ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Andrey Botikov: ಕೊರೊನಾ ಸ್ಪುಟ್ನಿಕ್‌ ಲಸಿಕೆ ಕಂಡುಹಿಡಿದ ವಿಜ್ಞಾನಿಯ ಕುತ್ತಿಗೆಗೆ ಬೆಲ್ಟ್‌ ಬಿಗಿದು ಹತ್ಯೆ

Andrey Botikov: ಕೊರೊನಾ ಸ್ಪುಟ್ನಿಕ್‌ ಲಸಿಕೆ ಕಂಡುಹಿಡಿದ ವಿಜ್ಞಾನಿಯ ಕುತ್ತಿಗೆಗೆ ಬೆಲ್ಟ್‌ ಬಿಗಿದು ಹತ್ಯೆ

Covid vax sputnik v maker death: 47 ವರ್ಷದ ಬೋಟಿಕೋವ್ ಅವರು ಗಮಲೇಯ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಕಾಲಜಿ ಅಂಡ್ ಮ್ಯಾಥಮ್ಯಾಟಿಕ್ಸ್‌ನಲ್ಲಿ ಹಿರಿಯ ಸಂಶೋಧಕರಾಗಿ ಕೆಲಸ ಮಾಡುತ್ತಿದ್ದರು.

ಕೊರೊನಾ ಲಸಿಕೆ ಕಂಡುಹಿಡಿದ ವಿಜ್ಞಾನಿಯ ಬೆಲ್ಟ್‌ ಬಿಗಿದು ಹತ್ಯೆ
ಕೊರೊನಾ ಲಸಿಕೆ ಕಂಡುಹಿಡಿದ ವಿಜ್ಞಾನಿಯ ಬೆಲ್ಟ್‌ ಬಿಗಿದು ಹತ್ಯೆ

ಮಾಸ್ಕೋ: ರಷ್ಯಾದಲ್ಲಿ ಕೋವಿಡ್‌-19 ಲಸಿಕೆ ಸ್ಪುಟ್ನಿಕ್‌ ವಿ ಅಭಿವೃದ್ಧಿಪಡಿಸಿಲು ಸಹಾಯ ಮಾಡಿದ ವಿಜ್ಞಾನಿಗಳಲ್ಲಿ ಒಬ್ಬರಾದ ಆಂಡ್ರೆ ಬೊಟಿಕೋವ್ ಅವರನ್ನು ಅವರ ಅಪಾರ್ಟ್‌ಮೆಂಟ್‌ನಲ್ಲಿ ಬೆಲ್ಟ್‌ನಿಂದ ಕತ್ತು ಬಿಗಿದು ಹತ್ಯೆ ಮಾಡಲಾಗಿದೆ. ಕೊಲೆಗೆ ಸಂಬಂಧಪಟ್ಟಂತೆ ಶಂಕಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.

47 ವರ್ಷದ ಬೋಟಿಕೋವ್ ಅವರು ಗಮಲೇಯ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಕಾಲಜಿ ಅಂಡ್ ಮ್ಯಾಥಮ್ಯಾಟಿಕ್ಸ್‌ನಲ್ಲಿ ಹಿರಿಯ ಸಂಶೋಧಕರಾಗಿ ಕೆಲಸ ಮಾಡುತ್ತಿದ್ದರು. ಇವರು ಗುರುವಾರ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ರಷ್ಯಾದ ನ್ಯೂಸ್ ಏಜೆನ್ಸಿ ಟಾಸ್ ರಷ್ಯಾದ ಒಕ್ಕೂಟದ ತನಿಖಾ ಸಮಿತಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 2021 ರಲ್ಲಿ COVID ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾಕ್ಕಾಗಿ, ಈ ವೈರಾಲಜಿಸ್ಟ್‌ಗೆ ಆರ್ಡರ್ ಆಫ್ ಮೆರಿಟ್ ಫಾರ್ ದಿ ಫಾದರ್‌ಲ್ಯಾಂಡ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. 2020 ರಲ್ಲಿ ಸ್ಪುಟ್ನಿಕ್ V ಲಸಿಕೆಯನ್ನು ಅಭಿವೃದ್ಧಿಪಡಿಸಿದ 18 ವಿಜ್ಞಾನಿಗಳಲ್ಲಿ ಬೊಟಿಕೋವ್ ಒಬ್ಬರು ಎಂದು ವರದಿಗಳು ತಿಳಿಸಿವೆ.

ಅವರ ಸಾವನ್ನು ಕೊಲೆ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ರಷ್ಯಾದಲ್ಲಿ ತನಿಖಾ ಪ್ರಾಧಿಕಾರವಾಗಿರುವ ಸಮಿತಿಯು ಟೆಲಿಗ್ರಾಮ್‌ನಲ್ಲಿ ಹೇಳಿಕೆಯನ್ನು ಪ್ರಕಟಿಸಿದೆ.

29 ವರ್ಷದ ಯುವಕನು ಜಗಳದ ಸಂದರ್ಭದಲ್ಲಿ ಬೋಟಿಕೋವ್‌ನನ್ನು ಬೆಲ್ಟ್‌ನಿಂದ ಕತ್ತು ಬಿಗಿದು ಕೊಲೆಗೈದು ಓಡಿ ಹೋಗಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಕೌಟುಂಬಿಕ ಅಪರಾಧ ಮತ್ತು ಸಂಘರ್ಷದ ಪರಿಣಾಮವಾಗಿ ಈ ಕೊಲೆ ನಡೆದಿರಬಹುದು ಎಂದು ಕಾನೂನು ಜಾರಿ ಸಂಸ್ಥೆಗಳು ಹೇಳಿವೆ.

ಬೋಟಿಕೋವ್ ಅವರ ದೇಹ ಪತ್ತೆಯಾದ ಸ್ವಲ್ಪ ಸಮಯದ ನಂತರ ಶಂಕಿತನನ್ನು ಬಂಧಿಸಲಾಯಿತು ಎಂದು ಫೆಡರಲ್ ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

"ಘಟನೆ ನಡೆದ ಕೆಲವೇ ಸಮಯದಲ್ಲಿ ದಾಳಿಕೋರನ ಸ್ಥಳವನ್ನು ಪತ್ತೆಹಚ್ಚಲಾಯಿತು. ವಿಚಾರಣೆಯ ಸಮಯದಲ್ಲಿ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಈತನು ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದು, ತನಿಖೆ ಮುಂದುವರೆಸಲಾಗಿದೆ" ಎಂದು ತನಿಖಾ ಸಮಿತಿ ತಿಳಿಸಿದೆ.

ರಷ್ಯಾದಿಂದ ಭಾರತಕ್ಕೆ ಬಂತು S-400 ಕ್ಷಿಪಣಿ ವ್ಯವಸ್ಥೆಯ ಮೂರನೇ ಸ್ಕ್ವಾಡ್ರನ್

ಭಾರತವು ರಷ್ಯಾದಿಂದ S-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಮೂರನೇ ಸ್ಕ್ವಾಡ್ರನ್ ಅನ್ನು ಸ್ವೀಕರಿಸಿದೆ. ಭಾರತವು ರಷ್ಯಾದಿಂದ ಒಟ್ಟು ಐದು ಸ್ಕ್ವಾಡ್ರನ್‌ಗಳನ್ನು ಪಡೆಯಬೇಕಿದೆ. ರಷ್ಯಾದಿಂದ S-400 ಕ್ಷಿಪಣಿ ವ್ಯವಸ್ಥೆಗಳ ಮೊದಲ ಸ್ಕ್ವಾಡ್ರನ್ ಡಿಸೆಂಬರ್ 2021 ರಲ್ಲಿ ಭಾರತಕ್ಕೆ ಆಗಮಿಸಿತು. ನಂತರ ಎರಡನೇ ಸ್ಕ್ವಾಡ್ರನ್ ಏಪ್ರಿಲ್ 2022 ರಲ್ಲಿ ಭಾರತಕ್ಕೆ ಇತ್ತೀಚೆಗೆ ಆಗಮಿಸಿದೆ.

ಬಾಹ್ಯಾಕಾಶದಲ್ಲಿ ಸಿಕ್ಕಿಬಿದ್ದ ಮೂವರು ಗಗನಯಾತ್ರಿಗಳು

ಬಾಹ್ಯಾಕಾಶ ನಾವು ಅಂದುಕೊಂಡಷ್ಟು ಸರಳವಾಗಿಲ್ಲ. ಅದು ಮಾನವರನ್ನು ಆದರದಿಂದ ಬರಮಾಡಿಕೊಳ್ಳುತ್ತದೆ ಎಂಬುದು ನಿಜವಾದರೂ, ಅವರನ್ನು ಅಷ್ಟೇ ಆದರದಿಂದ ಬೀಳ್ಕೊಡುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟೀ ಇಲ್ಲ. ರಷ್ಯಾ ಮತ್ತು ಅಮೆರಿಕದ ಒಟ್ಟು ಮೂವರು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್‌)ದಲ್ಲಿ ಸಿಲುಕಿರುವ ಪ್ರಕರಣವೇ ಇದಕ್ಕೆ ಸಾಕ್ಷಿ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದ ಮೂವರು ಗಗನಯಾತ್ರಿಗಳು ಸಿಕ್ಕಿಬಿದ್ದಿದ್ದಾರೆ. ಈ ಗಗನಯಾತ್ರಿಗಳನ್ನು ಭೂಮಿಗೆ ಮರಳಿ ಕರೆತರಬೇಕಿದ್ದ ಮೂಲ ರಿಟರ್ನ್‌ ಕ್ಯಾಪ್ಸುಲ್‌ನ ಕೂಲಿಂಗ್‌ ಸಿಸ್ಟಮ್‌ ಸೋರಿಕೆಯಾಗಿದ್ದರಿಂದ, ಇಬ್ಬರು ರಷ್ಯನ್‌ ಹಾಗೂ ಓರ್ವ ಅಮೆರಿಕನ್‌ ಗಗನಯಾತ್ರಿ ಐಎಸ್‌ಎಸ್‌ನಲ್ಲೇ ಉಳಿದುಕೊಂಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

IPL_Entry_Point