ಕನ್ನಡ ಸುದ್ದಿ  /  ಜೀವನಶೈಲಿ  /  Varamahalakshmi Vratam Decoration: ಲಕ್ಷ್ಮಿಯನ್ನು ಅಲಂಕರಿಸೋದು ಹೇಗೆ...ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್​​​​​​​​​​​​​​​​​​

Varamahalakshmi Vratam Decoration: ಲಕ್ಷ್ಮಿಯನ್ನು ಅಲಂಕರಿಸೋದು ಹೇಗೆ...ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್​​​​​​​​​​​​​​​​​​

ಕೆಲವರು ಬಹಳ ಸರಳವಾಗಿ ಈ ವ್ರತ ಆಚರಿಸಿದರೆ, ಇನ್ನೂ ಕೆಲವರು ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ ಹೇಗೆ ಆಚರಿಸಿದರೂ ಆ ಲಕ್ಷ್ಮಿಗೆ ಭಕ್ತಿ ಮುಖ್ಯ ಅಲ್ಲವೇ..? ಹಾಗೆಂದ ಮಾತ್ರಕ್ಕೆ ಅಲಂಕಾರ ಮಾಡದಿರಲು ಕೂಡಾ ಸಾಧ್ಯವಿಲ್ಲ. ಬ್ಯಾಕ್ ಡ್ರಾಪ್, ಲಕ್ಷ್ಮಿ ಪೀಠ, ಸೀರೆ ಉಡಿಸುವುದು, ಹೂ ಹಣ್ಣು, ಬಾಳೆ ಕಂದು, ತೋರಣ, ಲೈಟ್ ಸೆಟ್, ಒಡವೆ ಹೀಗೆ ಎಲ್ಲವನ್ನೂ ಮೊದಲೇ ಪ್ಲಾನ್ ಮಾಡಿಕೊಂಡರೆ ಉತ್ತಮ.

ವರಮಹಾಲಕ್ಷ್ಮಿ ಹಬ್ಬಕ್ಕೆ ಅಲಂಕಾರ (PC: Dheeksha @dheeku27)
ವರಮಹಾಲಕ್ಷ್ಮಿ ಹಬ್ಬಕ್ಕೆ ಅಲಂಕಾರ (PC: Dheeksha @dheeku27)

ಆಗಸ್ಟ್ 5, ಶುಕ್ರವಾರ ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹಬ್ಬ ಹತ್ತಿರ ಬರುತ್ತಿದ್ದಂತೆ ಎಲ್ಲರೂ ಈ ಬಾರಿ ದೇವಿಯನ್ನು ಯಾವ ರೀತಿ ಅಲಂಕಾರ ಮಾಡಬೇಕು, ದೇವಿಯನ್ನು ಕೂರಿಸುವ ಪೀಠ ಹೇಗಿರಬೇಕು, ಬ್ಯಾಕ್​​ ಡ್ರಾಪ್ ಹೇಗಿರಬೇಕು ಎಂದು ಪ್ಲಾನ್ ಮಾಡಿರುತ್ತಾರೆ.

ಹೂವು, ತಳಿರು ತೋರಣದಿಂದ ಅಲಂಕೃತವಾದ ಮಹಾಲಕ್ಷ್ಮಿಯನ್ನು ನೋಡಲು ಎರಡು ಕಣ್ಣುಗಳು ಸಾಲದು. ವ್ರತ ಆಚರಿಸಿದ ನಂತರ ಅಲಂಕೃತಗೊಂಡ ಲಕ್ಷ್ಮಿಯ ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸುತ್ತಾರೆ. ಕೆಲವರು ಬಹಳ ಸರಳವಾಗಿ ಈ ವ್ರತ ಆಚರಿಸಿದರೆ, ಇನ್ನೂ ಕೆಲವರು ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ ಹೇಗೆ ಆಚರಿಸಿದರೂ ಆ ಲಕ್ಷ್ಮಿಗೆ ಭಕ್ತಿ ಮುಖ್ಯ ಅಲ್ಲವೇ..? ಹಾಗೆಂದ ಮಾತ್ರಕ್ಕೆ ಅಲಂಕಾರ ಮಾಡದಿರಲು ಕೂಡಾ ಸಾಧ್ಯವಿಲ್ಲ. ಬ್ಯಾಕ್ ಡ್ರಾಪ್, ಲಕ್ಷ್ಮಿ ಪೀಠ, ಸೀರೆ ಉಡಿಸುವುದು, ಹೂ ಹಣ್ಣು, ಬಾಳೆ ಕಂದು, ತೋರಣ, ಲೈಟ್ ಸೆಟ್, ಒಡವೆ ಹೀಗೆ ಎಲ್ಲವನ್ನೂ ಮೊದಲೇ ಪ್ಲಾನ್ ಮಾಡಿಕೊಂಡರೆ ಉತ್ತಮ.

ಕೆಂಪು ಸೀರೆಯಲ್ಲಿ ಬ್ಯಾಕ್ ಡ್ರಾಪ್ (PC: Minching Kannada Sowmya vlogs)

ಕೆಂಪು ಸೀರೆಯಲ್ಲಿ ಬ್ಯಾಕ್ ಡ್ರಾಪ್ (PC: Minching Kannada Sowmya vlogs)

ವರಮಹಾಲಕ್ಷ್ಮಿ ಹಬ್ಬಕ್ಕೆ ಲಕ್ಷ್ಮಿಯನ್ನು ಕೂರಿಸುವ ಸ್ಥಳವನ್ನು ನಾನಾ ರೀತಿಯಲ್ಲಿ ಅಲಂಕಾರ ಮಾಡಬಹುದು. ಬಾಳೆ ಎಲೆ, ವೀಳ್ಯದೆಲೆ, ಸೇವಂತಿಗೆ, ಚೆಂಡು ಹೂ, ಗ್ಲಿಟ್ಟರ್ ಶೀಟ್, ಹೂ ಕುಂಡಗಳು, ಮರದ ಪಟ್ಟಿ, ಸೀರೆಗಳನ್ನು ಬಳಸಿ ಸುತ್ತಲೂ ಆಕರ್ಷಕ ಅಲಂಕಾರ ಮಾಡಬಹುದು.

ಬ್ಯಾಕ್​ ಡ್ರಾಪ್ ಅಲಂಕರಿಸುವುದು ಹೇಗೆ..?

ಮಹಾಲಕ್ಷ್ಮಿ ವಿಗ್ರಹ ಅಥವಾ ಫೋಟೋ ಇಡುವ ಹಿಂಭಾಗ ಸೀರೆ, ಮರದ ಪಟ್ಟಿಗಳಿಂದ ಅಲಂಕಾರ ಮಾಡಬಹುದು. ಕ್ಲಾಂಪ್ ಪಿನ್​​​​ಗಳನ್ನು ಬಳಸಿಕೊಂಡು ಹಳೆಯ ರೇಷ್ಮೆ ಸೀರೆಯನ್ನು ಎರಡೂ ಬದಿಯಲ್ಲಿ ಕಟ್ಟಿ. ಸೀರೆ ಗಟ್ಟಿಯಾಗಿ ನಿಲ್ಲಲು ಸಲ್ಯೂಷನ್ ಟೇಪ್ ಕೂಡಾ ಬಳಸಬಹುದು. ನಂತರ ಈ ಸೀರೆಯ ಎರಡೂ ಅಂಚುಗಳು ಕಾಣದಂತೆ ಚೆಂಡು ಹೂವಿನ ಹಾರ, ಮಾವಿನ ಎಲೆಯ ತೋರಣವನ್ನು ಕಟ್ಟಬಹುದು. ಅಥವಾ ಪ್ಲಾಸ್ಟಿಕ್ ಹೂಗಳನ್ನು ಕೂಡಾ ಬಳಸಬಹುದು.

ಮರದ ಪಟ್ಟಿಗಳಿಂದ ತಯಾರಾದ ಬ್ಯಾಕ್ ಡ್ರಾಪ್ (PC: Be Happy Kannada Vlogs)

ಮರದ ಪಟ್ಟಿಗಳಿಂದ ತಯಾರಾದ ಬ್ಯಾಕ್ ಡ್ರಾಪ್ (PC: Be Happy Kannada Vlogs)

ಚಿಕ್ಕ ಮರದ ಪಟ್ಟಿಗಳನ್ನು ಬಳಸಿ ಕೂಡಾ ಬ್ಯಾಕ್ ಡ್ರಾಪ್ ತಯಾರಿಸಬಹುದು. ಈ ಪಟ್ಟಿಗಳು ನಿಮಗೆ ಸಾ ಮಿಲ್ ಅಥವಾ ಡೆಕೊರೇಷನ್ ವಸ್ತುಗಳನ್ನು ಮಾರಾಟ ಮಾಡುವ ಕಡೆ ದೊರೆಯುತ್ತದೆ. ನಿಮಗೆ ಬ್ಯಾಕ್ ಡ್ರಾಪ್ ಎಷ್ಟು ಅಳತೆ ಬೇಕು ಎಂಬುದನ್ನು ಮೊದಲೇ ಪ್ಲ್ಯಾನ್ ಮಾಡಿಕೊಂಡು ವುಡನ್ ಪಟ್ಟಿಗಳನ್ನು ಕೊಂಡು ತನ್ನಿ. ನಂತರ ಸಲ್ಯೂಷನ್ ಟೇಪ್ ಅಥವಾ ಚಿಕ್ಕ ಹಗ್ಗದ ಸಹಾಯದಿಂದ ಆಯಾತಾಕಾರ ಅಥವಾ ಚೌಕಾಕಾರದಲ್ಲಿ ಪಟ್ಟಿಗಳನ್ನು ಜೋಡಿಸಿಕೊಳ್ಳಿ. ನಿಮಗಿಷ್ಟವಾದ ಬಣ್ಣದ ಸೀರೆಯನ್ನು ಕಟ್ಟಿ ಅದರ ಮುಂಭಾಗ ಈ ಮರದ ಪಟ್ಟಿಗಳನ್ನು ಇರಿಸಿದರೆ ಬ್ಯಾಕ್ ಡ್ರಾಪ್ ಬಹಳ ಅಂದವಾಗಿ ಕಾಣುತ್ತದೆ. ಸೀರೆ ಅಥವಾ ಬಟ್ಟೆ ಬೇಡವೆಂದರೆ ನೀವು ಕಲರ್ ಶೀಟ್​​​ಗಳನ್ನು ಕೂಡಾ ಈ ಮರದ ಪಟ್ಟಿಗಳಿಗೆ ಅಂಟಿಸಬಹುದು. ಬಾಳೆಎಲೆ, ವೀಳ್ಯದೆಲೆ, ಊಟದ ಎಲೆ, ಹೂವಿನ ಹಾರದಿಂದ ಕೂಡಾ ಬ್ಯಾಕ್ ಡ್ರಾಪ್ ಅಲಂಕರಿಸಬಹುದು.

ಅಕ್ರಿಲಿಕ್ ಪೇಂಟಿಂಗ್​​​​ನಿಂದ ಲಕ್ಷ್ಮಿ ಮುಖವಾಡಕ್ಕೆ ಅಲಂಕಾರ

ಅಕ್ರಿಲಿಕ್ ಪೇಂಟಿಂಗ್​​​​ನಿಂದ ಲಕ್ಷ್ಮಿ ಮುಖವಾಡಕ್ಕೆ ಅಲಂಕಾರ

ಮಹಾಲಕ್ಷ್ಮಿ ಮುಖವಾಡ ಹಾಗೂ ಸೀರೆ ಉಡಿಸುವುದು

ಮಹಾಲಕ್ಷ್ಮಿ ಮುಖವಾಡದಲ್ಲಿ ಹುಬ್ಬು, ತುಟಿಯ ರಂಗು, ಕಾಡಿಗೆ ಅಳಿಸಿಹೋಗಿದ್ದರೆ, ನೀವು ಅಕ್ರಿಲಿಕ್ ಪೇಂಟಿಂಗ್​​​​ನಿಂದ ಸರಿಪಡಿಸಬಹುದು. ಹಾಗೇ ಸೀರೆ ಉಡಿಸಲು ಎರಡು ದೊಡ್ಡ ಹಾಗೂ ಚಿಕ್ಕ ಬಿಂದಿಗೆಗಳು ಅವಶ್ಯಕ. ನೀರು ತುಂಬಿದ ದೊಡ್ಡ ಬಿಂದಿಗೆಯನ್ನು ಕೆಳಗೆ ಇರಿಸಿ, ಅದರ ಮೇಲೆ ಪುಟ್ಟ ಬಿಂದಿಗೆ ಅಥವಾ ಚೊಂಬು ಇರಿಸಬೇಕು. ಚಿಕ್ಕ ಬಿಂದಿಗೆಗೆ ಅಡ್ಡಲಾಗಿ ಸ್ಕೇಲ್ ಕಟ್ಟಿದರೆ ಸೀರೆ ಉಡಿಸುವುದು ಸುಲಭವಾಗುತ್ತದೆ. ಸೀರೆಯನ್ನು ಮಧ್ಯಭಾಗಕ್ಕೆ ಮಡಚಿ ಉಡಿಸಿದರೆ ಅತ್ಯಾಕರ್ಷಕವಾಗಿ ಕಾಣುತ್ತದೆ. ಬ್ಯಾಕ್ ಡ್ರಾಪ್​​ ಹಾಗೂ ಮಹಾಲಕ್ಷ್ಮಿಯ ಸೀರೆ ಒಂದೇ ಬಣ್ಣದಲ್ಲಿ ಇರುವುದು ಬೇಡ.

ವರಮಹಾಲಕ್ಷ್ಮಿ ಪ್ರಭಾವಳಿ ಹಾಗೂ ಕೈ ಕಾಲಿನ ಅಲಂಕಾರ

ವರಮಹಾಲಕ್ಷ್ಮಿ ಪ್ರಭಾವಳಿ ಹಾಗೂ ಕೈ ಕಾಲಿನ ಅಲಂಕಾರ

ಮಹಾಲಕ್ಷ್ಮಿಯ ಕೈ, ಕಾಲು ಹಾಗೂ ಪ್ರಭಾವಳಿ

ಮಾರುಕಟ್ಟೆಯಲ್ಲಿ ರೆಡಿ ಕೈ, ಕಾಲು ದೊರೆಯುತ್ತದೆ. ಸಮಯ ಇದ್ದರೆ ಮನೆಯಲ್ಲೇ ಇದನ್ನು ಮಾಡಬಹುದು. ಆದರೆ ಇದಕ್ಕೆ ಬಹಳ ತಾಳ್ಮೆ ಅಗತ್ಯ. ನಿಮ್ಮ ಮನೆಯಲ್ಲಿ ಇರುವ ಮಹಾಲಕ್ಷ್ಮಿಯ ಮುಖಕ್ಕೆ ಸರಿಯಾಗಿ ಹೊಂದುವ ಕೈ, ಕಾಲುಗಳನ್ನು ಕೊಂಡು ತಂದು ಅದನ್ನು ಕಳಸದ ಜೊತೆ ಇಟ್ಟರೆ ಸಾಕ್ಷಾತ್ ಮಹಾಲಕ್ಷ್ಮಿಯೇ ಪೀಠದಲ್ಲಿ ಕುಳಿತಿರುವಂತೆ ಕಾಣುತ್ತದೆ. ಪ್ರಭಾವಳಿ ಮಾಡಲು ಕಾಟನ್ ಬಾಕ್ಸ್​​​​​​​​​ನಿಂದ ವೃತ್ತಾಕಾರದಲ್ಲಿ ಕತ್ತರಿಸಿ ಗ್ಲಿಟ್ಟರ್ ಪೇಪರ್ ಅಥವಾ ಹೂವಿನಿಂದ ಅಲಂಕಾರ ಮಾಡಬಹುದು. ಇಲ್ಲವೇ ಇನ್ನೂ ಆಕರ್ಷಕವಾಗಿರಬೇಕು ಎಂದರೆ ಗ್ಲಾಸ್, ಬೀಡ್ ವರ್ಕ್ ಮಾಡಬಹುದು.

ವರಮಹಾಲಕ್ಷ್ಮಿ ಹೂವಿನ ಅಲಂಕಾರ

ವರಮಹಾಲಕ್ಷ್ಮಿ ಹೂವಿನ ಅಲಂಕಾರ

ಟೇಬಲ್ ಸೆಟ್ಟಿಂಗ್ ಹಾಗೂ ಹೂವಿನ ಅಲಂಕಾರ

ಮಹಾಲಕ್ಷ್ಮಿ ಕೂರಿಸುವ ಟೇಬಲ್​​​​​​​​​ ಮೇಲೆ ಒಳ್ಳೆಯ ಸೀರೆ, ಕರ್ಟನ್ ಅಥವಾ ಪೂರ್ತಿ ಕವರ್ ಆಗುವಂತ ಬಟ್ಟೆ ಬಳಸಿ. ಸಣ್ಣ ಹಗ್ಗದ ಸಹಾಯದಿಂದ ಬಾಳೆಕಂದುಗಳನ್ನು ಕಟ್ಟಿ. ಸುಗಂಧರಾಜ, ಸೇವಂತಿ, ಚೆಂಡು ಹೂ, ಗಣಿಗಲೆ, ಮಲ್ಲಿಗೆ, ಮರಳೆ ಹೂ...ಹೀಗೆ ಮಾರುಕಟ್ಟೆಯಲ್ಲಿ ಬಗೆಬಗೆಯ ಹೂವುಗಳು ದೊರೆಯುತ್ತವೆ. ಇದರಿಂದ ಹಾರ ತಯಾರಿಸಿ ಮಹಾಲಕ್ಷ್ಮಿಗೆ ಹಾಕಬಹುದು. ಮಾವಿನ ತೋರಣ ಮಾಡುವಾಗ ಸೇವಂತಿ ಹೂಗಳನ್ನು ಮಧ್ಯೆ ಸೇರಿಸಿದರೆ ಬಹಳ ಚೆನ್ನಾಗಿ ಕಾಣುತ್ತದೆ. ಬ್ಯಾಕ್ ಡ್ರಾಪ್ ಮೇಲ್ಭಾಗ ಹಾಗೂ ಟೇಬಲ್ ಮುಂಭಾಗ ಕೂಡಾ ತೋರಣ ಕಟ್ಟಬಹುದು. ನಿಮ್ಮ ಮನೆಯಲ್ಲಿ ಹೂ ಕುಂಡಗಳಿದ್ದರೆ ಟೇಬಲ್ ಸುತ್ತಮುತ್ತಲೂ ಇರಿಸಬಹುದು. ಇನ್ನು ಮಹಾಲಕ್ಷ್ಮಿ ಮುಂದೆ ನೈವೇದ್ಯ , ಹಣ್ಣು ಹೂವುಗಳನ್ನು ಇರಿಸಲು ಒಂದೇ ರೀತಿಯ ಪ್ಲೇಟ್​​ಗಳನ್ನು ಬಳಸಿ. ಲೈಟ್ ಸೆಟ್ಟಿಂಗ್ ಇದ್ದರೆ ಬ್ಯಾಕ್ ಡ್ರಾಫ್ ಹಾಗೂ ಸುತ್ತಲೂ ಅಲಂಕರಿಸಬಹುದು.

ಸಿಂಪಲ್ ರಂಗೋಲಿ

ಸಿಂಪಲ್ ರಂಗೋಲಿ

ರಂಗೋಲಿ

ಹೂವಿನಿಂದ ಕೂಡಾ ರಂಗೋಲಿಯನ್ನು ಅಲಂಕರಿಸಬಹುದು. ಹಬ್ಬದ ದಿನ ಅಲಂಕಾರ ಮಾಡಲು ಹೆಚ್ಚಿನ ಸಮಯ ದೊರೆಯದ ಕಾರಣ ಚಿಕ್ಕದಾದ ರಂಗೋಲಿ ಬಿಟ್ಟು ಅದನ್ನೇ ಬಣ್ಣಗಳಿಂದ ಅಲಂಕರಿಸಿ. ಬಣ್ಣ ಫಿಲ್ ಮಾಡಲು ಸಮಯ ಇಲ್ಲದಿದ್ದರೆ ನಿಮ್ಮ ನೆಲದ ಬಣ್ಣ ನೋಡಿ ಅದಕ್ಕೆ ವಿರುದ್ಧವಾದ ಬಣ್ಣದಿಂದ ಎಳೆ ರಂಗೋಲಿ ಬಿಡಿಸಿ.

ಕೆಲವರು ನಾಣ್ಯ ಹಾಗೂ ನೋಟಿನಿಂದ ಮಹಾಲಕ್ಷ್ಮಿಯ ಸುತ್ತಲೂ ಅಲಂಕರಿಸುತ್ತಾರೆ. ಆದರೆ ಈ ತೋರಿಕೆ ಬೇಡ. ಹಣ ಮಹಾಲಕ್ಷ್ಮಿ ಸ್ವರೂಪವಾಗಿರುವುದರಿಂದ ಅದನ್ನು ಹೂವಿನಂತೆ ಸೂಜಿಯಿಂದ ಪೋಣಿಸುವ ಅಗತ್ಯವಿಲ್ಲ. ಒಂದು ಪ್ಲೇಟ್ ಅಥವಾ ಬೌಲ್​​​​ನಲ್ಲಿ ಸ್ವಲ್ಪ ಹಣ ಇರಿಸಿದರೆ ಸಾಕು. ಕೆಲವರು ಮಹಾಲಕ್ಷ್ಮಿಯ ಮುಖವೇ ಕಾಣದಂತೆ ಅಲಂಕಾರ ಮಾಡುತ್ತಾರೆ. ಹೂವಿನ ಅಲಂಕಾರವಾಗಲೀ ,ಒಡವೆ ಆಗಲೀ ಅತಿಯಾಗಿ ಹಾಕದೆ ಸರಳವಾಗಿದ್ದರೆ ನೋಡಿದವರಿಗೂ ಸುಂದರವಾಗಿ ಕಾಣುತ್ತದೆ. ದೀಪ, ಆರತಿ ಬೆಳಗುವಾಗ ದೇವಿಗೆ ಉಡಿಸಿರುವ ಬಟ್ಟೆ ಅಥವಾ ಟೇಬಲ್ ಮೇಲಿನ ಬಟ್ಟೆಗೆ ತಾಕದಂತೆ ಎಚ್ಚರ ವಹಿಸಿ.

ವರಮಹಾಲಕ್ಷ್ಮಿ ವ್ರತ 2022

ವರಮಹಾಲಕ್ಷ್ಮಿ ವ್ರತ 2022

ವಿಭಾಗ