ಕನ್ನಡ ಸುದ್ದಿ  /  Nation And-world  /  Technology News Wwdc 2023 Apple Vision Pro Headset First Look Experience Mixed Reality Tech News In Kannada Pcp

Apple Vision Pro: ನಿಜಜಗತ್ತು ಭ್ರಾಮಕ ಜಗತ್ತಿನ ಯುಗಳಗೀತೆ, ಆಪಲ್‌ನ ಹೊಸ ವಿಷನ್‌ ಪ್ರೊ ಹೆಡ್‌ಸೆಟ್‌ ನೋಡಿ ಥ್ರಿಲ್ಲಾದ ಟೆಕ್‌ ಪ್ರಿಯರು

WWDC23 Apple Vision Pro headset: ಆಪಲ್‌ ಕಂಪನಿಯ ನೂತನ ವಿಷನ್‌ ಪ್ರೊ ಹೆಡ್‌ಸೆಟ್‌ ಧರಿಸುವ ಅಪೂರ್ವ ಅವಕಾಶ ಕೆಲವು ಮಾಧ್ಯಮ ಮಂದಿಗೆ ದೊರಕಿದೆ. 3,499 ಡಾಲರ್‌ ಮೊತ್ತದ ಈ ವಿಷನ್‌ ಪ್ರೊದಲ್ಲಿ ಏನಿದೆ ಎಂದು ನೋಡೋಣ ಬನ್ನಿ.

Apple Vision Pro: ನಿಜಜಗತ್ತು ಭ್ರಾಮಕ ಜಗತ್ತಿನ ಯುಗಳಗೀತೆ, ಆ್ಯಪಲ್‌ನ ಹೊಸ ವಿಷನ್‌ ಪ್ರೊ ಹೆಡ್‌ಸೆಟ್‌ ನೋಡಿ ಥ್ರಿಲ್ಲಾದ ಟೆಕ್‌ ಪ್ರಿಯರು
Apple Vision Pro: ನಿಜಜಗತ್ತು ಭ್ರಾಮಕ ಜಗತ್ತಿನ ಯುಗಳಗೀತೆ, ಆ್ಯಪಲ್‌ನ ಹೊಸ ವಿಷನ್‌ ಪ್ರೊ ಹೆಡ್‌ಸೆಟ್‌ ನೋಡಿ ಥ್ರಿಲ್ಲಾದ ಟೆಕ್‌ ಪ್ರಿಯರು (Apple)

ಆಪಲ್‌ ಕಂಪನಿಯು ಸೋಮವಾರ ವಿಶ್ಲೇಷಕರು ಮತ್ತು ಮಾಧ್ಯಮ ಮಂದಿಗೆ ತನ್ನ ನೂತನ ವಿಷನ್‌ ಪ್ರೊ ಹೆಡ್‌ಸೆಟ್‌ ಅನ್ನು ಪರಿಶೀಲಿಸಲು ಅವಕಾಶ ನೀಡಿತ್ತು. ಈ ಪ್ರಾಡಕ್ಟ್‌ ಇನ್ನೂ ಮಾಸ್‌ ಮಾರ್ಕೆಟ್‌ಗೆ ಬಿಡುಗಡೆಯಾಗಿಲ್ಲ. ಇದು ಡೆಮೊ ಆವೃತ್ತಿಯಾಗಿದ್ದು, ಭವಿಷ್ಯದಲ್ಲಿ ಲಾಂಚ್‌ ಆಗಲಿದೆ. ಈಗ ಇದಕ್ಕೆ ಬಳಸಿರುವ ತಂತ್ರಜ್ಞಾನಗಳು ದುಬಾರಿಯಾಗಿರುವುದರಿಂದ ಈ ಹೆಡ್‌ಸೆಟ್‌ಗೆ 3,499 ಡಾಲರ್‌ ನಿಗದಿಪಡಿಸಲಾಗಿದೆ. ಭವಿಷ್ಯದಲ್ಲಿ ಈ ದರ ಕಡಿಮೆಯಾಗುವ ಸೂಚನೆಯನ್ನು ಕಂಪನಿ ನೀಡಿದೆ.

ಈ Vision Pro ಹೆಡ್‌ಸೆಟ್‌ ಆಪಲ್‌ ವಾಚ್‌ ಕ್ರೌನ್‌ನಂತೆ ಇದೆ. ಈ ಹೆಡ್‌ಸೆಟ್‌ನ ವಿಶಾಲ ಕನ್ನಡಕದಲ್ಲಿ ಎರಡು ನೋಟ ದೊರಕುತ್ತದೆ. ಒಂದು ಹೊರಜಗತ್ತಿನ ನೋಟ. ಮತ್ತೊಂದು ಒಳಗಿನ ವರ್ಚ್ಯುಯಲ್‌ ಜಗತ್ತಿನ ನೋಟ. ಮನೆಯ ಕೊಠಡಿಯಲ್ಲಿ ನಡೆದಾಡುತ್ತ ಅಥವಾ 3ಡಿ ಫಿಲ್ಮ್‌ ಅನ್ನು ಜತೆಜತೆಗೆ ನೋಡಲು ಇದು ಸಹಕರಿಸುತ್ತದೆ. ಇವೆರಡನ್ನು ಜತೆಯಾಗಿ ವೀಕ್ಷಿಸುವುದು ನ್ಯಾಚುರಲ್‌ ಆಗಿರಲಿದೆ.

ಸುದ್ದಿಸಂಸ್ಥೆಯ ವರದಿಗಾರರು ಈ ಸಾಧನವನ್ನು ಪರಿಶೀಲಿಸುವ ವೇಳೆ ಒಮ್ಮೆ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಆಗ ಆಪಲ್‌ ಸಿಬ್ಬಂದಿ ಬಂದು ಆ ಸಾಧನವನ್ನು ರಿಬೂಟ್‌ ಮಾಡಿಕೊಟ್ಟರು. ಹೀಗಾಗಿ, ಇದರ ಇನ್ನಷ್ಟು ಪರೀಕ್ಷೆ, ಅಭಿವೃದ್ಧಿ ಕಾರ್ಯ ಪೆಂಡಿಂಗ್‌ ಇದೆ ಎಂದುಕೊಳ್ಳಬಹುದು.

ವಿಷನ್‌ ಪ್ರೊದಲ್ಲಿ ಗಮನಿಸಬಹುದಾದ ಪ್ರಮುಖಾಂಶಗಳು

  1. ಈ ಹೆಡ್‌ಸೆಟ್‌ ಧರಿಸಿದಾಗ ನಿಜಜಗತ್ತಿನ ಮನುಷ್ಯರು ಕಾಣಿಸುತ್ತಾರೆ. ಡಿಫಾಲ್ಟ್‌ ಮೋಡ್‌ನಲ್ಲಿ ಹೊರಜಗತ್ತು ಕಲರ್‌ಫುಲ್‌ ಆಗಿ ಕಾಣಿಸುತ್ತದೆ. ಈ ಸಮಯದಲಲ್ಲಿ ವರ್ಚ್ಯುಯಲ್‌ ಜಗತ್ತಿಗೆ ಪ್ರವೇಶಿಸಿದಾಗ ಹೆಡ್‌ಸೆಟ್‌ನ ಹೊರಭಾಗದ ಕ್ಯಾಮೆರಾಗಳು ಹೊರಭಾಗದಲ್ಲಿರುವ ಮನುಷ್ಯರು, ವಸ್ತುಗಳ ಕಡೆಗೆ ಗಮನ ನೀಡುತ್ತದೆ. ಎಲ್ಲಾದರೂ ಹೆಡ್‌ಸೆಟ್‌ ಹಾಕಿರೋ ಇನ್ನೊಬ್ಬ ವ್ಯಕ್ತಿಯನ್ನೂ ಈ ವರ್ಚ್ಯುಯಲ್‌ ಜಗತ್ತಿಗೆ ಕನೆಕ್ಟ್‌ ಮಾಡಬಹುದು.
  2. ಹಾಲಿವುಡ್‌ ಸಿನಿಮಾಗಳಲ್ಲಿ ಕಂಡಂತಹ ವಿಷಯಗಳಲ್ಲಿ ಈಗ ನಿಜವಾಗಿಯೂ ಸಂಭವಿಸುತ್ತಿದೆ ಎನ್ನಬಹುದು. ಈ ಹೆಡ್‌ಸೆಟ್‌ಗೆ ಸೂಕ್ತವಾಗುವಂತಹ 3ಡಿ ವಿಡಿಯೋಗಳ ರಚನೆಯೂ ಹೆಚ್ಚಲಿದೆ. ವ್ಯಕ್ತಿಯೊಬ್ಬರು ಹೊರಜಗತ್ತನ್ನು ನೋಡುತ್ತ, ಒಳಜಗತ್ತನ್ನು ನೋಡಲು ಸೂಕ್ತವಾಗುವಂತೆ ವಿಶೇಷವಾಗಿ ಶೂಟ್‌ ಮಾಡಿದ ಸಿನಿಮಾಗಳ ಅಗತ್ಯ ಇದಕ್ಕಿದೆ.
  3. ಇದರಲ್ಲಿ ಕಾಣುವ ಸ್ಥಳ ಗೊಂದಲ ಉಂಟು ಮಾಡಬಹುದು. ವರ್ಚ್ಯುವಲ್‌ ವರ್ಲ್ಡ್‌ನಲ್ಲಿ ಎರಡು ಕಂದಕಗಳ ನಡುವೆ ತೂಗಾಡುತ್ತ ವ್ಯಕ್ತಿಯೊಬ್ಬರು ಹೋಗುತ್ತಿರಬಹುದು. ಹೊರಜಗತ್ತಿನಲ್ಲಿ ನಯವಾದ ರಸ್ತೆ ಇರಬಹುದು. ಇವೆರಡನ್ನು ಬ್ಯಾಲೆನ್ಸ್‌ ಮಾಡುತ್ತ ನಡೆಯಬೇಕು.
  4. ಈ ಹೆಡ್‌ಸೆಟ್‌ನೊಳಗೆ ಹಲವು ಆಪ್‌ಗಳನ್ನು ಒಟ್ಟಾಗಿ ಬಳಸಬಹುದು. ಮೊಬೈಲ್‌ ಕಾಲ್‌, ಮೆಸೆಜ್‌, ವಾಟ್ಸಪ್‌ ಇತ್ಯಾದಿಗಳನ್ನು ನೋಡುತ್ತಿರಬಹುದು.
  5. ಇದರಲ್ಲಿ ವಿಡಿಯೋ ಕಾಲ್‌ ಕೂಡ ಮಾಡಬಹುದು. ಇದರಲ್ಲಿ ಫೇಸ್‌ಟೈಮ್‌ ವಿಡಿಯೋ ಕಾಲ್‌ ಸೌಲಭ್ಯವಿದೆ. ಇಬ್ಬರು ಇದೇ ರೀತಿ ಹೆಡ್‌ಸೆಟ್‌ ಧರಿಸಿದವರು ವಿಡಿಯೋ ಕಾಲ್‌ ಮಾಡಬಹುದು.
  6. ಇನ್ನೂ ಗಮ್ಮತ್ತಿನ ಸಂಗತಿಯೆಂದರೆ, ಇದರಲ್ಲಿ ಪರ್ಸೊನಾ ಎಂಬ ಒಂದು ರೂಪ ಇರುತ್ತದೆ. ವಿಡಿಯೋ ಕಾಲ್‌ ಮಾಡಿದವರ ಮುಖದ ಹಾವಭಾವ ಇದರಲ್ಲಿ ಕಾಣಿಸುತ್ತದೆ. ವಿಡಿಯೋ ಕಾಲ್‌ ಮಾಡಿದವ ಕೆಕ್ಕರಿಸಿ ನೋಡುತ್ತ ಕರೆ ಮಾಡಿದರೆ ಈ ಪೆರ್ಸೊನಾವೂ ಹಾಗೆಯೇ ತೋರಿಸುತ್ತದೆ.

ಇದನ್ನು ಓದಿದ್ದೀರಾ?: Apple WWDC 2023: ಆ್ಯಪಲ್ ಪ್ರಿಯರಿಗೆ ರೋಮಾಂಚನ, ಹಲವು ಹೊಸ ಸಾಧನಗಳ ಆಗಮನ, ಇಲ್ಲಿದೆ ಗಮನ ಸೆಳೆದ 5 ಪ್ರಾಡಕ್ಟ್‌ಗಳ ವಿವರ

IPL_Entry_Point