Rashid Khan: ಇಂಗ್ಲಿಷ್ ಟೀಚರ್ ಈಗ ಟಿ20 ಲೀಗ್‌ಗಳ ಬೇಡಿಕೆಯ ಬೌಲರ್; ಸಣ್ಣ ವಯಸ್ಸಲ್ಲೇ ಶ್ರೀಮಂತ ಕ್ರಿಕೆಟಿಗನಾದ ರಶೀದ್
- Rashid Khan: ರಶೀದ್ ಖಾನ್ ವಿಶ್ವದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರು. ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ಇವರು, ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಜಾಗತಿಕ ಟಿ20 ಲೀಗ್‌ಗಳಲ್ಲಿ ಬಹು ಬೇಡಿಕೆಯ ಆಟಗಾರನಾಗಿರುವ ರಶೀದ್, ಅಫ್ಘಾನಿಸ್ತಾನ ಟಿ20 ಕ್ರಿಕೆಟ್ ತಂಡದ ನಾಯಕ. ಇವರ ಕುರಿತ ಆಸಕ್ತಿದಾಯಕ ಅಂಶಗಳು ಹೀಗಿವೆ.
- Rashid Khan: ರಶೀದ್ ಖಾನ್ ವಿಶ್ವದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರು. ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ಇವರು, ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಜಾಗತಿಕ ಟಿ20 ಲೀಗ್‌ಗಳಲ್ಲಿ ಬಹು ಬೇಡಿಕೆಯ ಆಟಗಾರನಾಗಿರುವ ರಶೀದ್, ಅಫ್ಘಾನಿಸ್ತಾನ ಟಿ20 ಕ್ರಿಕೆಟ್ ತಂಡದ ನಾಯಕ. ಇವರ ಕುರಿತ ಆಸಕ್ತಿದಾಯಕ ಅಂಶಗಳು ಹೀಗಿವೆ.
(1 / 13)
ರಶೀದ್ ಖಾನ್ 1998ರ ಸೆಪ್ಟೆಂಬರ್ 20ರಂದು ಅಫ್ಘಾನಿಸ್ತಾನದ ನಂಗರ್ಹಾರ್‌ನಲ್ಲಿ ಜನಿಸಿದರು. ಅವರಿಗೆ ಈಗ 24 ವರ್ಷ. ಸಣ್ಣ ವಯಸ್ಸಿನಲ್ಲೇ ಜಗತ್ತಿನ ಅಗ್ರ ಸ್ಪಿನ್ನರ್ ಆಗಿ ಮಿಂಚುತ್ತಿದ್ದಾರೆ. ರಶೀದ್‌ಗೆ 10 ಮಂದಿ ಒಡಹುಟ್ಟಿದವರಿದ್ದಾರೆ. ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿದ್ದ ಭಯೋತ್ಪಾದಕ ಘಟನೆಗಳಿಂದಾಗಿ, ಅವರು ತಮ್ಮ ಬಾಲ್ಯದ ಹೆಚ್ಚಿನ ಸಮಯವನ್ನು ಪಾಕಿಸ್ತಾನದಲ್ಲಿ ಕಳೆಯಬೇಕಾಯಿತು. ರಶೀದ್ ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಅದರ ನಡುವೆ ಅವರು ತಮ್ಮ ದೇಶಕ್ಕೆ ಮರಳಿ ಕ್ರಿಕೆಟಿಗನಾಗುವ ಕನಸನ್ನು ನನಸಾಗಿಸಿದರು.
(2 / 13)
ಕ್ರಿಕೆಟಿಗನಾಗುವ ಮೊದಲು, ರಶೀದ್ ಖಾನ್ ಇಂಗ್ಲಿಷ್ ಶಿಕ್ಷಕರಾಗಿದ್ದರಂತೆ. ಕ್ರಿಕೆಟಿಗರಾಗುವ ಮೊದಲು ಸುಮಾರು 6 ತಿಂಗಳ ಕಾಲ ಇಂಗ್ಲಿಷ್ ಪಾಠ ಮಾಡಿದ್ದೆ ಎಂದು ಸಂದರ್ಶನವೊಂದರಲ್ಲಿ ರಶೀದ್ ಹೇಳಿದ್ದರು. ಅವರು ಇಂಗ್ಲಿಷ್ ತುಂಬಾ ಚೆನ್ನಾಗಿ ಮಾತನಾಡುತ್ತಾರೆ.
(3 / 13)
ಒಂದು ಕಾಲದಲ್ಲಿ ಬಡತನದಲ್ಲಿ ಜೀವನ ಕಳೆದಿದ್ದ ರಶೀದ್ ಖಾನ್ ಈಗ ಅಫ್ಘಾನಿಸ್ತಾನದ ಅತ್ಯಂತ ಶ್ರೀಮಂತ ಕ್ರಿಕೆಟಿಗ. ತಮ್ಮ 20ನೇ ವಯಸ್ಸಿನಲ್ಲಿ ಅವರು ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಅವರನ್ನು 2018ರ ಐಪಿಎಲ್ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಬರೋಬ್ಬರಿ 9 ಕೋಟಿ ರೂಪಾಯಿಗೆ ಖರೀದಿಸಿತು. ಇವರು ಐಪಿಎಲ್‌ನಲ್ಲಿ ಅತ್ಯಂತ ಬೇಡಿಕೆಯ ವಿದೇಶಿ ಆಟಗಾರರಲ್ಲಿ ಒಬ್ಬರು.
(4 / 13)
ಐಪಿಎಲ್‌ಗೆ ಕಾಲಿಟ್ಟ ನಂತರ ರಶೀದ್ ಜೀವನ ಸಂಪೂರ್ಣ ಬದಲಾಯಿತು. ಒಂದೊಂದು ವರ್ಷ ಕಳೆದಂತೆ ಒಂದೊಂದಾಗಿ ಯಶಸ್ಸಿನ ಮೆಟ್ಟಿಲು ಹತ್ತುತ್ತಿದ್ದಾರೆ. ಅವರು ಪ್ರಸ್ತುತ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ತಂಡದ ಭಾಗವಾಗಿದ್ದಾರೆ.
(5 / 13)
ರಶೀದ್ ಐಪಿಎಲ್ ಜೊತೆಗೆ ಟಿ20 ಲೀಗ್‌ಗಳಾದ ಬಿಬಿಎಲ್, ಪಿಎಸ್‌ಎಲ್, ಸಿಪಿಎಲ್ ಮುಂತಾದ ಲೀಗ್‌ಗಳಲ್ಲಿ ವಿಶ್ವದಾದ್ಯಂತ ಆಡುತ್ತಾರೆ. ಪ್ರತಿಯೊಂದು ಲೀಗ್‌ನಲ್ಲೂ ಅವರು ತುಂಬಾ ಬೇಡಿಕೆಯ ಆಟಗಾರ.
(6 / 13)
ತಮ್ಮ 17ನೇ ವಯಸ್ಸಿನಲ್ಲೇ ಅಂತಾರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಶೀದ್, 19 ವರ್ಷ ಮತ್ತು 165 ದಿನಗಳ ವಯಸ್ಸಿನವರಾಗಿದ್ದಾಗ ಅಫ್ಘಾನಿಸ್ತಾನ ತಂಡದ ನಾಯಕರಾಗಿದ್ದರು.
(7 / 13)
ನಾಯಕನಾಗಿ ಮೊದಲ ಟೆಸ್ಟ್‌ನಲ್ಲಿ 10 ವಿಕೆಟ್ ಮತ್ತು ಅರ್ಧಶತಕ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಇವರದ್ದು.
(8 / 13)
ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳನ್ನು ಉರುಳಿಸಿದ ಅತ್ಯಂತ ವೇಗದ ಬೌಲರ್ ಇವರು. 44 ಪಂದ್ಯಗಳಲ್ಲಿ 100 ವಿಕೆಟ್‌ಗಳನ್ನು ತಲುಪಿದ್ದಾರೆ. ಟಿ20ಯಲ್ಲಿ 50 ವಿಕೆಟ್‌ಗಳನ್ನು ಕಬಳಿಸಿದ ವೇಗದ ಬೌಲರ್. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಅತ್ಯಂತ ಕಿರಿಯ ಬೌಲರ್ (20 ವರ್ಷಗಳು) ಎಂಬ ಹಿರಿಮೆ ಇವರದ್ದು.
(9 / 13)
ಪ್ರಸಕ್ತ ಐಪಿಎಲ್‌ನಲ್ಲಿ ಇವರು ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಆಡಿದ 17 ಪಂದ್ಯಗಳಿಂದ 27 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ತಂಡಕ್ಕೆ ಬ್ಯಾಟಿಂಗ್‌ನಲ್ಲೂ ನೆರವಾಗಿದ್ದಾರೆ.
(10 / 13)
ಕ್ರಿಕೆಟ್ ಜಗತ್ತಿನಲ್ಲಿ ಯಶಸ್ಸು ಸಾಧಿಸಿದ ಬೆನ್ನಲೇ ರಶೀದ್ ಖಾನ್ ಈಗ ವ್ಯವಹಾರಕ್ಕೂ ಕೈ ಹಾಕಿದ್ದಾರೆ. ಅವರು 'ಆರ್‌ಕೆ 19' ಎಂಬ ಬ್ರ್ಯಾಂಡ್ ಪ್ರಾರಂಭಿಸಿದ್ದಾರೆ. ಈ ಕಂಪನಿಯು ಜೀವನಶೈಲಿ ಸಂಬಂಧಿತ ಉತ್ಪನ್ನಗಳನ್ನು ತಯಾರಿಸುತ್ತದೆ.
(11 / 13)
ಇದುವರೆಗೆ ಐಪಿಎಲ್‌ನಲ್ಲಿ 109 ಪಂದ್ಯಗಳಲ್ಲಿ ಆಡಿರುವ ರಶೀದ್ ಖಾನ್, 139 ವಿಕೆಟ್ ಪಡೆದಿದ್ದಾರೆ. ಇದೇ ವೇಳೆ ಬ್ಯಾಟಿಂಗ್‌ನಲ್ಲಿ 443 ರನ್ ಕಲೆ ಹಾಕಿದ್ದಾರೆ.(all photo- rashid khan instagram)
(12 / 13)
ಕಳೆದ ವರ್ಷದ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಗುಜರಾತ್ ಟೈಟಾನ್ಸ್ ತಂಡವು, ರಶೀದ್ ಖಾನ್ ಅವರನ್ನು ಖರೀದಿಸಿತು. ಬೌಲಿಂಗ್‌ನಲ್ಲಿ ತಂಡದ ಪ್ರಮುಖ ಆಸ್ತಿಯಾಗಿರುವ ಅವರು, ತಂಡಕ್ಕೆ ಅಗತ್ಯವಿರುವಾಗ ಬ್ಯಾಟಿಂಗ್‌ನಲ್ಲೂ ಅಬ್ಬರಿಸುತ್ತಾರೆ. ಇತ್ತೀಚೆಗೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 32 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್ ಸಹಿತ 79 ರನ್ ಸಿಡಿಸಿದ್ದರು. ಒಂದು ಹಂತದಲ್ಲಿ ಮುಂಬೈ ತಂಡದ ಕೈಯಿಂದ ಜಯ ಕಸಿದ ಅವರು, ಸೂಕ್ತ ಜೊತೆಯಾಟ ಸಿಗದೆ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು.(PTI)
ಇತರ ಗ್ಯಾಲರಿಗಳು