ಕನ್ನಡ ಸುದ್ದಿ  /  Lifestyle  /  What Is Data Analyst? How To Become Data Analyst? Tools Skills And Salary Details

Data analyst: ಏನಿದು ಡೇಟಾ ಅನಾಲಿಸ್ಟ್‌ ಉದ್ಯೋಗ? ಡೇಟಾ ಅನಾಲಿಸ್ಟ್‌ ಆಗುವುದು ಹೇಗೆ? ವೇತನ ಎಷ್ಟಿರುತ್ತದೆ?

ಈಗ ಬಹುತೇಕರು ಡೇಟಾ ಅನಾಲಿಸ್ಟ್‌, ಡೇಟಾ ಸೈಂಟಿಸ್ಟ್‌ ಎಂದೆಲ್ಲ ಹೊಸ ಬಗೆಯ ಕೋರ್ಸ್‌ಗಳನ್ನು ಕಲಿಯುತ್ತಿದ್ದಾರೆ. ವಿವಿಧ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗಲೂ ಡೇಟಾ ಅನಾಲಿಟಿಕ್ಸ್‌ ಸ್ಕಿಲ್‌ಗಳನ್ನು ಕೇಳುತ್ತಾರೆ. ಹೀಗಾಗಿ, ಡೇಟಾ ಸೈನ್ಸ್‌ಗೆ ಸಂಬಂಧಪಟ್ಟ ಸರ್ಟಿಫಿಕೇಷನ್‌, ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಎಚ್‌ಟಿ ಕನ್ನಡ ಓದುಗರಿಗೆ ಇಂದು ಡೇಟಾ ಅನಾಲಿಸ್ಟ್‌ ಉದ್ಯೋಗ ಮತ್ತು ಕೋರ್ಸ್‌ಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

Data analyst: ಏನಿದು ಡೇಟಾ ಅನಾಲಿಸ್ಟ್‌ ಉದ್ಯೋಗ, ಡೇಟಾ ಅನಾಲಿಸ್ಟ್‌ ಆಗುವುದು ಹೇಗೆ?
Data analyst: ಏನಿದು ಡೇಟಾ ಅನಾಲಿಸ್ಟ್‌ ಉದ್ಯೋಗ, ಡೇಟಾ ಅನಾಲಿಸ್ಟ್‌ ಆಗುವುದು ಹೇಗೆ?

ಈಗ ಬಹುತೇಕರು ಡೇಟಾ ಅನಾಲಿಸ್ಟ್‌, ಡೇಟಾ ಸೈಂಟಿಸ್ಟ್‌ ಎಂದೆಲ್ಲ ಹೊಸ ಬಗೆಯ ಕೋರ್ಸ್‌ಗಳನ್ನು ಕಲಿಯುತ್ತಿದ್ದಾರೆ. ವಿವಿಧ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗಲೂ ಡೇಟಾ ಅನಾಲಿಟಿಕ್ಸ್‌ ಸ್ಕಿಲ್‌ಗಳನ್ನು ಕೇಳುತ್ತಾರೆ. ಹೀಗಾಗಿ, ಡೇಟಾ ಸೈನ್ಸ್‌ಗೆ ಸಂಬಂಧಪಟ್ಟ ಸರ್ಟಿಫಿಕೇಷನ್‌, ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.

ಡೇಟಾ ಅನಾಲಿಸ್ಟ್‌ ಕಲಿತವರಿಗೆ ಭರ್ಜರಿ ವೇತನ

ಕೆಲವು ವರ್ಷಗಳ ಹಿಂದೆ ಡೇಟಾ ಅನಾಲಿಸ್ಟ್‌ಗಳಿಗೆ ಅಂತಹ ಬೇಡಿಕೆ ಇರಲಿಲ್ಲ. ಇತ್ತೀಚೆಗೆ ಆನ್‌ಲೈನ್‌ ಡೇಟಾಗಳು ತುಂಬಿತುಳುಕುತ್ತಿರುವಾಗ ಅನಾಲಿಸ್ಟ್‌ಗಳ ಬೇಡಿಕೆ ರಾಕೆಟ್‌ನಂತೆ ನೆಗೆದಿದೆ. ಪುಟ್ಟ ಕಂಪನಿಯಿಂದ ಬೃಹತ್‌ ಕಂಪನಿಯವರೆಗೆ ಎಲ್ಲರಿಗೂ ಡೇಟಾ ಸೈನ್ಸ್‌, ಡೇಟಾ ಅನಾಲಿಸ್ಟ್‌ಗಳು ಬೇಕು. ಮೊಬೈಲ್‌, ಇಂಟರ್‌ನೆಟ್‌, ಆನ್‌ಲೈನ್‌ ಬಿಸ್ನೆಸ್‌, ಇ-ಕಾಮರ್ಸ್‌ ಇತ್ಯಾದಿಗಳು ಹೆಚ್ಚಾಗಿರುವುದರ ಫಲವಿದು. ಆನ್‌ಲೈನ್‌ನಲ್ಲಿ ಗ್ರಾಹಕರ ಜಾಡು ಹಿಡಿದು ಅವರನ್ನು ಅರ್ಥಮಾಡಿಕೊಂಡು ಮಾರ್ಕೆಟಿಂಗ್‌ ಮಾಡಲು ಎಲ್ಲಾ ಕಂಪನಿಗಳು ಮುಂದಾಗುತ್ತಿವೆ. ಈಗ ಡೇಟಾ ಅನಾಲಿಸ್ಟ್‌ಗಳಿಗೆ ವರ್ಷಕ್ಕೆ ಹತ್ತು ಲಕ್ಷಕ್ಕಿಂತ ಹೆಚ್ಚಿನ ವೇತನದ ಉದ್ಯೋಗ ಸಿಗುತ್ತಿದೆ. ಈ ಕ್ಷೇತ್ರದಲ್ಲಿ ತಜ್ಞತೆ ಪಡೆದವರಿಗೆ ಭರ್ಜರಿ ಡಿಮ್ಯಾಂಡಿದೆ.

ಏನಿದು ಡೇಟಾ ಅನಾಲಿಸ್ಟ್‌ ಜಾಬ್‌?

ಹಿಂದಿನ ಜಮಾನದಲ್ಲಿ ಹೆಚ್ಚು ಪ್ರಚಲಿತದಲ್ಲಿ ಇಲ್ಲದ ಹುದ್ದೆಯಿದು. ಆದರೆ, ಈ ಜಮಾನದ ಪ್ರಮುಖ ಹುದ್ದೆ. ಇಂಟರ್‌ನೆಟ್‌ನಲ್ಲಿ ಪ್ರತಿಸೆಕೆಂಡಿಗೆ ಬೀಳುತ್ತಿರುವ ಕಸ ಅಥವಾ ಬಿಗ್‌ಡೇಟಾವನ್ನು ನಿರ್ವಹಿಸುವ ಕೆಲಸವೇ ಬಿಗ್‌ ಡೇಟಾ ಉದ್ಯೋಗಿಗಳದ್ದು. ಡೇಟಾಬೇಸ್‌ ನಿರ್ವಹಣೆಯ ಉದ್ಯೋಗವೂ ಹೌದು. ಸ್ಟಟಿಸ್ಟಿಕಲ್‌, ಕಂಪ್ಯೂಟರ್‌ ಸೈನ್ಸ್‌, ವ್ಯವಹಾರ ಆಡಳಿತ ಇತ್ಯಾದಿಗಳಲ್ಲಿ ಪದವಿ ಪಡೆದವರಿಗೆ ಡೇಟಾ ಅನಾಲಿಸ್ಟ್‌ ಕೋರ್ಸ್‌ ಕಲಿಕೆ ಸುಲಭವಾಗಬಹುದು. ಡೇಟಾ ಅನಾಲಿಸ್ಟ್‌ ಆಗಲು ಬಯಸುವವರಿಗೆ ಅನಾಲಿಟಿಕಲ್‌(ಗಣಿತ/ಅಂಕಿಅಂಶ ಮತ್ತು ಪ್ರೋಗ್ರಾಮಿಂಗ್‌), ಸಂವಹನ( ಪ್ರಸಂಟೇಷನ್‌/ಡೇಟಾ ವಿಷುಯಲೈಜೇಷನ್‌) ಪರಿಣತಿ, ವೆಬ್‌ ಡೇಟಾ ಸಂಬಂಧಿ ಉಂಟಾಗುವ ತೊಂದರೆಗಳನ್ನು ವ್ಯವಸ್ಥಿತವಾಗಿ ಸರಿಪಡಿಸುವ ಛಾತಿ ಇರಬೇಕಾಗುತ್ತದೆ. ನಿಮ್ಮಲ್ಲಿ ಕಲಿಕೆಯ ಆಸಕ್ತಿ ಇದ್ದರೆ ಆನ್‌ಲೈನ್‌ನಲ್ಲಿ ಲಭ್ಯವಿರುವ ವಿವಿಧ ಕೋರ್ಸ್‌ಗಳನ್ನು ಕಲಿಯಬಹುದು.

ಡೇಟಾ ಅನಾಲಿಸ್ಟ್‌ ಉದ್ಯೋಗ ಪಡೆಯಲು ಯಾವೆಲ್ಲ ಸ್ಕಿಲ್ಸ್‌ ಇರಬೇಕು?

- ಡೇಟಾ ಅನಾಲಿಸ್ಟ್‌ ಆಗಲು ಇರಬೇಕಾದ ಪ್ರಮುಖ ಸ್ಕಿಲ್‌ಗಳಲ್ಲಿ "ಪ್ರೋಗ್ರಾಮಿಂಗ್‌ʼ ಒಂದಾಗಿದೆ. ಎಕ್ಸೆಲ್‌ನಂತಹ ಪ್ರೋಗ್ರಾಂ ಹೊರತುಪಡಿಸಿದ ಕೌಶಲಗಳ ಜತೆ, ಪಾಂಡಾಸ್‌, ನುಂಪಿ ಇತ್ಯಾದಿ ಪ್ರೋಗ್ರಾಮಿಂಗ್‌ ಟೂಲ್‌ಗಳನ್ನು ಬಳಸಲು ತಿಳಿದಿರಬೇಕು.

- ಸ್ಟ್ಯಟಿಸ್ಟಿಕ್ಸ್‌ ತಿಳಿದಿರಬೇಕು. ವಿವರಣಾತ್ಮಕ ಮತ್ತು ತಾರ್ಕಿಕ ಸಂಖ್ಯಾಶಾಸ್ತ್ರದ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ತಿಳಿದಿರಬೇಕಾಗುತ್ತದೆ. ವಿವಿಧ ಬಗೆಯ ವಿತರಣೆಗಳು, ಯಾವ ಸ್ಟಾಟಿಸ್ಟಿಕಲ್‌ ಟೆಸ್ಟ್‌ ಯಾವ ಕಾಂಟೆಸ್ಟ್‌ಗೆ ಅನ್ವಯವಾಗುತ್ತದೆ ಇತ್ಯಾದಿಗಳನ್ನು ತಿಳಿದುಕೊಳ್ಳಲು ಗೊತ್ತಿರಬೇಕಾಗುತ್ತದೆ.

- ಮೆಷಿನ್‌ ಲರ್ನಿಂಗ್‌ ಗೊತ್ತಿದ್ದರೆ ಉತ್ತಮ. ಬೃಹತ್‌ ಪ್ರಮಾಣದ ಡೇಟಾಗಳಿದ್ದಾಗ ಮೆಷಿನ್‌ ಲರ್ನಿಂಗ್‌ ತಂತ್ರವು ಹೆಚ್ಚು ಪರಿಣಾಮಕಾರಿಯಾಗಿ ನೆರವಾಗುತ್ತದೆ. ಇದಕ್ಕೆ ಸಂಬಂಧಿಸಿದ ಕೆಲವು ಸಾಮಾನ್ಯ ಅಲ್ಗೊರಿದಂ(ಕ್ರಮಾವಳಿ)ಗಳನ್ನು ಅರ್ಥಮಾಡಿಕೊಳ್ಳಬೇಕು. ಯಾವಾಗ ಅಲ್ಗೊರಿದಂ ಅನ್ನು ಬಳಕೆ ಮಾಡಬೇಕು ಎಂಬ ಜ್ಞಾನವೂ ಅತ್ಯಂತ ಅಗತ್ಯ. ಹೀಗಾಗಿ ಈ ಕೌಶಲವನ್ನೂ ಕಲಿಯಿರಿ.

ಸಂವಹನ ಮತ್ತು ಡೇಟಾಗಳನ್ನು ಅರ್ಥ ಮಾಡಿಕೊಳ್ಳುವಿಕೆಯೂ ತಿಳಿದಿರಬೇಕು. ಈಗಂತೂ ಎಲ್ಲಾ ಉದ್ಯೋಗಕ್ಕೂ ಸಂವಹನ ಕೌಶಲ ಅಗತ್ಯ. ನೀವು ಡೇಟಾ ವಿಶ್ಲೇಷಣೆ ಮಾಡಿ ಏನು ಕಂಡುಕೊಂಡಿದ್ದೀರೋ ಅದನ್ನು ಸಮರ್ಥವಾಗಿ ನಿಮ್ಮ ಕ್ಲಯೆಂಟ್‌ಗಳಿಗೆ ಅರ್ಥವಾಗುವಂತೆ ತಿಳಿಸುವ ಕೌಶಲವೂ ಇರಬೇಕು.

ಯಾವೆಲ್ಲ ಟೂಲ್ಸ್‌ನ ಪರಿಚಯ ಇರಬೇಕು?

- ಪೈಥಾನ್‌ ಪರಿಣಿತಿ: ಪೈಥಾನ್‌ ಅಥವಾ ಆರ್‌: ‘ಸಿ’ಗೆ ಹೋಲಿಸಿದರೆ ಇವೆರಡು ಪ್ರೋಗ್ರಾಮಿಂಗ್‌ ಭಾಷೆಗಳು ಕಲಿಯಲು ಸರಳವೆನ್ನುವುದು ಮಾತ್ರವಲ್ಲದೆ ಡೇಟಾ ಅನಾಲಿಸಿಸ್‌ನಿಂದ ಡೇಟಾ ವಿಷುಯಲೈಜೇಷನ್‌ ತನಕ ಹಲವು ಜನಪ್ರಿಯ ಡೇಟಾ ಸೈನ್ಸ್‌ ಲೈಬ್ರೆರಿಗಳನ್ನು ಈ ಎರಡು ಭಾಷೆಗಳ ನೆರವಿನಿಂದಲೇ ನಿರ್ಮಿಸಲಾಗಿದೆ. ಹೀಗಾಗಿ ಪೈಥಾನ್‌ ಅಥವಾ ಆರ್‌ ಟೂಲ್‌ ಕಲಿಯಿರಿ.

- ಪಾಂಡಾಸ್‌/ನುಂಪಿ/ಶಿಪಿ ಎಂಬ ಟೂಲ್‌ಗಳ ಪರಿಚಯವೂ ಅತ್ಯಗತ್ಯ. ಪೈಥಾನ್‌ ಡೇಟಾ ಸೈನ್ಸ್‌ ಲೈಬ್ರೆರಿಯ ಈ ಮೂರು ಪ್ರೋಗ್ರಾಮ್‌ಗಳು ಜೊತೆಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಇದರಲ್ಲಿ ಸಂಖ್ಯಾತ್ಮಕ ರಚನೆ ಅಥವಾ ಸಮಯದ ಸರಣಿ ಡೇಟಾಗಳನ್ನು ವಿಶ್ಲೇಷಿಸಲು ಮತ್ತು ನಿರ್ವಹಿಸಲು ಪಾಂಡಾಸ್‌ ಬಳಕೆಯಾಗುತ್ತದೆ. ಸಾಮಾನ್ಯವಾಗಿ ಬಳಸುವ ಸೈಂಟಿಫಿಕ್‌ ಮತ್ತು ಮ್ಯಾಥಮೆಟಿಕಲ್‌ ಕಾರ್ಯಗತಗೊಳಿಸಲು ನುಂಪಿ ಟೂಲ್‌ ನೆರವಾಗುತ್ತದೆ. ಹೀಗೆ ಹಲವು ಟೂಲ್‌ಗಳ ಪರಿಚಯ ಇದ್ದರೆ ನೀವು ಡೇಟಾ ಅನಾಲಿಸ್ಟ್‌ ಕ್ಷೇತ್ರದಲ್ಲಿ ಮಿಂಚಬಹುದು.