ಕನ್ನಡ ಸುದ್ದಿ  /  Nation And-world  /  Personal Finance Credit Card Reward Points How To Boost Redeem Reward Points Of Credit Card To The Maximum Jra

Credit card: ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ಹೆಚ್ಚಿಸಿಕೊಳ್ಳಲು ಈ ಸರಳ ತಂತ್ರ ಅನುಸರಿಸಿ

Credit card reward points: ಕ್ರೆಡಿಟ್ ಕಾರ್ಡ್‌ ಮೂಲಕ ಮಾಡುವ ಯಾವುದೇ ಟ್ರಾನ್ಸಾಕ್ಷನ್‌ಗೆ ರಿವಾರ್ಡ್‌ ವ್ಯಾಲ್ಯೂ ಇರುತ್ತದೆ ಎಂಬುದನ್ನು, ಕ್ರೆಡಿಟ್ ಕಾರ್ಡ್‌ ಬಳಕೆದಾರರು ತಿಳಿದುಕೊಂಡಿರಬೇಕು. ನೀವು ರಿವಾರ್ಡ್ ಪಾಯಿಂಟ್‌ ಹೆಚ್ಚಿಸಿಕೊಳ್ಳಲು ಅಗತ್ಯ ಸಲಹೆಗಳು ಇಲ್ಲಿವೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (Pixabay)

ಹೆಚ್ಚಿನ ಕ್ರೆಡಿಟ್‌ ಕಾರ್ಡ್‌ ಕಂಪನಿಗಳು ಹಾಗೂ ಬ್ಯಾಂಕ್‌ಗಳು ತನ್ನ ಗ್ರಾಹಕರಿಗೆ ಕ್ರೆಡಿಟ್‌ ಕಾರ್ಡ್‌ಗಳನ್ನು ಕೊಡುತ್ತವೆ. ಖಾತೆಯಲ್ಲಿ ಹಣಕಾಸು ವ್ಯವಹಾರಗಳು ಹೆಚ್ಚಿದಂತೆ, ಬ್ಯಾಂಕ್‌ ಸಿಬ್ಬಂದಿಯು ಗ್ರಾಹಕರಿಗೆ ಕರೆ ಮಾಡಿ ಅವರಿಗೆ ಬೇಡವೆಂದರೂ ಕ್ರೆಡಿಟ್‌ ಕಾರ್ಡ್‌ ಆಫರ್‌ ಮಾಡುತ್ತಾರೆ. ಹೀಗಾಗಿ ಈ ಕಾರ್ಡ್‌ ಬಳಕೆ ಹೆಚ್ಚಿನ ಬಳಕೆದಾರರಿಗೆ ಗೊತ್ತಿದೆ. ಇದರೊಂದಿಗೆ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು (Credit card reward points) ಸುಲಭವಾಗಿ ಹೇಗೆ ಗಳಿಸಬಹುದು, ಮತ್ತು ಯಾವ ಸುಲಭ ತಂತ್ರಗಳ ಮೂಲಕ ಅದನ್ನು ಹೆಚ್ಚಿಸಬಹುದು ಎಂಬ ಬಗ್ಗೆ ಎಲ್ಲಾ ಬಳಕೆದಾರರಿಗೆ ತಿಳಿದಿರುವುದಿಲ್ಲ. ಅದಕ್ಕೆ ಬೇಕಾದ ಪೂರಕ ಮಾಹಿತಿ ಇಲ್ಲಿದೆ.

ಪ್ರತಿ ಕ್ರೆಡಿಟ್ ಕಾರ್ಡ್ ಕಂಪನಿ ಅಥವಾ ಬ್ಯಾಂಕ್‌ಗಳು ತಮ್ಮ ಗ್ರಾಹಕರನ್ನು ಹೆಚ್ಚಿಸಲು ಬಗೆಬಗೆಯ ರಿವಾರ್ಡ್‌ ತಂತ್ರಗಳನ್ನು ಅನುಸರಿಸುತ್ತವೆ. ಹೀಗಾಗಿ, ಈ ಕಾರ್ಡ್‌ ಬಳಸಿ ನೀವು ಖರ್ಚು ಮಾಡುವ ಪ್ರತಿ ಪೈಸೆ ಪೈಸೆಗೂ, ನೀವು ರೆಡೀಮ್ ಮಾಡಬಹುದಾದ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸುವಿರಿ. ಆದರೆ, ಕ್ರೆಡಿಟ್ ಕಾರ್ಡ್‌ಗಳಿಂದ ಪಡೆಯಬಹುದಾದ ಹೆಚ್ಚಿನ ರಿವಾರ್ಡ್ ಪಾಯಿಂಟ್‌ಗಳ ಬಳಕೆಯೇ ಆಗುತ್ತಿಲ್ಲ. ಅರ್ಥಾತ್‌ ಹಲವರಿಗೆ ಅದನ್ನು ರೆಡೀಮ್‌ ಮಾಡಿಕೊಳ್ಳುವ ಬಗ್ಗೆ ಮಾಹಿತಿ ಇಲ್ಲ, ಅಥವಾ ಆಸಕ್ತಿಯೂ ಇಲ್ಲದಿರಬಹುದು.

ಹೀಗಾಗಿ, ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ಹೆಚ್ಚಿಸುವುದು ಹೇಗೆ ಎಂಬ ಮಾಹಿತಿ ತಿಳಿದಿರಬೇಕು. ಕ್ರೆಡಿಟ್ ಕಾರ್ಡ್‌ ಮೂಲಕ ಮಾಡುವ ಖರೀದಿ ಅಥವಾ ಅಥವಾ ಯಾವುದೇ ಟ್ರಾನ್ಸಾಕ್ಷನ್‌ಗೆ ರಿವಾರ್ಡ್‌ ವ್ಯಾಲ್ಯೂ ಇರುತ್ತದೆ ಎಂಬುದನ್ನು, ಕ್ರೆಡಿಟ್ ಕಾರ್ಡ್‌ ಬಳಕೆದಾರರು ತಿಳಿದುಕೊಂಡಿರಬೇಕು. ನೀವು ರಿವಾರ್ಡ್ ಪ್ಲಾನ್‌ ಹೆಚ್ಚಿಸಿಕೊಳ್ಳಲು ಅಗತ್ಯ ಸಲಹೆಗಳು ಇಲ್ಲಿವೆ.

ಜೀವನಶೈಲಿಗೆ ಸರಿಹೊಂದುವ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡಿ

ನಿಮ್ಮ ದಿನನಿತ್ಯದ ಖರೀದಿಗಳಿಗೆ ಸರಿಹೊಂದುವ ರೆಡಿಟ್ ಕಾರ್ಡ್ ಅನ್ನು ಆಯ್ಕೆ ಮಾಡುವುದು ಪ್ರಮುಖ ಅಂಶ. ಕಾರ್ಡ್‌ಗಳಲ್ಲಿ ಹಲವಾರು ಆಯ್ಕೆಗಳಿದ್ದರೂ, ನಿಮ್ಮ ಜೀವನಶೈಲಿಯ ಅಗತ್ಯಗಳಿಗೆ ಸರಿಹೊಂದುವ ಕಾರ್ಡ್‌ ಬಳಸಿ. ದಿನ ಕಳೆದಂತೆ ಕಂಪನಿಗಳ ನಡುವೆ ಸ್ಪರ್ಧೆ ಹೆಚ್ಚಾಗಿರುವುದರಿಂದ, ಹೆಚ್ಚಿನ ಕ್ರೆಡಿಟ್ ಕಾರ್ಡ್ ಕಂಪನಿಗಳು ಹೆಚ್ಚಿನ ಸೈನ್-ಅಪ್ ಬೋನಸ್‌ಗಳನ್ನು ನೀಡುತ್ತವೆ. ಹೀಗಾಗಿ ಆಯಾ ಕಾರ್ಡ್ ನೀಡುವ ಎಲ್ಲಾ ಲಾಭಗಳ ಕುರಿತು ಮಾಹಿತಿ ಕಲೆ ಹಾಕುವುದು ಮುಖ್ಯ.

ಸರಿಯಾದ ಸಮಯದಲ್ಲಿ ಸೈನ್ ಅಪ್ ಮಾಡಿ

ಕಾರ್ಡ್ ಅನ್ನು ಆಯ್ಕೆ ಮಾಡಿದ ನಂತರ, ಅದನ್ನು ಯಾವಾಗ ಪಡೆದುಕೊಳ್ಳಬೇಕು ಮತ್ತು ಯಾವಾಗ ಪಡೆಯಬಾರದು ಎಂಬುದರ ಬಗ್ಗೆಯೂ ನಿಮಗೆ ಮಾಹಿತಿ ಇರಲಿ. ರಿವಾರ್ಡ್ ಪಾಯಿಂಟ್‌ಗಳನ್ನು ನೀಡುವ ಕ್ರೆಡಿಟ್ ಕಾರ್ಡ್‌ಗಳಿಗೆ ಸೈನ್ ಅಪ್ ಮಾಡಲು ಸರಿಯಾದ ಸಮಯ ಮತ್ತು ತಪ್ಪಾದ ಸಮಯಗಳಿವೆ ಎಂಬ ಬಗ್ಗೆ ಅರಿವಿರಲಿ. ರಿವಾರ್ಡ್‌ ಸ್ಕೀಮ್‌‌ ಆಫರ್‌ ಮಾಡುವ ಬಹುತೇಕ ಹೆಚ್ಚಿನ ಕ್ರೆಡಿಟ್ ಕಾರ್ಡ್ ಕಂಪನಿಗಳು, ಸೀಮಿತ ಅವಧಿಯ ಕೊಡುಗೆ(limited offer period)ಗಳನ್ನು ಬಿಡುಗಡೆ ಮಾಡುತ್ತವೆ. ಇಂತಹ ನಿರ್ದಿಷ್ಟ ತಿಂಗಳುಗಳಲ್ಲಿ ನೋಂದಾಯಿಸುವುದು ಉತ್ತಮ. ಅಲ್ಲದೆ ಕಂಪನಿಗಳು ತಮ್ಮ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ಹೊಸ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತವೆ.

ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಸರಿಯಾದ ಸಮಯದವರೆಗೆ ಕಾದು ಪಡೆದುಕೊಳ್ಳುವುದು ಮುಖ್ಯ. ಸಾಮಾನ್ಯವಾಗಿ, ಆಗಸ್ಟ್, ನವೆಂಬರ್ ಅಥವಾ ಡಿಸೆಂಬರ್ ಸಮಯದಲ್ಲಿ ಕ್ರೆಡಿಟ್ ಕಾರ್ಡ್‌ಗೆ ಸೈನ್‌ ಅಪ್‌ ಮಾಡುವುದು ಒಳಿತು. ಆದರೆ, ಕೆಲವೊಂದು ವಿತರಕ ಸಂಸ್ಥೆಗಳಲ್ಲಿ ಇದು ಭಿನ್ನವಾಗಿರುತ್ತದೆ.

ರಿವಾರ್ಡ್ ಪಾಯಿಂಟ್‌ಗಳನ್ನು ನಿಯಮಿತವಾಗಿ ರಿಡೀಮ್ ಮಾಡಿ

ಹೆಚ್ಚಿನ ಕ್ರೆಡಿಟ್ ಕಾರ್ಡ್‌ ಬಳಕೆದಾರರು ಮಾಡುವ ಸಾಮಾನ್ಯ ತಪ್ಪು ಎಂದರೆ, ದೀರ್ಘಕಾಲ ರಿವಾರ್ಡ್ ಪಾಯಿಂಟ್‌ಗಳನ್ನು ಉಳಿಸಿಕೊಂಡು, ನಂತರ ಎಲ್ಲಾ ರಿವಾರ್ಡ್‌ಗಳನ್ನು ಒಂದೇ ಬಾರಿ ಬಳಸುವುದು. ಆದರೆ, ಪ್ರತಿ ವರ್ಷವೂ ಕಾರ್ಡ್ ವಿತರಕರು ಹೆಚ್ಚು ಮೌಲ್ಯಯುತ ವಸ್ತುಗಳನ್ನು ರಿಡೀಮ್ ಮಾಡಲು ಅಗತ್ಯವಿರುವ ಪಾಯಿಂಟ್‌ಗಳನ್ನು ಹೆಚ್ಚಿಸುತ್ತಾರೆ ಎಂಬುದನ್ನು ಅರ್ಥೈಸುವುದು ಮುಖ್ಯ. ಹೀಗಾಗಿ, ಒಂದು ನಿರ್ಧಿಷ್ಠ ಅವಧಿಯಲ್ಲಿ ನೀವು ಹೆಚ್ಚು ರಿವಾರ್ಡ್ ಕಲೆಹಾಕಿದ್ದರೂ, ಅದರ ಮೌಲ್ಯ ಕಡಿಮೆಯಾಗಬಹುದು.

ಇದಕ್ಕಾಗಿ ರಿವಾರ್ಡ್ ಪಾಯಿಂಟ್‌ಗಳನ್ನು ಆಗಾಗ ಪರಿಶೀಲಿಸುವ ಅಭ್ಯಾಸ ರೂಢಿಸಿಕೊಳ್ಳಿ. ಅಲ್ಲದೆ ಅವುಗಳನ್ನು ನಿಯಮಿತವಾಗಿ ಬಳಸುತ್ತಿರಿ. ರಿವಾರ್ಡ್ ಪಾಯಿಂಟ್‌ ಕೊನೆಗೊಳ್ಳುವ ದಿನಾಂಕವನ್ನು ಗಮನಿಸಿಕೊಂಡು, ಅದಕ್ಕೂ ಮುನ್ನವೇ ರೆಡೀಮ್‌ ಮಾಡಿಕೊಳ್ಳಿ. ನೀವು ಕಷ್ಟಪಟ್ಟು ಗಳಿಸಿದ ಅಂಕಗಳು ವ್ಯರ್ಥವಾಗಲು ಅವಕಾಶ ನೀಡಬೇಡಿ.

ಕ್ಯಾಶ್‌ಬ್ಯಾಕ್ ನೀಡುವ ಆನ್‌ಲೈನ್ ಮಾರುಕಟ್ಟೆಯನ್ನು ಬಳಸಿ‌

ಆನ್‌ಲೈನ್‌ನಲ್ಲಿ ಖರೀದಿ ಮಾಡುವುದು ಹೆಚ್ಚಾದಂತೆ ಹೆಚ್ಚುವರಿ ಅಂಕಗಳನ್ನು ಗಳಿಸುವ ಸಾಧ್ಯತೆಗಳು ಕೂಡಾ ಹೆಚ್ಚಾಗುತ್ತವೆ. ಅದರಲ್ಲೂ ವಿಶೇಷವಾಗಿ ಕ್ಯಾಶ್‌ಬ್ಯಾಕ್, ಮೈಲ್ಸ್‌ ಇತ್ಯಾದಿ. ಹೆಚ್ಚಿನ ಕ್ರೆಡಿಟ್ ಕಾರ್ಡ್ ಬ್ಯಾಂಕ್‌ಗಳು ತಮ್ಮದೇ ಆದ ಶಾಪಿಂಗ್ ಪೋರ್ಟಲ್‌ಗಳನ್ನು ಕೂಡಾ ಹೊಂದಿರುತ್ತವೆ. ಅವುಗಳಿಂದಲೂ ಖರೀದಿ ಮಾಡಬಹುದು. ಅಥವಾ ನೀವು ಕ್ಯಾಶ್‌ಬ್ಯಾಕ್ ಆಯ್ಕೆಯನ್ನು ನೀಡುವ ಆನ್‌ಲೈನ್ ಸ್ಟೋರ್‌ಗಳನ್ನೇ ಹುಡುಕಿ ಅಲ್ಲಿ ಶಾಪಿಂಗ್ ಮಾಡಬಹುದು.

ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳು ಒಂದು ಶಾಪಿಂಗ್ ವೆಬ್‌ಸೈಟ್‌ನಿಂದ ಇನ್ನೊಂದಕ್ಕೆ ಭಿನ್ನವಾಗಿದ್ದರೂ, ಅವುಗಳ ಬಗ್ಗೆ ಮೊದಲೇ ಸಂಶೋಧನೆ ಮಾಡುವುದು ಉತ್ತಮ.

ಬೋನಸ್ ಅವಕಾಶಗಳನ್ನು ಬಳಸಿಕೊಳ್ಳಿ

ಕ್ರೆಡಿಟ್ ಕಾರ್ಡ್ ಬೋನಸ್ ಎಂಬುದು,‌ ನಿಮ್ಮ ಒಟ್ಟಾರೆ ರಿವಾರ್ಡ್ ಗಳಿಕೆಗಳನ್ನು ದ್ವಿಗುಣಗೊಳಿಸಲು ಅಥವಾ ಕೆಲವೊಂದು ಬಾರಿ ಮೂರು ಪಟ್ಟು ಹೆಚ್ಚಿಸಲು ಇರುವ ಮಾರ್ಗವಾಗಿದೆ. ಹೆಚ್ಚಿನ ವಿತರಕ ಕಂಪನಿಗಳು ಆಯ್ದ ವಿಭಾಗಗಳಲ್ಲಿ ತ್ರೈಮಾಸಿಕವಾಗಿ ಹೆಚ್ಚಿನ ಕ್ಯಾಶ್‌ಬ್ಯಾಕ್ ರಿಟರ್ನ್ ದರಗಳನ್ನು ನೀಡುತ್ತವೆ. ಆದ್ದರಿಂದ, ಯಾವಾಗಲೂ ಆ ಅವಕಾಶಗಳತ್ತ ಗಮನ ಕೊಡಿ. ಬೋನಸ್ ಅಂಕಗಳನ್ನು ಗಳಿಸುವ ಅವಕಾಶವನ್ನು ಕಳೆದುಕೊಳ್ಳಬೇಡಿ.

ಆಹಾರ ಮತ್ತು ದಿನಸಿ ವಸ್ತುಗಳ ಮೇಲೆ ಹೆಚ್ಚು ಗಮನವಿರಲಿ

ನಿರ್ದಿಷ್ಟ ಖರೀದಿಗಳಿಗೆ ಹೆಚ್ಚುವರಿ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುವ ಕ್ರೆಡಿಟ್ ಕಾರ್ಡ್‌ಗಳಿಗೆ ಸೈನ್ ಅಪ್ ಮಾಡುವ ಅವಕಾಶವಿದ್ದರೂ, ಹೆಚ್ಚಿನ ಜನರು ಹಲವಾರು ಕಾರ್ಡ್‌ಗಳನ್ನು ಖರೀದಿಸುತ್ತಾರೆ. ಇದು ಹೆಚ್ಚಿನ ಗ್ರಾಹಕರು ಮಾಡುವ ಸಾಮಾನ್ಯ ತಪ್ಪು. ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದಂತೆಲ್ಲಾ, ಕ್ರೆಡಿಟ್‌ ಪಾಯಿಂಟ್‌ ಹೆಚ್ಚು ಗಳಿಸಬಹುದು ಎಂಬುದು ಸಾಮಾನ್ಯ ತಪ್ಪುಗ್ರಹಿಕೆಯಾಗಿದೆ. ಇದು ಒಂದು ದೃಷ್ಟಿಕೋನದಲ್ಲಿ ನಿಜ. ಆದರೆ, ಪ್ರತಿ ಕಾರ್ಡ್‌ಗಳನ್ನು ನಿರ್ವಹಿಸುವಾಗ ಇದುವೇ ಸವಾಲಾಗಿ ಪರಿಣಮಿಸಬಹುದು.

ಹೀಗಾಗಿ ನೀವು ಹೆಚ್ಚು ಖರೀದಿ ಮಾಡುವ ವಸ್ತುಗಳಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುವ ಕಾರ್ಡ್ ಪಡೆಯಿರಿ. ರೆಸ್ಟೋರೆಂಟ್‌ಗಳು, ಆನ್‌ಲೈನ್‌ ದಿನಸಿ ಮಾರುಕಟ್ಟೆ‌ ಅಥವಾ ಇವೆರಡರಲ್ಲೂ ಬಳಕೆಯಾಗುವ ಕಾರ್ಡ್ ಪಡೆಯಿರಿ.

ಬಡ್ಡಿ-ಮುಕ್ತ ಅವಧಿ(interest-free period)ಯ ಪ್ರಯೋಜನ ಪಡೆಯಿರಿ

ವಿಶಿಷ್ಟವಾಗಿ, ಕ್ರೆಡಿಟ್ ಕಾರ್ಡ್ ಕಂಪನಿಗಳು 15ರಿಂದ 50 ದಿನಗಳ ನಡುವಿನ ವಹಿವಾಟಿನ ಮೇಲೆ ಬಡ್ಡಿ-ಮುಕ್ತ ಅವಧಿ ನೀಡುತ್ತವೆ. ಈ ಅವಧಿಯು ಸಾಮಾನ್ಯವಾಗಿ ವಹಿವಾಟಿನ ದಿನಾಂಕ ಮತ್ತು ಅದನ್ನು ಮರುಪಾವತಿಸಲು ಅಂತಿಮ ದಿನಾಂಕದವರೆಗೆ ಇರುತ್ತದೆ. ಈ ಅವಧಿಯೊಳಗಿನ ವಹಿವಾಟಿನ ಮೇಲೆ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಕಾರ್ಡುದಾರರು ಸುಮಾರು 48 ದಿನಗಳವರೆಗೆ ಬಡ್ಡಿ-ಮುಕ್ತ ಅವಧಿಯನ್ನು ಆನಂದಿಸಬಹುದು.

IPL_Entry_Point