ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bharat Rashtra Samithi: ತೆಲಂಗಾಣ ರಾಷ್ಟ್ರ ಸಮಿತಿ ಇನ್ನು ಭಾರತ ರಾಷ್ಟ್ರ ಸಮಿತಿ; ಇನ್ನು ದೆಹಲಿ ಕಡೆಗೆ ಕೆಸಿಆರ್‌ ನಡೆ!

Bharat Rashtra Samithi: ತೆಲಂಗಾಣ ರಾಷ್ಟ್ರ ಸಮಿತಿ ಇನ್ನು ಭಾರತ ರಾಷ್ಟ್ರ ಸಮಿತಿ; ಇನ್ನು ದೆಹಲಿ ಕಡೆಗೆ ಕೆಸಿಆರ್‌ ನಡೆ!

Bharat Rashtra Samithi: ಕೆ. ಚಂದ್ರಶೇಖರ ರಾವ್ ಅವರು 2024 ರ ಲೋಕಸಭೆ ಚುನಾವಣೆಗೆ ಮುನ್ನ ರಾಷ್ಟ್ರಮಟ್ಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದಕ್ಕೆ ಸಿದ್ಧತೆ ನಡೆಸುತ್ತಿರುವುದರ ಸೂಚನೆ ಇದು ಎಂದು ರಾಜಕೀಯ ತಜ್ಞರು ಈ ಕ್ರಮವನ್ನು ವಿಶ್ಲೇಷಿಸಿದ್ದಾರೆ.

ಮುಂದಿನ ವರ್ಷ ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ. ಈ ನಡುವೆ, ಚಂದ್ರಶೇಖರ ರಾವ್‌ ಬಿಜೆಪಿ ವಿರುದ್ಧ ತಮ್ಮ ದಾಳಿಯನ್ನು ತೀವ್ರಗೊಳಿಸುವ ನಿರೀಕ್ಷೆ ಇದೆ.
ಮುಂದಿನ ವರ್ಷ ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ. ಈ ನಡುವೆ, ಚಂದ್ರಶೇಖರ ರಾವ್‌ ಬಿಜೆಪಿ ವಿರುದ್ಧ ತಮ್ಮ ದಾಳಿಯನ್ನು ತೀವ್ರಗೊಳಿಸುವ ನಿರೀಕ್ಷೆ ಇದೆ. (PTI)

ಕೆ.ಚಂದ್ರಶೇಖರ ರಾವ್‌ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಇನ್ನು ಭಾರತ್‌ ರಾಷ್ಟ್ರ ಸಮಿತಿ (ಬಿಆರ್‌ಎಸ್‌). ಭಾರತೀಯ ಚುನಾವಣಾ ಆಯೋಗ ಈ ಮರುನಾಮಕರಣಕ್ಕೆ ಗುರುವಾರ ಹಸಿರು ನಿಶಾನೆ ತೋರಿದೆ.

ಕೆ.ಚಂದ್ರಶೇಖರ ರಾವ್‌ ನೇತೃತ್ವದ ಟಿಆರ್‌ಎಸ್‌ ಮರುನಾಮಕರಣದ ವಿಚಾರವನ್ನು ಕೆಲವು ತಿಂಗಳ ಹಿಂದೆ ಪ್ರಸ್ತಾಪಿಸಿ ಭಾರತ್‌ ರಾಷ್ಟ್ರ ಸಮಿತಿ ಎಂದು ಹೆಸರು ಘೋಷಿಸಿತ್ತು. ಅಲ್ಲದೆ ಚಂದ್ರಶೇಖರ ರಾವ್‌ ಅವರು ಭಾರತೀಯ ಚುನಾವಣಾ ಆಯೋಗಕ್ಕೆ ಮರುನಾಮಕರಣದ ವಿಚಾರವಾಗಿ ಮನವಿಪತ್ರವನ್ನು ಸಲ್ಲಿಸಿದ್ದರು. ಅದನ್ನು ಚುನಾವಣಾ ಆಯೋಗ ನಿನ್ನೆ (ಡಿ.8) ಅಂಗೀಕರಿಸಿದ್ದು, ಮರುನಾಮಕರಣಕ್ಕೆ ಒಪ್ಪಿಗೆ ಸೂಚಿಸಿದೆ.

ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಮರುನಾಮಕರಣದ ವಿಚಾರವನ್ನು ಟಿಆರ್‌ಎಸ್‌ ಅಕ್ಟೋಬರ್‌ 5ರಂದು ಘೋಷಿಸಿತ್ತು. 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲೇ ರಾಷ್ಟ್ರಮಟ್ಟದಲ್ಲಿ ಮಹತ್ವದ ಪಾತ್ರ ನಿರ್ವಹಿಸುವುದಕ್ಕಾಗಿ ಕೆ.ಚಂದ್ರಶೇಖರ ರಾವ್‌ ಅವರು ಪಕ್ಷದ ಮರುನಾಮಕರಣಕ್ಕೆ ಕ್ರಮ ತೆಗೆದುಕೊಂಡಿದ್ದರು. 2024ರಲ್ಲಿ ಜಂಟಿ ವಿಪಕ್ಷ ಮೈತ್ರಿ ರಚಿಸಿ ಪ್ರಬಲ ಪ್ರಧಾನಿ ಅಭ್ಯರ್ಥಿಯನ್ನು ಪ್ರಧಾನಿ ನರೇಂದ್ರ ಮೋದಿಯವರ ಎದುರು ನಿಲ್ಲಿಸಲು ತಯಾರಿ ನಡೆದಿದೆ. ಹೀಗಾಗಿ ಕಳೆದ ಕೆಲವು ತಿಂಗಳುಗಳಿಂದ ಕೆ.ಚಂದ್ರಶೇಖರ್‌ ರಾವ್‌ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಪಕ್ಷದ ಮರುನಾಮಕರಣದ ವಿಚಾರವನ್ನು ತೆಲಂಗಾಣ ಮುಖ್ಯಮಂತ್ರಿಯೂ ಆಗಿರುವ ಕೆ.ಚಂದ್ರಶೇಖರ ರಾವ್‌ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ತಮಿಳುನಾಡಿನ ವಿದುತಲೈ ಚಿರುತೈಗಳ್‌ ಕಚ್ಛಿ (ವಿಸಿಕೆ) ನಾಯಕ ಥೋಲ್‌ ತಿರುಮವಲವನ್‌ ಸಮ್ಮುಖದಲ್ಲಿ ಪ್ರಸ್ತಾಪಿಸಿ ನಿರ್ಣಯ ತೆಗೆದುಕೊಂಡಿದ್ದರು.

ತೆಲಂಗಾಣದಲ್ಲಿ ಮುಂದಿನ ವರ್ಷವೇ ಚುನಾವಣೆ ಇದೆ. ಬಿಜೆಪಿ ವಿರುದ್ಧ ದಾಳಿಯನ್ನು ಕೆಸಿಆರ್‌ ಇನ್ನಷ್ಟು ತೀವ್ರಗೊಳಿಸುವ ನಿರೀಕ್ಷೆ ಇದೆ. ಪಕ್ಷದ ಹೆಸರು ಬದಲಾವಣೆ ನಿರ್ಣಯ ತೆಗೆದುಕೊಂಡ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು "ದೇಶ್‌ ಕೇ ನೇತಾ ಕೆಸಿಆರ್‌, ಡಿಯರ್‌ ಇಂಡಿಯಾ ಹಿ ಈಸ್‌ ಕಮಿಂಗ್‌ʼ ಮುಂತಾದ ಘೋಷಣೆ ಕೂಗಿ ಗಮನಸೆಳೆದಿದ್ದರು. ರಾಷ್ಟ್ರರಾಜಕಾರಣದ ಕಡೆಗೆ ಕೆಸಿಆರ್‌ ಚಿತ್ತ ಮತ್ತು ನಡೆಯನ್ನು ಸ್ಪಷ್ಟಪಡಿಸಿದ್ದರು.

ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್‌ ಅವರು, ಇತ್ತೀಚಿನ ತಿಂಗಳುಗಳ ಅವಧಿಯಲ್ಲಿ ಜೆಡಿ (ಎಸ್) ಮುಖ್ಯಸ್ಥ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಎನ್‌ಸಿಪಿಯ ಶರದ್ ಪವಾರ್, ಟಿಎಂಸಿಯ ಮಮತಾ ಬ್ಯಾನರ್ಜಿ, ಎಎಪಿಯ ಅರವಿಂದ್ ಕೇಜ್ರಿವಾಲ್ ಮತ್ತು ಇತರ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್ ತನ್ನ ನೇರ ಸ್ಪರ್ಧಿಯಾಗಿರುವುದರಿಂದ ಅವರು ಪ್ರಜ್ಞಾಪೂರ್ವಕವಾಗಿ ಕಾಂಗ್ರೆಸ್ ಅನ್ನು ಕಡೆಗಣಿಸುತ್ತಿದ್ದಾರೆ. ಕೆಸಿಆರ್ ಹಲವು ಸಂದರ್ಭಗಳಲ್ಲಿ 'ಬಿಜೆಪಿಯೇತರ, ಕಾಂಗ್ರೆಸ್ಸೇತರ ಮೈತ್ರಿಗೆ ಒಲವು ತೋರಿದ್ದರು.

ಆದಾಗ್ಯೂ, ಬಹುತೇಕ ವಿರೋಧ ಪಕ್ಷಗಳು ಇದ್ದರೂ, ಕಾಂಗ್ರೆಸ್ ಮಾತ್ರವೇ ರಾಷ್ಟ್ರೀಯ ಕೇಡರ್ ಹೊಂದಿರುವ ಏಕೈಕ ವಿರೋಧ ಪಕ್ಷವಾಗಿದೆ. ದೊಡ್ಡ-ಹಳೆಯ-ಪಕ್ಷ. ಅದನ್ನು ಕಡೆಗಣಿಸಿ ಅಥವಾ ಅದರ ನಾಯಕರೊಂದಿಗೆ ಯಾವುದೇ ಸಮಾಲೋಚನೆ ಅಥವಾ ಮೈತ್ರಿಯನ್ನು ನಿರ್ಮಿಸಲು ಸಾಧ್ಯವಿಲ್ಲ ಎಂಬುದು ರಾಜಕೀಯ ಪರಿಣತರ ನಂಬಿಕೆ.

ಗಮನಾರ್ಹ ಸುದ್ದಿಗಳು

ಮಳೆಹಾನಿ ಸಮೀಕ್ಷೆ ವರದಿ ತಿದ್ದುಪಡಿಗೆ ಒತ್ತಡ; ರೇಣುಕಾಚಾರ್ಯ ವಿರುದ್ದ FIR; ಏನಿದು ಪ್ರಕರಣ?

Honnali MLA vs Nyamathi VAO: ಮಳೆಹಾನಿ ಸಮೀಕ್ಷೆ ವರದಿಯಲ್ಲಿ ತಿದ್ದುಪಡಿಗೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ನ್ಯಾಮತಿ ಗ್ರಾಮ ಅಭಿವೃದ್ಧಿ ಅಧಿಕಾರಿ (VAO) ಮೇಲೆ ಒತ್ತಡ ಹೇರಿದ್ದರು. ಇದಕ್ಕೆ ಬಗ್ಗೆ ನ್ಯಾಮತಿಯ ಕುಂಕುವಾ ಗ್ರಾಮದ ವಿಎಒ ಪ್ರಶಾಂತ್‌ ಕುಮಾರ್‌ ಕೋರ್ಟ್‌ ಮೂಲಕ FIR ದಾಖಲಿಸಿದ್ದಾರೆ. ಈ ವಿದ್ಯಮಾನದ ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ.

IPL_Entry_Point