Kannada News  /  Nation And-world  /  Nasa Says Rare Green Comet To Make Closest Approach To Earth This Week
ಅಪರೂಪದ ಹಸಿರು ಧೂಮಕೇತು
ಅಪರೂಪದ ಹಸಿರು ಧೂಮಕೇತು (nasa.gov)

Rare Green Comet: ವಸುಧೆಯನ್ನು ಇಣುಕಲಿದೆ ಅಪರೂಪದ ಹಸಿರು ಧೂಮಕೇತು: 50,000 ವರ್ಷಗಳ ನಂತರ ಬರುವ ಅತಿಥಿಗೆ ಸ್ವಾಗತ

30 January 2023, 10:10 ISTNikhil Kulkarni
30 January 2023, 10:10 IST

ಅಪರೂಪದ ಹಸಿರು ಧೂಮಕೇತುವೊಂದು ಈ ವಾರದಲ್ಲಿ ಭೂಮಿಗೆ ಅತ್ಯಂತ ಸಮೀಪ ಬರಲಿದ್ದು, ದಕ್ಷಿಣ ಗೋಳಾರ್ಧದ ಆಗಸದಲ್ಲಿ ಈ ಧೂಮಕೇತು ಸ್ಪಷ್ಟವಾಗಿ ಗೋಚರವಾಗಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಹೇಳಿದೆ. C/2022 E3 (ZTF) ಹೆಸರಿನ ಈ ಧೂಮಕೇತುವು, ಸುಮಾರು 50,000 ವರ್ಷಗಳ ನಂತರ ಭೂಮಿಗೆ ಸಮೀಪಿಸಿದೆ ಎಂದು ನಾಸಾ ತಿಳಿಸಿದೆ.

ವಾಷಿಂಗ್ಟನ್: ಅಪರೂಪದ ಹಸಿರು ಧೂಮಕೇತುವೊಂದು ಈ ವಾರದಲ್ಲಿ ಭೂಮಿಗೆ ಅತ್ಯಂತ ಸಮೀಪ ಬರಲಿದ್ದು, ದಕ್ಷಿಣ ಗೋಳಾರ್ಧದ ಆಗಸದಲ್ಲಿ ಈ ಧೂಮಕೇತು ಸ್ಪಷ್ಟವಾಗಿ ಗೋಚರವಾಗಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಹೇಳಿದೆ.

ಟ್ರೆಂಡಿಂಗ್​ ಸುದ್ದಿ

C/2022 E3 (ZTF) ಹೆಸರಿನ ಈ ಧೂಮಕೇತುವು, ಸುಮಾರು 50,000 ವರ್ಷಗಳ ನಂತರ ಭೂಮಿಗೆ ಸಮೀಪಿಸಿದೆ ಎಂದು ನಾಸಾ ತಿಳಿಸಿದೆ.

ನಾಸಾ ಪ್ರಕಾರ ಈ ಅಪರೂಪದ ಹಸಿರುವ ಧೂಮಕೇತುವು, ಭೂಮಿಯ ಮೇಲೆ ನಿಯಾಂಡರ್ತಲ್ ಪ್ರಜಾತಿಯ ಆದಿ ಮಾನವರು ವಾಸವಿದ್ದ ಕಾಲದಲ್ಲಿ ಭೂಮಿಗೆ ಭೇಟಿ ನೀಡಿತ್ತು.

ಇದೇ ಬುಧವಾರ(ಫೆ.01) ಭೂಮಿಯಿಂದ 26 ಮಿಲಿಯನ್ ಮೈಲುಗಳ (42 ಮಿಲಿಯನ್ ಕಿಲೋಮೀಟರ್) ದೂರದಿಂದ, ಈ ಅಪರೂಪದ ಹಸಿರು ಧೂಮಕೇತು ಹಾದುಹೋಗಲಿದೆ.8 ಇದು ಈ ಧೂಮಕೇತುವಿನ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಳ್ಳಲು ನೆರವಾಗಲಿದೆ ಎಂದು ನಾಸಾ ತಿಳಿಸಿದೆ.

ಈ ಧೂಮಕೇತುವನ್ನು ಕಳೆದ ವರ್ಷ ಮಾರ್ಚ್‌ನಲ್ಲಿ, ಜ್ವಿಕಿ ಟ್ರಾನ್ಸಿಯೆಂಟ್ ಫೆಸಿಲಿಟಿಯ ವೈಡ್-ಫೀಲ್ಡ್ ಸರ್ವೇ ಕ್ಯಾಮೆರಾ ಮೂಲಕ ಖಗೋಳಶಾಸ್ತ್ರಜ್ಞರು ಪತ್ತೆಹಚ್ಚಿದ್ದರು. ಆ ಸಮಯದಲ್ಲಿಈ ಹಸಿರು ಧೂಮಕೇತುವು ಗುರುಗ್ರಹದ ಕಕ್ಷೆಯಲ್ಲಿತ್ತು ಎಂದು ನಾಸಾ ಮಾಹಿತಿ ನೀಡಿದೆ.

ಈ ಅಪರೂಪದ ಧೂಮಕೇತುವು ಪ್ರಸ್ತುತವಾಗಿ ಪ್ರಕಾಶಮಾನವಾಗಿ ಹೊಳೆಯುತ್ತಿದ್ದು, ಇದೇ ಪ್ರಕಾಶಮಾನದ ಪ್ರವೃತ್ತಿಯು ಮುಂದುವರೆದರೆ, ಸಾಮಾನ್ಯ ದುರ್ಬೀನುಗಳಿಂದಲೂ ಇದನ್ನು ಸುಲಭವಾಗಿ ನೋಡಬಹುದು ಎಂದು ನಾಸಾ ಹೇಳಿದೆ.

ಧೂಮಕೇತುಗಳು ಸೂರ್ಯನ ಸುತ್ತ ಸುತ್ತುವ ಘನೀಕೃತ ಅನಿಲಗಳು, ಬಂಡೆಗಳು ಮತ್ತು ಧೂಳಿನಿಂದ ಮಾಡಲ್ಪಟ್ಟ ಕಾಸ್ಮಿಕ್ ಸ್ನೋಬಾಲ್‌ಗಳಾಗಿವೆ. ಈ ಆಕಾಶಕಾಯಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಸೂರ್ಯನ ಹತ್ತಿರ ಬಂದಾಗ ಅವು ಬಿಸಿಯಾಗುತ್ತವೆ ಮತ್ತು ಅನಿಲಗಳು ಮತ್ತು ಧೂಳಿನ ಬೃಹತ್ ಬಾಲವನ್ನು ಸೃಷ್ಟಿಸುತ್ತವೆ.

Space.com ಪ್ರಕಾರ, ಧೂಮಕೇತುವಿನ ಕಕ್ಷೆಯ ಅವಧಿಯು ಸುಮಾರು 50,000 ವರ್ಷಗಳು ಎಂದು ನಿರ್ಧರಿಸಲಾಗಿದೆ. ಇದರರ್ಥ ಅದು ಮುಂದಿನ ತಿಂಗಳು 50,000 ವರ್ಷಗಳಲ್ಲೇ ಮೊದಲ ಬಾರಿಗೆ ಭೂಮಿಯ ಸಮೀಪಕ್ಕೆ ಬರಲಿದೆ.

C/2022 E3 (ZTF) ಧೂಮಕೇತುವಿನ ಅಧ್ಯಯನದಿಂದ, ದೀರ್ಘ ಅವಧಿಯ ಧೂಮಕೇತುಗಳ ರಚನೆ, ಸೂರ್ಯನೊಂದಿಗಿನ ಅವುಗಳ ಸಂಬಂಧ ಸೇರಿದಂತೆ ಇತರೆ ಸಂಗತಿಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ನಾಸಾ ಹೇಳಿದೆ.

C/2022 E3 (ZTF) ಧೂಮಕೇತುವ ಒಂದು ಲಕ್ಷ ವರ್ಷಗಳ ಬಳಿಕ ಮತ್ತೆ ಭೂಮಿಗೆ ಹತ್ತಿರ ಬರಲಿದೆ. ಹೀಗಾಗಿ ಈ ಅಪರೂಪದ ಹಸಿರು ಧೂಮಕೇತುವನ್ನು ಕಣ್ತುಂಬಿಕೊಳ್ಳುವಂತೆ ನಾಸಾ ಜಾಗತಿಕ ಖಗೋಳಪ್ರಿಯರಲ್ಲಿ ಮನವಿ ಮಾಡಿದೆ.

ಇಂದಿನ ಪ್ರಮುಖ ಸುದ್ದಿಗಳು

Rahul Gandhi: ಕಣಿವೆಯಲ್ಲಿ ಎಲ್ಲವೂ ಸರಿ ಇದೆ ಎಂದಾದರೆ ಅಮಿತ್‌ ಶಾ ಜಮ್ಮು ಟು ಶ್ರೀನಗರ ನಡೆದು ಬರಲಿ: ರಾಹುಲ್‌ ಸವಾಲ್!‌

ಜಮ್ಮು ಮತ್ತು ಕಾಶ್ಮೀರದ ಕಾನೂನು ಮತ್ತು ಸುವ್ಯವಸ್ಥೆ ಸರಿ ಇದೆ ಎನ್ನುವುದೇ ನಿಜವಾದರೆ, ಅಮಿತ್‌ ಶಾ ಅವರು ಜಮ್ಮುವಿನಿಂದ ಶ್ರೀನಗರದವರೆಗೆ ನಡೆದುಕೊಂಡು ಬರಲಿ ನೋಡೋಣ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸವಾಲು ಹಾಕಿದ್ದಾರೆ. ಭಾರತ್‌ ಜೋಡೋ ಯಾತ್ರೆಗೆ ಸೂಕ್ತ ಭಧ್ರತೆ ಕಲ್ಪಿಸುವಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ವಿಫಲರಾಗಿದ್ದಾರೆ ಎಂದು ರಾಹುಲ್‌ ಆರೋಪಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Rahul Gandhi: ಚೀನಾ ನಮ್ಮ ನೆಲ ಕಬಳಿಸಿರುವ ಸತ್ಯವನ್ನು ನಿರಾಕರಿಸುತ್ತಿರುವ ಕೇಂದ್ರದ ನಡೆ ಅಪಾಯಕಾರಿ: ರಾಹುಲ್‌ ಕಿಡಿ!

ಲಡಾಖ್‌ನಲ್ಲಿ ಸುಮಾರು 2,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವು, ಚೀನಾದ ವಶದಲ್ಲಿದೆ ಎಂದು ಕಾಂಗ್ರೆಸ್‌ ನಾಯಕ ರಾಹಲ್‌ ಗಾಂಧಿ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಈ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಅಪಾಯಕಾರಿ ಎಂದು ರಾಹುಲ್‌ ಗುಡುಗಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

ವಿಭಾಗ