ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್​ಗೂ ಮುನ್ನ ರೋಹಿತ್​​ ಶರ್ಮಾಗೆ ಗಾಯ; ಮೆಗಾ ಟೂರ್ನಿಯಿಂದ ಹೊರಬೀಳ್ತಾರಾ ಹಿಟ್​ಮ್ಯಾನ್?

ಟಿ20 ವಿಶ್ವಕಪ್​ಗೂ ಮುನ್ನ ರೋಹಿತ್​​ ಶರ್ಮಾಗೆ ಗಾಯ; ಮೆಗಾ ಟೂರ್ನಿಯಿಂದ ಹೊರಬೀಳ್ತಾರಾ ಹಿಟ್​ಮ್ಯಾನ್?

Rohit Sharma Injury: ಜೂನ್ 1ರಿಂದ ಶುರುವಾಗುವ ಟಿ20 ವಿಶ್ವಕಪ್​ ಟೂರ್ನಿಗೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಬೆನ್ನುನೋವಿನ ಸಮಸ್ಯೆ ತುತ್ತಾಗಿದ್ದಾರೆ. ಆದರೆ ಗಂಭೀರವಲ್ಲ.

ಟಿ20 ವಿಶ್ವಕಪ್​ಗೂ ಮುನ್ನ ರೋಹಿತ್​​ ಶರ್ಮಾಗೆ ಗಾಯದ ಸಂಕಟ; ಮೆಗಾ ಟೂರ್ನಿಯಿಂದ ಹೊರಬೀಳ್ತಾರಾ ಹಿಟ್​ಮ್ಯಾನ್?
ಟಿ20 ವಿಶ್ವಕಪ್​ಗೂ ಮುನ್ನ ರೋಹಿತ್​​ ಶರ್ಮಾಗೆ ಗಾಯದ ಸಂಕಟ; ಮೆಗಾ ಟೂರ್ನಿಯಿಂದ ಹೊರಬೀಳ್ತಾರಾ ಹಿಟ್​ಮ್ಯಾನ್?

ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​ಗೆ (T20 World Cup 2024) ದಿನಗಣನೆ ಆರಂಭಗೊಂಡಿದೆ. ಜೂನ್ 1 ರಿಂದ 29ರ ತನಕ ಟೂರ್ನಿ ನಡೆಯಲಿದ್ದು, ವೆಸ್ಟ್ ಇಂಡೀಸ್ ಮತ್ತು ಯುಎಸ್​ಎ ಜಂಟಿ ಆತಿಥ್ಯ ವಹಿಸುತ್ತಿವೆ. ಮೆಗಾ ಟೂರ್ನಿಗೆ ಬಹತೇಕ ತಂಡಗಳು ತಮ್ಮ 15 ಸದಸ್ಯರ ತಂಡಗಳನ್ನು ಪ್ರಕಟಿಸಿವೆ. ಏಪ್ರಿಲ್ 30ರಂದು ಟೀಮ್ ಇಂಡಿಯಾ (Team India) ಸಹ ಪ್ರಕಟವಾಯಿತು. ಆದರೆ ಟೂರ್ನಿಗೂ ಮುನ್ನವೇ ಭಾರತ ತಂಡ ಇಂಜುರಿ ಆಘಾತಕ್ಕೆ ಒಳಗಾಗಿದೆ. ನಾಯಕ ರೋಹಿತ್​ ಶರ್ಮಾ (Rohit Sharma Injury) ಬೆನ್ನುನೋವಿನ ಸಮಸ್ಯೆಗೆ ಸಿಲುಕಿದ್ದು, ಭಾರತ ತಂಡವನ್ನು ಚಿಂತೆಗೀಡು ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್​ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿದರು. ಆದರೆ ಇದು ಎಲ್ಲರಿಗೂ ಆಶ್ಚರ್ಯ ತಂದಿತು. ಅವರಿಗೆ ಏನಾಗಿದೆ? ಯಾಕೆ ಇಂಪ್ಯಾಕ್ಟ್ ಪ್ಲೇಯರ್ ಆದರು ಎಂಬುದು ಫ್ಯಾನ್ಸ್​ ಪ್ರಶ್ನೆಯಾಗಿದೆ. ಕೆಕೆಆರ್ ವಿರುದ್ಧ ಎಂಐ 24 ರನ್‌ಗಳ ಸೋಲಿನ ಸಂದರ್ಭದಲ್ಲಿ ರೋಹಿತ್ ಎರಡನೇ ಇನ್ನಿಂಗ್ಸ್‌ನಲ್ಲಿ 12 ಎಸೆತಗಳಲ್ಲಿ ಕೇವಲ 11 ರನ್ ಗಳಿಸಲಷ್ಟೇ ಶಕ್ತರಾದರು. ಸುನಿಲ್ ನರೇನ್​ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು.

ರೋಹಿತ್​ ಶರ್ಮಾಗೆ ಬೆನ್ನು ನೋವು; ಖಚಿತಪಡಿಸಿದ ಚಾವ್ಲಾ

ರೋಹಿತ್​ ಅವರು ಸ್ವಲ್ವ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿದ್ದಾರೆ. ಆದ್ದರಿಂದ ಕೇವಲ ಮುನ್ನೆಚ್ಚರಿಕೆಯ ವಿಷಯವಾಗಿ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಲಾಯಿತು ಎಂದು 35 ಹಿರಿಯ ಸ್ಪಿನ್ನರ್ ಪಿಯೂಷ್ ಚಾವ್ಲಾ ಪಂದ್ಯ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಬೆನ್ನುನೋವು ಕಾಣಿಸಿಕೊಂಡ ಬೆನ್ನಲ್ಲೇ ಭಾರತೀಯ ಅಭಿಮಾನಿಗಳಿಗೆ ಆತಂಕ ಹೆಚ್ಚಾಗಿದೆ. ಭಾರತ ತಂಡದ ಕ್ಯಾಪ್ಟನ್ ಆಗಿರುವ ಹಿಟ್​ಮ್ಯಾನ್, ವಿಶ್ವಕಪ್​ನಿಂದ ಹೊರಬೀಳುತ್ತಾರಾ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಪ್ರಸ್ತುತ ರೋಹಿತ್​ ಬೆನ್ನುನೋವಿನ ಸಮಸ್ಯೆ ಗಂಭೀರವಾಗಿಲ್ಲ. ಹೀಗಾಗಿ ಯಾರೂ ಆತಂಕಪಡುವ ಅಗತ್ಯ ಇಲ್ಲ. ಕೇವಲ ಮುನ್ನೆಚ್ಚರಿಕೆಯ ಸಲುವಾಗಿ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಲಾಗಿದೆ. ಆದರೆ, ಆ ನೋವು ದಿನದಿಂದ ದಿನಕ್ಕೆ ಹೆಚ್ಚಾದರೆ, ಅವರು ಉಳಿದ ಪಂದ್ಯಗಳಿಂದ ಹೊರಗುಳಿಯಬೇಕಾಗುತ್ತದೆ. ಏಕೆಂದರೆ ಮುಂದಿನ ತಿಂಗಳು ಟಿ20 ವಿಶ್ವಕಪ್ ನಡೆಯಲಿದ್ದು, ಅಷ್ಟರೊಳಗೆ ಅವರು ಫಿಟ್​ ಆಗಲು ವಿಶ್ರಾಂತಿ ಪಡೆಯಬೇಕಾಗುತ್ತದೆ. ಮುಂಬೈ ಮ್ಯಾನೇಜ್​ಮೆಂಟ್ ಸಹ ಅವರ ಫಿಟ್​ನೆಸ್ ಕಡೆ ಹೆಚ್ಚಿನ ಗಮನ ಕೊಡುತ್ತಿದೆ.

ರೋಹಿತ್​ ಗಾಯಗೊಂಡರೆ ಹಾರ್ದಿಕ್​ಗೆ ಪಟ್

ಒಂದು ವೇಳೆ ರೋಹಿತ್​ ಗಾಯಗೊಂಡು ವಿಶ್ವಕಪ್​ ಟೂರ್ನಿಯ ಅವಧಿಯೊಳಗೆ ಚೇತರಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅವರು ಮೆಗಾ ಟೂರ್ನಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಆಗ ಉಪನಾಯಕ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಪಡೆಯಲಿದ್ದಾರೆ. ಅಲ್ಲದೆ, ರೋಹಿತ್​ ಶರ್ಮಾ ಬದಲಿಗೆ ಮತ್ತೊಬ್ಬ ಆಟಗಾರರನ್ನು ರಿಪ್ಲೇಸ್ ಮಾಡಬೇಕಾಗುತ್ತದೆ. ಹಾಗಾಗಿ ರೋಹಿತ್​ ಈ ಸಮಯದಲ್ಲಿ ಅತ್ಯಂತ ಜಾಗರೂಕರಾಗಿರಬೇಕು. ಈ ಹಿಂದೆ ಎಷ್ಟೋ ಆಟಗಾರರು ಚಿಕ್ಕ ಗಾಯವೆಂದು ಟೂರ್ನಿಗಳಿಂದಲೇ ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದಿದ್ದುಂಟು.

ಟಿ20 ವಿಶ್ವಕಪ್‌ಗೆ ಪ್ರಕಟಗೊಂಡಿರುವ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಮೀಸಲು ಆಟಗಾರರು - ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್

IPL_Entry_Point