ಕನ್ನಡ ಸುದ್ದಿ  /  Photo Gallery  /  Automobiles News Nissan Kicks Suv All Set To Hit Indian Market Including Bold Look Feature Here Rmy

Nissan Kicks: ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲು ನಿಸ್ಸಾನ್ ಕಿಕ್ಸ್ ಎಸ್‌ಯುವಿ ರೆಡಿ; ವೈಶಿಷ್ಟ್ಯಗಳಿವು

  • Nissan Kicks: ನಿಸ್ಸಾನ್ ‘ಕಿಕ್ಸ್’ ಹೊಸ ಅವತಾರವನ್ನು ಪರಿಚಯಿಸಲಾಗಿದೆ. ಎಸ್‌ಯುವಿ ಪ್ರಿಯರನ್ನು ಆಕರ್ಷಿಸುವ ಹೊಸ ನಿಸ್ಸಾನ್ ಕಿಕ್ಸ್ ಕಾರಿನ ಬೆಲೆ, ವೈಶಿಷ್ಟ್ಯಗಳ ವಿವರ ಇಲ್ಲಿದೆ.

ನಿಸ್ಸಾನ್ ಕಿಕ್ಸ್ ಸಂಪೂರ್ಣವಾಗಿ ಹೊಸ ಅವತಾರದಲ್ಲಿ ಬರುತ್ತದೆ. ಎಸ್‌ಯುವಿಯ ವಿನ್ಯಾಸವು ಸ್ಟೈಲಿಶ್ ಆಗಿ ಬೋಲ್ಡ್ ಕಾಣುತ್ತಿದೆ. ಜಪಾನಿನ ಕಾರು ತಯಾರಕ ಕಂಪನಿಯು 2024 ರ ನ್ಯೂಯಾರ್ಕ್ ಇಂಟರ್‌ನ್ಯಾಷನಲ್ ಆಟೋ ಶೋನಲ್ಲಿ ಸಾರ್ವಜನಿಕರಿಗಾಗಿ ಮೊದಲ ಬಾರಿಗೆ ಹೊಸ ಕಾರನ್ನು ಅನಾವರಣಗೊಳಿಸಿತ್ತು.
icon

(1 / 8)

ಈ ಎಸ್‌ಯುವಿಯ ಮುಂಭಾಗದ ಪ್ರೊಫೈಲ್ ಆಟೋಮೊಬೈಲ್‌ನ ವಿ-ಮೋಷನ್ ಗ್ರಿಲ್ ಅನ್ನು ತೆಗೆದುಹಾಕಿದೆ. ಹೊಸ ರೇಡಿಯೇಟರ್ ಗ್ರಿಲ್ ಅನ್ನು ಅಳವಡಿಸಿದೆ, ಇದು ಹಿಂದಿನ ಗ್ರಿಲ್‌ಗೆ ಹೋಲುವ ಕೆಲವು ಸ್ಟೈಲಿಂಗ್ ಎಲಿಮೆಂಟ್ಸ್‌ಗಳೊಂದಿಗೆ ಬರುತ್ತದೆ, ಕಪ್ಪು, ದಪ್ಪ ಸಮಾನಾಂತರ ಸ್ಲಾಟ್‌ಗಳೊಂದಿಗೆ ದೊಡ್ಡದಾಗಿ ಮತ್ತು ಬೋಲ್ಡ್ ಆಗಿ ಕಾಣುತ್ತದೆ. ಎಲ್ಇಡಿ ಹೆಡ್ ಲ್ಯಾಂಪ್ ಗಳು, ಇಂಟಿಗ್ರೇಟೆಡ್ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ ಗಳೊಂದಿಗೆ ಬೋಲ್ಡ್ ಆಗಿವೆ.
icon

(2 / 8)

ಸೈಡ್ ಪ್ರೊಫೈಲ್‌ನಲ್ಲಿ, ಹೊಸ ನಿಸ್ಸಾನ್ ಕಿಕ್ಸ್ ಏರೋ-ಡಿಸೈನ್ ಅಲಾಯ್ ಚಕ್ರಗಳನ್ನು ಪಡೆಯುತ್ತದೆ, ಇದು ಅಲಾಯ್ ಚಕ್ರಗಳ ಹಳೆಯ ಆವೃತ್ತಿಗೆ ಹೋಲಿಸಿದರೆ ಸಂಪೂರ್ಣವಾಗಿ ಹೊಸದು. ಅಲ್ಯೂಮಿನಿಯಂ ಸೈಡ್ ಸ್ಕರ್ಟ್‌ಗಳೊಂದಿಗೆ ಜೋಡಿಸಲಾದ ಕೆಳಭಾಗದ ಪ್ರೊಫೈಲ್ ನಲ್ಲಿ ಡೀಪ್ ಚಾಕರಾಕ್ಟರ್ ಲೈನ್‌ಗಳಿವೆ. ಡ್ಯುಯಲ್-ಟೋನ್ ಪೇಂಟ್ ಥೀಮ್, ಫ್ಲೋಟಿಂಗ್ ರೂಫ್ ಥೀಮ್ ನೊಂದಿಗೆ ಸ್ಲೋಯಿಂಗ್ ರೂಫ್ ಲೈನ್ ನಂತಹ ಇತರ ಸ್ಟೈಲಿಂಗ್ ವೈಶಿಷ್ಟ್ಯಗಳಿವೆ.
icon

(3 / 8)

ಹೊಸ ನಿಸ್ಸಾನ್ ಕಿಕ್ಸ್ ನ ಹಿಂಭಾಗದ ಪ್ರೊಫೈಲ್ ಸಹ ಹೊರಭಾಗದಂತೆಯೇ ಸಾಕಷ್ಟು ಮರುವಿನ್ಯಾಸ ಸ್ಪರ್ಶವನ್ನು ಪಡೆದಿದೆ. ಲಂಬವಾಗಿ ಅಳವಡಿಸಲಾದ ಎಲ್ಇಡಿ ಟೈಲ್ ಲೈಟ್‌ಗಳ ಜೊತೆಗೆ ಭಾರವಾಗಿ ಕೆತ್ತಲಾದ ಟೈಲ್‌ಗೇಟ್ ಅನ್ನು ಹೊಂದಿದೆ. ರೂಫ್ ಸ್ಪಾಯ್ಲರ್ ಮತ್ತು ದಪ್ಪ ಮತ್ತು ಚುಂಕಿ ಸ್ಕಿಡ್ ಪ್ಲೇಟ್ ಹೊಂದಿರುವ ಬೋಲ್ಡ್ ಬಂಪರ್ ಕೂಡ ಇದೆ.
icon

(4 / 8)

ಈ ಎಸ್‌ಯುವಿಯ ಮತ್ತೊಂದು ವಿಶೇಷವೆಂದರೆ ದೊಡ್ಡ ಪನೋರಮಿಕ್ ಸನ್ ರೂಫ್ ನೊಂದಿಗೆ ಬರುತ್ತಿದೆ. ಇದು ಕಾರಿನ ಕ್ಯಾಬಿನ್‌ಗೆ ಗಾಳಿಯ ವಿಶಾಲವಾದ ಅನುಭವವನ್ನು ನೀಡುವುದಲ್ಲದೆ ಅದರ ಒಟ್ಟಾರೆ ಪ್ರೀಮಿಯಂ ಅಂಶವನ್ನು ಹೆಚ್ಚಿಸುತ್ತದೆ. ಕಳೆದ ವರ್ಷದವರೆಗೆ ಭಾರತದಲ್ಲಿ ಮಾರಾಟವಾಗುತ್ತಿದ್ದ ನಿಸ್ಸಾನ್ ಕಿಕ್ಸ್ ನ ಹಳೆಯ ಆವೃತ್ತಿಯಿಂದ ಇದು ಖಂಡಿತವಾಗಿಯೂ ಪ್ರಮುಖ ಪ್ರಗತಿಯಾಗಿದೆ. ಸನ್ ರೂಫ್ ಹಿಂಭಾಗದಲ್ಲಿ ಶಾರ್ಕ್ ಫಿನ್ ಆಂಟೆನಾವನ್ನು ಹೊಂದಿದೆ.
icon

(5 / 8)

ನೀವು ಕ್ಯಾಬಿನ್ ಒಳಗೆ ಹೋದರೆ, ಹೊಸ ನಿಸ್ಸಾನ್ ಕಿಕ್ಸ್ ಡ್ಯಾಶ್ ಬೋರ್ಡ್‌ನಲ್ಲಿ ನವೀಕರಿಸಿದ ವಿನ್ಯಾಸವನ್ನು ನೋಡಬಹುದು. ಡ್ಯುಯಲ್ ಸ್ಕ್ರೀನ್ ಸೆಟಪ್ ನಿಂದಾಗಿ ಇದು ಇನ್ನೂ ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ, ಇದರಲ್ಲಿ ದೊಡ್ಡದಾದ 12.3-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ಮತ್ತು ಏಳು ಇಂಚಿನ ಪೂರ್ಣ ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಎರಡೂ ಡಿಸ್‌ಪ್ಲೇ ಒಂದೇ ಪ್ಯಾನಲ್ ಅಡಿಯಲ್ಲಿ ಬರುತ್ತವೆ. ಹೊಸ ಕಿಕ್ಸ್ ಕಾರು ಮುಂಭಾಗ ಮತ್ತು ಹಿಂಭಾಗದಲ್ಲಿ ಹೆಚ್ಚಿನ ಸ್ಥಳಾವಕಾಶ ಮತ್ತು ಆರಾಮವನ್ನು ಹೊಂದಿದೆ.
icon

(6 / 8)

ಕಿಕ್ಸ್ ಹೊಸ ಮಾಡೆಲ್‌ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 360 ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾ, ಬೋಸ್ ಕಂಪನಿಯ 10-ಸ್ಪೀಕರ್ ಆಡಿಯೊ ಸಿಸ್ಟಮ್, ವೈರ್ ಲೆಸ್ ಆಪಲ್ ಕಾರ್ ಪ್ಲೇ- ಆಂಡ್ರಾಯ್ಡ್ ಆಟೋದಂತಹ ಸುಧಾರಿತ ತಂತ್ರಜ್ಞಾನ-ನೆರವಿನ ವೈಶಿಷ್ಟ್ಯಗಳಿವೆ. ಮುಂಬರುವ ದಿನಗಳಲ್ಲಿ ಎಸ್‌ಯುವಿಗೆ ಲಭ್ಯವಿರುವ ವೈಶಿಷ್ಟ್ಯಗಳ ಬಗ್ಗೆ ಒಇಎಂ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ.
icon

(7 / 8)

ನಿಸ್ಸಾನ್ ಕಿಕ್ಸ್ ಎಸ್‌ಯುವಿಯಲ್ಲಿ ಸಿವಿಟಿಯೊಂದಿಗೆ ಜೋಡಿಸಲಾದ 2.0-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಇಂಜಿನ್ ಅಳವಡಿಸಲಾಗಿದೆ. ಎಸ್‌ಯುವಿಗೆ ಎಡಬ್ಲ್ಯುಡಿ ಸಂಪೂರ್ಣವಾಗಿ ಹೊಸ ತಂತ್ರಜ್ಞಾನವಾಗಿ ಬರುತ್ತದೆ. ಹೊಸ ಕಿಕ್ಸ್ ಮಲ್ಟಿ-ಡ್ರೈವಿಂಗ್ ಮೋಡ್‌ಗಳೊಂದಿಗೆ ಬರಲಿದೆ. ಈ ಕಾರಿನ ಬೆಲೆ ಮಾಹಿತಿ ಬಹಿರಂಗವಾಗಿಲ್ಲ.
icon

(8 / 8)

ಇತರ ಗ್ಯಾಲರಿಗಳು