Train Tragedy: ಜಾರ್ಖಂಡ್‌ನಲ್ಲಿ ತಪ್ಪಿದ ರೈಲು ಅವಘಡ; ಟ್ರಾಕ್ಟರ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿದ ಪೈಲಟ್
ದಿಲ್ಲಿ ಭುವನೇಶ್ವರ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಮಂಗಳವಾರ ಸಂಜೆ ಭೋಜುದಿಹ್ ಎನ್ನುವ ರೈಲ್ವೆ ನಿಲ್ದಾಣ ಸಮೀಪಿಸುತ್ತಿತ್ತು. ಇದಕ್ಕೂ ಮುನ್ನ ಬರುವ ಸಂತಾಲ್‌ದಿಹ್ ಎನ್ನುವ ರೈಲ್ವೆ ಕ್ರಾಸಿಂಗ್‌ಗೆ ಡಿಕ್ಕಿ ಹೊಡೆದು ಟ್ರಾಕ್ಟರ್ ಸಿಲುಕಿತ್ತು. ದೂರದಿಂದಲೇ ಇದನ್ನು ಗಮನಿಸಿದ ಲೋಕೋ ಪೈಲಟ್ ಕೂಡಲೇ ರೈಲಿನ ವೇಗವನ್ನು ಕಡಿಮೆ ಮಾಡಿದರು. ಇದರಿಂದ ಭಾರೀ ಅನಾಹುತ ತಪ್ಪಿತು

ರಾಂಚಿ: ಒಡಿಶಾದಲ್ಲಿ ಮೂರು ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತ ಮಾಸುವ ನಡುವೆಯೇ ಜಾರ್ಖಂಡ್ ರಾಜ್ಯದಲ್ಲೂ ಭಾರೀ ರೈಲು ದುರಂತವೊಂದು ತಪ್ಪಿದೆ.
ಟ್ರೆಂಡಿಂಗ್ ಸುದ್ದಿ
ಜಾರ್ಖಂಡ್‌ನ ಬೊಕೊರೊ ಜಿಲ್ಲೆಯ ಸಂತಾಲ್‌ದಿಹ್ ರೈಲ್ವೆ ಕ್ರಾಸಿಂಗ್‌ನಲ್ಲಿ ಟ್ರಾಕ್ಟರ್ ಒಂದು ಸಿಲುಕಿ ಆಗಬಹುದಾದ ಅನಾಹುತ ತಪ್ಪಿಸಲಾಗಿದೆ.
ದಿಲ್ಲಿ ಭುವನೇಶ್ವರ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಮಂಗಳವಾರ ಸಂಜೆ ಭೋಜುದಿಹ್ ರೈಲ್ವೆ ನಿಲ್ದಾಣ ಸಮೀಪಿಸುತ್ತಿತ್ತು. ಈ ನಿಲ್ದಾಣಕ್ಕೂ ಮುನ್ನ ಬರುವ ಸಂತಾಲ್‌ದಿಹ್ ಎನ್ನುವ ರೈಲ್ವೆ ಕ್ರಾಸಿಂಗ್‌ಗೆ ಡಿಕ್ಕಿ ಹೊಡೆದು ಟ್ರಾಕ್ಟರ್ ಸಿಲುಕಿತ್ತು. ದೂರದಿಂದಲೇ ಇದನ್ನು ಗಮನಿಸಿದ ಲೋಕೋ ಪೈಲಟ್ ಕೂಡಲೇ ರೈಲಿನ ವೇಗವನ್ನು ಕಡಿಮೆ ಮಾಡಿದರು. ಇದರಿಂದ ಭಾರೀ ಅನಾಹುತ ಸಂಭವಿಸುವುದು ತಪ್ಪಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಾಕ್ಟರ್ ಕ್ರಾಸಿಂಗ್‌ನಲ್ಲಿ ಸಿಲುಕಿದ್ದರಿಂದ ಮುಂದೆ ಹೋಗದ ಸ್ಥಿತಿಯಿತ್ತು. ರೈಲು ವೇಗವಾಗಿ ಬಂದಿದ್ದರೆ ಡಿಕ್ಕಿಯಾಗಿ ಮತ್ತೊಂದು ದುರಂತ ನೋಡಬೇಕಿತ್ತು. ಲೋಕೋ ಪೈಲಟ್ ಗಮನಿಸಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದರಿಂದ ನಿಟ್ಟುಸಿರು ಬಿಡುವಂತಾಯಿತು. ಘಟನೆಯಿಂದ ಕೆಲ ಹೊತ್ತು ರೈಲು ನಿಲುಗಡೆಯಾಗಿ ನಂತರ ಪ್ರಯಾಣ ಮುಂದುವರೆಸಿತು ಎಂದು ಅದ್ರಾ ವಿಭಾಗದ ಡಿಆರ್‌ಎಂ ಮನೀಶ್ ಕುಮಾರ್ ತಿಳಿಸಿದ್ದಾರೆ.
ಈಗಾಗಲೇ ಟ್ರಾಕ್ಟರ್ ಅನ್ನು ಜಪ್ತಿ ಮಾಡಲಾಗಿದೆ. ಟ್ರಾಕ್ಟರ್ ಮಾಲೀಕನ ವಿರುದ್ದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿಸಲಾಗಿದ್ದು, ಆತ ತಲೆ ಮರೆಸಿಕೊಂಡಿದ್ದಾನೆ. ರೈಲ್ವೆ ಗೇಟ್ ಉಸ್ತುವಾರಿ ಹೊತ್ತ ನೌಕರನನ್ನು ಅಮಾನತುಪಡಿಸಲಾಗಿದೆ.
ಒಡಿಶಾದಲ್ಲಿ ಕೋರಮಂಡಲ್, ಯಶವಂತಪುರ ಹಾಗೂ ಗೂಡ್ಸ್ ಸಹಿತ ಮೂರು ರೈಲುಗಳ ಡಿಕ್ಕಿಯಿಂದ ಭಾರೀ ದುರಂತ ಸಂಭವಿಸಿ 276 ಮಂದಿ ಮೃತಪಟ್ಟಿದ್ದು, 1100 ಮಂದಿ ಗಾಯಗೊಂಡಿದ್ದಾರೆ.
ವಿಭಾಗ