ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  New Parliament ಭಾನುವಾರ ಉದ್ಘಾಟನೆಯಾಗಲಿರುವ ನೂತನ ಸಂಸತ್‌ ಭವನ ಉದ್ಘಾಟನೆಗೆ ಕಾಂಗ್ರೆಸ್‌ ಸೇರಿ ಪ್ರತಿಪಕ್ಷಗಳ ಬಹಿಷ್ಕಾರ

New parliament ಭಾನುವಾರ ಉದ್ಘಾಟನೆಯಾಗಲಿರುವ ನೂತನ ಸಂಸತ್‌ ಭವನ ಉದ್ಘಾಟನೆಗೆ ಕಾಂಗ್ರೆಸ್‌ ಸೇರಿ ಪ್ರತಿಪಕ್ಷಗಳ ಬಹಿಷ್ಕಾರ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸದೇ ಪ್ರಧಾನಿ ನರೇಂದ್ರ ಮೋದಿ ಅವರೇ ನೂತನ ಸಂಸತ್ ಭವನ ಉದ್ಘಾಟನೆಗೆ ಮುಂದಾಗಿರುವುದು ಪ್ರತಿಪಕ್ಷದ ಆಕ್ರೋಶಕ್ಕೆ ಕಾರಣವಾಗಿದೆ.

ಉದ್ಘಾಟನೆಗೆ ಅಣಿಯಾಗಿರುವ ಭಾರತದ ನೂತನ ಸಂಸತ್‌ ಭವನದ ನೋಟ.
ಉದ್ಘಾಟನೆಗೆ ಅಣಿಯಾಗಿರುವ ಭಾರತದ ನೂತನ ಸಂಸತ್‌ ಭವನದ ನೋಟ.

ಹೊಸ ದಿಲ್ಲಿ: ಭಾನುವಾರ ಲೋಕಾರ್ಪಣೆಗೊಳ್ಳಲಿರುವ ನೂತನ ಸಂಸತ್‌ ಭವನದ ಉದ್ಘಾಟನೆ ಸಮಾರಂಭವನ್ನು ಕಾಂಗ್ರೆಸ್‌ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರತಿಪಕ್ಷಗಳು ಬಹಿಷ್ಕರಿಸಿವೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸದೇ ಪ್ರಧಾನಿ ನರೇಂದ್ರ ಮೋದಿ ಅವರೇ ಉದ್ಘಾಟನೆಗೆ ಮುಂದಾಗಿರುವುದು ಪ್ರತಿಪಕ್ಷದ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಜಾಪ್ರಭುತ್ವದ ಆಧಾರಸ್ತಂಭವಾದ ಸಂಸತ್‌ ಭವನ ಉದ್ಘಾಟನೆಗೆ ದೇಶದ ಪ್ರಥಮ ಪ್ರಜೆಯನ್ನು ಆಹ್ವಾನಿಸದೇ ಮೋದಿ ತಮ್ಮದೇ ಕಾರ್ಯಕ್ರಮ ಎಂಬಂತೆ ಬಿಂಬಿಸಿಕೊಳ್ಳಲು ಹೊರಟಿರುವುದು ಎಷ್ಟು ಸರಿ ಎಂದು ಕಾಂಗ್ರೆಸ್‌, ಆಮ್‌ ಆದ್ಮಿ ಸಹಿತ ಹಲವು ಪಕ್ಷಗಳು ಕಟು ಮಾತುಗಳಲ್ಲಿ ಟೀಕಿಸಿವೆ.

ಸಂಸತ್‌ ಭವನದ ಶಂಕುಸ್ಥಾಪನೆ ವೇಳೆಯೂ ಆಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಆಹ್ವಾನಿಸಿರಲಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿರುವ ಹಿಂದುಳಿದ, ಆದಿವಾಸಿಗಳ ಕುರಿತು ಮೋದಿ ಅವರಿಗೆ ಇರುವ ಗೌರವವಿದು ಎಂದೂ ಆರೋಪಿಸಿವೆ.

ಕಾಂಗ್ರೆಸ್‌ ಜತೆಗೆ ಡಿಎಂಕೆ. ಎನ್‌ಸಿಪಿ, ಆರ್‌ಜೆಡಿ. ಜೆಡಿಯು, ಆರ್‌ಎಲ್‌ಡಿ, ಸಮಾಜವಾದಿ ಪಿಕ್ಷ, ಸಿಪಿಐ, ಸಿಎಐಎಂ, ಶಿವಸೇನಾ (ಠಾಕ್ರೆ ಬಣ), ಜಾರ್ಖಂಡ್‌ ಮುಕ್ತಿ ಮೋರ್ಚಾ, ತೃಣಮೂಲ ಕಾಂಗ್ರೆಸ್‌ ಪಕ್ಷಗಳು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಆಹ್ವಾನ ತಿರಸ್ಕರಿಸಿವೆ,

ಆದರೆ ಎನ್‌ಡಿಒ ಭಾಗವಲ್ಲದಿರುವ ಬಿಜು ಜನತಾದಳ, ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಕಾರ್ಯಕ್ರಮದಲ್ಲಿ ಭಾಗಹಿಸುವುದಾಗಿ ಗುರುವಾರ ಪ್ರಕಟಣೆ ಹೊರಡಿಸಿವೆ.

ರಾಷ್ಟ್ರಪತಿಗಳು ರಾಜ್ಯಗಳ ಒಕ್ಕೂಟದ ಮುಖ್ಯಸ್ಥರು,. ಸಂಸತ್‌ ಭವನ ೧೪೦ ಕೋಟಿ ಜನರ ಪ್ರಾತಿನಿಧಿಕ ಸಂಸ್ಥೆ. ದೇಶದ ಹಿರಿಮೆ, ಘನತೆ ಹೆಚ್ಚಿಸುವ ಕೆಲಸ ಮಾಡಬೇಕೇ ವಿನಃ ಇಲ್ಲಿಯೂ ರಾಜಕೀಯ ಮಾಡುವುದು ಸರಿಯಲ್ಲ. ಈ ವಿಚಾರವನ್ನು ಸದನದಲ್ಲಿ ಮುಂದೆ ಬೇಕಾದರೆ ಚರ್ಚಿಸಲಿ. ಈಗ ಕಾರ್ಯಕ್ರಮದಲ್ಲಿ ಭಾಗವಹಿಸಲಿ ಎಂದು ಬಿಜು ಜನತಾದಳದ ವಕ್ತಾರ ಲೆನಿನ್‌ ಮೊಹಿಂತಿ ತಿಳಿಸಿದ್ದಾರೆ.

ಆಂಧ್ರ ಪ್ರದೇಶದ ಜಗನ್‌ ರೆಡ್ಡಿ ನೇತೃತ್ವದ ವೈಎಸ್‌ ಆರ್‌ ಪಕ್ಷವೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಶಿರೋಮಳಿ ಅಕಾಲಿ ದಳ, ಎಐಎಡಿಎಂಕೆ,. ಬಿಎಸ್ಪಿ. ಶಿವಸೇನಾ( ಶಿಂಧೆಬಣ) ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಈಗಾಗಲೇ ಘೋಷಿಸಿವೆ. ಆದರೆ ತೆಲಂಗಾಣದ ಭಾರತ ರಾಷ್ಟ್ರೀಯ ಸಮಿತಿ ಹಾಗೂ ಕರ್ನಾಟಕದ ಜಾ.ದಳ ತನ್ನ ನಿಲುವನ್ನು ಇನ್ನೂ ಪ್ರಕಟಿಸಿಲ್ಲ.

ವಿದೇಶ ಪ್ರವಾಸ ಮುಗಿಸಿ ಗುರುವಾರ ಬೆಳಗ್ಗೆ ಹಿಂದಿರುಗಿದ ಪ್ರಧಾನಿ ನರೇಂದ್ರ ಮೋದಿ ಇದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು. ಆಸ್ಟ್ರೇಲಿಯಾದಲ್ಲಿ ಆಯೋಜಿಸಲಾಗಿದ್ದ ಬೃಹತ್‌ ಕಾರ್ಯಕ್ರಮದ;ಲ್ಲಿ ಅಲ್ಲಿನ ಪ್ರಧಾನಿ ಜತೆಗೆ ಮಾಜಿ ಪ್ರಧಾನಿ, ಪ್ರತಿಪಕ್ಷಗಳ ಪ್ರಮುಖರೂ ಭಾಗವಹಿಸಿದ್ದರು. ಇದು ಒಗ್ಗಟ್ಟಿನ ಸಂದೇಶ ಎನ್ನುವ ಮೂಲಕ ಭಾರತದ ಪ್ರತಿಪಕ್ಷಗಳ ಕಾಲೆಳೆದರು ಮೋದಿ.

IPL_Entry_Point

ವಿಭಾಗ