ಕನ್ನಡ ಸುದ್ದಿ  /  ಕ್ರಿಕೆಟ್  /  ಮುಂಬೈ ಇಂಡಿಯನ್ಸ್ 8 ಪಂದ್ಯ ಸೋತರೂ ಪ್ಲೇಆಫ್​ಗೇರಲು ಸಾಸಿವೆ ಕಾಳಷ್ಟಿದೆ ಅವಕಾಶ; ಆದರೆ ಈ ತಂಡಗಳೆಲ್ಲಾ ಸೋಲಬೇಕಷ್ಟೆ!

ಮುಂಬೈ ಇಂಡಿಯನ್ಸ್ 8 ಪಂದ್ಯ ಸೋತರೂ ಪ್ಲೇಆಫ್​ಗೇರಲು ಸಾಸಿವೆ ಕಾಳಷ್ಟಿದೆ ಅವಕಾಶ; ಆದರೆ ಈ ತಂಡಗಳೆಲ್ಲಾ ಸೋಲಬೇಕಷ್ಟೆ!

Mumbai Indians : ಪ್ರಸ್ತುತ ಐಪಿಎಲ್​ನಲ್ಲಿ ಆಡಿರುವ 11 ಪಂದ್ಯಗಳಲ್ಲಿ 8 ಪಂದ್ಯ ಸೋತು, 3 ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಇನ್ನೂ ಪ್ಲೇಆಫ್ ಪ್ರವೇಶಿಸಲು ಸಾಸಿವೆ ಕಾಳಷ್ಟಿದೆ ಅವಕಾಶ. ಅಂದರೆ ಶೇ 0.0006 ರಷ್ಟು ಪ್ಲೇಆಫ್ ಪ್ರವೇಶಿಸಲು ಸಾಧ್ಯವಿದೆ. ಆದರೆ ಈ ತಂಡಗಳು ಸೋಲಬೇಕು.

ಮುಂಬೈ ಇಂಡಿಯನ್ಸ್ 8 ಪಂದ್ಯ ಸೋತರೂ ಪ್ಲೇಆಫ್​ಗೇರಲು ಸಾಸಿವೆ ಕಾಳಷ್ಟಿದೆ ಅವಕಾಶ; ಈ ತಂಡಗಳೆಲ್ಲಾ ಸೋಲಬೇಕಷ್ಟೆ!
ಮುಂಬೈ ಇಂಡಿಯನ್ಸ್ 8 ಪಂದ್ಯ ಸೋತರೂ ಪ್ಲೇಆಫ್​ಗೇರಲು ಸಾಸಿವೆ ಕಾಳಷ್ಟಿದೆ ಅವಕಾಶ; ಈ ತಂಡಗಳೆಲ್ಲಾ ಸೋಲಬೇಕಷ್ಟೆ!

ಮುಂಬೈ ಇಂಡಿಯನ್ಸ್ (Mumbai Indians) ಐಪಿಎಲ್​-2024ರಲ್ಲಿ ಮತ್ತೊಂದು ಸೋಲಿಗೆ ಶರಣಾಯಿತು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 24 ರನ್​ಗಳಿಂದ ಪರಾಭವಗೊಂಡ ಹಾರ್ದಿಕ್ ಪಾಂಡ್ಯ ಪಡೆ, ಟೂರ್ನಿಯಲ್ಲಿ ಒಟ್ಟಾರೆ 8ನೇ ಮುಖಭಂಗಕ್ಕೆ ಒಳಗಾಗಿದೆ. ಇದರೊಂದಿಗೆ ಪ್ಲೇಆಫ್​ ಕನಸು ಬಹುತೇಕ ಭಗ್ನಗೊಂಡಿದೆ. ಆದರೆ, 11 ಪಂದ್ಯಗಳಲ್ಲಿ 8 ಸೋಲು, 3 ಗೆಲುವು ಸಾಧಿಸಿರುವ ಮುಂಬೈಗೆ ಇನ್ನೂ ಗುಲಗಂಜಿಯಷ್ಟು ಅವಕಾಶ ಇದೆ. ಅಂದರೆ ಶೇ 0.0006 ರಷ್ಟು ಪ್ಲೇಆಫ್ ಪ್ರವೇಶಿಸಲು ಸಾಧ್ಯವಿದೆ. 3 ಪಂದ್ಯ ಹೊಂದಿರುವ ಮುಂಬೈ ಪ್ಲೇಆಫ್ ಕನಸು ಹೇಗೆ ಸಾಧ್ಯ?

ಟ್ರೆಂಡಿಂಗ್​ ಸುದ್ದಿ

ಇದುವರೆಗೆ ಆಡಿದ 11 ಪಂದ್ಯಗಳಿಂದ 6 ಅಂಕಗಳನ್ನು ಹೊಂದಿರುವ ಮುಂಬೈ ಇಂಡಿಯನ್ಸ್, ಸನ್​ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಉಳಿದ 3 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ ಗರಿಷ್ಠ 12 ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಮತ್ತು ಇತರ ಪಂದ್ಯಗಳ ಫಲಿತಾಂಶವು ಮುಂಬೈ ಪರವಾಗಿ ಹೋದರೆ, 4ನೇ ಸ್ಥಾನ ಪಡೆಯಲು ಗಳಿಸಲು 12 ಅಂಕ ಸಾಕಾಗುತ್ತದೆ. ಅದ್ಹೇಗೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಎಂಐ ಪ್ಲೇಆಫ್ ಪ್ರವೇಶಿಸಬೇಕೆಂದರೆ ಈ ತಂಡಗಳು ಸೋಲಬೇಕಿದೆ. ಹೀಗಿದೆ ಪ್ಲೇಆಫ್ ಲೆಕ್ಕಾಚಾರ.

ಐಪಿಎಲ್ 2024 ಅಂಕಗಳ ಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಈಗಾಗಲೇ 10 ಲೀಗ್ ಹಂತದ ಪಂದ್ಯಗಳಲ್ಲಿ ಕ್ರಮವಾಗಿ 16 ಮತ್ತು 14 ಅಂಕಗಳನ್ನು ಹೊಂದಿರುವ ಕಾರಣ ಮುಂಬೈಗೆ ಹೊಂದಾಣಿಕೆಯಾಗಲು ಅಥವಾ ಅಷ್ಟೇ ಅಂಕ ಪಡೆದು ಲೀಗ್ ಮುಗಿಸಲು ಸಾಧ್ಯವಿಲ್ಲ. ಮತ್ತೊಂದೆಡೆ ಅಗ್ರ-4ರಲ್ಲಿ ಸ್ಥಾನ ಪಡೆಯಲು ಎಸ್​ಆರ್​ಹೆಚ್, ಎಲ್​ಎಸ್​ಜಿ, ಸಿಎಸ್​ಕೆ ಮತ್ತು ಡೆಲ್ಲಿ ತಂಡಗಳು ತೀವ್ರ ಪೈಪೋಟಿ ನಡೆಸುತ್ತಿವೆ. ಎಸ್​ಆರ್​ಹೆಚ್ ಮತ್ತು ಎಲ್​ಎಸ್​ಜಿ ಈಗಾಗಲೇ 12 ಅಂಕ ಪಡೆದಿದ್ದು, ಈ ಎರಡು ತಂಡಗಳಲ್ಲಿ ಒಬ್ಬರಾದರೂ 12ಕ್ಕಿಂತ ಹೆಚ್ಚು ಗಳಿಸುತ್ತಾರೆ.

ಆದರೆ ಇಬ್ಬರು ಸಹ ಒಂದೊಂದು ಪಂದ್ಯ ಗೆದ್ದಿದ್ದೇ ಆದರೆ ಮುಂಬೈ ಅಧಿಕೃತವಾಗಿ ಹೊರಬೀಳಲಿದೆ. ಉಳಿದ 4 ಲೀಗ್ ಹಂತದ ಪಂದ್ಯಗಳನ್ನು ಎಲ್​ಎಸ್​ಜಿ ಸೋಲಬೇಕು. ಅಥವಾ ಮೂರು ಪಂದ್ಯಗಳಲ್ಲಿ ಗೆದ್ದರೆ ಮುಂಬೈ ಪ್ಲೇಆಫ್ ಪ್ರವೇಶಿಸಲು ಉತ್ತಮ ಅವಕಾಶ ಇದೆ. ಅದರಲ್ಲೂ ಎಸ್​ಆರ್​​ಹೆಚ್ ವಿರುದ್ಧ ಗೆಲ್ಲಲೇಬೇಕು. ಅದರ ಜೊತೆಗೆ, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು 12 ಅಂಕ ದಾಟದಂತೆ ನೋಡಿಕೊಳ್ಳಬೇಕು. ಆದರೆ ನೆಟ್​ರನ್​ರೇಟ್​ ಬೇರೆಲ್ಲಾ ತಂಡಗಳಿಗಿಂತ ಅತ್ಯುತ್ತಮವಾಗಿರಬೇಕು.

ಮುಂದಿನ ಪಂದ್ಯಗಳಲ್ಲಿ ಫಲಿತಾಂಶ ಹೀಗೆ ಬರಬೇಕು. ಯಾವ ಪಂದ್ಯ ಗೆದ್ದರೆ ಮುಂಬೈ ಇಂಡಿಯನ್ಸ್ ಪ್ಲೇಆಫ್ ಪ್ರವೇಶಿಸಬಹುದು ಎಂಬುದನ್ನು ಗಮನಿಸಿ.

  • ಮೇ 4 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ (ಆರ್​​ಸಿಬಿ ಗೆಲ್ಲಬೇಕು)
  • ಮೇ 5 - ಪಂಜಾಬ್ ಕಿಂಗ್ಸ್ vs ಚೆನ್ನೈ ಸೂಪರ್ ಕಿಂಗ್ಸ್ (ಪಿಬಿಕೆಎಸ್ ಗೆಲ್ಲಬೇಕು)
  • ಮೇ 5 - ಲಕ್ನೋ ಸೂಪರ್ ಜೈಂಟ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್ ಗೆಲ್ಲಬೇಕು)
  • ಮೇ 6 - ಮುಂಬೈ ಇಂಡಿಯನ್ಸ್ vs ಸನ್ ರೈಸರ್ಸ್ ಹೈದರಾಬಾದ್ (ಮುಂಬೈ ಗೆಲ್ಲಬೇಕು)
  • ಮೇ 7 - ಡೆಲ್ಲಿ ಕ್ಯಾಪಿಟಲ್ಸ್ vs ರಾಜಸ್ಥಾನ್ ರಾಯಲ್ಸ್ (ಆರ್​​ಆರ್​ ಗೆಲ್ಲಬೇಕು)
  • ಮೇ 8 - ಸನ್​ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್ ಜೈಂಟ್ಸ್ (ಎಸ್​​ಆರ್​ಹೆಚ್​ ಗೆಲ್ಲಬೇಕು)
  • ಮೇ 9 - ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪಿಬಿಕೆಎಸ್ ಗೆಲ್ಲಬೇಕು)
  • ಮೇ 10 - ಗುಜರಾತ್ ಟೈಟಾನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ (ಜಿಟಿ ಗೆಲ್ಲಬೇಕು)
  • ಮೇ 11 - ಕೋಲ್ಕತ್ತಾ ನೈಟ್ ರೈಡರ್ಸ್ vs ಮುಂಬೈ ಇಂಡಿಯನ್ಸ್ (ಎಂಐ ಗೆಲ್ಲಬೇಕು)
  • ಮೇ 12 - ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್ (ಆರ್​​ಆರ್ ಗೆಲ್ಲಬೇಕು)
  • ಮೇ 12 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್ (ಆರ್​ಸಿಬಿ ಗೆಲ್ಲಬೇಕು)
  • ಮೇ 13 - ಗುಜರಾತ್ ಟೈಟಾನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್ ಗೆಲ್ಲಬೇಕು)
  • ಮೇ 14 - ಡೆಲ್ಲಿ ಕ್ಯಾಪಿಟಲ್ಸ್ vs ಲಕ್ನೋ ಸೂಪರ್ ಜೈಂಟ್ಸ್ (ಡಿಸಿ ಗೆಲ್ಲಬೇಕು)
  • ಮೇ 15 - ರಾಜಸ್ಥಾನ್ ರಾಯಲ್ಸ್ vs ಪಂಜಾಬ್ ಕಿಂಗ್ಸ್ (ಆರ್​​ಆರ್​ ಗೆಲ್ಲಬೇಕು)
  • ಮೇ 16 - ಸನ್ ರೈಸರ್ಸ್ ಹೈದರಾಬಾದ್ vs ಗುಜರಾತ್ ಟೈಟಾನ್ಸ್ (ಎಸ್​ಆರ್​ಹೆಚ್ ಗೆಲ್ಲಬೇಕು)
  • ಮೇ 17 - ಮುಂಬೈ ಇಂಡಿಯನ್ಸ್ vs ಲಕ್ನೋ ಸೂಪರ್ ಜೈಂಟ್ಸ್ (ಮುಂಬೈ ಗೆಲ್ಲಬೇಕು)
  • ಮೇ 18 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ (ಆರ್​​ಸಿಬಿ)
  • ಮೇ 19 - ಸನ್ ರೈಸರ್ಸ್ ಹೈದರಾಬಾದ್ vs ಪಂಜಾಬ್ ಕಿಂಗ್ಸ್ (ಎಸ್​ಆರ್​ಹೆಚ್ ಗೆಲ್ಲಬೇಕು)
  • ಮೇ 19 - ರಾಜಸ್ಥಾನ್ ರಾಯಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ (ಆರ್​​ಆರ್​ ಗೆಲ್ಲಬೇಕು)

ಈ ಮೇಲಿನ ಇದೆಲ್ಲವೂ ಸಾಧ್ಯವಾದರೆ ಮುಂಬೈ 12 ಅಂಕ ಸಂಪಾದಿಸಿ 4ನೇ ಸ್ಥಾನ ಪಡೆಯಲಿದೆ. ಆದರೆ ಉತ್ತಮ ನೆಟ್​ರನ್​ರೇಟ್ ಕಾಪಾಡಿಕೊಳ್ಳಬೇಕು. ಏಕೆಂದರೆ ಈ ಲೆಕ್ಕಾಚಾರದ ಪ್ರಕಾರ ಮುಂಬೈ ಜೊತೆಗೆ ಲಕ್ನೋ, ಪಂಜಾಬ್, ಡೆಲ್ಲಿ, ಆರ್​​ಸಿಬಿ ತಂಡಗಳು ಸಹ 12 ಅಂಕ ಪಡೆಯಲಿವೆ. ಸಿಎಸ್​ಕೆ ಮತ್ತು ಗುಜರಾತ್ 10 ಅಂಕ ಪಡೆಯಲಿದೆ. ಆರ್​ಆರ್​, ಕೆಕೆಆರ್​, ಎಸ್​ಆರ್​ಹೆಚ್ ಕ್ರಮವಾಗಿ ಅಗ್ರ-3 ಸ್ಥಾನ ಪಡೆಯಲಿವೆ.

IPL_Entry_Point