರಂಭವಾಗಿದ್ದು, ಪ್ರಧಾನಿ ಮೋದಿ ಅವರ ಭದ್ರತಾ ಸಿಬ್ಬಂದಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಇಂದು ಸಂಜೆ ಪ್ರಧಾನಿ ಮೋದಿ ಅವರು ಹುಬ್ಬಳ್ಳಿಯಲ್ಲಿ 29ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡಲಿದ್ದು, ಅದಕ್ಕೂ ಮೊದಲು ವಿಮಾನ ನಿಲ್ದಾಣದಿಂದ ಸಮಾರಂಭ ನಡೆಯಲಿರುವ ರೈಲ್ವೆ ಕ್ರೀಡಾ ಮೈದಾನದವರೆಗೆ ರೋಡ್ ಶೋ ನಡೆಸಿದರು.

ಪ್ರಧಾನಿ ಮೋದಿ ಅವರಿಗೆ ಒಟ್ಟು ಐದು ಹಂತದ ಭದ್ರತೆಯನ್ನು ಒದಗಿಸಲಾಗುತ್ತದೆ. ಐದನೇ ಮತ್ತು ಕೊನೆಯ ಭದ್ರತಾ ವ್ಯವಸ್ಥೆಯು, ರಾಜ್ಯ ಪೊಲೀಸರ ಜವಾಬ್ದಾರಿಯಾಗಿರುತ್ತದೆ.

ಕಳೆದ ವರ್ಷ ಪಂಜಾಬ್ ಭೇಟಿ ವೇಳೆ ಪ್ರಧಾನಿ ಮೋದಿ ಅವರ ಭದ್ರತೆಯನ್ನು ಉಲ್ಲಂಘಿಸಲಾಗಿತ್ತು. ಜನವರಿ 5 ರಂದು ಚುನಾವಣಾ ಸಮಾವೇಶದಲ್ಲಿ ಭಾಗಿಯಾಗಲು ಫಿರೋಜ್‌ಪುರಕ್ಕೆ ತೆರಳುತ್ತಿದ್ದಾಗ, ಪ್ರತಿಭಟನಾನಿರತ ರೈತರ ದಿಗ್ಬಂಧನದಿಂದಾಗಿ ಪ್ರಧಾನಿ ಮೋದಿ 20 ನಿಮಿಷಗಳ ಕಾಲ ಫ್ಲೈಓವರ್‌ನಲ್ಲಿ ಕಾಯಬೇಕಾಗಿ ಬಂದಿತ್ತು.

ಸಂಬಂಧಿತ ಸುದ್ದಿ

Unknown vehicle found in hubli: ಹುಬ್ಬಳ್ಳಿಯಲ್ಲಿ ಪ್ರಧಾನಿ‌ ಮೋದಿ ಸಂಚರಿಸುವ ಮಾರ್ಗದಲ್ಲಿ ಅಪರಿಚಿತ ವಾಹನ ಪತ್ತೆ

ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಚರಿಸಲಿರುವ ಮಾರ್ಗದಲ್ಲಿ ಭದ್ರತಾ ಸಿಬ್ಬಂದಿ ನಡೆಸುತ್ತಿದ್ದ ತಪಾಸಣೆ ವೇಳೆ ಅಪರಿಚಿತ ವಾಹನವೊಂದು ಪತ್ತೆಯಾಗಿದ್ದು, ಕೆಲಕಾಲ ಆತಂಕವನ್ನು ಮೂಡಿಸಿತ್ತು. ಹೊಸೂರ್ ಕ್ರಾಸ್ ನಲ್ಲಿ ಅಪರಿಚಿತ ಕಾರು ಪತ್ತೆಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

National Youth Festival: ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆ; ಯುವಕರಲ್ಲಿ ಉತ್ಸಾಹ ತುಂಬಿಲಿದೆ: ಸಿಎಂ

ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸುವುದರಿಂದ ದೇಶ ಹಾಗೂ ರಾಜ್ಯದ ಯುವಕರಲ್ಲಿ ಹುರುಪು ಹಾಗೂ ಉತ್ಸಾಹ ತುಂಬಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

IPL_Entry_Point