ಕನ್ನಡ ಸುದ್ದಿ  /  Nation And-world  /  Irctc Online Medical Tourism: Irctc Now Offers Online Medical Tourism Services. How To Avail It

IRCTC online medical tourism: ಆನ್‌ಲೈನ್ ವೈದ್ಯಕೀಯ ಪ್ರವಾಸೋದ್ಯಮ ಸೇವೆ ಒದಗಿಸಲಿದೆ IRCTC; ಪ್ರಯೋಜನ ಪಡೆಯುವುದು ಹೇಗೆ?

IRCTC online medical tourism: ವೈದ್ಯಕೀಯ ಚಿಕಿತ್ಸೆ ಮತ್ತು ವೆಲ್‌ನೆಸ್‌ ಪ್ಯಾಕೇಜ್‌ಗಳನ್ನು ಹೆಚ್ಚು ಸ್ಪರ್ಧಾತ್ಮಕ ಬೆಲೆಯಲ್ಲಿ ಆನ್‌ಲೈನ್‌ ಮೂಲಕ ಗ್ರಾಹಕರಿಗೆ ಒದಗಿಸಲು IRCTC ಮುಂದಾಗಿದೆ. ಇದಕ್ಕಾಗಿ, ಆಸ್ಪತ್ರೆ, ನರ್ಸಿಂಗ್ ಹೋಮ್‌ ಮತ್ತು ಡಯಾಗ್ನೋಸ್ಟಿಕ್ ಸೆಂಟರ್‌ಗಳ ದೊಡ್ಡ ನೆಟ್‌ವರ್ಕ್‌ ಅನ್ನು ತಾಂತ್ರಿಕ ಪಾಲುದಾರರೊಂದಿಗೆ IRCTC ಎಂಪನೆಲ್ ಮಾಡುತ್ತಿದೆ.

IRCTC ಪ್ರಾಯೋಗಿಕ ಆಧಾರದ ಮೇಲೆ ವೈದ್ಯಕೀಯ-ತಾಂತ್ರಿಕ ಆನ್‌ಲೈನ್ ಸೇವೆಗಳ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿದೆ, ಇದು ಗ್ರಾಹಕರಿಗೆ ಸಂಪೂರ್ಣ ಬ್ಯಾಕ್-ಎಂಡ್ ಸೇವೆಗಳನ್ನು ಒದಗಿಸುತ್ತದೆ
IRCTC ಪ್ರಾಯೋಗಿಕ ಆಧಾರದ ಮೇಲೆ ವೈದ್ಯಕೀಯ-ತಾಂತ್ರಿಕ ಆನ್‌ಲೈನ್ ಸೇವೆಗಳ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿದೆ, ಇದು ಗ್ರಾಹಕರಿಗೆ ಸಂಪೂರ್ಣ ಬ್ಯಾಕ್-ಎಂಡ್ ಸೇವೆಗಳನ್ನು ಒದಗಿಸುತ್ತದೆ (Livemint)

ಇಂಡಿಯನ್‌ ರೈಲ್ವೆ ಆಂಡ್‌ ಟೂರಿಸಂ ಕಾರ್ಪೊರೇಶನ್‌ (IRCTC) ತನ್ನ ಪ್ರಯಾಣ ಮತ್ತು ಪ್ರವಾಸೋದ್ಯಮ ಕೊಡುಗೆಗಳ ಗುಚ್ಛವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಇತ್ತೀಚೆಗೆ ಗ್ರಾಹಕರಿಗೆ ಆನ್‌ಲೈನ್ ವೈದ್ಯಕೀಯ ಪ್ರವಾಸೋದ್ಯಮ ಪ್ಯಾಕೇಜ್‌ಗಳನ್ನು ಪ್ರಾರಂಭಿಸಿದೆ.

IRCTC ಪ್ರಾಯೋಗಿಕ ಆಧಾರದ ಮೇಲೆ ವೈದ್ಯಕೀಯ-ತಾಂತ್ರಿಕ ಆನ್‌ಲೈನ್ ಸೇವೆಗಳ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಇದು ವಿವಿಧ ವೈದ್ಯಕೀಯ ಮತ್ತು ಕ್ಷೇಮ ಪ್ಯಾಕೇಜ್‌ಗಳನ್ನು ಪಡೆಯುವ ಗ್ರಾಹಕರಿಗೆ ಸಂಪೂರ್ಣ ಬ್ಯಾಕ್-ಎಂಡ್ ಸೇವೆಗಳನ್ನು ಒದಗಿಸುತ್ತದೆ. IRCTC ವೈದ್ಯಕೀಯ ಮೌಲ್ಯದ ಸಮಗ್ರ ಅನುಭವವನ್ನು ಒದಗಿಸುವ ಈ ಉದ್ದೇಶದಿಂದ ಪ್ರಯಾಣದ ಜತೆಗೆ ಚಿಕಿತ್ಸೆಯ ನಂತರ ಪ್ರಯಾಣ ಮತ್ತು ವಸತಿ ವ್ಯವಸ್ಥೆಗಳು, ರಸ್ತೆ ವರ್ಗಾವಣೆಗಳು ಮತ್ತು ಐಚ್ಛಿಕ ಕ್ಷೇಮ ಪ್ಯಾಕೇಜ್‌ಗಳಂತಹ ಹಲವಾರು ಇತರ ಅಂಶಗಳು ಇದರಲ್ಲಿದೆ.

ವೈದ್ಯಕೀಯ ಚಿಕಿತ್ಸೆ ಮತ್ತು ವೆಲ್‌ನೆಸ್‌ ಪ್ಯಾಕೇಜ್‌ಗಳನ್ನು ಹೆಚ್ಚು ಸ್ಪರ್ಧಾತ್ಮಕ ಬೆಲೆಯಲ್ಲಿ ಆನ್‌ಲೈನ್‌ ಮೂಲಕ ಗ್ರಾಹಕರಿಗೆ ಒದಗಿಸಲು IRCTC ಮುಂದಾಗಿದೆ. ಇದಕ್ಕಾಗಿ, ಆಸ್ಪತ್ರೆ, ನರ್ಸಿಂಗ್ ಹೋಮ್‌ ಮತ್ತು ಡಯಾಗ್ನೋಸ್ಟಿಕ್ ಸೆಂಟರ್‌ಗಳ ದೊಡ್ಡ ನೆಟ್‌ವರ್ಕ್‌ ಅನ್ನು ತಾಂತ್ರಿಕ ಪಾಲುದಾರರೊಂದಿಗೆ IRCTC ಎಂಪನೆಲ್ ಮಾಡುತ್ತಿದೆ.

IRCTC ಮೆಡಿಕಲ್‌ ಟೂರಿಸಂ ಸೇವೆಗಳು (medical tourism services): ಪ್ರಯೋಜನ ಪಡೆಯುವುದು ಹೇಗೆ

ವೈದ್ಯಕೀಯ ಪ್ರವಾಸೋದ್ಯಮ ಸೇವೆಗಳನ್ನು ಪಡೆಯಲು ಗ್ರಾಹಕರು IRCTC 'www.irctctourism.com/MedicalTourism' ನ ಪ್ರವಾಸೋದ್ಯಮ ಪೋರ್ಟಲ್‌ಗೆ ಲಾಗ್ ಇನ್ ಆಗಬೇಕು. ಅವರ ಚಿಕಿತ್ಸೆಯ ಅಗತ್ಯವನ್ನು ವಿವರಿಸುವ ಮೂಲ ವಿಚಾರಣೆ ಫಾರ್ಮ್ ಅನ್ನು ಭರ್ತಿ ಮಾಡಬೇಕು.

ವಿಚಾರಣೆಗೆ ಅನುಗುಣವಾಗಿ, IRCTC ತಂಡವು ಗ್ರಾಹಕರನ್ನು ಸಂಪರ್ಕಿಸುತ್ತದೆ. ಗ್ರಾಹಕರ ಅನುಕೂಲತೆ ಮತ್ತು ಬಜೆಟ್‌ಗೆ ಅನುಗುಣವಾಗಿ ಕಾಯಿಲೆಯ ಚಿಕಿತ್ಸೆಯ ಆಯ್ಕೆಗಳನ್ನು ಅವರಿಗೆ ವಿವರಿಸುತ್ತದೆ. ಅಲ್ಲದೆ, ಗ್ರಾಹಕರು ಎಲ್ಲ ಬ್ಯಾಕ್-ಎಂಡ್ ವ್ಯವಸ್ಥೆಗಳನ್ನು ನಿರ್ವಹಿಸುವ ಮೂಲಕ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಮತ್ತಷ್ಟು ಅನುವು ಮಾಡಿಕೊಡುತ್ತದೆ.

ಕಂಪನಿಯು ತನ್ನ ಪ್ಯಾನ್ ಇಂಡಿಯಾ ಕಚೇರಿಗಳ ಜಾಲದ ಮೂಲಕ ತನ್ನ ವೈದ್ಯಕೀಯ ಪ್ರವಾಸೋದ್ಯಮ ಉಪಕ್ರಮದ ಮಾರ್ಕೆಟಂಗ್‌ ತೀವ್ರತೆಯೊಂದಿಗೆ ಮಾಡುತ್ತಿದೆ. ವಿವಿಧ ವಲಯ ಮತ್ತು ಪ್ರಾದೇಶಿಕ ಕಚೇರಿಗಳಲ್ಲಿ ಕೆಲಸ ಮಾಡುವ ತನ್ನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಉತ್ಪನ್ನ ಸಂವೇದನಾ ತರಬೇತಿಯನ್ನೂ ಒದಗಿಸಿದೆ.

ಮೆಡಿಕಲ್‌ ವ್ಯಾಲ್ಯೂ ಟ್ರಾವೆಲ್‌ ವಿಚಾರಕ್ಕೆ ಬಂದಾಗ ಏಷ್ಯಾದಲ್ಲಿ ಭಾರತವು ಹೆಚ್ಚು ಬೇಡಿಕೆಯಿರುವ ತಾಣಗಳಲ್ಲಿ ಒಂದು. ಕಳೆದ ಕೆಲವು ದಶಕಗಳಲ್ಲಿ ದೇಶವು ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧ ಪ್ರಗತಿ ಸಾಧಿಸಿದೆ. ಆಧುನಿಕ ಆರೋಗ್ಯ ರಕ್ಷಣೆ, ಪರ್ಯಾಯ ಔಷಧ ಮತ್ತು ಕ್ಷೇಮವನ್ನು ಸಂಯೋಜಿಸುವ ಸಮಗ್ರ ಆರೋಗ್ಯಕ್ಕಾಗಿ ಅನನ್ಯ ಪರಿಸರ ವ್ಯವಸ್ಥೆಯನ್ನು ರಚಿಸಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ (ಐಐಪಿಎ) ದ ಮಾಹಿತಿಯ ಪ್ರಕಾರ, ವೈದ್ಯಕೀಯ ಚಿಕಿತ್ಸೆಗಾಗಿ 2019 ರಲ್ಲಿ ಸುಮಾರು 6.97 ಲಕ್ಷ ವೈದ್ಯಕೀಯ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದಾರೆ. 2023 ರ ವೇಳೆಗೆ, ಜಾಗತಿಕ ಮೆಡಿಕಲ್‌ ವ್ಯಾಲ್ಯೂ ಟ್ರಾವೆಲ್‌ (MVT) ಮಾರುಕಟ್ಟೆ ಪಾಲನ್ನು ಭಾರತವು 6% ರಷ್ಟನ್ನು ಹೊಂದಿರುತ್ತದೆ.

ದೇಶಾದ್ಯಂತ ಆಸ್ಪತ್ರೆಗಳು, ನರ್ಸಿಂಗ್ ಹೋಮ್‌ಗಳು ಮತ್ತು ಡಯಾಗ್ನೋಸ್ಟಿಕ್ ಸೆಂಟರ್‌ಗಳಂತಹ ವೈದ್ಯಕೀಯ ಸೌಲಭ್ಯಗಳ ಹೆಚ್ಚುತ್ತಿರುವ ಉಪಸ್ಥಿತಿಯ ಜತೆಗೆ, ಗ್ರಾಹಕರು ಅವರ ಆಯ್ಕೆ, ಅನುಕೂಲತೆ ಮತ್ತು ಬಜೆಟ್‌ಗೆ ಅನುಗುಣವಾಗಿ ಅವರ ಕಾಯಿಲೆಗಳ ಚಿಕಿತ್ಸೆಗಾಗಿ ವೈದ್ಯಕೀಯ ಸೌಲಭ್ಯಗಳನ್ನು ಆಯ್ಕೆ ಮಾಡಲು ಮಾರ್ಗದರ್ಶನ ಮತ್ತು ಸಹಾಯ ಮಾಡುವ ಅವಶ್ಯಕತೆಯಿದೆ.

IPL_Entry_Point