ಕನ್ನಡ ಸುದ್ದಿ  /  Nation And-world  /   S Jaishankar Reprimanded Foreign Newspapers For Calling Indian Government As Hindu Nationalists

S Jaishankar: ನಿಮ್ಮ ಸರ್ಕಾರವನ್ನು "ಕ್ರಿಶ್ಚಿಯನ್‌ ರಾಷ್ಟ್ರವಾದಿ"ಎಂದೇಕೆ ಕರೆಯುವುದಿಲ್ಲ?: ವಿದೇಶಿ ಮಾಧ್ಯಮಗಳ ನಶೆ ಇಳಿಸಿದ ಜೈಶಂಕರ್!‌

ಬಹುತೇಕ ವಿದೇಶಿ ಮಾಧ್ಯಮಗಳು ಭಾರತ ಸರ್ಕಾರವನ್ನು "ಹಿಂದೂ ರಾಷ್ಟ್ರೀಯತಾವಾದಿ" ಎಂದು ಉಲ್ಲೇಖಿಸುತ್ತವೆ. ಆದರೆ ಅಮೆರಿಕ ಹಾಗೂ ಇತರ ಯುರೋಪ್‌ ರಾಷ್ಟ್ರಗಳ ಸರ್ಕಾರಗಳನ್ನು ಅವರು "ಕ್ರಿಶ್ಚಿಯನ್‌ ರಾಷ್ಟ್ರವಾದಿ" ಎಂದೇಕೆ ಕರೆಯುವುದಿಲ್ಲ ಎಂಬುದು ತಿಳಿಯದಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.‌ ಜೈಶಂಕರ್‌ ಗುಡುಗಿದ್ದಾರೆ.

ಡಾ. ಎಸ್‌. ಜೈಶಂಕರ್‌ (ಸಂಗ್ರಹ ಚಿತ್ರ)
ಡಾ. ಎಸ್‌. ಜೈಶಂಕರ್‌ (ಸಂಗ್ರಹ ಚಿತ್ರ) (ANI)

ನವದೆಹಲಿ: ಭಾರತ ಸರ್ಕಾರವನ್ನು ಪದೇ ಪದೇ "ಹಿಂದೂ ರಾಷ್ಟ್ರೀಯತಾವಾದಿ" ಎಂದು ಕರೆಯುತ್ತಿರುವ ವಿದೇಶಿ ಮಾಧ್ಯಮಗಳನ್ನು, ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್.‌ ಜೈಶಂಕರ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಹುತೇಕ ವಿದೇಶಿ ಮಾಧ್ಯಮಗಳು ಭಾರತ ಸರ್ಕಾರವನ್ನು "ಹಿಂದೂ ರಾಷ್ಟ್ರೀಯತಾವಾದಿ" ಎಂದು ಉಲ್ಲೇಖಿಸುತ್ತವೆ. ಆದರೆ ಅಮೆರಿಕ ಹಾಗೂ ಇತರ ಯುರೋಪ್‌ ರಾಷ್ಟ್ರಗಳ ಸರ್ಕಾರಗಳನ್ನು ಅವರು "ಕ್ರಿಶ್ಚಿಯನ್‌ ರಾಷ್ಟ್ರವಾದಿ" ಎಂದೇಕೆ ಕರೆಯುವುದಿಲ್ಲ ಎಂಬುದು ತಿಳಿಯದಾಗಿದೆ ಎಂದು ಡಾ.ಎಸ್.‌ ಜೈಶಂಕರ್‌ ಗುಡುಗಿದ್ದಾರೆ.

ಬಹುತೇಕ ವಿದೇಶಿ ಮಾಧ್ಯಮಗಳು ಧರ್ಮ ವಿಶೇಷಣ ಪದಗಳನ್ನು ಭಾರತಕ್ಕೆ ಮಾತ್ರ ಸಿಮೀತಗೊಳಿಸಿವೆ. ಆದರೆ ಭಾರತ ಇಡೀ ವಿಶ್ವಕ್ಕಾಗಿ ಹೆಚ್ಚಿನದನ್ನು ಮಾಡಲು ಬಯಸುತ್ತದೆ ಎಂಬುದು ಅವರಿಗೆ ಅರ್ಥವೇ ಆಗುತ್ತಿಲ್ಲ ಎಂದು ಜೈಶಂಕರ್‌ ಕಿಡಿಕಾರಿದ್ದಾರೆ.

ಪುಣೆಯಲ್ಲಿ ತಮ್ಮ "ದಿ ಇಂಡಿಯಾ ವೇ: ಸ್ಟ್ರಾಟಜೀಸ್ ಫಾರ್ ಆನ್ ಅನ್ಸರ್ಟೈನ್ ವರ್ಲ್ಡ್" ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜೈಶಂಕರ್‌, ಜಾಗತಿಕ ಒಳಿತಿಗಾಗಿ ಭಾರತದ ಪರಿಶ್ರಮವನ್ನು ವಿದೇಶಿ ಮಾಧ್ಯಮಗಳು ಗುರುತಿಸಬೇಕು ಎಂದು ಆಗ್ರಹಿಸಿದರು. ಈ ಪುಸ್ತಕದ ಮರಾಠಿ ಆವೃತ್ತಿಗೆ 'ಭಾರತ್ ಮಾರ್ಗ' ಎಂದು ಹೆಸರಿಸಲಾಗಿದ್ದು, ಇದನ್ನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಬಿಡುಗಡೆ ಮಾಡಿದರು.

“ಕಳೆದ 9 ವರ್ಷಗಳ ದೇಶದ ರಾಜಕೀಯ ಪಯಣವನ್ನು ಅವಲೋಕಿಸಿದರೆ, ಸರ್ಕಾರವು ಹೆಚ್ಚು ರಾಷ್ಟ್ರವಾದಿ ವಿಚಾರಗಳನ್ನು ಹೊಂದಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ನಮಗೆ ಹೆಮ್ಮೆಯ ವಿಷಯವೇ ಹೊರತು, ಇದಕ್ಕಾಗಿ ಕ್ಷಮೆಯಾಚಿಸುವ ಅಗತ್ಯ ಖಂಡಿತಾಗಿಯೂ ಇಲ್ಲ. ಸರ್ಕಾರ ನಡೆಸುತ್ತಿರುವ ಇದೇ ರಾಷ್ಟ್ರೀಯವಾದಿಗಳು, ವಿದೇಶಗಳಿಗೆ ಮತ್ತು ಇತರ ದೇಶಗಳಲ್ಲಿನ ವಿಪತ್ತು ಸಂದರ್ಭಗಳಲ್ಲಿ ನೆರವು ಒದಗಿಸಿದ್ದಾರೆ ಎಂಬುದನ್ನು ನಾವು ಮರೆಯಬಾರದು ಎಂದು ಜೈಶಂಕರ್‌ ಮಾರ್ಮಿಕವಾಗಿ ನುಡಿದರು.

ಮುಂದಿನ ಬಾರಿ ನೀವು ವಿದೇಶಿ ಪತ್ರಿಕೆಗಳಲ್ಲಿ ಭಾರತ ಸರ್ಕಾರವನ್ನು "ಹಿಂದೂ ರಾಷ್ಟ್ರೀಯತಾವಾದಿ" ಎಂದು ಉಲ್ಲೇಖಿಸಿರುವುದನ್ನು ಓದಿ ಆಶರ್ಯಪಡಬೇಡಿ. ಬದಲಿಗೆ ಸಂತಸ ವ್ಯಕ್ತಪಡಿಸಿ. ಏಕೆಂದರೆ ಇದೇ ಹಿಂದೂ ರಾಷ್ಟ್ರೀಯತಾವಾದಿಗಳು ಇಡೀ ಜಗತ್ತಿಗೆ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂದು ಜೈಶಂಕರ್‌ ದೇಶವಾಸಿಗಳಿಗೆ ಮನವಿ ಮಾಡಿದರು.

ಭಾರತದ ಜಿ20 ಪ್ರೆಸಿಡೆನ್ಸಿ ಅವಧಿಯಲ್ಲಿ ದೇಶದ ಪ್ರತಿಯೊಬ್ಬರೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ. ಭಾರತದಲ್ಲಿ ಅದೆಷ್ಟು ಉತ್ಸಾಹ ಮತ್ತು ಸಕಾರಾತ್ಮಕ ಭಾವನೆ ಮನೆ ಮಾಡಿದೆ ಎಂಬುದನ್ನು ನೋಡಲು ಜಿ20 ಸಭೆಗಳು ಜಗತ್ತಿಗೆ ಅವಕಾಶವನ್ನು ಒದಗಿಸಿವೆ ಎಂದು ಜೈಶಂಕರ್‌ ಇದೇ ವೇಳೆ ಅಭಿಪ್ರಾಯಪಟ್ಟರು.

ಇದೇ ವೇಳೆ ಚೀನಾವನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಜೈಶಂಕರ್‌, "1962 ರಲ್ಲಿ ಚೀನಾ ಆಕ್ರಮಿಸಿಕೊಂಡಿರುವ ಪ್ರದೇಶಗಳ ಬಗ್ಗೆ ಪ್ರತಿಪಕ್ಷಗಳು ಏಕೆ ಮಾತನಾಡುವುದಿಲ್ಲ.."? ಎಂದು ಪ್ರಶ್ನಿಸಿದರು. ಅಲ್ಲದೇ "ನಾನು ಇನ್‌ಪುಟ್‌ಗಳನ್ನು ಪಡೆಯಲು ಚೀನೀ ರಾಯಭಾರಿಯ ಬಳಿಗೆ ಹೋಗುವುದಿಲ್ಲ.." ಎಂದೂ ಜೈಶಂಕರ್‌ ರಾಹುಲ್‌ ಅವರ ಕಾಲೆಳೆದರು.

ಗಡಿ ವಿಚಾರವಾಗಿ ನನಗೆ ಮಾಹಿತಿ ಬೇಕು ಎನಿಸಿದರೆ ನಾನು ಭಾರತದ ಮಿಲಿಟರಿ ನಾಯಕತ್ವದ ಬಳಿ ಹೋಗುತ್ತೇನೆಯೇ ಹೊರತು, ಚೀನಾದ ರಾಯಭಾರ ಕಚೇರಿಯ ಕದ ತಟ್ಟುವುದಿಲ್ಲ. ಆದರೆ ಹೀಗೆ ಮಾಡುವವರು ನಮಗೆ ಬುದ್ಧಿವಾದ ಹೇಳಲು ಬರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಡಾ.ಎಸ್.‌ ಜೈಶಂಕರ್‌ ಅವರು ರಾಹುಲ್‌ ಗಾಂಧಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತಾದ ಬಿಬಿಸಿಯ ವಿವಾದಾತ್ಮಕ ಸಾಕ್ಷ್ಯಚಿತ್ರ 'ಇಂಡಿಯಾ: ದಿ ಮೋದಿ ಕ್ವೆಶ್ಚನ್' ಕುರಿತು, ಭಾರತ ಈಗಾಗಲೇ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಇದು ಪ್ರಧಾನಿ ಮೋದಿ ಮತ್ತು ಭಾರತದ ವರ್ಚಸ್ಸಿಗೆ ಧಕ್ಕೆ ತರುವ ಹುನ್ನಾರ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್‌ ಬಾಗ್ಚಿ ಗಂಭೀರ ಆರೋಪ ಮಾಡಿದ್ದಾರೆ.

IPL_Entry_Point

ವಿಭಾಗ