ಕನ್ನಡ ಸುದ್ದಿ  /  ಜೀವನಶೈಲಿ  /  World Sleep Day: ಇಂದು ವಿಶ್ವ ನಿದ್ರಾ ದಿನ; ಥೀಮ್‌, ಇತಿಹಾಸ ಮತ್ತು ಮಹತ್ವ ಹೀಗಿದೆ ಗಮನಿಸಿ

World Sleep Day: ಇಂದು ವಿಶ್ವ ನಿದ್ರಾ ದಿನ; ಥೀಮ್‌, ಇತಿಹಾಸ ಮತ್ತು ಮಹತ್ವ ಹೀಗಿದೆ ಗಮನಿಸಿ

World Sleep Day 2023: ಇಂದು ವಿಶ್ವ ನಿದ್ರಾ ದಿನ. ನಿದ್ರಾ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಉದ್ದೇಶ. ಈ ದಿನಾಚರಣೆಯ ಇತಿಹಾಸ, ಮಹತ್ವ ಮತ್ತು ಇತರೆ ವಿವರ ಇಲ್ಲಿದೆ.

ವಿಶ್ವ ನಿದ್ರಾ ದಿನ 2023 (ಸಾಂಕೇತಿಕ ಚಿತ್ರ)
ವಿಶ್ವ ನಿದ್ರಾ ದಿನ 2023 (ಸಾಂಕೇತಿಕ ಚಿತ್ರ) (Pexels)

ಇಂದು ವಿಶ್ವ ನಿದ್ರಾ ದಿನ. ವರ್ಲ್ಡ್ ಸ್ಲೀಪ್ ಸೊಸೈಟಿಯ ವರ್ಲ್ಡ್ ಸ್ಲೀಪ್ ಡೇ ಕಮಿಟಿ ಆಚರಿಸುವ ವಾರ್ಷಿಕ ಆಚರಣೆ ಈ ವಿಶ್ವ ನಿದ್ರಾ ದಿನ (World Sleep Day) ಕಾರ್ಯಕ್ರಮ. ಈ ಹಿಂದೆ ವರ್ಲ್ಡ್ ಅಸೋಸಿಯೇಷನ್ ​​ಆಫ್ ಸ್ಲೀಪ್ ಮೆಡಿಸಿನ್ ಎಂದು ಈ ಕಮಿಟಿ ಗುರುತಿಸಿಕೊಂಡಿತ್ತು. ಈ ಆಚರಣೆ 2008 ರಿಂದ ಚಾಲ್ತಿಯಲ್ಲಿದೆ.

ಸಮಾಜದಲ್ಲಿ ಜನರು ಅನುಭವಿಸುತ್ತಿರುವ ನಿದ್ರಾ ಸಮಸ್ಯೆಗಳ ಹೊರೆಯನ್ನು ಕಡಿಮೆ ಮಾಡುವುದು, ಅವುಗಳ ತಡೆಗಟ್ಟುವಿಕೆ ಮತ್ತು ನಿದ್ರೆಯ ನಿರ್ವಹಣೆ ಮಾಡುವ ಆಶಯವನ್ನು ಈ ದಿನಾಚರಣೆ ಹೊಂದಿದೆ.

ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಎಂದರೆ ಅಸ್ವಸ್ಥತೆಗಳು, ಔಷಧ, ಶಿಕ್ಷಣ, ಸಾಮಾಜಿಕ ಅಂಶಗಳು ಮತ್ತು ಡ್ರೈವಿಂಗ್ ಸೇರಿ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ನಿದ್ರೆಗೆ ಸಂಬಂಧಿಸಿದ ಇತರೆ ಸಮಸ್ಯೆಗಳ ಬಗ್ಗೆಯೂ ಜಾಗೃತಿ ಮೂಡಿಸುವ ಕೆಲಸ ಈ ದಿನ ನಡೆಯುತ್ತದೆ. ಪ್ರತಿ ವರ್ಷ ಮಾರ್ಚ್‌ ಮೂರನೇ ಶುಕ್ರವಾರ ಈ ದಿನಾಚರಣೆ ನಡೆಯುತ್ತದೆ. ಇದರಂತೆಈ ವರ್ಷ ಇಂದು ಅಂದರೆ ಮಾರ್ಚ್‌ 17ಕ್ಕೆ ವಿಶ್ವ ನಿದ್ರಾ ದಿನ ಬಂದಿದೆ.

ವಿಶ್ವ ನಿದ್ರಾ ದಿನ 2023 ದಿನಾಂಕ (World Sleep Day 2023 Date):

ಲಾಭೋದ್ದೇಶ ರಹಿತ ಸಂಸ್ಥೆಯಾಗಿರುವ ವರ್ಲ್ಡ್‌ ಸ್ಲೀಪ್‌ ಸೊಸೈಟಿ ಮಾಹಿತಿ ಪ್ರಕಾರ, ಜಾಗತಿಕವಾಗಿ ನಿದ್ರಾ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ವಿಶ್ವ ನಿದ್ರಾ ದಿನ ಇಂದು ಅಂದರೆ ಮಾರ್ಚ್‌ 17ರಂದು ಬಂದಿದೆ.

ವಿಶ್ವ ನಿದ್ರಾ ದಿನ 2023ರ ಥೀಮ್‌ (World Sleep Day 2023 Theme):

ಈ ವರ್ಷ, ವಿಶ್ವ ನಿದ್ರಾ ದಿನದ ಥೀಮ್ 'ಆರೋಗ್ಯಕ್ಕೆ ನಿದ್ರೆ ಅತ್ಯಗತ್ಯ'. ಇದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿದ್ರೆಯ ಮಹತ್ವವನ್ನು ಒತ್ತಿಹೇಳುತ್ತದೆ.

ವಿಶ್ವ ನಿದ್ರಾ ದಿನ 2023 ಮಹತ್ವ ಮತ್ತು ಇತಿಹಾಸ (World Sleep Day 2023 Significance and History):

ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಉತ್ತಮವಾದ ಆಹಾರ ಮತ್ತು ವ್ಯಾಯಾಮದಂತೆಯೇ ನಿದ್ರೆಯೂ ಮುಖ್ಯವಾಗಿದೆ. ಆದಾಗ್ಯೂ, ಅನೇಕರು ಇದನ್ನು ಉತ್ತಮ ಆರೋಗ್ಯಕ್ಕೆ ಅಗತ್ಯ ಎಂದು ಪರಿಗಣಿಸುವುದಿಲ್ಲ. ವಿಶ್ವ ನಿದ್ರಾ ದಿನವು ಅವುಗಳನ್ನು ತಪ್ಪು ಎಂದು ಸಾಬೀತುಪಡಿಸುವ ಮತ್ತು ವಿಶ್ವಾದ್ಯಂತ ನಿದ್ರೆಯ ಆರೋಗ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಸರಿಯಾದ ಪ್ರಮಾಣದ ನಿದ್ದೆ ಮಾಡಬೇಕು ಎಂಬುದನ್ನು ಒತ್ತಿಹೇಳುತ್ತದೆ. ಆರೋಗ್ಯಕರ ನಿದ್ರೆಯು ನಮ್ಮ ಸಾಮಾನ್ಯ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಜೀವನ ಮೌಲ್ಯದ ಅರಿವು ಹೆಚ್ಚಿಸುತ್ತದೆ.

ಏತನ್ಮಧ್ಯೆ, 2008 ರಲ್ಲಿ ಪ್ರಾರಂಭವಾದಾಗಿನಿಂದ, ಮಾರ್ಚ್‌ ತಿಂಗಳ ಮೂರನೇ ಶುಕ್ರವಾರದಂದು ವಿಶ್ವ ನಿದ್ರಾ ದಿನವನ್ನು ಆಚರಿಸಲಾಗುತ್ತದೆ. ಸ್ಲೀಪ್ ಮೆಡಿಸಿನ್ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಕೆಲಸ ಮಾಡುವ ಮತ್ತು ಅಧ್ಯಯನ ಮಾಡುತ್ತಿರುವ ಮೀಸಲಾದ ಆರೋಗ್ಯ ಪೂರೈಕೆದಾರರು ಮತ್ತು ವೈದ್ಯಕೀಯ ಸಮುದಾಯದ ಸದಸ್ಯರ ಗುಂಪು ವಾರ್ಷಿಕ ಜಾಗೃತಿ ಕಾರ್ಯಕ್ರಮವನ್ನು ಪ್ರಾರಂಭಿಸಿತು. ವರ್ಲ್ಡ್‌ ಸ್ಲೀಪ್‌ ಡೇಯ ಮೊದಲ ಸಹ-ಅಧ್ಯಕ್ಷರು ಲಿಬೊರಿಯೊ ಪರ್ರಿನೊ, MD, ಪಾರ್ಮಾ ವಿಶ್ವವಿದ್ಯಾಲಯ, ಇಟಲಿಯ ನರವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಮತ್ತು ಆಂಟೋನಿಯೊ ಕುಲೆಬ್ರಾಸ್, MD, ಅಪ್‌ಸ್ಟೇಟ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನರವಿಜ್ಞಾನದ ಪ್ರಾಧ್ಯಾಪಕರಾಗಿದ್ದರು.

ಗಮನಿಸಬಹುದಾದ ಸುದ್ದಿ

ನೊಬೆಲ್‌ ಪುರಸ್ಕಾರಕ್ಕೆ ಮೋದಿ ಹೆಸರು; ಸುಳ್ಳು ಸುದ್ದಿ ಎಂದ ನೊಬೆಲ್‌ ಕಮಿಟಿ ಮೆಂಬರ್‌; ಹಾಗಾದರೆ ತೋಜೆ ಹೇಳಿದ್ದೇನು?

Nobel Peace Prize: ನೊಬೆಲ್‌ ಶಾಂತಿ ಪುರಸ್ಕಾರ ಸಂಬಂಧಿಸಿ ನಾವು ಬಹಿರಂಗವಾಗಿ ಚರ್ಚಿಸುವಂತೆ ಇಲ್ಲ ಅಥವಾ ಅಂತಹ ವದಂತಿಗಳಿಗೆ ಪುಷ್ಟಿ ನೀಡುವಂತೆಯೂ ಇಲ್ಲ. ನನ್ನ ಹೇಳಿಕೆ ಎಂಬುದನ್ನು ನಾನು ಸ್ಪಷ್ಟವಾಗಿ ನಿರಾಕರಿಸುತ್ತೇನೆ ಎಂದು ತೋಜೆ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ತೋಜೆಯ ಮಾತುಗಳು ನೊಬೆಲ್‌ ಪುರಸ್ಕಾರದ ವಿಚಾರದಲ್ಲಿ ಸಾರ್ವಜನಿಕ ಸಂಚಲನ ಮೂಡಿಸಿದ್ದು ವಾಸ್ತವ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ