ಕನ್ನಡ ಸುದ್ದಿ  /  ಜೀವನಶೈಲಿ  /  Heart Attack After 60: 60ರ ನಂತರದ ಹಠಾತ್‌ ಹೃದಯಾಘಾತಕ್ಕೆ ಕಾರಣಗಳೇನು? ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಮಾರ್ಗಗಳಾವುವು?

Heart attack after 60: 60ರ ನಂತರದ ಹಠಾತ್‌ ಹೃದಯಾಘಾತಕ್ಕೆ ಕಾರಣಗಳೇನು? ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಮಾರ್ಗಗಳಾವುವು?

ಬಾಲಿವುಡ್‌ನ ಖ್ಯಾತ ನಿರ್ದೇಶಕ ಸತೀಶ್‌ ಕೌಶಿಕ್‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆರೋಗ್ಯವಾಗಿಯೇ ಇದ್ದ ಅವರು ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಮೃತಪಟ್ಟಿರುವುದು ಎಲ್ಲರಿಗೂ ಶಾಕ್‌ ನೀಡಿತ್ತು. ಹಾಗಾದರೆ 60 ವಯಸ್ಸಿನ ನಂತರ ಹೃದಯಾಘಾತ ಕಾಣಿಸಿಕೊಳ್ಳಲು ಕಾರಣವೇನು? ಹೃದಯಾಘಾತದ ಲಕ್ಷಣಗಳೇನು ಎನ್ನುವ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡೋಣ.

ಹೃದಯಾಘಾತ
ಹೃದಯಾಘಾತ

ವಯಸ್ಸಾಗುತ್ತಿದ್ದಂತೆ ಹಲವು ರೀತಿಯ ದೈಹಿಕ ಬದಲಾವಣೆಗಳು ಉಂಟಾಗುವುದು ಸಹಜ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳ ಪ್ರಮಾಣವೂ ಹೆಚ್ಚಬಹುದು. ಆರೋಗ್ಯಕರ ಜೀವನಶೈಲಿಯಿಂದ ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದನ್ನು ನಾವು ಪದೇ ಪದೇ ಕೇಳಿರುತ್ತೇವೆ. ಯೋಗ, ವ್ಯಾಯಾಮ ವಾಕಿಂಗ್‌ ಮೂಲಕ ದೇಹದ ಹಲವು ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅಧ್ಯಯನವೊಂದರ ಪ್ರಕಾರ ವಯಸ್ಸಾದವರಲ್ಲಿ 4500 ಹೆಜ್ಜೆ ನಡೆಯುವವರಿಗಿಂತ 2000 ಹೆಜ್ಜೆ ನಡೆಸುವವರಲ್ಲಿ ಹೃದಯಘಾತ ಹಾಗೂ ಪಾರ್ಶ್ವವಾಯುವಿನ ಸಾಧ್ಯತೆ ಮೂರು ಪಟ್ಟು ಹೆಚ್ಚು. ಆರೋಗ್ಯಕರ ಆಹಾರ ಸೇವನೆ, ನಿರಂತರ ವ್ಯಾಯಾಮ, ಮದ್ಯಪಾನ, ಧೂಮಪಾನ ತ್ಯಜಿಸುವುದು ಹಾಗೂ ಕಲುಷಿತ ವಾತಾವರಣದಿಂದ ದೂರ ಇರುವುದು ಈ ಎಲ್ಲಾ ರೀತಿಯ ಜೀವನಶೈಲಿಯ ಬದಲಾವಣೆಯಿಂದ ನಾವು ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇರಬಹುದು. ಅಲ್ಲದೆ ಬಿಪಿ, ಮಧುಮೇಹ, ಕೊಲೆಸ್ಟ್ರಾಲ್‌ನಂತಹ ದೀರ್ಘಕಾಲದ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಇತ್ತೀಚೆಗೆ 60 ವರ್ಷ ಮೇಲ್ಪಟ್ಟವರಲ್ಲಿ ಇದಕ್ಕಿದ್ದಂತೆ ಹೃದಯಾಘಾತದ ಸಮಸ್ಯೆ ಹೆಚ್ಚುತ್ತಿದೆ. ನಿನ್ನೆಯಷ್ಟೇ (ಮಾರ್ಚ್‌ 9) ಬಾಲಿವುಡ್‌ನ ಖ್ಯಾತ ನಿರ್ದೇಶಕ ಸತೀಶ್‌ ಕೌಶಿಕ್‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆರೋಗ್ಯವಾಗಿಯೇ ಇದ್ದ ಅವರು ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಮೃತಪಟ್ಟಿರುವುದು ಎಲ್ಲರಿಗೂ ಶಾಕ್‌ ನೀಡಿತ್ತು. ಹಾಗಾದರೆ 60 ವಯಸ್ಸಿನ ನಂತರ ಹೃದಯಾಘಾತ ಕಾಣಿಸಿಕೊಳ್ಳಲು ಕಾರಣವೇನು? ಹೃದಯಾಘಾತದ ಲಕ್ಷಣಗಳೇನು ಎನ್ನುವ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡೋಣ.

ಅಪಧಮನಿಗಳು ಗಟ್ಟಿಯಾಗುವ ಅಥೆರೋಸ್ಕ್ಲರೋಸಿಸ್ ಕಾರಣದಿಂದ ವಯಸ್ಸಾದವರಲ್ಲಿ ಹೃದಯಘಾತ ಸಂಭವಿಸುತ್ತದೆ. ಹೃದಯಕ್ಕೆ ರಕ್ತವನ್ನು ಪೂರೈಸುವ ಪರಿಧಮನಿಯ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್‌ ಶೇಖರಣೆಯಾಗುತ್ತದೆ, ವಯಸ್ಸಾದಂತೆ ಅವು ಗಟ್ಟಿಯಾಗುತ್ತವೆ. ವಯಸ್ಸಾದಂತೆ ಕೆಲವರು ಜೀವನಶೈಲಿಯ ಮೇಲೆ (ಅಂದರೆ ತೂಕ ನಿಯಂತ್ರಣ ಹಾಗೂ ಒತ್ತಡ ನಿಯಂತ್ರಣ) ಗಮನ ಹರಿಸುವುದಿಲ್ಲ. ಇದರೊಂದಿಗೆ, ಧೂಮಪಾನ, ತಂಬಾಕು ಸೇವನೆ, ಮಧುಮೇಹ, ಅಧಿಕರಕ್ತದೊತ್ತಡದಂತಹ ಅಪಾಯಕಾರಿ ಹವ್ಯಾಸ ಹಾಗೂ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ, ಇದು ಹೃದಯಾಘಾತಕ್ಕೆ ಕಾರಣವಾಗಬಹುದು. 60 ವರ್ಷ ದಾಟಿದವರಲ್ಲಿ ನಿರಂತರ ವ್ಯಾಯಾಮ ಹಾಗೂ ದೈಹಿಕ ಚಟುವಟಿಕೆಯಲ್ಲಿ ತೊಡಗದೇ ಇರುವವರಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಳಕ್ಕೆ ಕಾರಣವಾಗಬಹುದು. ಬಾಲ್ಯದಿಂದಲೇ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್‌ ಸಂಗ್ರಹವಾಗುತ್ತಿರುತ್ತದೆ, ಆದರೆ ಅಸಮರ್ಪಕ ಜೀವನಶೈಲಿಯ ಅನುಕರಣೆಯ ಕಾರಣದಿಂದ ವಯಸ್ಸಾದ ಮೇಲೆ ಈ ಸಮಸ್ಯೆ ಉಲ್ಬಣವಾಗಿ ಹೃದಯಾಘಾತಕ್ಕೆ ಕಾರಣವಾಗಬಹುದು. ತೀವ್ರವಾದ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ರೋಗಿಯನ್ನು ಆಸ್ಪತ್ರೆಗೆ ಸೇರಿಸಿದಾಗ ಹೃದಯದ ಅನಿಯಮಿತ ಲಯದಿಂದಾಗಿ ಹಠಾತ್ ಸಾಯುವ ಸಾಧ್ಯತೆ ಶೇ 20 ರಿಂದ 25ರಷ್ಟಿರುತ್ತದೆ. ಮಲಗಿದ್ದಾಗ ಅಥವಾ ಅಂಬುಲೆನ್ಸ್‌ನಲ್ಲಿ ಹೋಗುವಾಗಲೇ ಉಸಿರು ನಿಲ್ಲುವ ಸಾಧ್ಯತೆ ಈ ಸಂದರ್ಭಗಳಲ್ಲಿ ಹೆಚ್ಚಿರುತ್ತದೆ ಎನ್ನುತ್ತಾರೆ ದೆಹಲಿಯ ಬಿಎಲ್‌ಕೆ ಮ್ಯಾಕ್ಸ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ ನಿರ್ದೇಶಕ ಡಾ. ಸುಭಾಶ್‌ ಚಂದ್ರ.

60ರ ನಂತರ ಹೃದಯಾಘಾತ ಸಂಭವಿಸುವ ಲಕ್ಷಣಗಳು

ʼಹೃದಯಾಘಾತದ ಸಂಕೇತಗಳು ಎಂದರೆ ಎದೆ ನೋವು, ಅಸ್ವಸ್ಥತೆ, ಎದೆ ಮೇಲೆ ಭಾರವಾದ ವಸ್ತು ಇರಿಸಿದಂತೆ ಅನ್ನಿಸುವುದು, ಹಿಸುಕಿದಂತಹ ನೋವು, ಉಸಿರಾಟದ ತೊಂದರೆ, ಮೈ ಬೆವರುವುದು, ದವಡೆಯಲ್ಲಿ ನೋವು, ಕುತ್ತಿಗೆ, ಬೆನ್ನು ಮತ್ತು ಭುಜಗಳಲ್ಲಿ ನೋವು ಬರುವುದು, ವಾಕರಿಕೆಯ ಅನುಭವ, ನಿಧಾನಕ್ಕೆ ತಲೆ ತಿರುಗಿದಂತಾಗುವುದು ಅಥವಾ ದಣಿದಿರುವ ಭಾವ ಈ ಎಲ್ಲಾ ಲಕ್ಷಣಗಳು ಇರಬಹುದು. ಕೆಲವೊಮ್ಮೆ ಈ ರೋಗಲಕ್ಷಣಗಳನ್ನು ರೋಗಿಯು ನಿರ್ಲಕ್ಷಿಸಬಹುದು. ಆ ಕಾರಣಕ್ಕೆ ನಾವು ಇದನ್ನು ಸಡನ್‌ ಹಾರ್ಟ್‌ ಆಟ್ಯಾಕ್‌ ಎಂದು ಕರೆಯಬಹುದು. ಕೆಲವೊಮ್ಮೆ ತಮ್ಮಲ್ಲಿ ಈ ಮೇಲಿನ ಲಕ್ಷಣಗಳಿದ್ದರೂ ಅದನ್ನು ಬೇರೆಯವರ ಬಳಿ ಹೇಳಿಕೊಳ್ಳುವುದಿಲ್ಲ. ಈ ನಿರ್ಲಕ್ಷ್ಯ ಭಾವವೇ ಹೃದಯಾಘಾತಕ್ಕೆ ಕಾರಣವಾಗಬಹುದು ಎನ್ನುತ್ತಾರೆ ನೋಯ್ಡಾದ ಫೋರ್ಟಿಸ್‌ ಆಸ್ಪತ್ರೆಯ ಹೃದಯ ವಿಜ್ಞಾನ ವಿಭಾಗದ ನಿರ್ದೇಶಕ ಅಜೆಯ್‌ ಕೌಲ್‌.

60 ವರ್ಷ ಮೇಲ್ಪಟ್ಟವರಲ್ಲಿ ಎದೆಯಲ್ಲಿನ ನೋವು ಭುಜ ಅಥವಾ ತೋಳುಗಳಿಗೆ ಹರಡುವುದು ಸಾಮಾನ್ಯವಾಗಿರುತ್ತದೆ. ಆದರೆ ಇದನ್ನು ತೋಳು ನೋವು, ಭುಜದ ನೋವು ಎಂದು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ನಡೆಯುವಾಗ ಎದೆ ಭಾರ ಉಂಟಾಗುವುದು ಅಥವಾ ನೋವು, ತಲೆತಿರುಗುವಿಕೆ, ದವಡೆ, ಕುತ್ತಿಗೆ ಅಥವಾ ಬೆನ್ನು, ಹೊಟ್ಟೆಯ ಮೇಲ್ಭಾಗದಲ್ಲಿ ಅಸ್ವಸ್ಥತೆ, ಎದೆ ನೋವು, ಪ್ರಜ್ಞಾಹೀನತೆ, ಉಸಿರಾಟದ ತೊಂದರೆ ಮತ್ತು ವಿಪರೀತವಾಗಿ ಬೆವರುವುದು ಈ ಲಕ್ಷಣಗಳು ಕಂಡು ಬಂದರೆ ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ಕರೆದೊಯ್ಯಬೇಕು.

ಸಡನ್‌ ಹಾರ್ಟ್‌ ಆಟ್ಯಾಕ್‌ಗೆ ಕಾರಣ

"ಹೃದಯ ಸ್ನಾಯುವಿನ ಒಂದು ಭಾಗವು ಸಾಕಷ್ಟು ಪ್ರಮಾಣದ ರಕ್ತವನ್ನು ಪಡೆಯಲು ವಿಫಲವಾದಾಗ ಹೃದಯಾಘಾತ ಅಥವಾ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಸಂಭವಿಸುತ್ತದೆ. ರಕ್ತದ ಹರಿವನ್ನು ಪುನಃಸ್ಥಾಪಿಸಲು ಚಿಕಿತ್ಸೆಯ ವಿಳಂಬದಿಂದಲೂ ಹೃದಯದ ಸ್ನಾಯುಗಳಿಗೆ ಹಾನಿಯಾಗಬಹುದು. ಒತ್ತಡ, ಸ್ಥೂಲಕಾಯ, ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚುವುದು, ಜಡ ಜೀವನಶೈಲಿ, ಮದ್ಯಪಾನ, ಧೂಮಪಾನ, ಮಾದಕದ್ರವ್ಯ ಸೇವನೆ ಈ ಕಾರಣದಿಂದ ಹೃದಯಾಘಾತ ಉಂಟಾಗಬಹುದು. ಕೆಲವೊಮ್ಮೆ ಅನುವಂಶಿಕ ಕಾರಣವೂ ಆಗಿರಬಹುದು.

ಯಾವುದೇ ಎಚ್ಚರಿಕೆಯ ಸಂಕೇತವಿಲ್ಲದೆ ಹೃದಯಾಘಾತವು ಇದ್ದಕ್ಕಿದ್ದಂತೆ ಬರಬಹುದು. 60 ವಯಸ್ಸಿನ ನಂತರ 6 ಗಂಟೆಗಿಂತಲೂ ಕಡಿಮೆ ಅವಧಿಯ ನಿದ್ದೆ ಕೂಡ ಹೃದಯಾಘಾತ ಉಂಟಾಗಲು ಕಾರಣವಾಗಬಹುದು. ಶೀತ ಪ್ರದೇಶಗಳಲ್ಲಿ ಯಾವುದೇ ರಕ್ಷಣೆ ಪಡೆಯದೇ ಹಿತ ಒಡ್ಡಿಕೊಳ್ಳುವುದರಿಂದಲೂ ಹೃದಯಾಘಾತ ಉಂಟಾಗಬಹುದು.

ಇಂತಹ ಸಂದರ್ಭಗಳಲ್ಲಿ ಹೃದಯಾಘಾತ ಸಾಮಾನ್ಯ

* ಅಧಿಕ ಮಟ್ಟದ ವಾಯು ಮಾಲಿನ್ಯ

* ಹೃದಯಾಘಾತ ಹಾಗೂ ರಕ್ತದೊತ್ತಡವನ್ನು ಹೆಚ್ಚಿಸುವ ಒತ್ತಡದ ಹಾರ್ಮೋನ್‌ ಸ್ರವಿಕೆಯನ್ನು ಹೆಚ್ಚಿಸುವ ಆಹಾರ ಸೇವನೆಯ ಪ್ರಮಾಣ ಹೆಚ್ಚಾದಾಗ

* ಸಿಟ್ಟು, ದುಃಖ, ಒತ್ತಡ ಹೆಚ್ಚಾದಾಗಲೂ ಹೃದಯ ಸಮಸ್ಯೆ ಕಾಣಿಸಬಹುದು. ಕೆಲವೊಮ್ಮೆ ಅತಿಯಾದ ಸಂತೋಷವೂ ಕಾರಣವಾಗಬಹುದು.

* ಹಠಾತ್‌ ತೀವ್ರತರವಾದ ವ್ಯಾಯಾಮ ಕೂಡ ತೊಂದರೆ ಉಂಟು ಮಾಡಬಹುದು.

* ಕೆಲವು ಸಂದರ್ಭಗಳಲ್ಲಿ ಸಾಮಾನ್ಯ ಶೀತವು ಉರಿಯೂತದ ಸಂಕೇತವಾಗಿದೆ, ಇದು ನಿಮ್ಮ ಹೃದಯದ ಅಪಧಮನಿಗಳನ್ನು ಹಾನಿಗೊಳಿಸುತ್ತದೆ ಮತ್ತು ಹಠಾತ್ ಹೃದಯಾಘಾತಕ್ಕೆ ಕಾರಣವಾಗಬಹುದು

* ಆಸ್ತಮಾ ರೋಗಿಗಳು ಹೆಚ್ಚು ಜಾಗರೂಕರಾಗಿರಬೇಕು

ಹೃದಯಾಘಾತ ತಡೆಯವುದು ಹೇಗೆ?

ಆರೋಗ್ಯಕರ ಆಹಾರ ಸೇವನೆಯ ಮೂಲಕ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕು. ಇದರೊಂದಿಗೆ ನಿರಂತರ ವ್ಯಾಯಾಮ, ತೂಕ ನಿಯಂತ್ರಣ, ಧೂಮಪಾನ, ಮಧ್ಯಪಾನ ತ್ಯಜಿಸುವುದು, ಕಲುಷಿತ ವಾತಾವರಣದಿಂದ ಸಾಧ್ಯವಾದಷ್ಟು ದೂರ ಇರುವುದು ಇದರಿಂದ ಹೃದಯಾಘಾತವನ್ನು ತಡೆಯಬಹುದು. ಇದರೊಂದಿಗೆ ಅಧಿಕರಕ್ತದೊತ್ತಡ, ಮಧುಮೇಹ, ಅತಿಯಾದ ಮಧ್ಯಪಾನ ಸೇವನೆಯೂ ಹೃದಯಾಘಾತಕ್ಕೆ ಪ್ರಮುಖ ಕಾರಣ ಇರಬಹುದು. ಪ್ರತಿನಿತ್ಯ ಯೋಗ, ಧ್ಯಾನದ ಮೂಲಕ ಒತ್ತಡ ನಿಯಂತ್ರಿಸಿಕೊಳ್ಳುವುದರಿಂದಲೂ ಹೃದಯಾಘಾತವನ್ನು ತಡೆಯಬಹುದು ಎನ್ನುತ್ತಾರೆ ಡಾ. ಕೌಲ್‌.

ʼರಕ್ತದೊತ್ತಡ, ಸಕ್ಕರೆಯಲ್ಲಿನ ರಕ್ತದ ಪ್ರಮಾಣ ಹಾಗೂ ಕೊಲೆಸ್ಟ್ರಾಲ್‌ ಅನ್ನು ನಿರಂತರವಾಗಿ ಪರೀಕ್ಷೆ ಮಾಡುತ್ತಿರಬೇಕು. ಪ್ರತಿದಿನ ವ್ಯಾಯಾಮ ಮಾಡಿ, ಸಮತೋಲಿತ ಆಹಾರ ಸೇವನೆ ಹಾಗೂ ಚೆನ್ನಾಗಿ ನಿದ್ದೆ ಮಾಡುವುದು, ಒತ್ತಡದಿಂದ ಮುಕ್ತರಾಗುವುದು ಹಾಗೂ ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳುವುದು ಹೃದಯಾಘಾರತವನ್ನು ದೂರ ಮಾಡಲು ಸಹಾಯ ಮಾಡಬಹುದು.

ವಿಭಾಗ