ಕನ್ನಡ ಸುದ್ದಿ  /  ಕ್ರಿಕೆಟ್  /  Rcb Playoff Scenario: ಆರ್​ಸಿಬಿ ಪ್ಲೇಆಫ್​ ಕಥೆ-ವ್ಯಥೆ; ಕೊನೆಯ ಸ್ಥಾನಿ ರಾಯಲ್ ಚಾಲೆಂಜರ್ಸ್​ಗೆ ಹೊಸ 'ಚಾಲೆಂಜ್'

RCB Playoff Scenario: ಆರ್​ಸಿಬಿ ಪ್ಲೇಆಫ್​ ಕಥೆ-ವ್ಯಥೆ; ಕೊನೆಯ ಸ್ಥಾನಿ ರಾಯಲ್ ಚಾಲೆಂಜರ್ಸ್​ಗೆ ಹೊಸ 'ಚಾಲೆಂಜ್'

RCB Playoff Scenario : 2024ರ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್​ ಪ್ರವೇಶಿಸಲು ಇನ್ನೂ ಅವಕಾಶ ಹೊಂದಿದೆ. ಪ್ಲೇಆಫ್​ ಪ್ರವೇಶಿಸಲು ಆರ್​ಸಿಬಿ ಏನೆಲ್ಲಾ ಮಾಡಬೇಕು? ಇಲ್ಲಿದೆ ವಿವರ.

ಆರ್​ಸಿಬಿ ಪ್ಲೇಆಫ್​ ಕಥೆ-ವ್ಯಥೆ; ಕೊನೆಯ ಸ್ಥಾನಿ ರಾಯಲ್ ಚಾಲೆಂಜರ್ಸ್​ಗೆ ಹೊಸ 'ಚಾಲೆಂಜ್'
ಆರ್​ಸಿಬಿ ಪ್ಲೇಆಫ್​ ಕಥೆ-ವ್ಯಥೆ; ಕೊನೆಯ ಸ್ಥಾನಿ ರಾಯಲ್ ಚಾಲೆಂಜರ್ಸ್​ಗೆ ಹೊಸ 'ಚಾಲೆಂಜ್'

ಇಂಡಿಯನ್ ಪ್ರೀಮಿಯರ್ ಲೀಗ್​-2024 52ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಸೆಣಸಾಟ ನಡೆಸಲು ಸಜ್ಜಾಗಿವೆ. ಪ್ಲೇಆಫ್​ ದೃಷ್ಟಯಿಂದ ಉಭಯ ತಂಡಗಳು ಗೆಲ್ಲುವುದು ಅನಿವಾರ್ಯ. ಅದರಲ್ಲೂ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೂ ಆರ್​​ಸಿಬಿ ಪ್ಲೇಆಫ್​ ಪ್ರವೇಶಿಸಲು ಇನ್ನೂ ಅವಕಾಶ ಇದೆ. ಪ್ಲೇಆಫ್​ ಪ್ರವೇಶಿಸಲು ಆರ್​ಸಿಬಿ ಏನೆಲ್ಲಾ ಮಾಡಬೇಕು? ಇಲ್ಲಿದೆ ವಿವರ.

ಟ್ರೆಂಡಿಂಗ್​ ಸುದ್ದಿ

ಆರ್​ಸಿಬಿ ಪ್ಲೇಆಫ್​ ಕಥೆ-ವ್ಯಥೆ

  • ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯ (ಮೇ 4) ಆರ್​ಸಿಬಿ ಪಾಲಿಗೆ ಅತ್ಯಂತ ನಿರ್ಣಾಯಕ. ಏಕೆಂದರೆ ತಂಡದ ಪ್ಲೇಆಫ್ ಭವಿಷ್ಯ ನಿರ್ಧರಿಸುತ್ತದೆ ಈ ಪಂದ್ಯ.
  • ಗುಜರಾತ್ ಟೈಟಾನ್ಸ್​ ವಿರುದ್ಧದ ಪಂದ್ಯದ ಜೊತೆಗೆ ಉಳಿದೆಲ್ಲಾ ಪಂದ್ಯಗಳಲ್ಲಿ ಗೆದ್ದರೆ, ಒಟ್ಟು 7 ಗೆಲುವು ಸಾಧಿಸಿ ಆರ್​​ಸಿಬಿ 14 ಅಂಕಗಳೊಂದಿಗೆ ಅಗ್ರ-4ರಲ್ಲಿ ಸ್ಥಾನ ಪಡೆಯುವುದು ಖಚಿತವಾಗಲಿದೆ.
  • ಆರ್​​ಆರ್ (16)​ ಮತ್ತು ಕೆಕೆಆರ್​ (14) ಬಹುತೇಕ ಪ್ಲೇಆಫ್​ ಪ್ರವೇಶಿಸಿವೆ. ಆದರೆ ತಲಾ 12 ಅಂಕ ಸಂಪಾದಿಸಿರುವ ಎಲ್​ಎಸ್​ಜಿ ಅಥವಾ ಎಸ್​ಆರ್​​ಹೆಚ್ ಈ ಎರಡಲ್ಲಿ ಒಂದು ತಂಡ 14 ಅಂಕ ಪಡೆಯಬೇಕು.
  • ಡಿಸಿ, ಸಿಎಸ್​ಕೆ, ಜಿಟಿ, ಪಿಬಿಕೆಎಸ್​ ತಂಡಗಳು 12 ಅಂಕ ದಾಟದಂತೆ ನೋಡಿಕೊಳ್ಳಬೇಕು. ಉತ್ತಮ ನೆಟ್​​ರನ್​ರೇಟ್ ಕೂಡ ಸುಧಾರಿಸಬೇಕು. ಹೀಗಿದ್ದಾಗ ಮಾತ್ರ ಆರ್​ಸಿಬಿ ಪ್ಲೇಆಫ್​ ಪ್ರವೇಶಿಸಲಿದೆ.

ಈ ಮೇಲಿನ ಎಲ್ಲವೂ ಅಂದುಕೊಂಡಂತೆ ಜರುಗಿದರೆ ಆರ್​ಸಿಬಿ 9ನೇ ಬಾರಿಗೆ ಪ್ಲೇ ಆಫ್​ ಪ್ರವೇಶಿಸಲಿದೆ. ಆರ್​ಸಿಬಿಯ ಒಂದು ಸೋಲು ಸಹ ತನ್ನ ಪ್ಲೇಆಫ್​ ಚಿತ್ರಣ ಬದಲಿಸಲಿದೆ. ಒಂದು ವೇಳೆ ಇಂದಿನ (ಮೇ 4) ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೂ ಆರ್​ಸಿಬಿ ಪ್ಲೇಆಫ್​ ಕನಸು ಬಹುತೇಕ ಭಗ್ನಗೊಳ್ಳುವುದು ಖಚಿತ.

ಆರ್​ಸಿಬಿ ಉಳಿದ ಒಂದ್ಯಗಳ ವೇಳಾಪಟ್ಟಿ

ಮೇ 4 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್

ಮೇ 9 - ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು

ಮೇ 12 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್

ಮೇ 18 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್

ತಂಡಪಂದ್ಯಗೆಲುವುಸೋಲುಅಂಕNRR
ರಾಜಸ್ಥಾನ್ ರಾಯಲ್ಸ್108216+0.622
ಕೋಲ್ಕತ್ತಾ ನೈಟ್ ರೈಡರ್ಸ್107314+1.10
ಲಕ್ನೋ ಸೂಪರ್ ಜೈಂಟ್ಸ್106412+0.094
ಸನ್​ರೈಸರ್ಸ್ ಹೈದರಾಬಾದ್106412+0.072
ಚೆನ್ನೈ ಸೂಪರ್ ಕಿಂಗ್ಸ್105510+0.627
ಡೆಲ್ಲಿ ಕ್ಯಾಪಿಟಲ್ಸ್115610-0.442
ಪಂಜಾಬ್ ಕಿಂಗ್ಸ್10468-0.062
ಗುಜರಾತ್ ಟೈಟಾನ್ಸ್10468-1.113
ಮುಂಬೈ ಇಂಡಿಯನ್ಸ್11386-0.36
ರಾಯಲ್ ಚಾಲೆಂಜರ್ಸ್ ಬೆಂಗಳೂರು10376-0.415

IPL_Entry_Point