ಕನ್ನಡ ಸುದ್ದಿ  /  ಕ್ರಿಕೆಟ್  /  ಹಾಯ್, ನಾನು ಎಂಎಸ್ ಧೋನಿ, ನನಗೆ 600 ರೂ ಫೋನ್​ಪೇ ಮಾಡಿ: ಮಾಹಿ ಹೆಸರಿನ ನಕಲಿ ಖಾತೆಯಲ್ಲಿ ಅಭಿಮಾನಿಗಳಿಗೆ ವಂಚನೆ

ಹಾಯ್, ನಾನು ಎಂಎಸ್ ಧೋನಿ, ನನಗೆ 600 ರೂ ಫೋನ್​ಪೇ ಮಾಡಿ: ಮಾಹಿ ಹೆಸರಿನ ನಕಲಿ ಖಾತೆಯಲ್ಲಿ ಅಭಿಮಾನಿಗಳಿಗೆ ವಂಚನೆ

MS Dhoni Cyber Scam: ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿ ಅವರ ಹೆಸರಿನ ನಕಲಿ ಖಾತೆಗಳಲ್ಲಿ ಹಣ ಬೇಕೆಂದು ಕೇಳುವ ಮೂಲಕ ಅಭಿಮಾನಿಗಳನ್ನು ವಂಚಿಸುತ್ತಿದ್ದಾರೆ.

ಹಾಯ್, ನಾನು ಎಂಎಸ್ ಧೋನಿ, ನನಗೆ 600 ರೂ ಫೋನ್​ಪೇ ಮಾಡಿ: ಮಾಹಿ ಹೆಸರಿನ ನಕಲಿ ಖಾತೆಯಲ್ಲಿ ಅಭಿಮಾನಿಗಳಿಗೆ ವಂಚನೆ
ಹಾಯ್, ನಾನು ಎಂಎಸ್ ಧೋನಿ, ನನಗೆ 600 ರೂ ಫೋನ್​ಪೇ ಮಾಡಿ: ಮಾಹಿ ಹೆಸರಿನ ನಕಲಿ ಖಾತೆಯಲ್ಲಿ ಅಭಿಮಾನಿಗಳಿಗೆ ವಂಚನೆ

ಟೀಮ್ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni), ಐಪಿಎಲ್​ನಲ್ಲಿ (IPL 2024) ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಋತುರಾಜ್ ಗಾಯಕ್ವಾಡ್​​ಗೆ (Ruturaj Gaikwad) ಸಿಎಸ್​ಕೆ ನಾಯಕತ್ವವನ್ನು ಹಸ್ತಾಂತರಿಸಿ ಇದೇ ತನ್ನ ಕೊನೆಯ ಐಪಿಎಲ್​ ಎಂಬ ಸುಳಿವನ್ನು ನೀಡಿರುವ ಎಂಎಸ್ ಧೋನಿ, ಕೊನೆಯಲ್ಲಿ ಬ್ಯಾಟ್ ಹಿಡಿದು ಕ್ರೀಸ್​ಗೆ ಬಂದು ಸಿಕ್ಸರ್​-ಬೌಂಡರಿಗಳ ಸುರಿಮಳೆಗೈದು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಈ ನಡುವೆ ಮಾಹಿ ಹೆಸರಿನಲ್ಲಿ ಆನ್​ಲೈನ್ ವಂಚನೆ ನಡೆಯುತ್ತಿರುವ ಕುರಿತು ಬೆಳಕಿಗೆ ಬಂದಿದೆ. ಕ್ರಿಕೆಟ್​ನಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರಾದ ಧೋನಿ ಹೆಸರಿನಲ್ಲಿ ವಂಚಕರು ಅಭಿಮಾನಿಗಳನ್ನು ವಂಚಿಸುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಪೋಸ್ಟ್ ಒಂದು ವೈರಲ್ ಆಗುತ್ತಿದ್ದು, ಧೋನಿಯಂತೆ ಅಭಿಮಾನಿಗಳಿಗೆ ಹಣವನ್ನು ಕೇಳಿದ್ದಾರೆ. ಈ ಪೋಸ್ಟ್ ನೋಡಿದ ಬಳಿಕ ಫನ್ನಿಯಾಗಿದೆ.

ಅಭಿಮಾನಿಯೊಬ್ಬರು ನಕಲಿ ಧೋನಿ (mahi77i2) ಖಾತೆಯಿಂದ ಸಂದೇಶವನ್ನು ಸ್ವೀಕರಿಸಿದ್ದಾರೆ. ಮನೆಗೆ ಹಿಂತಿರುಗಲು ಹಣವಿಲ್ಲದ ಕಾರಣ 600 ರೂಗಳನ್ನು ಕಳುಹಿಸುವಂತೆ ಸಿಎಸ್‌ಕೆ ಮಾಜಿ ನಾಯಕ ಅಭಿಮಾನಿಗೆ ಕೇಳಿದ್ದಾರೆ. ಈ ಮೆಸೇಜ್ ನೋಡಿದ ಅಭಿಮಾನಿಗಳು ನಕ್ಕು ನಕ್ಕು ಸಾಕಾಗಿದ್ದಾರೆ. ಧೋನಿಯ ಹಳೆಯ ಫೋಟೋವನ್ನು ಅಭಿಮಾನಿಗೆ ಕಳುಹಿಸಿರುವ ವಂಚಕ, ಪ್ರೂಫ್ ಇಲ್ಲಿದೆ ನೋಡು. ವಿಸಿಲ್ ಪೋಡು ಎಂದು ಬರೆದಿದ್ದಾರೆ.

ಧೋನಿ ಹೆಸರಿನಲ್ಲಿ ವಂಚಕ ಕಳುಹಿಸಿದ ಸಂದೇಶದಲ್ಲೇನಿದೆ?

ಹಾಯ್, ನಾನು ಎಂಎಸ್ ಧೋನಿ. ನಾನು ನನ್ನ ಖಾಸಗಿ ಖಾತೆಯಿಂದ ನಿಮಗೆ ಸಂದೇಶ ಕಳುಹಿಸುತ್ತಿದ್ದೇನೆ. ನಾನು ರಾಂಚಿ ಹೊರ ವಲಯದಲ್ಲಿದ್ದೇನೆ. ನನ್ನ ವ್ಯಾಲೆಟ್ ಅನ್ನು ಮರೆತು ಬಂದಿದ್ದೇನೆ. ನೀವು ನನಗೆ 600 ಫೋನ್ ಪೇ ಮಾಡುತ್ತೀರಾ? ಇದರಿಂದ ನಾನು ಬಸ್‌ನಲ್ಲಿ ಮನೆಗೆ ಮರಳುತ್ತೇನೆ. ನಾನು ಮನೆಗೆ ಬಂದ ನಂತರ ಹಿಂತಿರುಗಿಸುತ್ತೇನೆ ಎಂದು ವಂಚಕನು ಕಳುಹಿಸಿರುವ ಸಂದೇಶವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಎಂಎಸ್ ಧೋನಿ ಪ್ರದರ್ಶನ

43 ವರ್ಷದ ಆಸುಪಾಸಿನಲ್ಲಿರುವ ಧೋನಿ, ಕಿರಿಯರಿಗೆ ಪೈಪೋಟಿ ನೀಡುವಂತೆ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಆದಾಗ್ಯೂ, ಮಾಜಿ ಸಿಎಸ್​​ಕೆ ಮಾಜಿ ನಾಯಕ, ಇದೇ ಆವೃತ್ತಿಯು ತನ್ನ ಕೊನೆಯ ಐಪಿಎಲ್​ ಎಂದು ಹಲವು ಸುಳಿವು ಕೊಟ್ಟಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ ಕೇವಲ 35 ಎಸೆತಗಳನ್ನು ಎದುಸಿರುವ ಎಂಎಸ್ ಧೋನಿ, ತಲಾ 8 ಸಿಕ್ಸರ್, 8 ಬೌಂಡರಿ ಸಹಿತ 91 ರನ್ ಬಾರಿಸಿದ್ದಾರೆ. ಅದು ಕೂಡ 260ರ ಸ್ಟ್ರೈಕ್​ರೇಟ್​​ನಲ್ಲಿ ಎಂಬುದು ವಿಶೇಷ. 5 ಕ್ಯಾಚ್ ಪಡೆದಿದ್ದಾರೆ.

ಐಪಿಎಲ್ 2024ರಲ್ಲಿ ಸಿಎಸ್‌ಕೆ ಪ್ರದರ್ಶನ

ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಗೆದ್ದಿದ್ದ ಸಿಎಸ್​ಕೆ, ಈವರೆಗೂ ಒಟ್ಟು 8 ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಈ ಪೈಕಿ ನಾಲ್ಕರಲ್ಲಿ ಗೆಲುವು, ನಾಲ್ಕರಲ್ಲಿ ಸೋಲು ಅನುಭವಿಸಿದೆ. ಸದ್ಯ 8 ಅಂಕಗಳೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ 5ನೇ ಸ್ಥಾನದಲ್ಲಿದೆ. ಪ್ಲೇಆಫ್​ಗೆ ಅರ್ಹತೆ ಪಡೆಯಲು ಸಿಎಸ್​ಕೆ ತನ್ನ 6 ಪಂದ್ಯಗಳಲ್ಲಿ ನಾಲ್ಕನ್ನು ಗೆಲ್ಲಬೇಕಾಗಿದೆ. ಚೆನ್ನೈ ಏಪ್ರಿಲ್ 28ರಂದು ಭಾನುವಾರ ತಮ್ಮ ಮುಂದಿನ ಪಂದ್ಯದಲ್ಲಿ ಎಸ್​​ಆರ್​​ಹೆಚ್​ ತಂಡವನ್ನು ಎದುರಿಸಲಿದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

IPL_Entry_Point