ಕನ್ನಡ ಸುದ್ದಿ  /  Nation And-world  /  Revolution For Contraception: This Country Will Make Condoms Free For People Aged 18 To 25 Check Here For Details

ʻRevolution for contraceptionʼ: 18ರಿಂದ 25 ವರ್ಷ ವಯಸ್ಸಿನವರಾ? ಕಾಂಡೋಮ್ಸ್‌ ಫ್ರೀ!; ಯಾವ ದೇಶ, ಏನು ಕಥೆ? ಇಲ್ಲಿದೆ ಪೂರ್ಣ ವಿವರ

ʻRevolution for contraceptionʼ: ಜನವರಿ 1ರಿಂದ 18 ರಿಂದ 25 ವರ್ಷ ವಯಸ್ಸಿನವರಿಗೆ ಕಾಂಡೋಮ್ಸ್‌ ಫ್ರೀ! ಗರ್ಭನಿರೋಧಕಕ್ಕೆ ಸಂಬಂಧಿಸಿ ಇದೊಂದು ಸಣ್ಣ ಕ್ರಾಂತಿ - ಹೀಗೆಂದು ಒಂದು ರಾಷ್ಟ್ರದ ಮು‍ಖ್ಯಸ್ಥರು ಘೋಷಿಸಿದ್ದಾರೆ. ಯಾರವರು? ಏನಿದು ಯೋಜನೆ ಇಲ್ಲಿದೆ ವಿವರ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ (PTI)

ವಯಸ್ಸು 18 ಆಯಿತಾ? 25 ವರ್ಷ ವಯಸ್ಸಿನೊಳಗೇ ಇದ್ದೀರಾ? ಜನವರಿ 1ರಿಂದ ಕಾಂಡೋಮ್ಸ್‌ ಫ್ರೀ! ಅನಗತ್ಯ ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ರೋಗ (STD) ಗಳ ಹರಡುವಿಕೆ ತಡೆಯುವುದಕ್ಕಾಗಿಯೇ ಈ ಕ್ರಮ! ಆದರೆ ಇದು ನಮ್ಮ ದೇಶದಲ್ಲಿ ಅಲ್ಲ; ಫ್ರಾನ್ಸ್‌ನಲ್ಲಿ!

ಹೌದು, ಅನಗತ್ಯ ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ರೋಗಗಳ (ಎಸ್‌ಟಿಡಿ) ಹರಡುವಿಕೆಯನ್ನು ಕಡಿಮೆ ಮಾಡುವ ಗುರಿಯನ್ನು ಫ್ರಾನ್ಸ್‌ನದ್ದು. ಹೀಗಾಗಿ ದೇಶದಲ್ಲಿರುವ 18 ರಿಂದ 25 ವರ್ಷ ವಯಸ್ಸಿನವರಿಗೆ ಶೀಘ್ರದಲ್ಲೇ ಉಚಿತವಾಗಿ ಕಾಂಡೋಮ್‌ಗಳು ಲಭ್ಯವಾಗಲಿದೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.

"ಔಷಧಾಲಯಗಳಲ್ಲಿ, ಜನವರಿ 1 ರಿಂದ 18 ರಿಂದ 25 ವರ್ಷ ವಯಸ್ಸಿನವರಿಗೆ ಕಾಂಡೋಮ್‌ ಉಚಿತವಾಗಿ ಸಿಗಲಿವೆ" ಎಂದು ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.

ಪಶ್ಚಿಮ ಫ್ರಾನ್ಸ್‌ನ ಪೊಯಿಟಿಯರ್ಸ್‌ನ ಉಪನಗರವಾದ ಫಾಂಟೈನ್-ಲೆ-ಕಾಮ್ಟೆ ಎಂಬ ಆರೋಗ್ಯ ಚರ್ಚೆಯ ಸಂದರ್ಭದಲ್ಲಿ ಯುವಕರೊಂದಿಗೆ ಮಾತನಾಡುತ್ತ, ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದು ಹೀಗೆ - "ಇದು ಗರ್ಭನಿರೋಧಕಕ್ಕೆ ಒಂದು ಸಣ್ಣ ಕ್ರಾಂತಿ."

ಫ್ರಾನ್ಸ್‌ನಲ್ಲಿ ಈಗಾಗಲೇ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಹಿಳೆಯರಿಗೆ ಉಚಿತ ಜನನ ನಿಯಂತ್ರಣ ಪರಿಕರವನ್ನು ನೀಡಲು ಪ್ರಾರಂಭಿಸಿದ ನಂತರ, 18ರಿಂದ 25 ವರ್ಷದೊಳಗಿನ ಪುರುಷರಿಗೆ ಕಾಂಡೋಮ್‌ಗಳನ್ನು ಉಚಿತ ನೀಡುವ ಯೋಜನೆ ಘೋಷಣೆ ಮಾಡಲಾಗಿದೆ. ಯುವತಿಯರಿಗೆ ಗರ್ಭನಿರೋಧಕ ಒದಗಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲಾಗುವುದು ಎಂದು ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.

ನಾವು ಈ ವಿಷಯದ ಬಗ್ಗೆ ತುಂಬಾ ಒಳ್ಳೆಯವರಲ್ಲ. ವಾಸ್ತವವು ಸಿದ್ಧಾಂತಕ್ಕಿಂತ ಬಹಳ ಭಿನ್ನವಾಗಿದೆ. ಇದು ನಮ್ಮ ಶಿಕ್ಷಕರಿಗೆ ಉತ್ತಮ ಶಿಕ್ಷಣ ನೀಡಬೇಕಾದ ಕ್ಷೇತ್ರವಾಗಿದೆ ಎಂದು ಎಮ್ಯಾನುಯೆಲ್ ಮ್ಯಾಕ್ರನ್ ಫ್ರಾನ್ಸ್‌ನಲ್ಲಿ ಲೈಂಗಿಕ ಶಿಕ್ಷಣದ ಕುರಿತು ಮಾತನಾಡುತ್ತ ಹೇಳಿದರು.

ಫ್ರಾನ್ಸ್‌ನಲ್ಲಿ, ಕಾಂಡೋಮ್‌ಗಳನ್ನು ವೈದ್ಯರು ಅಥವಾ ಸೂಲಗಿತ್ತಿಯವರು ಶಿಫಾರಸು ಮಾಡಿದರೆ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯ ಮೂಲಕ ಪೂರೈಸುವ ಕೆಲಸ ನಡೆದಿದೆ. ಫ್ರಾನ್ಸ್‌ನಲ್ಲಿ 2020 ಮತ್ತು 2021 ರಲ್ಲಿ STD ಗಳ ದರವು ಸುಮಾರು 30% ರಷ್ಟು ಹೆಚ್ಚಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಅಂದಾಜಿಸಿದ್ದಾರೆ.

ಗಮನಾರ್ಹ ವಿಚಾರಗಳು

ಮರು ಕೆವೈಸಿ ಮಾಡಿಸಲು ಬ್ಯಾಂಕ್‌ಗೆ ಹೋಗಬೇಕಾಗಿಲ್ಲ; ಆರ್‌ಬಿಐ ನಿಯಮ ಏನು ಹೇಳುತ್ತೆ ಚೆಕ್‌ ಮಾಡಿ

Re-KYC RBI rule and process: ಮರು-ಕೆವೈಸಿ ಮಾಡಲು (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಮಾಡಲು ಬ್ಯಾಂಕ್‌ಗೆ ಭೇಟಿ ನೀಡುವ ಅಗತ್ಯವಿಲ್ಲ. ವಿಳಾಸ ಬದಲಾವಣೆಯ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಪ್ರಕ್ರಿಯೆಗಳನ್ನು ಆನ್‌ಲೈನ್‌ನಲ್ಲಿ ಇದನ್ನು ಮಾಡಬಹುದು ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದರು. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ.

ತೆಲಂಗಾಣ ರಾಷ್ಟ್ರ ಸಮಿತಿ ಇನ್ನು ಭಾರತ ರಾಷ್ಟ್ರ ಸಮಿತಿ; ಇನ್ನು ದೆಹಲಿ ಕಡೆಗೆ ಕೆಸಿಆರ್‌ ನಡೆ!

Bharat Rashtra Samithi: ಕೆ. ಚಂದ್ರಶೇಖರ ರಾವ್ ಅವರು 2024 ರ ಲೋಕಸಭೆ ಚುನಾವಣೆಗೆ ಮುನ್ನ ರಾಷ್ಟ್ರಮಟ್ಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದಕ್ಕೆ ಸಿದ್ಧತೆ ನಡೆಸುತ್ತಿರುವುದರ ಸೂಚನೆ ಇದು ಎಂದು ರಾಜಕೀಯ ತಜ್ಞರು ಈ ಕ್ರಮವನ್ನು ವಿಶ್ಲೇಷಿಸಿದ್ದಾರೆ. ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ

Horoscope Today for December 9, 2022:‌ ಈ ರಾಶಿಯವರು ಇಂದು ಮಾಂತ್ರಿಕ ಸ್ನೇಹ ಮರುಶೋಧಿಸಿ ಬದುಕಿನ ಯಶಸ್ಸಿಗೆ ಬುನಾದಿ ಹಾಕ್ತಾರಂತೆ!

Daily horoscope for December 9, 2022: ಇಂದು ಅಂದರೆ ಡಿಸೆಂಬರ್‌ 9 ರಂದು ಮೇಷ, ಸಿಂಹ, ಕನ್ಯಾ, ತುಲಾ ಮತ್ತು ಇತರ ರಾಶಿಚಕ್ರಗಳ ದಿನಭವಿಷ್ಯ ವಿವರ ಇಲ್ಲಿದೆ. ಆಯಾ ರಾಶಿಚಕ್ರಗಳು ವ್ಯಕ್ತಿಗಳ ವ್ಯಕ್ತಿತ್ವವನ್ನು ಬಿಂಬಿಸುವಂಥದ್ದು. ಆದ್ದರಿಂದ ದಿನಚರಿ ಆರಂಭಿಸುವ ಮೊದಲು ಡಿ.9ರ ನಿತ್ಯಭವಿಷ್ಯ (Astrological prediction for December 9, 2022) ಗಮನದಲ್ಲಿರಲಿ. ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ

IPL_Entry_Point