Kannada News  /  Karnataka  /  Vishweshwara Bhat Pallathadka: Vedabramha Sri Vishweshwara Bhat Pallathadka Felicitated At Second Annual Day Function Of Neerchal Vedapathashale
ನೀರ್ಚಾಲು ಶ್ರೀಶ್ರೀಶ್ರೀ ಚಂದ್ರಶೇಖರೇಂದ್ರ ಸರಸ್ವತಿ ವೇದಪಾಠಶಾಲೆಯ 2ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶ್ರೌತಿ ಯಜ್ಞಪತಿ ಭಟ್ ಗೋಕರ್ಣ ಮಾತನಾಡಿದರು.
ನೀರ್ಚಾಲು ಶ್ರೀಶ್ರೀಶ್ರೀ ಚಂದ್ರಶೇಖರೇಂದ್ರ ಸರಸ್ವತಿ ವೇದಪಾಠಶಾಲೆಯ 2ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶ್ರೌತಿ ಯಜ್ಞಪತಿ ಭಟ್ ಗೋಕರ್ಣ ಮಾತನಾಡಿದರು.

Vishweshwara Bhat Pallathadka: ವೇದಕ್ಕಾಗಿ ಜೀವನ ಮೀಸಲಿಟ್ಟ ಮಹಾನ್ ಆಚಾರ್ಯರು ವಿಶ್ವೇಶ್ವರ ಭಟ್ಟ ಪಳ್ಳತ್ತಡ್ಕ - ಶ್ರೌತಿ ಯಜ್ಞಪತಿ ಭಟ್

17 January 2023, 19:21 ISTHT Kannada Desk
17 January 2023, 19:21 IST

Vishweshwara Bhat Pallathadka: ವೇದಬ್ರಹ್ಮ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟರ ಶಿಷ್ಯವೃಂದದ ವತಿಯಿಂದ ನೀರ್ಚಾಲು ಶ್ರೀಶ್ರೀಶ್ರೀ ಚಂದ್ರಶೇಖರೇಂದ್ರ ಸರಸ್ವತಿ ವೇದಪಾಠಶಾಲೆಯ 2ನೇ ವರ್ಷದ ವಾರ್ಷಿಕೋತ್ಸವ ಸೋಮವಾರ ನಡೆಯಿತು.

ಬದಿಯಡ್ಕ: ಶಿಷ್ಯರನ್ನು ಸಮರ್ಥರನ್ನಾಗಿಸುವ ಸಾಮರ್ಥ್ಯವಿರುವವರು ಮಾತ್ರವೇ ಆಚಾರ್ಯರು. ಅಂತಹ ಸ್ಥಾನ ಎಲ್ಲರಿಗೂ ಸಿಗದು. ಅನೇಕ ಕನಸುಗಳನ್ನು ಹೊತ್ತುಕೊಂಡು ವೇದಪಾಠಶಾಲೆಯನ್ನು ನಿರಂತರ ಮುನ್ನಡೆಸಬೇಕೆಂಬ ಮನೋಭಾವವನ್ನು ಹೊಂದಿದ, ಜೀವನವನ್ನು ವೇದಕ್ಕಾಗಿ ಮೀಸಲಿಟ್ಟ ವಿಶ್ವೇಶ್ವರ ಭಟ್ಟರ ಕಠಿಣ ಪರಿಶ್ರಮ ಇಂದು ಅವರನ್ನು ಆ ಸ್ಥಾನದಲ್ಲಿ ನಿಲ್ಲಿಸಿದೆ ಎಂದು ಶ್ರೌತಿ ಯಜ್ಞಪತಿ ಭಟ್ ಗೋಕರ್ಣ ಹೇಳಿದರು.

ಟ್ರೆಂಡಿಂಗ್​ ಸುದ್ದಿ

ವೇದಬ್ರಹ್ಮ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟರ ಶಿಷ್ಯವೃಂದದ ವತಿಯಿಂದ ನೀರ್ಚಾಲು ಶ್ರೀಶ್ರೀಶ್ರೀ ಚಂದ್ರಶೇಖರೇಂದ್ರ ಸರಸ್ವತಿ ವೇದಪಾಠಶಾಲೆಯ 2ನೇ ವರ್ಷದ ವಾರ್ಷಿಕೋತ್ಸವ ಸೋಮವಾರ ನಡೆಯಿತು. ಈ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ವೇದಾನುಷ್ಠಾನವನ್ನು ಮಾಡಿ ವೇದದಲ್ಲಿ ಹೇಳಲ್ಪಟ್ಟ ಕಲ್ಪೋಕ್ತ ಫಲಗಳನ್ನು ನಾವು ಪಡೆಯಬೇಕು. ಅವಿಚ್ಛಿನ್ನವಾಗಿ ಈ ವೇದಪಾಠ ಶಾಲೆ ಮುನ್ನಡೆಯಬೇಕೆಂಬ ವಿಶ್ವೇಶ್ವರ ಭಟ್ಟರ ಸಂಕಲ್ಪ ಸಾಕಾರಗೊಳ್ಳಲಿ ಎಂದು ಶುಭ ಹಾರೈಸಿದರು.

ವೇದಬ್ರಹ್ಮ ಪಳ್ಳತ್ತಡ್ಕ ವಿಶ್ವೇಶ್ವರ ಭಟ್, ಋಷಿಗೋತ್ರ ಪರಂಪರೆೆ ಹೊಂದಿರುವ ಸಮಾಜ, ಸಮುದಾಯ ನಮ್ಮದಾಗಿದೆ. ನಮ್ಮೂರಿನಲ್ಲಿ ಸಂಪೂರ್ಣ ಅಧ್ಯಯನ ಕೇಂದ್ರ ಇರಬೇಕು ಎಂಬ ಮಹಾಸಂಕಲ್ಪವು ಸಾಕಾರಗೊಳ್ಳುವತ್ತ ಶಿಷ್ಯವೃಂದದವರ ಶ್ರಮ ಮುಂದುವರಿಯುತ್ತಿದೆ. ಇದು ಸಂತಸದ ವಿಚಾರ. ಮಂತ್ರವೈಭವ ಇಲ್ಲಿ ಇಂದು ನಡೆದಿದೆ. ಮುಂದೆಯೂ ನಡೆಯುತ್ತಿರಲು ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ ಎಂದು ಶಿಷ್ಯಂದಿರನ್ನು ಆಶೀರ್ವದಿಸಿದರು. ಬೆಳಗ್ಗೆ ಶತರುದ್ರ ಜಪ ಹೋಮ ನಡೆಯಿತು. ವೇದಮೂರ್ತಿ ಅಮೈ ಅನಂತಕೃಷ್ಣ ಭಟ್ ನಿರೂಪಿಸಿದರು. ವೇದಮೂರ್ತಿ ಶಂಭಟ್ಟ ಚಾವಡಿಬಾಗಿಲು, ಶಿಷ್ಯಂದಿರು, ವೈದಿಕರು ಸಹಕರಿಸಿದರು.

ವೇದಪಾಠಶಾಲೆಗೆ ನಿರಂತರ ಸಹಕಾರ ನೀಡುತ್ತಿರುವ ಗೀತಾ ಮಾಮಿ ಹಾಗೂ ರಾಮಸ್ವಾಮಿ ದಂಪತಿಗಳು, ವೇದಬ್ರಹ್ಮ ಜಯರಾಮ ಭಟ್ ಬೆಂಗಳೂರು ಅವರನ್ನೂ ಇದೇ ವೇಳೆ ಗೌರವಿಸಲಾಯಿತು.

ಗಮನಿಸಬಹುದಾದ ಇತರೆ ಸ್ಥಳೀಯ ಸುದ್ದಿಗಳು

Cyclist Asha Malaviya felicitated: ಸೈಕ್ಲಿಸ್ಟ್ ಆಶಾಳಿಗೆ ಧೈರ್ಯ, ಆತ್ಮವಿಶ್ವಾಸವೇ ಸಂಗಡಿಗರು- ತೇಜಸ್ವಿನಿ ಅನಂತಕುಮಾರ್‌

Cyclist Asha Malaviya felicitated: ಮಹಿಳಾ ರಕ್ಷಣೆ ಮತ್ತು ಸಬಲೀಕರಣದ ವಿಷಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಒಂಟಿಯಾಗಿ ಸೈಕ್ಲಿಂಗ್‌ ನಡೆಸುತ್ತಿರುವ ಭೋಪಾಲದ ಯುವತಿ ಆಶಾ ಮಾಳವೀಯ ಅವರನ್ನು ಬೆಂಗಳೂರಿನ ಅದಮ್ಯ ಚೇತನದಲ್ಲಿ ಮಂಗಳವಾರ ಸನ್ಮಾನಿಸಲಾಯಿತು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Vindhya E-Infomedia: ಅಂಗವಿಕಲರ ಬಾಳಿನ ಬೆಳಕು ವಿಂಧ್ಯಾ; ಸಂಸ್ಥೆಗೆ ಗ್ರೇಟ್‌ ಪ್ಲೇಸ್‌ ಟು ವರ್ಕ್‌ನ ಗರಿ

ಅಂಗವಿಕಲರ ಶೈಕ್ಷಣಿಕ ಅರ್ಹತೆ, ಪ್ರತಿಭೆ, ಸಾಮರ್ಥ್ಯಕ್ಕೆ ಅನುಗುಣವಾಗಿ ಸೂಕ್ತ ಉದ್ಯೋಗ ಒದಗಿಸುವವರಾರು? ಎಲ್ಲ ಅರ್ಹತೆ ಇದ್ದರೂ ಅಂಗವೈಕಲ್ಯದ ಕಾರಣ ಕೆಲಸ ಕೊಡದೆ ತಿರಸ್ಕರಿಸಲಾಗುತ್ತದೆ. ಆದರೆ, ಇತರ ಸಾಮಾನ್ಯರಂತೆಯೇ ಮತ್ತು ಅವರಿಗಿಂತ ಹೆಚ್ಚು ಕ್ರಿಯಾಶೀಲರಾಗಿ ಅಂಗವಿಕಲರು ಕೆಲಸ ಮಾಡಬಹುದು ಎಂಬುದನ್ನು ತಮ್ಮ ವಿಂಧ್ಯಾ ಇ ಇನ್ಫೋಮೀಡಿಯಾ ಸಂಸ್ಥೆ ಮೂಲಕ ತೋರಿಸಿಕೊಟ್ಟಿರುವ ಪವಿತ್ರಾ ವೈ.ಎಸ್‌. ಅವರ ಉದ್ಯಮಸಾಹಸ ಪ್ರೇರಣೆ ನೀಡುವಂಥದ್ದು. ರಾಷ್ಟ್ರ ಮಟ್ಟದ ಸಮೀಕ್ಷೆಯಲ್ಲಿ ಇತ್ತೀಚೆಗೆ ವಿಂಧ್ಯಾ ಇ-ಇನ್ಫೋಮೀಡಿಯಾ ʻಗ್ರೇಟ್‌ ಪ್ಲೇಸ್‌ ಟು ವರ್ಕ್‌ʼ ಎಂಬ ಹಿರಿಮೆಗೆ ಭಾಜನವಾಗಿದೆ. ಇದರ ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Netaji's birth anniversary: ಕೋಲ್ಕತದಲ್ಲಿ ನೇತಾಜಿ ಜಯಂತಿ; ದೀದಿಯ ಭದ್ರಕೋಟೆಯಲ್ಲಿ ಆರೆಸ್ಸೆಸ್‌ ಮುಖ್ಯಸ್ಥರ ಮುಖ್ಯ ಬಾಷಣ

Netaji's birth anniversary: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಗಳ ಪ್ರಕಾರ, ಕೋಲ್ಕತ್ತದ ಶಹೀದ್‌ ಮಿನಾರ್‌ ಗ್ರೌಂಡ್‌ನಲ್ಲಿ ಜನವರಿ 23ರಂದು ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜಯಂತಿ ಆಚರಣೆ ಆಯೋಜನೆ ಆಗಿದೆ. ಮುಖ್ಯ ಭಾಷಣಕಾರರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್‌ ಭಾಗವತ್‌ ಮು‍ಖ್ಯ ಭಾಷಣ ಮಾಡಲಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ