ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Monsoon Weather Forecast: ಈ ಬಾರಿ ಮುಂಗಾರು ಕ್ಷೀಣ, ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸಾಧ್ಯತೆ, ಕೃಷಿಕರಿಗೆ ಆತಂಕ

Monsoon Weather forecast: ಈ ಬಾರಿ ಮುಂಗಾರು ಕ್ಷೀಣ, ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸಾಧ್ಯತೆ, ಕೃಷಿಕರಿಗೆ ಆತಂಕ

ಜೂನ್‌ ಮತ್ತು ಸೆಪ್ಟೆಂಬರ್‌ ನಡುವಿನ ಮುಂಗಾರು ಋತುವಿನಲ್ಲಿ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ಇರುವ ಮುನ್ಸೂಚನೆಯನ್ನು ಖಾಸಗಿ ಹವಾಮಾನ ಮುನ್ನೋಟ ನೀಡುವ ಸಮಸ್ಥೆ ಸ್ಕೈಮೆಟ್ ವೆದರ್‌ (Skymet Weather) ನೀಡಿದೆ.

Monsoon Weather forecast: ಈ ಬಾರಿ ಮುಂಗಾರು ಕ್ಷೀಣ, ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆ   (REUTERS)
Monsoon Weather forecast: ಈ ಬಾರಿ ಮುಂಗಾರು ಕ್ಷೀಣ, ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆ (REUTERS)

ನವದೆಹಲಿ: ಈ ವರ್ಷದ ಜೂನ್‌ ಮತ್ತು ಸೆಪ್ಟೆಂಬರ್‌ ನಡುವಿನ ಮುಂಗಾರು ಋತುವಿನಲ್ಲಿ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ಇರುವ ಮುನ್ಸೂಚನೆಯನ್ನು ಖಾಸಗಿ ಹವಾಮಾನ ಮುನ್ನೋಟ ನೀಡುವ ಸಮಸ್ಥೆ ಸ್ಕೈಮೆಟ್ ವೆದರ್‌ (Skymet Weather) ನೀಡಿದೆ. ಎಲ್‌ ನಿನೊ ಪರಿಣಾಮದಿಂದಾಗಿ ಈ ಬಾರಿ ಮುಂಗಾರು ಕ್ಷೀಣಿಸಲಿದ್ದು, ಬರಗಾಲವೂ ಕಾಡಲಿದೆ ಎಂದಿದೆ. ದೇಶದ ಬಹುತೇಕ ಕೃಷಿ ಉತ್ಪಾದನೆಗೆ ಮುಂಗಾರು ಮಳೆ ನಿರ್ಣಾಯಕವಾಗಿದ್ದು, ಸಹಜವಾಗಿ ಈ ಸುದ್ದಿ ಕೃಷಿಕರಿಗೆ ಆತಂಕ ತಂದಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಈ ವರ್ಷ ವಾಡಿಕೆಗಿಂತ ಕಡಿಮೆ ಮಾನ್ಸೂನ್ ಸುರಿಯುವ ಸಾಧ್ಯತೆಯಿದೆ. ಎಲ್‌ ನಿನೋ ಪರಿಣಾಮಗಳಿಂದಾಗಿ ಶೇಕಡ 20ರಷ್ಟು ಬರಗಾಲದ ಸಾಧ್ಯತೆಯಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ ವೆದರ್ ತಿಳಿಸಿದೆ.

ಅನೇಕ ರಾಜ್ಯಗಳಲ್ಲಿ ಕೃಷಿಯ ಜೀವನಾಡಿಯಾಗಿರುವ ಮುಂಗಾರು ಮಳೆಯು 4 ತಿಂಗಳ ಅವಧಿಯಲ್ಲಿ 86.86 ಸೆಂ.ಮೀ ದೀರ್ಘಾವಧಿಯ ಸರಾಸರಿ (LPA) ಶೇಕಡ 94ರಷ್ಟು ಇರಲಿದೆ. ಇದು "ಸಾಮಾನ್ಯಕ್ಕಿಂತ ಕಡಿಮೆ" ಎಂದು ನಿರೀಕ್ಷಿಸಲಾಗಿದೆ. ಎಲ್‌ಪಿಎ ಎಂದರೆ 1971 ಮತ್ತು 2020ರ ನಡುವಿನ ಸರಾಸರಿ ಮಳೆ.

ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಬರುವ ಸಾಧ್ಯತೆಯು ಶೇಕಡ 90ರಿಂದ ಶೇಕಡ 95ರಷ್ಟಿದೆ. ಈ ಬಾರಿ ಸಾಮಾನ್ಯ ಮುಂಗಾರು ಇರುವ ಸಾಧ್ಯತೆಯು ಶೇಕಡ 25ರಷ್ಟಿದೆ. ಸಾಮಾನ್ಯಕ್ಕಿಂತ ಅಧಿಕ ಮಳೆ ಸುರಿಯುವ ಸಾಧ್ಯತೆ ಶೇಕಡ 15ರಷ್ಟಿದೆ. ಅತ್ಯಧಿಕಕ್ಕಿಂತ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಶೇಕಡ 0ರಷ್ಟಿದೆ ಎಂದು ಸ್ಕೈಮೆಟ್‌ ವೆದರ್‌ನ ಹವಾಮಾನ ವರದಿ ತಿಳಿಸಿದೆ.

ಜೂನ್‌ ತಿಂಗಳಲ್ಲಿ ಎಲ್‌ಪಿಎಯ ಶೇಕಡ 99ರಷ್ಟು ಮುಂಗಾರು ಮಳೆಯಾಗಲಿದೆ. ಜುಲೈನಲ್ಲಿ ಶೇಕಡ 92 ಮತ್ತು ಆಗಸ್ಟ್‌ನಲ್ಲಿ ಶೇಕಡ 92ರಷ್ಟು ಮಳೆಯಾಗಲಿದೆ ಎಂದು ಸ್ಕೈಮೆಟ್‌ ವೆದರ್‌ ತಿಳಿಸಿದೆ.

ಭಾರತದ ಕೃಷಿ ಪ್ರದೇಶದ ಶೇಕಡ 51 ಉತ್ಪಾದನೆಯ ಶೇಕಡ 40ನಷ್ಟು ನಷ್ಟು, ಮಳೆ-ಆಧಾರಿತವಾಗಿದೆ, ಇದು ಮಾನ್ಸೂನ್ ನಿರ್ಣಾಯಕವಾಗಿದೆ. ದೇಶದ ಜನಸಂಖ್ಯೆಯ 47% ರಷ್ಟು ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ (ಈ ವರ್ಷದ ಆರ್ಥಿಕ ಸಮೀಕ್ಷೆಯ ಪ್ರಕಾರ), ಸಮೃದ್ಧವಾದ ಮಾನ್ಸೂನ್ ಆರೋಗ್ಯಕರ ಗ್ರಾಮೀಣ ಆರ್ಥಿಕತೆಯೊಂದಿಗೆ ನೇರ ಸಂಬಂಧವನ್ನು ಹೊಂದಿದೆ.

ಭಾರತದ ಶೇಕಡ 51ರಷ್ಟು ಕೃಷಿ ಪ್ರದೇಶದ ಶೇಕಡ 40ರಷ್ಟು ಮಳೆ-ಆಧಾರಿತವಾಗಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ. ಹೀಗಾಗಿ ಮುಂಗಾರು ಮಳೆಯು ಭಾರತದ ಕೃಷಿ ಪರಿಸರಕ್ಕೆ ನಿರ್ಣಾಯಕವಾಗಿದೆ. ದೇಶದ ಜನಸಂಖ್ಯೆಯ ಶೇಕಡ 47 ರಷ್ಟು ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಸಮೃದ್ಧವಾದ ಮಾನ್ಸೂನ್ ಆರೋಗ್ಯಕರ ಗ್ರಾಮೀಣ ಆರ್ಥಿಕತೆಯೊಂದಿಗೆ ನೇರ ಸಂಬಂಧವನ್ನು ಹೊಂದಿದೆ.

ಇದೇ ಕಾರಣಕ್ಕೆ ಭಾರತದ ಆರ್ಥಿಕತೆಗೆ ಅತ್ಯುತ್ತಮ ಮುಂಗಾರು ಮಳೆಯು ಅತ್ಯಂತ ಅಗತ್ಯವಾಗಿದೆ. ಇದೇ ಕಾರಣಕ್ಕೆ ಭಾರತೀಯ ಹವಾಮಾನ ಇಲಾಖೆ ಮತ್ತು ಸ್ಕೈಮೆಟ್‌ ಮುಂಗಾರು ಮುನ್ಸೂಚನೆಯನ್ನು ಜನರು ಎಚ್ಚರಿಕೆಯಿಂದ ಗಮನಿಸುತ್ತಾರೆ. ಐಎಂಡಿಯು ಹಲವು ಬಾರಿ ಮುಂಗಾರು ಮುನ್ಸೂಚನೆ ಪ್ರಕಟಿಸುತ್ತದೆ.

IPL_Entry_Point