ಐಪಿಎಲ್ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ; ಈ ಮೈಲಿಗಲ್ಲು ತಲುಪಿದ ವಿಶ್ವದ ಮೊದಲ ಆಟಗಾರ
Virat Kohli Record: ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು 51 ರನ್ ಸಿಡಿಸಿ ಐಪಿಎಲ್ನಲ್ಲಿ 400 ರನ್ಗಳ ಗಡಿ ದಾಟಿದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
(1 / 5)
ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿದೆ. 35 ರನ್ಗಳ ಗೆಲುವು ದಾಖಲಿಸಿದ ಆರ್ಸಿಬಿ ಸತತ ಸೋಲುಗಳ ನಂತರ ಜಯದ ಹಾದಿಗೆ ಮರಳಿದೆ. ಈ ಪಂದ್ಯ ಗೆಲುವಿನ ಜೊತೆಗೆ ವಿರಾಟ್ ಕೊಹ್ಲಿಯೂ ವಿಶೇಷ ದಾಖಲೆ ನಿರ್ಮಿಸಿದ್ದಾರೆ.(AP)
(2 / 5)
ಆರ್ಸಿಬಿ ಸ್ಟಾರ್ ಬ್ಯಾಟರ್ ಮತ್ತು ಆರಂಭಿಕ ಆಟಗಾರ ಕೊಹ್ಲಿ ಈ ಆವೃತ್ತಿಯಲ್ಲಿ ಮತ್ತೊಂದು ಅರ್ಧಶತಕ ಸಿಡಿಸಿದರು. 43 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 51 ರನ್ ಗಳಿಸಿದ ವಿರಾಟ್, ಈ ಋತುವಿನಲ್ಲಿ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರಿಸಿ ಆರೆಂಜ್ ಕ್ಯಾಪ್ ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. 9 ಪಂದ್ಯಗಳಲ್ಲಿ 430 ರನ್ ಬಾರಿಸಿದ್ದಾರೆ.(PTI)
(3 / 5)
17ನೇ ಆವೃತ್ತಿಯ ಐಪಿಎಲ್ನಲ್ಲಿ 400 ರನ್ಗಳ ಗಡಿ ದಾಟುತ್ತಿದ್ದಂತೆ ಕೊಹ್ಲಿ ಮತ್ತೊಂದು ಅಪರೂಪದ ದಾಖಲೆಯನ್ನು ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 10 ಆವೃತ್ತಿಗಳಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್ನಲ್ಲಿ ಆಡಿದ 17 ಸೀಸನ್ಗಳ ಪೈಕಿ ಕೊಹ್ಲಿ 10 ಸೀಸನ್ಗಳಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ.(AP)
(4 / 5)
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ 7 ವಿಕೆಟ್ ನಷ್ಟಕ್ಕೆ 206 ರನ್ ಪೇರಿಸಿತು. ಆರ್ಸಿಬಿ ಬ್ಯಾಟರ್ ರಜತ್ ಪಾಟೀದಾರ್ 19 ಎಸೆತಗಳಲ್ಲಿ 50 ರನ್ ಬಾರಿಸಿ ದಾಖಲೆ ಬರೆದರು. ಇದು ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ದಾಖಲಾದ ಎರಡನೇ ವೇಗದ ಅರ್ಧಶತಕವಾಗಿದೆ.(AP)
ಇತರ ಗ್ಯಾಲರಿಗಳು