Bengaluru floods in images:ಜಲಾವೃತ ಬೆಂಗಳೂರಲ್ಲಿ ಟ್ರ್ಯಾಕ್ಟರ್, ಬೋಟ್, ಬುಲ್ಡೋಜರ್ಸ್!
ಭಾರತದ ಐಟಿ ಕೇಂದ್ರ ಬೆಂಗಳೂರು. ತೀವ್ರ ಧಾರಾಕಾರ ಮಳೆ ಮತ್ತು ಮೂಲಸೌಕರ್ಯಗಳ ದುರುಪಯೋಗ, ಅವ್ಯವಸ್ಥೆಗಳಿಂದ ಜರ್ಜರಿತವಾಗಿರುವ ನಗರದ ಅನೇಕ ಪ್ರದೇಶಗಳು ಜಲಾವೃತವಾಗಿವೆ. ಇಲ್ಲಿವೆ ಕೆಲವು ಫೋಟೋಸ್.
ಭಾರತದ ಐಟಿ ಕೇಂದ್ರ ಬೆಂಗಳೂರು. ತೀವ್ರ ಧಾರಾಕಾರ ಮಳೆ ಮತ್ತು ಮೂಲಸೌಕರ್ಯಗಳ ದುರುಪಯೋಗ, ಅವ್ಯವಸ್ಥೆಗಳಿಂದ ಜರ್ಜರಿತವಾಗಿರುವ ನಗರದ ಅನೇಕ ಪ್ರದೇಶಗಳು ಜಲಾವೃತವಾಗಿವೆ. ಇಲ್ಲಿವೆ ಕೆಲವು ಫೋಟೋಸ್.
(1 / 7)
ಬೆಂಗಳೂರಿನಲ್ಲಿ ಉದ್ಯೋಗ ಪಡೆಯಲು ಕೋಡಿಂಗ್ ಸಾಕಾಗುವುದಿಲ್ಲ ಎಂದು ಹತಾಶ ಟ್ವಿಟರ್ ಬಳಕೆದಾರ ಒಬ್ಬರು ಟ್ವೀಟ್ ಮಾಡಿದ್ದಾರೆ. ವಿಪ್ರೋದಂತಹ ಕಂಪನಿಗಳ ಕಚೇರಿಗಳು ಜಲಾವೃತವಾಗಿದೆ. ಆದ್ದರಿಂದ ನಿಮಗೆ ಈಜುವ ಕೌಶಲ ಕೂಡ ಇರಬೇಕು. (Twitter)
(2 / 7)
ಕಳೆದ ಕೆಲವು ದಿನಗಳಿಂದ ಭಾರೀ ಚಂಡಮಾರುತ ಮತ್ತು ಮಳೆ ಕರ್ನಾಟಕದ ರಾಜಧಾನಿ ಬೆಂಗಳೂರಿನ ಹಲವೆಡೆ ಪ್ರವಾಹದಂತಹ ಪರಿಸ್ಥಿತಿಯನ್ನು ಉಂಟುಮಾಡಿದೆ.(Twitter)
(4 / 7)
ಇಡೀ ಬೆಂಗಳೂರು ವಾಟರ್ ಪಾರ್ಕ್ ಆಗಿರುವಾಗ ಯಾರಿಗೆ ವಂಡರ್ ಲ್ಯಾಂಡ್, ವಾಟರ್ ಅಮ್ಯೂಸ್ಮೆಂಟ್ ಪಾರ್ಕ್ ಬೇಕು ಎಂಬುದು ಟ್ವಿಟರ್ ಬಳಕೆದಾರರ ವ್ಯಂಗ್ಯದ ಟ್ವೀಟ್.(Twitter)
(5 / 7)
ಬೆಂಗಳೂರಿನಲ್ಲಿ ಭಾರೀ ಮಳೆಯ ಸಮಯದಲ್ಲಿ ನೀರಿನಲ್ಲಿ ಮುಳುಗಿದ ವಸತಿ ಸೊಸೈಟಿ. ಇಲ್ಲಿಗೆ ವಿದ್ಯುತ್ ಸಂಪರ್ಕವೂ ಕಡಿತವಾಗಿದೆ. (Twitter)
(6 / 7)
ಬೆಂಗಳೂರಿನಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ಪ್ರಯಾಣಿಸಲು ಟ್ರ್ಯಾಕ್ಟರ್‌ಗಳನ್ನು, ಜೆಸಿಬಿ, ಹಿಟಾಚಿ ಮುಂತಾದ ʻಬೃಹತ್ ವಾಹನʼಗಳನ್ನು ಜನರು ಬಳಸುತ್ತಿದ್ದಾರೆ(Twitter)
ಇತರ ಗ್ಯಾಲರಿಗಳು