ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Word Of The Year 2022: ಆನ್‌ಲೈನ್‌ ಮತಗಣನೆ ಮೂಲಕ ಆಕ್ಸ್‌ಫರ್ಡ್‌ ನಿಘಂಟಿನ ವರ್ಷದ ಪದ ಆಯ್ಕೆ, ಈ ವರ್ಷದ ಪದ ಯಾವುದು ಗೊತ್ತೆ?

Word Of The Year 2022: ಆನ್‌ಲೈನ್‌ ಮತಗಣನೆ ಮೂಲಕ ಆಕ್ಸ್‌ಫರ್ಡ್‌ ನಿಘಂಟಿನ ವರ್ಷದ ಪದ ಆಯ್ಕೆ, ಈ ವರ್ಷದ ಪದ ಯಾವುದು ಗೊತ್ತೆ?

ಆಕ್ಸ್‌ಫರ್ಡ್‌ ಇಂಗ್ಲಿಷ್‌ ಡಿಕ್ಸನರಿಯು ( Oxford English Dictionary) 2022ರ ವರ್ಷದ ಪದವಾಗಿ "ಗೊಬ್ಲಿನ್‌ ಮೋಡ್‌ (goblin mode) ಅನ್ನು ಆಯ್ಕೆ ಮಾಡಿದೆ. ಆಕ್ಸ್‌ಫರ್ಡ್‌ ಇಂಗ್ಲಿಷ್‌ ಡಿಕ್ಸನರಿಯು ಇದೇ ಮೊದಲ ಬಾರಿಗೆ ಸಾರ್ವಜನಿಕ ಆನ್‌ಲೈನ್‌ ಮತದಾನದ ಮೂಲಕ ವರ್ಷದ ಪದವನ್ನು ಆಯ್ಕೆ ಮಾಡಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

Word Of The Year 2022: ಆಕ್ಸ್‌ಫರ್ಡ್‌ ಇಂಗ್ಲಿಷ್‌ ಡಿಕ್ಷನರಿಯು ( Oxford English Dictionary) 2022ರ ವರ್ಷದ ಪದವಾಗಿ "ಗೊಬ್ಲಿನ್‌ ಮೋಡ್‌ (goblin mode) ಅನ್ನು ಆಯ್ಕೆ ಮಾಡಿದೆ. ಆಕ್ಸ್‌ಫರ್ಡ್‌ ಇಂಗ್ಲಿಷ್‌ ಡಿಕ್ಷನರಿಯು ಇದೇ ಮೊದಲ ಬಾರಿಗೆ ಸಾರ್ವಜನಿಕ ಆನ್‌ಲೈನ್‌ ಮತದಾನದ ಮೂಲಕ ವರ್ಷದ ಪದವನ್ನು ಆಯ್ಕೆ ಮಾಡಿದೆ.

"ಗಾಬ್ಲಿನ್ ಮೋಡ್" ಎಂಬುದು ಒಂದು ರೀತಿಯ ನಡವಳಿಕೆಯನ್ನು ವಿವರಿಸಲು ಬಳಸಲಾಗುವ ಒಂದು ಗ್ರಾಮ್ಯ ಪದವಾಗಿದೆ. ನಿಷ್ಪಕ್ಷಪಾತವಾಗಿ ಸ್ವಾರ್ಥಿ, ಸೋಮಾರಿ, ದಡ್ಡ, ದುರಾಸೆ, ಸಾಮಾಜಿಕ ರೂಡಿ ಅಥವಾ ನಿರೀಕ್ಷೆಗಳನ್ನು ತಿರಸ್ಕರಿಸುವುದನ್ನೂ ಈ ಪದ ಸೂಚಿಸುತ್ತದೆ.

ಈ ಬಾರಿ ಹುಡುಕಾಟ ನಡೆಸಿದ ಪದಗಳನ್ನೂ ಈ ಆಯ್ಕೆಗಳಲ್ಲಿ ಪರಿಗಣಿಸಲಾಗಿದೆ ಎಂದು ಆಕ್ಸ್‌ಫರ್ಡ್‌ ನಿಘಂಟು ಸಂಸ್ಥೆ ತಿಳಿಸಿದೆ. ನೂರಾರು ಪದಗಳಲ್ಲಿ ಈ ವರ್ಷದ ಪದವಾಗಿ ಆಯ್ಕೆ ಮಾಡಲು ಅಂತಿಮವಾಗಿ ಮೂರು ಪದಗಳನ್ನು ಆಯ್ಕೆ ಮಾಡಲಾಯಿತು. Metaverse, #IStandWith, ಮತ್ತು goblin mode ಎಂಬ ಪದಗಳಲ್ಲಿ ಯಾವ ಪದ ಈ ವರ್ಷದ ಪದವಾಗಿ ಆಯ್ಕೆ ಮಾಡಬಹುದೆಂದು ಮತಗಣನೆ ಮಾಡಲಾಯಿತು.

ಆನ್‌ಲೈನ್‌ನಲ್ಲಿ ಕಳೆದ ಎರಡು ವಾರಗಳಿಂದ "ವರ್ಷದ ಪದʼʼ ಆಯ್ಕೆ ಪ್ರಕ್ರಿಯೆ ನಡೆದಿದೆ. ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಇಂಗ್ಲಿಷ್‌ ಬಲ್ಲವರು ಇಲ್ಲಿ ಮತ ಚಲಾಯಿಸಿದ್ದಾರೆ. ಶೇಕಡ 93ರಷ್ಟು ಜನರು ಗೋಬ್ಲಿನ್‌ ಮೋಡ್‌ಗೆ ಮತ ಚಲಾಯಿಸಿದ್ದಾರೆ. ಶೇಕಡ 4 ಅಂಕಗಳೊಂದಿಗೆ ಮೆಟಾವರ್ಸ್‌ ಪದವು ರನ್ನರ್‌ ಅಪ್‌ ಪಡೆದಿದೆ. ಐಸ್ಟಾಂಡ್‌ವಿತ್‌ ಪದವು ಮೂರನೇ ಸ್ಥಾನ ಪಡೆದಿದೆ.

"ನಾವು ವ್ಯಕ್ತಪಡಿಸಬೇಕಿರುವ ಪರಿಕಲ್ಪನೆಯನ್ನು ಹೊಸ ಪದ ವ್ಯಕ್ತಪಡಿಸುತ್ತದೆ. ಸಾಂಕ್ರಾಮಿಕ ರೋಗ ಮುಗಿದಿದೆ ಎಂಬ ಭಾವನೆಯನ್ನು ಗಾಬ್ಲಿನ್‌ ಮೋಡ್‌ ಪ್ರತಿಬಿಂಬಿಸಬಹುದು. ಹೀಗಿದ್ದರೂ, ನಾವು ಈಗಲೂ ಸಾಂಕ್ರಾಮಿಕದ ಜತೆಗೆ ಬದುಕುತ್ತಿದ್ದೇವೆ. ಇಂತಹ ಎರಡು ಭಾವನನ್ನು ಗಾಬ್ಲಿನ್‌ ಮೋಡ್‌ ಎಂಬ ಪದ ಧ್ವನಿಸಬಹುದು ಎಂದು ನನಗೆನಿಸುತ್ತದೆʼʼ ಎಂದು ಆಕ್ಸ್‌ಫರ್ಡ್ ಲ್ಯಾಂಗ್ವೇಜಸ್‌ನ ಉತ್ಪನ್ನ ನಿರ್ದೇಶಕಿ ಕ್ಯಾಥರೀನ್ ಕಾನರ್ ಮಾರ್ಟಿನ್ ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಾರೆ.

ಇದೇ ಸಮಯದಲ್ಲಿ ಅಮೆರಿಕದ ನಿಘಂಟು ಪ್ರಕಾಸಕ ಸಂಸ್ಥೆ ಮೆರಿಯಮ್-ವೆಬ್‌ಸ್ಟರ್ ಕೂಡ ಈ ವರ್ಷದ ಪದವನ್ನು ಆಯ್ಕೆ ಮಾಡಿದೆ. "gaslighting" ಎಂಬ ಪದವನ್ನು 2022ರ ವರ್ಷದ ಪದವಾಗಿ Merriam-Webster ಆಯ್ಕೆ ಮಾಡಿದೆ.

ಈ ನಿಘಂಟಿನ ಪ್ರಕಾರ ಗ್ಯಾಸ್‌ಲೈಟಿಂಗ್‌ ಎಂದರೆ, "ಸಾಮಾನ್ಯವಾಗಿ ವ್ಯಕ್ತಿಯ ಮಾನಸಿಕ ಕುಶಲತೆಯು ದೀರ್ಘಕಾಲದವರೆಗೆ ಇರುತ್ತದೆ. ತನ್ನ ಸ್ವಂತ ಆಲೋಚನೆಗಳು, ವಾಸ್ತವದ ಗ್ರಹಿಕೆ ಮತ್ತು ನೆನಪುಗಳ ಸಿಂಧುತ್ವವನ್ನು ಪ್ರಶ್ನಿಸಲು ಇದು ಕಾರಣವಾಗುತ್ತದೆ. ಇದರಿಂದ ಆತ್ಮವಿಶ್ವಾಸ ಕಳೆದುಕೊಳ್ಳಬಹುದು, ಅಹಂ ಕಡಿಮೆಯಾಗಬಹುದು, ಮಾನಸಿಕ ಸ್ಥಿರತೆಯ ಅನಿಶ್ಚಿತತೆ ಉಂಟಾಗಬಹುದುʼʼ ಎಂದು ಮೆರಿಯಮ್-ವೆಬ್‌ಸ್ಟರ್ ವ್ಯಾಖ್ಯಾನಿಸಿದೆ.

IPL_Entry_Point

ವಿಭಾಗ