Honda Elevate SUV: ಹೋಂಡಾ ಎಲಿವೇಟ್ ಎಸ್ಯುವಿ ಅನಾವರಣ; ಭಾರತದ ಮಾರುಕಟ್ಟೆಗೆ ಲಗ್ಗೆ, ಇದರ ವೈಶಿಷ್ಟ್ಯ ತಿಳಿಯಿರಿ PHOTOS
- Honda Elevate SUV: ಈ ವರ್ಷದ ಬಹು ನಿರೀಕ್ಷಿತ ಎಸ್‌ಯುವಿಗಳಲ್ಲಿ ಒಂದಾದ ಹೋಂಡಾ ಎಲಿವೇಟ್ ಇಂದು ಬಿಡುಗಡೆಯಾಗಿದ್ದು, ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ , ಸೀಟ್ ರಿಮೈಂಡರ್, ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ಇದರ ವೈಶಿಷ್ಟ್ಯ ತಿಳಿಯಿರಿ...

(1 / 7)
ಹೋಂಡಾ ಕಂಪನಿಯು ಭಾರತದಲ್ಲಿ WR-V, CR-V ಮತ್ತು BR-V SUV ಗಳನ್ನು ಈ ಹಿಂದೆ ಸ್ಥಗಿತಗೊಳಿಸಿತ್ತು. ಇದೀಗ ಹೋಂಡಾ ಎಲಿವೇಟ್ ಎಸ್ಯುವಿ ಅನ್ನು ಭಾರತದಲ್ಲಿ ಲಾಂಚ್ ಮಾಡಿದ್ದು, ಇದು ಭಾರತದ ಮಾರುಕಟ್ಟೆಯಲ್ಲಿ ಮೋಡಿ ಮಾಡಬಹುದು.
(2 / 7)
ಭಾರತೀಯ ಮಾರುಕಟ್ಟೆಗೆ ಹೋಂಡಾ ಯೋಜಿಸಿರುವ ಐದು ಹೊಸ ಎಸ್‌ಯುವಿಗಳಲ್ಲಿ ಮೊದಲನೆಯದು ಹೋಂಡಾ ಎಲಿವೇಟ್ ಎಸ್ಯುವಿ ಆಗಿದೆ. ಎರಡು ಬಣ್ಣಗಳ ಹೋಂಡಾ ಎಲಿವೇಟ್ ಎಸ್ಯುವಿ ಕಾರು ಬಿಡುಗಡೆಯಾಗಿದೆ.
(3 / 7)
ಹೋಂಡಾ ಎಲಿವೇಟ್-ಇದು ಹುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮತ್ತು ಕಿಯಾ ಸೆಲ್ಟೋಸ್ ಗೆ ಭರ್ಜರಿ ಪೈಪೋಟಿ ನೀಡುವ ಸಾಧ್ಯತೆಯಿದೆ.
(4 / 7)
ಇದು ಮಧ್ಯಮ ಗಾತ್ರದ ವಿಭಾಗದ ಕಾರು ಆಗಿದ್ದರೂ ಕಾರಿನೊಳಗೆ ಸಾಕಷ್ಟು ಸ್ಪೇಸ್ ಇದೆ. ವಿಶಾಲವಾದ ಹೆಡ್ರೂಂ, ಲೆಗ್ರೂಂ ವ್ಯವಸ್ತೆ ಇದೆ.
(5 / 7)
ಇದು 1.5 ಲೀಟರ್ i-VTEC ಪೆಟ್ರೋಲ್ ಎಂಜಿನ್ ಹೊಂದಿದೆ. ಇದರಲ್ಲಿ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದೆ. ಕಾರಿನಲ್ಲಿ ಹಿಂಬದಿ ಸೀಟ್ ರಿಮೈಂಡರ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಇದೆ.
(6 / 7)
ಇದರ ವಿಶೇಷ ಕ್ಯಾಬಿನ್ನಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 10.2-ಇಂಚಿನ ಡಿಜಿಟಲ್ ಕ್ಲಸ್ಟರ್ ಇದೆ.
ಇತರ ಗ್ಯಾಲರಿಗಳು