ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಡಿಡಿ ನ್ಯೂಸ್ ಲಾಂಛನದ ಬಣ್ಣ ಬದಲು; ಕೆಂಪು ಹೋಗಿ ಕೇಸರಿ ಆಯ್ತು ರಾಷ್ಟ್ರೀಯ ಸುದ್ದಿ ಪ್ರಸಾರ ಸಂಸ್ಥೆಯ ಲೋಗೋ ಬಣ್ಣ

ಡಿಡಿ ನ್ಯೂಸ್ ಲಾಂಛನದ ಬಣ್ಣ ಬದಲು; ಕೆಂಪು ಹೋಗಿ ಕೇಸರಿ ಆಯ್ತು ರಾಷ್ಟ್ರೀಯ ಸುದ್ದಿ ಪ್ರಸಾರ ಸಂಸ್ಥೆಯ ಲೋಗೋ ಬಣ್ಣ

ಲೋಕಸಭೆ ಚುನಾವಣೆ ಹೊತ್ತಿನಲ್ಲೇ ಭಾರತದ ಸರ್ಕಾರ ಸ್ವಾಮ್ಯದ ದೂರದರ್ಶನ ಸಂಸ್ಥೆಯ ಡಿಡಿ ನ್ಯೂಸ್ ಹಿಂದಿ ಚಾನೆಲ್‌ನ ಲೋಗೋ ಬಣ್ಣ ಬದಲಾಗಿದೆ. ಕೆಂಪು ಹೋಗಿ ಕೇಸರಿ ಆಯ್ತು ರಾಷ್ಟ್ರೀಯ ಸುದ್ದಿ ಪ್ರಸಾರ ಸಂಸ್ಥೆಯ ಲೋಗೋ ಬಣ್ಣ. ಈ ವಿದ್ಯಮಾನ ಟೀಕೆಗೆ ಒಳಗಾಗಿದ್ದು, ಪ್ರಸಾರ ಭಾರತಿ ಅಧ್ಯಕ್ಷರು ಇಂದಿರಾಗಾಂಧಿ ಕಾಲದಲ್ಲಿ ದೂರದರ್ಶನ ಲೋಗೋ ಬಣ್ಣ ಹೀಗಿತ್ತು ನೋಡಿ ಎಂದಿದ್ದಾರೆ.

ಡಿಡಿ ನ್ಯೂಸ್ ಲಾಂಛನದ ಬಣ್ಣ ಬದಲಾಗಿದ್ದು, ಕೆಂಪು ಹೋಗಿ ಕೇಸರಿ ಆಯ್ತು. ಡಿಡಿ ನ್ಯೂಸ್ ಹಳೆಯ ಲಾಂಛನ (ಎಡಚಿತ್ರ), ಡಿಡಿ ನ್ಯೂಸ್ ಹೊಸ ಲಾಂಛನ (ಬಲ ಚಿತ್ರ)
ಡಿಡಿ ನ್ಯೂಸ್ ಲಾಂಛನದ ಬಣ್ಣ ಬದಲಾಗಿದ್ದು, ಕೆಂಪು ಹೋಗಿ ಕೇಸರಿ ಆಯ್ತು. ಡಿಡಿ ನ್ಯೂಸ್ ಹಳೆಯ ಲಾಂಛನ (ಎಡಚಿತ್ರ), ಡಿಡಿ ನ್ಯೂಸ್ ಹೊಸ ಲಾಂಛನ (ಬಲ ಚಿತ್ರ)

ನವದೆಹಲಿ: ಭಾರತ ಸರ್ಕಾರ ಸ್ವಾಮ್ಯದ ರಾಷ್ಟ್ರೀಯ ಸುದ್ದಿ ಪ್ರಸಾರ ಸಂಸ್ಥೆ ಡಿಡಿ ನ್ಯೂಸ್ ತನ್ನ ಲಾಂಛನದ ಬಣ್ಣವನ್ನು ಕೆಂಪುಬಣ್ಣದಿಂದ ಕೇಸರಿ ಬಣ್ಣಕ್ಕೆ ಬದಲಾಯಿಸಿದೆ. ಹೊಸ ರೂಪದಲ್ಲಿ ಸುದ್ದಿ ಚಾನೆಲ್ ಪ್ರಸಾರವಾಗಲಿದ್ದು, ಮೌಲ್ಯಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಡಿಡಿ ನ್ಯೂಸ್‌ ಹೇಳಿಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಡಿಡಿ ನ್ಯೂಸ್‌ನ ಲಾಂಛನ ಮತ್ತು ಅದರ ಕೆಳಗೆ ನ್ಯೂಸ್ ಎಂಬ ಹಿಂದಿ ಪದ ಹಾಗೆಯೇ ಇದ್ದು, ಬಣ್ಣವಷ್ಟೇ ಕೇಸರಿಯಾಗಿ ಬದಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಮಾಂಟೇಜ್ ಅನ್ನು ಡಿಡಿ ನ್ಯೂಸ್ ಟ್ವೀಟ್ ಮಾಡಿದ್ದು, ಅದರಲ್ಲಿ ವಿಶಿಷ್ಟ ಸ್ಟುಡಿಯೋದ ಚಿತ್ರಣವನ್ನೂ ಒದಗಿಸಿದೆ. ಸುಧಾರಿತ ವೆಬ್‌ಸೈಟ್‌ ವಿವರವೂ ಇದೆ.

ಡಿಡಿ ನ್ಯೂಸ್ ಲಾಂಛನದ ಬಣ್ಣ ಬದಲಾವಣೆ, ಹೊಸತನಕ್ಕೆ ಕೇಸರಿ ಸ್ಪರ್ಶ

“ನಮ್ಮ ಮೌಲ್ಯಗಳನ್ನು ಹಾಗೆಯೆ ಉಳಿಸಿಕೊಂಡು, ನಾವು ಈಗ ಹೊಸ ಅವತಾರದಲ್ಲಿ ನಿಮ್ಮ ಮುಂದೆ ಬರುತ್ತಿದ್ದೇವೆ . ಹಿಂದೆಂದೂ ಇಲ್ಲದಂತಹ ಸುದ್ದಿ ಪ್ರಯಾಣಕ್ಕೆ ಸಿದ್ಧರಾಗಿ.. ಹೊಸ ಡಿಡಿ ನ್ಯೂಸ್ ಅನ್ನು ವೀಕ್ಷಿಸಿ! ನಾವು ಕ್ಷಿಪ್ರವಾಗಿ, ತರಾತುರಿಯಲ್ಲಿ ಸುದ್ದಿ ಪ್ರಸಾರ ಮಾಡುವುದಿಲ್ಲ. ಅತಿಯಾದ ಸಂವೇದನೆಯೊಂದಿಗೆ ಸುದ್ದಿ ನೀಡುವ ಬದಲಾಗಿ ವಾಸ್ತವದ ವರದಿಯನ್ನು ಪ್ರಸಾರ ಮಾಡುತ್ತೇವೆ. ಡಿಡಿ ನ್ಯೂಸ್‌ನಲ್ಲಿ ಸುದ್ದಿ ಪ್ರಸಾರವಾಗುತ್ತದೆ ಎಂದಾದರೆ ಅದು ಸತ್ಯ!" ಎಂದು ಡಿಡಿ ನ್ಯೂಸ್ ಈ ವಿಡಿಯೋದೊಂದಿಗೆ ಸ್ಟೇಟಸ್ ಅಪ್ಡೇಟ್ ಮಾಡಿದೆ.

ಡಿಡಿ ನ್ಯೂಸ್ ಲಾಂಛನ ಬದಲಾವಣೆಗೆ ಸೋಷಿಯಲ್ ಮೀಡಿಯಾ ಟೀಕೆ, ಪ್ರಸಾರ ಭಾರತಿ ಸ್ಪಷ್ಟೀಕರಣ

ಡಿಡಿ ನ್ಯೂಸ್ ಏಪ್ರಿಲ್ 16ರಂದು ಬೆಳಗ್ಗೆ ಈ ಟ್ವೀಟ್ ಮಾಡಿದ್ದು, ಲಾಂಛನದ ಬಣ್ಣ ಬದಲಾವಣೆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಒಳಗಾಗಿದೆ. ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಕೂಡ ಬಳಸುತ್ತಿರುವ ಬಣ್ಣ ಕೇಸರಿಯಾಗಿದ್ದು, ಈ ಲಾಂಛನದ ಬಣ್ಣ ಬದಲಾವಣೆಗೆ ಟೀಕೆಗೆ ಗುರಿಯಾಗಿದೆ.

ಪ್ರಸಾರ ಭಾರತಿಯ ಸಿಇಒ ಗೌರವ್ ದ್ವಿವೇದಿ ಈ ಎಲ್ಲ ಟೀಕೆಗಳನ್ನು ತಳ್ಳಿಹಾಕಿದ್ದು, “ಲಾಂಛನ ಬಣ್ಣ ಕಿತ್ತಳೆ. ಆರೇಳು ತಿಂಗಳ ಹಿಂದೆ ಡಿಡಿ ಇಂಡಿಯಾ ಚಾನೆಲ್‌ ಲೋಗೋವನ್ನೂ ಕೇಸರಿ ಬಣ್ಣಕ್ಕೆ ಬದಲಾಯಿಸಿದ್ದೇವೆ. ಜಿ20ರ ಶೃಂಗಕ್ಕೆ ಮೊದಲು ಈ ಬದಲಾವಣೆ ಆಗಿತ್ತು. ಈಗ ಒಂದೇ ಗುಂಪಿನ ಎರಡು ಸುದ್ದಿವಾಹಿನಿಗಳ ಲಾಂಛನ ಒಂದೇ ಬಣ್ಣಕ್ಕೆ ತಿರುಗಿವೆ. ಸಾಮ್ಯತೆ ಇರುತ್ತದೆ. ಇನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸಾಮಾನ್ಯ ಮನರಂಜನೆ ಮತ್ತು ಸುದ್ದಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಡಿಡಿ ನ್ಯಾಷನಲ್‌ನ ಲೋಗೋವನ್ನು ಕಳೆದ ವರ್ಷ ಕೇಸರಿ/ಕಿತ್ತಳೆ ಮತ್ತು ನೀಲಿ ಬಣ್ಣಕ್ಕೆ ಕಳೆದ ವರ್ಷ ಬದಲಾಯಿಸಲಾಗಿದೆ. ಕೇವಲ ಲೋಗೋ ಬಣ್ಣವಲ್ಲ, ನಾವು ನಮ್ಮ ಉಪಕರಣಗಳು ಮತ್ತು ಸ್ಟುಡಿಯೋಗಳನ್ನೂ ನವೀಕರಿಸಿದ್ದೇವೆ ಎಂದು ಹೇಳಿದರು.

ಇಂದಿರಾ ಗಾಂಧಿಯವರ ಕಾಲದಲ್ಲಿ ದೂರದರ್ಶನಕ್ಕೆ ಕಿತ್ತಳೆ ವರ್ಣದ ಲೋಗೋ

ಲಾಂಛನದ ಬಣ್ಣ ಬದಲಾವಣೆಯನ್ನು ಸಮರ್ಥಿಸಿಕೊಂಡ ಪ್ರಸಾರ ಭಾರತಿಯ ಸಿಇಒ ಗೌರವ್ ದ್ವಿವೇದಿ, ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೂರದರ್ಶನದ ಲೋಗೋ ಕಿತ್ತಳೆ ಬಣ್ಣದಲ್ಲಿತ್ತು. 1976ರ ಏಪ್ರಿಲ್‌ 1ರಂದು ಪಂಡಿತ್ ರವಿಶಂಕರ್ ಮತ್ತು ಉಸ್ತಾದ್ ಅಲಿ ಅಹ್ಮದ್ ಹುಸೇನ್ ಖಾನ್ ಸಂಯೋಜಿಸಿದ ಥೀಮ್ ಸಂಗೀತದೊಂದಿಗೆ ಮೊದಲ ಬಾರಿಗೆ ಪ್ರಸಾರವಾಯಿತು. ಅಂದು ಲಾಂಛನ ಕಿತ್ತಳೆ ಬಣ್ಣದ್ದಾಗಿತ್ತು. ಹಸಿರು ಹಿನ್ನೆಲೆಯೂ ಇತ್ತು ಎಂದು ಹೇಳಿದರು.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point